Blog number 947. ಖ್ಯಾತ ಸಾಹಿತಿ ವಿಮರ್ಶಕ ಉದಯ ಕುಮಾರ್ ಹಬ್ಬು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಅವರು ನನ್ನ ಕಥಾ ಸಂಕಲನ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯಂಜನ ಓದಿ ವಸ್ತು ನಿಷ್ಟ ವಿಮರ್ಶೆ ಬರೆದದ್ದು ನನಗೆ ಅತ್ಯಂತ ಸಂತೋಷ ತಂದಿದೆ.
#ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಕಥಾ_ಸಂಕಲನ
#ಸಾಹಿತಿ_ವಿಮರ್ಷಕ_ಉದಯಕುಮಾರ್_ಹಬ್ಬು_ನನ್ನ_ಕಥಾ_ಸಂಕಲನದ_ವಿಮರ್ಶೆ_ಬರೆದಿದ್ದಾರೆ.
#ದಿನಕ್ಕೆ_ಕನಿಷ್ಟ_ನೂರು_ಪುಟ_ಓದುವ_ನಿತ್ಯ_ಒಂದೆರೆಡು_ಪುಸ್ತಕ_ವಿಮರ್ಶೆ_ಮಾಡುತ್ತಾರೆ.
#ಸಾವಿರಾರು_ಪುಸ್ತಕ_ಓದಿದ್ದಾರೆ
#ಅವರು_ಬರೆದು_ಪ್ರಕಟಿಸಿದ_ಪುಸ್ತಕಗಳೇ_ಶತಕದ_ಹತ್ತಿರ_ಹತ್ತಿರ.
ಶ್ರೀಯುತ ಉದಯ ಕುಮಾರ್ ಹಬ್ಬು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಖ್ಯಾತರು ಇವರು ಇವತ್ತು ನನ್ನ ಎರಡನೆ ಪುಸ್ತಕ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ " #ಬಿಲಾಲಿ_ಬಿಲ್ಲಿ_ಅಭ್ಯಂಜನ ಎಂಬ ಸಣ್ಣ ಕಥಾ ಸಂಕಲನವನ್ನು ಎರೆಡು ದಿನ ಸಂಪೂರ್ಣ ಓದಿ ವಸ್ತು ನಿಷ್ಟ ವಿಮರ್ಶೆ ಅವರ ಪೋಸ್ಟಿನಲ್ಲಿ ಪ್ರಕಟಿಸಿದ್ದಾರೆ.
ನಾನು ಅಂತಹ ಬರಹಗಾರನಲ್ಲ ಕೇವಲ ಹವ್ಯಾಸದ ಹುಕಿಯಲ್ಲಿ ಬರೆದ ಕಾದಂಬರಿ "ಕೆಳದಿ ಇತಿಹಾಸ ಸಾಮ್ರಾಜ್ಯ ಮರೆತ" #ಬೆಸ್ತರ_ರಾಣಿ_ಚಂಪಕಾ ಮತ್ತು ಈ ಸಣ್ಣ ಕಥಾ ಸಂಕಲನ ಆದರೆ ದೊಡ್ಡ ದೊಡ್ಡ ವಿದ್ವಾಂಸರಿಂದ ವಿಮರ್ಶೆಗಳು ಬಂದಾಗ ಅದು ನನಗೊಂದು ಕಿರೀಟದಂತೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚು ಬರೆಯಲು ಬೆನ್ನುತಟ್ಟಿ ಪ್ರೋತ್ಸಾಹಿಸಿದಂತೆ ಆದ್ದರಿಂದ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಖ್ಯಾತ ಬರಹಗಾರರು, ವಿಮರ್ಶಕರಾದ ಇವರು ಬರೆದ ಪುಸ್ತಕಗಳು ಅನೇಕ ಅವುಗಳಲ್ಲಿ
#ಪ್ರಕಟವಾದ_ಪುಸ್ತಕಗಳು
ಬಿಟ್ಟೇನೆಂದರೂ ಬಿಡದಿ ಮಾಯೆ(ದ್ರೋಣ ಮತ್ತು ಏಕಲವ್ಯ ಕುರಿತು)
ವಿದುರ ಪರ್ವ (ವಿದುರನ ಸಮಗ್ರ ಬದುಕಿನಕುರಿತು ಕಾದಂಬರಿ)
ದ್ರೋಣಲವ್ಯ. ಮಹಾಭಾರತದ ಏಕಲವ್ಯನ ಕುರಿತು ಹೊಸ ವ್ಯಾಖ್ಯಾನದ ಕತೆ
ವಿಮರ್ಶೆ ಗ್ರಂಥಗಳು
ಪುಸ್ತಕ ಪ್ರೀತಿ
ಮೊದಲ ಕಲ್ಲು,..
ದೇವನೂರು ಮಹಾದೇವರ ಕತೆಗಳು ಕಾದಂಬರಿಗಳು- ಒಂದು ವಿಶ್ಲೇಷಣೆ
ಜಂಬು ಜೋಂಕಿಣಿ- ವಡ್ಡಗೆರೆ ನಾಗರಾಜಯ್ಯ ಅವರ "ಆಸಾದಿ" ಖಂಡ ಕಾವ್ಯದ ವ್ಯಾಖ್ಯಾನ
#ಕವಿತಾ_ಸಂಕಲನಗಳು
೧. ಅನ್ವೇಷಣೆ
೨. ರಥೋತ್ಸವ
೩. ನನ್ನದೆ ಆಕಾಶ ನನ್ನದೆ ರೆಕ್ಕೆ
#ಸಂಶೋಧನೆ
ನಾಥಪಂಥ -ಸಿದ್ಧಾಂತಗಳು ಮತ್ತು ಅಚರಣೆಗಳು
ಬೌದ್ಧ ಗ್ರಂಥಗಳು
ಬುದ್ಧತ್ವ -ಸಂತೋಷಕ್ಕೆ ಒಂದೆ ದಾರಿ
ವಿಪಶ್ಶನ -ಅರಿವಿನ ದಾರಿ
ಭಗವಾನ್ ಬುದ್ಧ- ಬದುಕು ಮತ್ತು ಬೋಧನೆಗಳು
ನಾಗಾರ್ಜುನ,-ಜೀವನ ಚರಿತ್ರೆ ಮತ್ತು ತತ್ವಗಳು
ಶೂನ್ಯತೆಯ ಶೂನ್ಯತೆ- ಚಂದ್ರಕೀರ್ತಿ ಮತ್ತು ನಾಗಾರ್ಜುನ- ಒಂದು ತಾತ್ವಿಕ ಅನುಸಂಧಾನ
ಬೌದ್ಧ ಧ್ಯಾನ- ಮಾನಸಿಕ ಒತ್ತಡಗಳಿಗೆ ನಿವಾರಣೆ
ಅಂಗುತ್ತರ ನಿಕಾಯ ತಿಕಣಿ ಪಾತಳಿ
ಪಾಲಿಭಾಷೆಯಿಂದ ಕನ್ನಡಕ್ಕೆ ಅನುವಾದ
ರೂಮಿ ಕವಿತೆ- ಅನುವಾದಿತ ಕವನಗಳು
ಬಸವಣ್ಣ ಮತ್ತು ನಾರಾಯಣ ಗುರು- ತೌಲನಿಕ ಅಧ್ಯಯನ
ಬಸವಣ್ಣ ಮತ್ತು ದಯಾನಂದ ಸರಸ್ವತಿ- ತೌಲನಿಕ #
ಬಸವಣ್ಣ ಮತ್ತು ಕನ್ಫ್ಯೂಷಿಯಸ್- ತೌಲನಿಕ ಅಧ್ಯಯನ
ಬಸವಣ್ಣ ಮತ್ತು ಜಾಗತಿಕ ದರ್ಶನಗಳು ತೌಲನಿಕ ಅಧ್ಯಯನ
ಪ್ರಾಚೀನ ಭಾರತೀಯ ತತ್ವದರ್ಶನಗಳು
ಯೋಗ ಮತ್ತು ತಂತ್ರ
ವಾಸ್ತು ಫೆಂಗಶ್ಯೂಯಿ- ಒಂದು ತೌಲನಿಕ ಅಧ್ಯಯನ
ಕಪ್ಪು ದೇವತೆ- ಸಾಮಾಜಿಕ ಕಾದಂಬರಿ
#ಕಥಾ_ಸಂಕಲನಗಳು
೧. ಸಂಬಂಧಗಳು
೨. ಕಣ್ಣುಗಳು
೩. ಬಿಳಿ ಕಾಗೆ ಮತ್ತು ಇತರ ಕತೆಗಳು
.೪. ಮುಸ್ಸಂಜೆಯ ಕತೆಗಳು
ವ್ಯಕ್ತಿತ್ವ ವಿಕಸನ ಗ್ರಂಥಗಳು
೧. ಯಶಸ್ವಿ ಜೀವನದ ರಹಸ್ಯ.
೨. ನಿಮ್ಮ ಹಣ ನಿಮ್ಮ ಕೈಯಲ್ಲಿ
ಮಕ್ಕಳ ಸಾಹಿತ್ಯ
೧ಕಪ್ಪೆ ರಾಜಕುಮಾರಿ ಮತ್ತು ಇತರ ಕತೆಗಳು
೨ ಲುಂಡೀರಿಯಾ- ಮಕ್ಕಳ ಕಾದಂಬರಿ
ಜಾನಪದ
ಭೂಮಿಯ ಸುತ್ತ
ಈಶಾನ್ಯ ಗಡಿ ರಾಜ್ಯಗಳ ಜಾನಪದ ಕತೆಗಳು...
ಶಿಕ್ಷಣ- ಶಿಕ್ಷಣ ತಜ್ಞರ ಅಭಿಪ್ರಾಯಗಳ ಒಂದು ಚಿಂತನೆ
#ಇಂಗ್ಲೀಷ್_ನಲ್ಲಿ
Niyoga ಮತ್ತು Lingering Illusions- ಇದು ತ್ಯಕ್ತ ಕಾದಂಬರಿಯ ಅನುವಾದ.
ಕನ್ನಡಿ- ಇದು ಮೊದಲ ಕಲ್ಲು ಪುಸ್ತಕದ ಬಗ್ಗೆ ವಿವಿಧ ಲೇಖಕರು ಬರೆದ ವಿಮರ್ಶಾ ಬರಹಗಳ ಸಂಗ್ರಹ
ಅಚ್ಚಿನಲ್ಲಿ ಬಸವಣ್ಣ ಮತ್ತು ಕನಕದಾಸ
ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು
ನನ್ನದೆ ಆಕಾಶ ಮತ್ತು ನನ್ನದೆ ರೆಕ್ಕೆಗಳು
ಸಿಟ್ಟಿಂಗ್ ಬುಲ್- ಅನುವಾದಿತ ಜನಾಂಗೀಯ ಅಧ್ಯಯನ
ದಾರಾ ಶುಕೊಹ್ ನ ಕನಸುಗಳು ಐತಿಹಾಸಿಕ ಕಾದಂಬರಿ.
"ಬೆಳಕು ಮಾರುವ ಹುಡುಗ" ಕವಿತಾ ಸಂಕಲನ.
#ಪ್ರಶಸ್ತಿಗಳು
೧. ರಾಜ್ಯಮಟ್ಟದ ಉತ್ತಮ ಕಥೆಗೆ ಪ್ರಥಮ ಪ್ರಶಸ್ತಿ- ಮೈಸೂರು ಮಕ್ಕಳ ಸಂಗಮ
೨. ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ಸಣ್ಣ ಕಥೆಗೆ- ಅವಸ್ಥೆ- ಹಣತೆ ವೇದಿಕೆ,ಹೊನ್ನಾವರ
೩. ರಾಜ್ಯಮಟ್ಟದ ಕವಿತಾ ಸ್ಪರ್ಧೆಯಲ್ಲಿ ತುಮುಕೂರಿನ ಜನ ಮಿತ್ರ ಪತ್ರಿಕೆಯ ಆಶ್ರಯದಲ್ಲಿ ನಡೆದದ್ದು ಪ್ರಥಮ ಪ್ರಶಸ್ತಿ
೪. ಕಾಂತಾವರ ಕನ್ನಡ ಸಂಘ- ಸಾಹಿತ್ಯ ಪುರಸ್ಕಾರ
೫. ಸಿದ್ದರಾನ ಹೊನ್ಕಲ್ ರಾಜ್ಯ ಪ್ರಶಸ್ತಿ. ಬೊಪ್ಪ ನನ್ನನ್ನು ಕ್ಷಮಿಸು- ಆತ್ಮಚರಿತ್ರೆ ಗಾಗಿ
ದೇವನೂರು ಮಹಾದೇವರ ಕತೆಗಳು ಮತ್ತು ಕಾದಂಬರಿಗಳು- ಒಂದು ಅವಲೋಕನ- ವಿಮರ್ಶೆ ಕೃತಿಗೆ, ಬೆಂಗಳೂರು ಕಲಾ ಸಾಂಸ್ಕೃತಿಕ ಸಾಹಿತ್ಯ ಸಾಮಾಜಿಕ ವೇದಿಕೆ, ಚಾಮರಾಜ ಪೇಟೆ, ಇವರಿಂದ ರಾಜ್ಯಮಟ್ಟದ ಪ್ರಶಸ್ತಿ
ಕಪ್ಪು ದೇವತೆ ಕಾದಂಬರಿಗೆ ೨೦೦೦ ನ ವರ್ಷದ ಯುವ ಕಾದಂಬರಿಕಾರ ಪ್ರಶಸ್ತಿ- ಉದಯವಾಣಿ
ಮಿಂಚುಳ್ಳಿ ಪ್ರಕಾಶನ- ಉತ್ತಮ ರಾಜ್ಯಮಟ್ಟದ ಕವಿತಾ ಪ್ರಶಸ್ತಿ
ಮಕ್ಕಳ ಸಾಹಿತ್ಯ ಅಕಾಡೆಮಿ ಇವರ ಹಿರಿಯರು ಬರೆದ ಮಕ್ಕಳ ಕಥಾ ಪ್ರಶಸ್ತಿ.
#ಉದಯಕುಮಾರ್_ಹಬ್ಬು_ನನ್ನ_ಕಥಾ_ಸಂಕಲದ_ಬಗ್ಗೆ_ಬರೆದ_ಮಿಮರ್ಶೆ
Arun Prasad ಇವರ ಮೊದಲ ಕಾದಂಬರಿ "ಬೆಸ್ತರ ರಾಣಿ ಚಂಪಕಾ" " ವನ್ನು ಓದಿ ಇಷ್ಟಪಟ್ಟವನು ನಾನು. ಅರುಣ್ ಪ್ರಸಾದ್ ಬಹುಮುಖ ಪ್ರತಿಭೆಯ ವ್ಯಕ್ತಿ. ಅವರು ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದಾರೆ. ಅಂತೆಯೆ ಓರ್ವ ರಾಜಕಾರಣಿಯೂ ಹೌದು
ಈ ಕಥಾ ಸಂಕಲನವು ಆನಂದಪುರ ಎಂಬ ಅಭಿವೃದ್ಧಿ ಹೊಂದುತ್ತಿರುವ ಗ್ರಾಮದ ತಳಮೂಲದ ನೈಜ ಚಿತ್ರಣವು ಹಲವಾರು ಪಾತ್ರಗಳ ಮೂಲಕ, ಘಟನೆಗಳ ಮೂಲಕ ವ್ಯಕ್ತಗೊಂಡಿದೆ. ಗ್ರಾಮ ಜಗತ್ತು ಸಿನೆಮಾದಲ್ಲಿ ಕಾಣಿಸುವಂತೆ ರೊಮ್ಯಾಂಟಿಕ್ ಆಗಿಯೂ ಇಲ್ಲ, ನಗರಕ್ಕಿಂತ ಹಳ್ಳಿಯೇ ಮೇಲೂ ಎಂಬುದು ಹುಸಿಕಲ್ಪನೆ . ಹಾಗಂತ ಅಲ್ಲಿನ ತಳಮೂಲದ ಜನರ ಬದುಕು ಹೇಗಿದೆ, ಆ ತಳಮೂಲದ ಜನಸಾಮಾನ್ಯರಾದ ಹಾವಾಡಿಗರು, ಹಕ್ಕಿ ಪಿಕ್ಕಿ ಜನಾಂಗದವರು ಮತ್ತು ಕುರ್ ಕುರ್ ಮಾಮಾ ಎಂಬ ಭವಿಷ್ಯ ನುಡಿಯುವವರ ಬದುಕಿನ ಬವಣೆಯನ್ನು ಕಥೆಗಾರರು ಸೂಕ್ಷ್ಮ ಕಣ್ಣುಗಳಿಂದ ನೋಡಿ ನಮ್ಮ ಮುಂದೆ ಇಟ್ಟಿದ್ದಾರೆ. ಹಾವಾಡಿಗನು ಜನರಿಗೆ ಮೋಸ ಮಾಡುವುದು, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು, ಒಬ್ಬರ ಹೆಂಡತಿಯನ್ನು ಇನ್ನೊಬ್ಬನು ಕರೆದುಕೊಂಡು ಹೋಗುವುದು, ಹೆಂಡತಿ ಅವನೊಡನೆ ಕೆಲ ಕಾಲ ಇದ್ದು ಮತ್ತೆ ಮೊದಲಿನ ಗಂಡನ ಬಳಿಯೆ ಬರುವುದು ಇಂಥವೆಲ್ಲ ತಳಮೂಲ ಸಂಸ್ಕೃತಿಯ ಆನಂದಪುರವೆಂಬ ಗ್ರಾಮದಲ್ಲಿ ನಡೆದ ಸಂಗತಿಗಳು.ಭಾತರದ ಹಳ್ಳಿಗಳ ಜನರು ಜನಸಾಮಾನ್ಯರು ಸೆರೆ ಅಥವಾಮದ್ಯದ ದಾಸರು. ಮದ್ಯಕ್ಕಾಗಿ ಪುರುಷರು ತಮ್ಮ ಹೆಚ್ಚಿನ ಸಂಪಾದನೆಯನ್ನು ವ್ಯಯಿಸುವವರು. ಹೀಗೆ ಹಳ್ಳಿಯೊಂದರಲ್ಲೆ ನಡೆಯುವ ಮೋಸ,ವಂಚನೆ, ಅವರು ಬೋಳೆ ಶಂಕರರಲ್ಲ. ಮೊಗಸಾಲೆಯವರು ಸೀತಾಪುರ ಎಂಬ ಕಾಲ್ಪನಿಕ ಗ್ರಾಮದಲ್ಲಿ ನಡೆಯುವ ಘಟನೆಗಳನ್ನು ಚಿತ್ರಿಸಿದರೆ ಅರುಣ್ ಪ್ರಸಾದ್ ಆನಂದಪುರ ಎಂಬ ಹಳ್ಳಿಯ ನೈಜ ಚಿತ್ರಣ ಕೊಡುತ್ತಾರೆ. ಭಾರತೀಯ ಇಂಗ್ಲಿಷ್ ಕಾದಂಬರಿಕಾರ ರಾಜಾ ರಾವ್ ಕಾಂತಾಪುರ ಎಂಬ ಗ್ತಾಮದ ಚಿತ್ರಣ ಮೊಡುತ್ತಾರೆ.ಅರುಣ್ ಪ್ರಸಾಧರ ಕಥೆಗಳು ಕೆಲವೊಮ್ಮೆ ಪ್ರಬಂಧಗಳಂತೆ ಅನಿಸುತ್ತವೆ ಭಾರತದ ಮಾದರಿ ಹಳ್ಳಿಯೊಂದರ ಚಿತ್ರಣ ಅರುಣ್ ಪ್ರಸಾದ್ ಅವರ ಕಥಾನಕದಿಂದ ತಿಳಿಯುತ್ತದೆ. ಶಿವರಾಮ ಕಾರಂತರು ತಮ್ಮ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಗ್ರಾಮಾಭಿವೃದ್ದಿಯ ಕಾರ್ಯಕ್ರಮಗಳಲ್ಲಿ ದಲಿತರಿಗೆ ಬಾವಿ ಅಗೆದು ಕೊಡಲು ಭೂಮಾಲಿಕ ಜಮೀಂದಾರರು ಅಡ್ಡಪಡಿಸಿದ್ದನ್ನು ಹೇಳುತ್ತಾರೆ. ಅಂತೆಯೆ ಆನಂದಪುರದ ಸಾಮಾನ್ಯ ಜನರು ನಾವು ತಿಳಿದಂತೆ ಮುಗ್ಧರಲ್ಲ. ಎಲ್ಲ ಬಗೆಯ ಸಂಚು ಒಳಸಂಚುಗಳನ್ನು ಬಲ್ಲವರು. ಮತ್ತು ಗೌಡರು ಗೌಡರ ನಡುವೆ ಸಂಘರ್ಷ ಮತ್ತು ದ್ವೇಷಗಳಿವೆ. ರಾಜಕೀಯ ದ್ವೇಷ. ಮತ್ತು ಆ ದ್ವೇಷವನ್ನು ಪರಿಶಿಷ್ಟ ಜಾತಿಯ ಹೆಸರಿನಲ್ಲಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಯನ್ನು ನಿರ್ಧರಿಸಿ ತಾವು ಪ್ರಧಾನರಾಗಬೇಕೆಂದು ಆರಿಸಿಹೋದ ಪರಿಶಿಷ್ಟ ಮಹಿಳೆಗೆ ಹಣ ಕೊಟ್ಟು ತಮಗೆ ಮತ ಹಾಕುವಂತೆ ಹೇಳುತ್ತಾರೆ. ಎರಡೂ ವಿರೋಧಿ ಪಕ್ಷದ ಗೌಡರು ಚುನಾಯಿತ ಮಹಿಳೆಗೆ ಹಣ ಕೊಡುವ ಮೋಜಿನ ಸಂಗತಿ ಇಲ್ಲಿದೆ.
ಅರುಣ್ ಪ್ರಸಾದ್ ಅವರು ಸ್ವತಃ ರಾಜಕಾರಣಿಯಾದ್ದರಿಂದ ಅವರಿಗೆ ತನ್ನ ಊರಿನ ಎಲ್ಲ ಜನಸಾಮಾನ್ಯರ ಸ್ಥಿತಿ ಗತಿ ಗೊತ್ತು. ಆದ್ದರಿಂದ ಇಲ್ಲಿ ಚಿತ್ರಣಗೊಂಡ ಎಲ್ಲ ಪಾತ್ರಗಳೂ ನಿಜ ಜೀವನದಲ್ಲಿ ಅರುಣ್ ಪ್ರದಾದ್ ಕಂಡವರಷ್ಟೆ ಅಲ್ಲ ಅವರೊಡನೆ ಆತ್ಮೀಯವಾಗಿ ಒಡನಾಡಿದವರು. ಹಾಗಾಗಿ ಇಲ್ಲಿನ ಕಥಾನಕಗಳಿಗೆ ಒಂದು ಅಧಿಕೃತತೆ ಇದೆ.
ಏಮಾರಿಸುವ ಕಕ್ಷಿದಾರರ ಕೇಸನ್ನು ವರ್ಷಗಟ್ಟಲೆ ಮುಂದುವರಿಸುವ ಕಂತ್ರಿ ವಕೀಲರು,ಮತಾಂತರ ಎಂಬ ಹತ್ಯಾರ ಹೇಗೆ ಪುರುಷನನ್ನು ಇಡಿ ಸಮಾಜವನ್ನು ಎದುರು ಹಾಕುವ ಧೈರ್ಯ ಕೊಡುತ್ತದೆ,ಮತಾಂತರ ಅಸಾಧ್ಯ ಎನ್ನುವ ಮತಾಂತರಗೊಂಡ ವ್ಯಕ್ತಿಯ ಸಮುದಾಯದವರು, ಕೋಮುಗಲಭೆ ಆಗುವ ಸಂಭಾವ್ಯ ಊರು, ಇವೆಲ್ಲವನ್ನು ಅರುಣ್ ಪ್ರಸಾದ್ ನೋಡಿ ತಮ್ಮ ವಿಶಿಷ್ಟ ಶೈಲಿಯಿಂದ ದಾಖಲಿಸುತ್ತಾರೆ.ನಿಧಿ ಶೋಧ ಎಂಬ ಪ್ರಹಸನಬರುತ್ತದೆ. ಅಲ್ಲಿ ಕೇರಳದ ಪುದುವಾಳರು ಅಷ್ಟಮಂಗಲ, ಅಂಜನ ಎಂಬ ಮಂಗನಾಟವನ್ನು ಆಡಿ ಜನಸಾಮಾನ್ಯರನ್ನು ವಂಚಿಸುತ್ತಾರೆ ಎಂಬ ಚಿತ್ರಣ ಇದೆ.
ಹೇಗೆ ದೇವರ ಭಯವನ್ನು ಅನೇಕ ಜನ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ ಎಂಬ ಪ್ರಕರಣವು ಕಲ್ಲುಕುಟಿಕ ದೇವರೂ ಕಮಲಿ ಎಂಬ ಮೆಂಬರು,ಮುರಘಾ ಮಠ ಮುರಗಿ ಮಠ ಕತೆಯಲ್ಲಿ ಈ ಮಠದ ಹೆಸರಿನ ಕುರಿತಾಗಿಯೆ ಸಂಘರ್ಷ ಕೊಮು ಗಲಭೆಯಾಗುವುದರ ಕುರಿತು ನೈಜ ಚಿತ್ರಣ ಕೊಡುತ್ತಾರೆ. ಅಗಲೇ ಹೇಳಿದ ಹಾಗೆ ಗ್ರಾಮದ ಶ್ರಮಿಕರಾದ ತಳಸಮುದಾಯದವರಾದ ವಾಲಗದವರು ಕುರಿತಾದ ಸ್ವಾರಸ್ಯಕರ ಕತಾನಕ ಇಲ್ಲಿದೆ ಸುಶೀಲಾಳ ಸರಾಯಿ ಅಂಗಡಿ ಮತ್ತು ಸಿಗಂದೂರು ಚೌಡೇಶ್ವರಿ ಕತೆಯಲ್ಲಿ ಗ್ರಾಮೀಣ ಜನತೆ ಕುಡಿತಕ್ಕೆ ದಾಸರು ಸುಶೀಲಾ ಕೆಲವರಿಗೆ ಕಡವಾಗಿ ಸೆರೆ ಕೊಡಲಿಲ್ಲ ಎಂದು ಕೆಲವರು ಅವಳ ಶರಾಬು ಅಂಗಡಿ ನಿಲ್ಲಿಸಲು ಪ್ರಯತ್ನಿಸುತ್ತಾರೆ. ಜನ ಕುಡಿದು ಅವರ ಸಂಸಾರ ಹಾಳಾಗುತ್ತಿದೆ. ಸುಶಿಲಾಳ ಸರಾಬು ಅಂಗಡಿ ನಿಲ್ಲಬೇಕು. ಎಂದು ಠರಾವು ಪಾಸ್ ಮಾಡುತ್ತಾರೆ. ಆಗ ಸುಶಿಲಾ ಒಂದು ಕರಾರು ಹಾಕುತ್ತಾಳೆ. ಈ ಎಲ್ಲವರೂ ಚೌಡೇಶ್ವರಿ ದೇವಿಯ ಎದುರಿಗೆ ಇನ್ನು ಮುಂದೆ ಕುಡಿಯುವುದಿಲ್ಲ ಎಂದು ಪ್ರಮಾಣ ಮಾಡಲಿ ಎನ್ನುತ್ತಾಳೆ. ಹುಟ್ಟಾ ಕುಡುಕರಾದ ಜನರು ತಪ್ಪಿಸಿಕೊಳ್ಳುತ್ತಾರೆ. ಸುಶಿಲಾಳ ಶರಾಬು ಅಂಗಡಿ ಮುಂದುವರಿಯುತ್ತದೆ
ಭೂತ ದೆವ್ವ ಕೊಳ್ಳಿ ದೆವ್ವಗಳ ನಂಬಿಕೆಗಳು ಸ್ವಾರಸ್ಯಕರವಾಗಿ ನಿರೂಪಿತಗೊಂಡಿದೆ
ಪಾಳೆಗಾರಿಕೆಯ ಜಮೀಂದಾರ ಊರಿನ ಸಂಸ್ಥೆಗಳ ಎಲ್ಲ ಅಧ್ಯಕ್ಷ ಮತ್ತು ಚೇರ್ ಮ್ಯಾನ್ ಹುದ್ದೆಗೆ ತಮ್ಮ ಸಹೋದರರನ್ನು ಕುಳ್ಳಿರಿಸಿ ಜನರನ್ನು ಶೋಷಣೆ ಮಾಡಲು ತೊಡಗಿದಾಗ ಭಾಷಾ ಎಂಬ ಮುಸ್ಲಿಂ ಯುವಕ ಜನರ ಬೆಂಬಲದೊಂದಿಗೆ ಜಮೀಂದಾರರ ವಿರುದ್ಧ ನಡೆದಾಗ ಆ ಜಮೀಂದಾರನು ಅದಕ್ಕೆ ಕೋಮುಗಲಭೆಯ ಬಣ್ಣ ಕೊಟ್ಟು ಪಾಪದ ಬಾಷಾನನ್ನು ಅಪರಾಧಿಯಾಗಿ ನಿಲ್ಲಿಸಿ ಶಾಂತಿ ಸಭೆಯಲ್ಲಿ ಆರೋಪಿಸುತ್ತಾರೆ. ಜನರೆಲ್ಲ ಅಸಹಾಯಕರಾಗುತ್ತಾರೆ.ಜಮೀಂದಾರನಿಗೆ ಪೊಲಿಸ್ ಠಾಣೆಯ ಅಧಿಕಾರಿಗಳ ಕುಮ್ಮುಕ್ಕು. ಈ ಕಥೆಗೆ "ಶಾಂತಿ ಸಭೆ" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ ಅರುಣ್ ಪ್ರಸಾದ್ ಆ ಘಟನೆಯ ಕುರಿತಾಗಿ ನಿರೂಪಕ ಹೇಳುತ್ತಾರೆ:" ತಲತಲಾಂತರದಿಂದ ಮುಗ್ಧರನ್ನು ಶೋಷಿಸುತ್ತಿದ್ದಾರೆ. ಅಧಿಕಾರದಿಂದ, ದರ್ಪದಿಂದ , ಶ್ರೀಮಂತಿಕೆಯಿಂದ ಈಗ ಅದೆಲ್ಲ ಇಲ್ಲದಿದ್ದರೂ ಅಧಿಕಾರ ಇರೋ ಪೋಲಿಸರಿಂದ ಶೋಷಣೆ ಮುಂದುವರಿಸಿದ್ದಾರೆ.. ಇದನ್ನು ಹೆಸರು ಬದಲಿಸಿ ಸಣ್ಣ ಕತೆಯನ್ನಾಗಿ ಬರೆದಿದ್ದೇನೆ." ಎನ್ನುತ್ತಾರೆ ಕೃತಿಕಾರರು ಗ್ರಾಮಭಾರತದ ಎಲ್ಲ ರೊಮ್ಯಾಂಟಿಕ್ ಚಿತ್ರಣವನ್ನು ಒಡೆದು, ಭಾರತದ ಹಳ್ಳಿಗಳ ನೈಜ ಚಿತ್ರಣವನ್ನು ಕೊಟ್ಟಿದ್ದಾರೆ. ಇಲ್ಲಿ ಬರುವ ಹಲವಾರು ಪಾತ್ರಗಳು ಅರುಣ್ ಒ್ರಸಾದ್ ನಿತ್ಯ ಕಾಣುವ ವ್ಯಕ್ತಿಗಳೇ ಆಗಿದ್ದಾರೆ. ಅವರ ಕಥೆಗಳು ಸತ್ವಯುತವಾಗಿವೆ.ಭ್ರಷ್ಟಾಚಾರ ಹಳ್ಳಿಯವರಲ್ಲೂ ಇದೆ ಒಬ್ಬ ಬೀಡಾಡಿ ನಾಯಿಗಳನ್ನು ಕೊಲ್ಲುವ ಕಾಂಟ್ರಾಕ್ಟ್ ತೆಗೆದುಕೊಂಡವನು ಹತ್ತು ನಾಯಿಗಳನ್ನು ಕೊಂದು ೨೦೦ ನಾಯಿಗಳ ಕೊಂದ ೫೦'೦೦೦ ಮೊತ್ತವನ್ನು ಪಡೆಯುತ್ತಾನೆ.
ನಿಜ ಗ್ರಾಮದ ಚಿತ್ರಣ ಈ ಕಥಾನಕಗಳಲ್ಲಿದೆ. ಇಂತಹ ಉತ್ತಮ ಪುಸ್ತಕವನ್ನು ಓದುವ ಅವಕಾಶ ನೀಡಿದ ಅರುಣ್ ಪ್ರಸಾದರಿಗೆ ನಮಸ್ಕಾರ
ಈ ಕತಾ ಸಂಕಲನದ ಬಗ್ಗೆ ಒಂದು ವಿಚಾರಗೊಷ್ಠಿಯನ್ನು ಏರ್ಪಡಿಸಬಹುದು.
Comments
Post a Comment