Blog number 951. ಹೊಸನಗರ ತಾಲ್ಲುಕಿನ ಮೂಗುಡ್ತಿಯ ಶ್ಯಾಮರಾವ್ ಮತ್ತು ಆನಂದಪುರಂ ಕೋಮಲ ವಿಲಾಸ್ ರಾಮಕಿಣಿಯವರ ಸಹೋದರಿ ಸುನಂದಾ ದಂಪತಿ ಪುತ್ರ ರಘುನಾಥ ಶೆಣೈ ಆನಂದಪುರಂನಲ್ಲೆ ಪ್ರಾಥಮಿಕ ವಿದ್ಯಾಭ್ಯಾಸ ಕಲಿತು ಬೆಂಗಳೂರಿನ ಬುಲ್ ಟೆಂಪಲ್ ರೋಡಿನ ಸಕ್ಸಸ್ ಆಫ್ ಟೆಂಪಲ್ ಸಂಸ್ಥೆ ಸ್ಥಾಪಿಸಿ ಸಾಯಿದತ್ತ ರಘುನಾಥ ಗುರೂಜಿ ಎಂದು ಪ್ರಸಿದ್ದರಾಗಿ ನಿನ್ನೆ ಇಹಲೋಕ ತ್ಯಜಿಸಿದ್ದಾರೆ.
#ಹೊಸನಗರ_ತಾಲ್ಲೂಕಿನ_ಮೂಗುಡ್ತಿ_ಸ್ಪಂತ_ಊರು
#ಪ್ರಾಥಮಿಕ_ಶಿಕ್ಷಣ_ಸಾಗರ_ತಾಲ್ಲೂಕಿನ_ಆನಂದಪುರಂನಲ್ಲಿ
#ರಿಪ್ಪನ್ಪೇಟೆಯಲ್ಲಿ_1998ರವರೆಗೆ_ಇವರ_ಶಾಂಭವಿ_ಪೈನಾನ್ಸ್_ಪ್ರಸಿದ್ಧಿ_ಪಡೆದಿತ್ತು
#ಇಪ್ಪತ್ಮೂರು_ವರ್ಷದ_ಹಿಂದೆ_ಬೆಂಗಳೂರು_ತಲುಪಿಸಿದ_ನನ್ನ_ನೆನಪು.
ನಿನ್ನೆ ಬೆಂಗಳೂರಿನ ಪ್ರಖ್ಯಾತ ಗುರೂಜಿ #ಸಾಯಿದತ್ತ_ರಘುನಾಥ_ಗುರೂಜಿ ನಿನ್ನೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಸೆಪ್ಟೆಂಬರ್ 2 ರಂದು ಮಣಿಪಾಲಿನಲ್ಲಿ ಅವರ ತಾಯಿಯ ಸಮಾದಿಯ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಭಕ್ತ ಸಮುದಾಯ ಘೋಷಿಸಿದೆ.
ಆನಂದಪುರಂನಲ್ಲಿ 1960ರಿಂದ 1978ರ ತನಕ ಪ್ರಸಿದ್ದವಾಗಿದ್ದ #ಕೋಮಲ_ವಿಲಾಸ್ ಉಪಹಾರ ಗೃಹದ ಮಾಲಿಕರಾಗಿದ್ದ #ರಾಮಕಿಣಿಯವರ ಸಹೋದರಿ ಸುನಂದ ಮತ್ತು ಹೊಸನಗರ ತಾಲೂಕಿನ ಮೂಗುಡ್ತಿಯ ಶ್ಯಾಮರಾಯ ದಂಪತಿಗಳ ಮೊದಲ ಪುತ್ರ ರಘುನಾಥ ಶೆಣೈ ಇವರ ಇನ್ನೊಬ್ಬ ಪುತ್ರ ರಮಾನಾಥ ಶಾನುಬೋಗ್ ಉದಯವಾಣಿ ಗ್ರೂಪ್ ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಮಣಿಪಾಲಿನಲ್ಲಿ ನೆಲೆಸಿದ್ದಾರೆ.
ರಘುನಾಥ ಶೆಣೈ ತಮ್ಮ ಹೆಚ್ಚಿನ ಬಾಲ್ಯ ಮತ್ತು ವಿದ್ಯಾಭ್ಯಾಸ ಆನಂದಪುರಂನ ಅವರ ಸೋದರ ಮಾವ ರಾಮಕಿಣಿ ಅವರ ಮನೆಯಲ್ಲೇ ಉಳಿದು ಆನಂದಪುರಂನ ಸಕಾ೯ರಿ ಶಾಲೆಗಳಲ್ಲಿ ಮಾಡಿದ್ದರು.
ನಂತರ ಇವರು ಪೋಟೋಗ್ರಪಿಯಲ್ಲಿ ತುಂಬಾ ಹೆಸರುಗಳಿಸಿದ್ದರು ಅನೇಕ ಕನ್ನಡ ವಾರಪತ್ರಿಕೆಯ ಮುಖಪುಟದಲ್ಲಿ ಇವರು ತೆಗೆದ ಚಿತ್ರಗಳು ಅಚ್ಚಾಗಿತ್ತು.
1990 ರಿಂದ 1997ರವರೆಗೆ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಕೇಂದ್ರವಾಗಿಸಿ ಇವರು ಪ್ರಾರಂಬಿಸಿದ #ಶಾಂಭವೀ_ಪೈನಾನ್ಸ್ ತುಂಬಾ ಪ್ರಖ್ಯಾತವಾಗಿ ತೀರ್ಥಹಳ್ಳಿ, ಶಿಕಾರಿಪುರ ಮುಂತಾದ ಸ್ಥಳದಲ್ಲಿ ಬ್ರಾಂಚ್ ಗಳೂ ಆಗಿ ಅನೇಕರಿಗೆ ಉದ್ಯೋಗ ದೊರೆತಿತ್ತು.
1998 ರಲ್ಲಿ ಇವರ ಪೈನಾನ್ಸ್ ಉದ್ಯೋಗ ಸಂಪೂರ್ಣ ನೆಲ ಕಚ್ಚಿತು.
1999 ರಲ್ಲಿ ನಾನು ಕಾಂಗ್ರೇಸ್ ನ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪರ ವಿರುದ್ದ ಸಾಗರ ವಿದಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದಾಗ ರಘುನಾಥ ಶೆಣೈ ನನ್ನ PRO ಆಗಿದ್ದರು.
ಇದೇ ಸಂದರ್ಭದಲ್ಲಿ ರಿಪ್ಪನ್ ಪೇಟೆಯ ಪತ್ರಕರ್ತ ತ.ಮ. ನರಸಿಂಹ ಪೋನಾಯಿಸಿ ರಘುನಾಥ ಶೆಣೈರನ್ನು ರಿಪ್ಪನ್ ಪೇಟೆಯ ಅವರ ಬಾಡಿಗೆ ಮನೆಯಲ್ಲಿ ಸ್ಥಳಿಯ ವ್ಯಾಪಾರಸ್ಥರು ಅವರನ್ನು ದಿಗ್ಬಂದನದಲ್ಲಿರಿಸಿದ್ದಾರೆ ಅವರ ಹಣ ತಮ್ಮ ಸಂಸ್ಥೆಯಾದ ಶಾಂಭವೀ ಪೈನಾನ್ಸ್ ವಾಪಾಸು ನೀಡುತ್ತಿಲ್ಲ ಎಂಬ ಕಾರಣದಿಂದ ಆದ್ದರಿಂದ ಹೇಗಾದರು ಅವರನ್ನು ಪಾರು ಮಾಡಿ ಅಂತ ವಿನಂತಿಸಿದ್ದರು.
ಸರಿ ತಪ್ಪು ಗೊತ್ತಿಲ್ಲ ಅವತ್ತು ಅವರನ್ನು ಹೇಗಾದರೂ ಪಾರು ಮಾಡಲೇ ಬೇಕಾಗಿತ್ತು ಅವರು ನನ್ನ ಚುನಾವಣೆಯ PRO ಬೇರೆ ಆಗಿದ್ದರಾದ್ದರಿಂದ ನಾನು ತಕ್ಷಣ ನಮ್ಮ ಮನೆಯಿಂದ 10 ಕಿ.ಮಿ.ದೂರದ ಅವರ ಮನೆಗೆ ಹೋಗಿ "ರೀ..ಶೆಣೈರವರೆ ನೀವು ನನ್ನ ಚುನಾವಣ PRO ಆಗಿ ಚುನಾವಣಾ ಲೆಖ್ಖ ಪತ್ರಕ್ಕೆ ಸಹಿ ಹಾಕಿಲ್ಲ ಇದರಿಂದ ಚುನಾವಣಾ ಪಲಿತಾಂಶಕ್ಕೆ ತೊಂದರೆ ಮತ್ತು ಇತ್ಯಾದಿ... " ಹೇಳಿ ತಕ್ಷಣ ಬನ್ನಿ ಸರಿ ಮಾಡಿ ಬರೋಣ ಅಂದೆ, ಶೆಣೈ ಇಲ್ಲ ಸಾರ್ ನಮ್ಮ ಊರಿನವರೆಲ್ಲ ಬಂದಿದ್ದಾರೆ ಏನೋ ಇಂಪಾರ್ಟೆಂಟ್ ಮೀಟಿಂಗ್ ಇದೆ ಅಂದಾಗ ನಾನು ಅವರಿಗೆಲ್ಲ ವಿನಂತಿಸಿ ಇವರನ್ನು ಆ ಆಪತ್ತಿನ ಸ್ಥಳದಿಂದ ಹೊರ ತಂದು ನಮ್ಮ ಊರಿಗೆ ಕರೆ ತರುವಾಗ ಶೆಣೈ ತಮ್ಮ ಪೈನಾನ್ಸ್ ಉದ್ಯಮ ನೆಲಕಚ್ಚಿದ ಬಗ್ಗೆ ವಿವರಿಸಿದರು ಮತ್ತು ತಮಗೆ ದೂರದಲ್ಲಿ ಬದುಕು ಪುನಃ ಕಟ್ಟಿಕೊಳ್ಳಲು ಸಹಾಯ ಬೇಕು ಆದಷ್ಟು ಬೇಗ ತಾವು ಬೇರೆ ಉದ್ಯೋಗದಲ್ಲಿ ದುಡಿದು ಇವರೆಲ್ಲರ ಹಣ ವಾಪಾಸು ಮಾಡುವುದಾಗಿ ತಿಳಿಸಿದರು.
ಅವತ್ತೆ ತಕ್ಷಣ ಆನಂದಪುರಂನಿಂದ ರೈಲಿನಲ್ಲಿ ಮೈಸೂರಿಗೆ ಹೋಗಿ ಅಲ್ಲಿಂದ ಬೆಂಗಳೂರು ತಲುಪಿ ಬೆಂಗಳೂರಿನಲ್ಲಿದ್ದ ತೀರ್ಥಹಳ್ಳಿಯ ಮಿತ್ರ ಸುಬ್ರಮಣ್ಯರ ರೂಂನಲ್ಲಿ ಕೆಲ ತಿಂಗಳು ಇವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದೆ.
ನಂತರ ರಘುನಾಥ ಶೆಣೈ ಬೆಂಗಳೂರಿನ ಚಾಮರಾಜಪೇಟೆಯ ಬುಲ್ ಟೆಂಪಲ್ ರೋಡಿನಲ್ಲಿ #ಟೆಂಪಲ್_ಆಪ್_ಸಕ್ಸಸ್ ಎಂಬ ಸಂಸ್ಥೆ ಪ್ರಾರಂಬಿಸಿ ಅಲ್ಲಿ ವಿದ್ಯಾರ್ಥಿಗಳಿಗೆ ಮೆಮೋರಿ ಕ್ಲಾಸ್, ಹೀಲಿಂಗ್ ಥೆರಪಿ, ಧ್ಯಾನ ಇತ್ಯಾದಿಯ ಆಶ್ರಮವೇ ಪ್ರಾರಂಬಿಸಿ ಪ್ರಸಿದ್ಧರಾದರು.
ನಂತರ ತಮ್ಮ ಹಳೆಯ ಶಾಂಭವೀ ಹಣಕಾಸು ಸಂಸ್ಥೆಯಿಂದ ಗ್ರಾಹಕರಿಗೆ ಕೊಡಬೇಕಾದ ಹಣ ವಾಪಾಸು ಮಾಡಿದರು ಆ ಸಂದರ್ಭದಲ್ಲಿ ಒಮ್ಮೆ 2002ರಲ್ಲಿ ಇವರ ಟೆಂಪಲ್ ಆಫ್ ಸಕ್ಸಸ್ ಗೆ ಹೋಗಿದ್ದೆ ಅಲ್ಲಿ ಇವರನ್ನು ಭಕ್ತರು ದೇವರಾಗಿಸಿದ್ದರು #ಸಾಯಿದತ್ತ_ರಘುನಾಥ_ಗುರೂಜಿ ಆಗಿದ್ದರು.
ಖಾಸಾಗಿಯಾಗಿ ಆಪ್ತವಾಗಿ ನನ್ನೊಡನೆ ಮಾತಾಡುವಾಗ ನಾನು ಹೇಳಿದ್ದೆ ನಾನು ನಿಮ್ಮನ್ನು ಯಾವತ್ತೂ ಬೇಟಿ ಮಾಡಲು ಬರುವುದಿಲ್ಲ ಅಂತ ಯಾಕೆ ಅಂದಾಗ ನಾನು ಹೇಳಿದ್ದು ನೀವು ನನ್ನ ಗೆಳೆಯರು ನಾನು ನಿಮ್ಮ ಕಾಲಿಗೆ ಬೀಳುವುದಿಲ್ಲ ಆದರೆ ಇಲ್ಲಿನ ವ್ಯವಸ್ಥೆಯಲ್ಲಿ ಅದು ನಿಮಗೆ ಅಗೌರವ ಎಂಬಂತೆ ಆದೀತು ಅಂತ.
ಅವರು ಬೆಂಗಳೂರು ಸೇರಿ ಸುಮಾರು 23 ವಷ೯ದಲ್ಲಿ ಅಪಾರ ಶಿಷ್ಯವೃಂದಗಳಿಸಿ ಅವರಿಂದ ಆರಾದಿಸಿಕೊಳ್ಳುತ್ತಿದ್ದಾರೆ ಅವರ ಮಕ್ಕಳೂ ದೊಡ್ಡವರಾಗಿದ್ದಾರೆ, ಸಾಯಿದತ್ತ ರಘುನಾಥ ಗುರೂಜಿ ಪ್ರಖ್ಯಾತರಾಗಿದ್ದಾರೆ.
ದಿನಾಂಕ 30- ಆಗಸ್ಟ್ -2022 ರ ಮಂಗಳವಾರ ಇಹಲೋಕ ತ್ಯಜಿಸಿದ ಸುದ್ದಿ ಕೇಳಿ ಇದೆಲ್ಲ ನೆನಪಾಯಿತು ದೇವರಲ್ಲಿ ಅವರ ಆತ್ಮಕ್ಕೆ ಸದ್ಗತಿ ಸ್ವರ್ಗ ಪ್ರಾಪ್ತಿಗೆ ಪ್ರಾರ್ಥಿಸುತ್ತೇನೆ.
Comments
Post a Comment