Blog number 936. ಕೆರೆಹಿತ್ತಲು ಶಾಲೆಗೆ ಭೂದಾನ ಮಾಡಿದ ಗುಮ್ಮಿ ನಾಗಣ್ಣರ ಪುತ್ರಿ ಶ್ರೀಮತಿ ಜಯಮ್ಮ ರುದ್ರಪ್ಪ ನನ್ನ ಕಛೇರಿಗೆ ಕೃತಜ್ಞತೆ ತಿಳಿಸಲು ಬಂದಿದ್ದರು.
#ನಮ್ಮಊರಿನ_ಸಮೀಪದ_ಗುಮ್ಮಿನಾಗಣ್ಣರ_ಬಗ್ಗೆ_ಆನಂದಪುರಂ_ಇತಿಹಾಸದಲ್ಲಿ_ಉಲ್ಲೇಖ_ಮಾಡಿದ್ದೆ
#ಕೃತಜ್ಞತೆ_ಹೇಳಲು_ಬೆಂಗಳೂರಿಂದ_ಬಂದ_ಅವರ_ಪುತ್ರಿ_ಜಯಮ್ಮ.
ಸಾಮಾಜಿಕ ಜಾಲ ತಾಣದ ವಿಸ್ಮಯದ ಬಗ್ಗೆ ಏನು ಹೇಳಲಿ? ನಿನ್ನೆ ಸಂಜೆ ನನ್ನ ಕಛೇರಿಗೆ ಬಂದವರು ಶ್ರೀಮತಿ ಜಯಮ್ಮ ಇವರು ಬಂದ ಉದ್ದೇಶ, ಇವರ ತಂದೆ ದಿವಂಗತ ಗುಮ್ಮಿ ನಾಗಣ್ಣ ಆನಂದಪುರಂ ಸಮೀಪದ ಆಚಾಪುರ ಗ್ರಾಮ ಪಂಚಾಯತ್ ನ ಕೆರೆಹಿತ್ತಲು ಗ್ರಾಮದಲ್ಲಿ ಊರಿನ ಪ್ರಾಥಮಿಕ ಶಾಲೆಗೆ ಬೆಲೆ ಬಾಳುವ ಜಮೀನು ದಾನ ಮಾಡಿದ್ದಾರೆ ಈ ಬಗ್ಗೆ ಒಂದು ಲೇಖನ ಆನಂದಪುರಂ ಇತಿಹಾಸ ಪುಸ್ತಕಕ್ಕಾಗಿ ಬರೆದಿದ್ದೆ (ಜನವರಿ 2023ರಲ್ಲಿ ಪುಸ್ತಕ ಬಿಡುಗಡೆ ಆಗಲಿದೆ) ಮತ್ತು ಅದನ್ನು ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದೆ ಇದನ್ನು ಓದಿದ ಇವರು ನನಗೆ ಕೃತಜ್ಞತೆ ಹೇಳಲು ಬಂದಿದ್ದರು.
ಗುಮ್ಮಿ ನಾಗಣ್ಣರ ಶಾಲಾ ಭೂಮಿ ದಾನದ ಲೇಖನ ಈ ಲಿಂಕ್ ಕ್ಲಿಕ್ ಮಾಡಿ ನೋಡಬಹುದು https://arunprasadhombuja.blogspot.com/se
ಗುಮ್ಮಿ ನಾಗಣ್ಣರ ಪುತ್ರಿ ಜಯಮ್ಮನವರು ಆನಂದಪುರಂನಲ್ಲೆ 5ನೇ ತರಗತಿಯಿಂದ ವ್ಯಾಸಂಗ ಮಾಡಿದವರು. ಇವರ ಪತಿ ರುದ್ರಪ್ಪನವರು ಬೆಂಗಳೂರಿನ ಅಕೌ೦ಟೆಂಟ್ ಜನರಲ್ (AG) ಆಫೀಸಿನ ಉನ್ನತ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ ಅವರು ನಮ್ಮ ಆನಂದಪುರಂ ಸಮೀಪದ ಅಂದಾಸುರದವರು.
ಇವರ ಜೊತೆ ಕಿರಿಯ ಪುತ್ರ ಪ್ರಶಾಂತ್ ಬಂದಿದ್ದರು ಅವರು ಪ್ಯಾರಾ ಒಲಂಪಿಕ್ ನಲ್ಲಿ ಅಥ್ಲೇಟಿಕ್ ನಲ್ಲಿ ಗೊಲ್ಡನ್ ಮೆಡಲ್ ಪಡೆದವರು, ನಮ್ಮ ಊರಿನ ಹುಡುಗನ ಈ ಸಾಧನೆ ನಮ್ಮ ಊರಿಗೆ ಗೊತ್ತೇ ಇಲ್ಲ.
ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಇವರ ಸೊಸೆ ಪಾಲುದಾರಿಕೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ GFC ರೆಸ್ಟೋರೆಂಟ್ ತೆರೆದಿದ್ದಾರೆ (ಕೃಷ್ಣಪ್ಪ ಗೌಡರ ಪ್ರೈಡ್ ಚಿಕನ್ ಪ್ರಾಂಚೈಸಿ).
ತಂದೆಯ ಬಗ್ಗೆ ಹೆಣ್ಣು ಮಕ್ಕಳಲ್ಲಿರುವ ಪ್ರೀತಿಗೆ ಬೆಲೆ ಕಟ್ಟಲಾಗದು, ನನ್ನ ಒಳಿತಿಗಾಗಿ ಆಶ್ರೀವದಿಸಿ ಹೋಗಿದ್ದಾರೆ ನಾನೂ ಅವರ ಆರೋಗ್ಯ ಆಯಸ್ಸಿಗಾಗಿ ಹಾರೈಸಿದೆ.
Comments
Post a Comment