Skip to main content

Blog number 937. ಆನಂದಪುರಂ ಇತಿಹಾಸ ಸಂಖ್ಯೆ 80. ಸೆಕ್ಷನ್ V ಮೈಸೂರು ಗೆಜೆಟಿಯರ್ ನಲ್ಲಿ ಆನಂದಪುರಂ ಉಲ್ಲೇಖದ ಯಥಾ ನಕಲು ಸುವರ್ಣ ಸ್ವಾತಂತ್ರ್ಯ ಜ್ಯೋತಿ 1996 ರಲ್ಲಿ ಸುಭಾಷ್ ಚಂದ್ರರ ಅನುಯಾಯಿ ಐಎನ್ಎ ರಾಮರಾವ್ ನೇತೃತ್ವದಲ್ಲಿ ಆನಂದಪುರಂಗೆ ಬಂದಾಗ ಸ್ಟಾಗತಿಸಿ ಪ್ರಸ್ತಾವಿಕ ನುಡಿಗಳ ಜೊತೆ ವಾಚಿಸಿದ ಸವಿ ನೆನಪು

#ಆನಂದಪುರಂ_ಇತಿಹಾಸ_ಸಂಖ್ಯೆ_80

#ಸೆಕ್ಷನ್_V_ಮೈಸೂರು_ಗೆಜೆಟಿಯರನಲ್ಲಿ_ಆನಂದಪುರಂ_ಯಥಾ_ನಕಲು

#ಸ್ಟಾತಂತ್ರ್ಯದ_ಅಮೃತೋತ್ಸವದ_ಸಂದರ್ಭದಲ್ಲಿ_ಆನಂದಪುರಂನ_ಸ್ಟಾತಂತ್ರ_ಹೋರಾಟಗಾರರ_ನೆನಪು

#ಸುವರ್ಣಸ್ವಾತೊಂತ್ರೊತ್ಸವದ_ಸಂದರ್ಭದಲ್ಲಿ_ಸುವರ್ಣಸ್ವಾತಂತ್ರ_ಜ್ಯೋತಿ_ಆನಂದಪುರಂಗೆ_ಬಂದಿತ್ತು.

#ಇದರ_ನೇತೃತ್ವ_ಸುಭಾಷಚಂದ್ರಬೋಸರ_ಇಂಡಿಯನ್_ನ್ಯಾಷನಲ್_ಆರ್ಮಿಯ_ಐಎನ್ಎ_ರಾಮರಾವ್_ಬಂದಿದ್ದರು.

#ಆನಂದಪುರಂ_ಬಸ್_ನಿಲ್ದಾಣದಲ್ಲಿ_ಸಭೆ_ಆಯೋಜಿಸಲಾಗಿತ್ತು.

    ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಆನಂದಪುರಂ ಬದರಿನಾರಾಯಣ ಅಯ್ಯಂಗಾರ್ ಸ್ವಾತಂತ್ರ್ಯ ನಂತರ  ಶಾಸಕರು, ಸಂಸದರು ಮತ್ತು ಮಂತ್ರಿಗಳಾಗಿದ್ದು ಇತಿಹಾಸ ಇವರ ಜೊತೆ ಆನಂದಪುರಂನ ರಾಮರಾವ್ (ಟೈಲರ್ ರಾಮಣ್ಣ), ಕೃಷ್ಣಮೂರ್ತಿ ಮಾಸ್ತರ್ (ಕನ್ನಡ ಸಂಘದ ಲಕ್ಷ್ಮೀಷ್ ತಂದೆ), ಟೈಲರ್ ಪುಟ್ಟಪ್ಪನವರು (ಎಲೆಕ್ಟ್ರಿಕ್ ಗುತ್ತಿಗೆದಾರ ಸಿರಿ ಮತ್ತು ಅಂಗನವಾಡಿ ಶಿಕ್ಷಕಿ ವಿಮಲಾಕ್ಷಿ ತಂದೆ) ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಆನಂದಪುರಂನ ಸರ್ವಕಾಲಿಕ ಗೌರವಾನ್ವಿತರು.
   ಸ್ಟಾತ೦ತ್ರ್ಯೋತ್ಸವದ ಬೆಳ್ಳಿ ಹಬ್ಬ (25ನೇ ಸ್ವಾತಂತ್ರ ದಿವಸ) 1972 ರಲ್ಲಿ ಆನಂದಪುರಂನಲ್ಲಿ ಅತ್ಯಂತ ಅದ್ದೂರಿಯಾದ ಎಲ್ಲಾ ಶಾಲಾ ಮಕ್ಕಳನ್ನು ಸೇರಿಸಿ ನಡೆಸಿದ ಪ್ರಭಾತ್ ಪೇರಿಯನ್ನು ಮಾದರಿ ಆನಂದಪುರ೦ ರಚನೆಗೆ ಕಾರಣರಾದ ದೈಹಿಕ ಶಿಕ್ಷರಾದ SRK ಎಂದೇ ಜನ ಕರೆಯುತ್ತಿದ್ದ ಎಸ್.ಆರ್.ಕೃಷ್ಣಪ್ಪ (ಈಗ ಶಿಕಾರಿಪುರದಲ್ಲಿ ನಿವೃತ್ತ ಜೀವನ ನಡೆಸಿದ್ದಾರೆ), ಡಾ.ಸುಸೇನಾಥನ್ (ಡಾ.ಆನಂದರಾಜ್ ತಂದೆ), ಮಸೀದಿ ಎದುರಿನ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ರಿಚರ್ಡ್ ಲೋಬೊ ಮಾಸ್ತರ್ ಆಯೋಜಿಸಿದ್ದರು ಆಗ ನಾನು ಎರಡನೆ ತರಗತಿ ವಿದ್ಯಾರ್ಥಿ ಆಗಿನ ಸಾಗರದ ಎ ಎಸ್ ಪಿ ಸಾಂಗ್ಲಿಯಾನರು ದ್ವಜಾರೋಹಣ ಮಾಡಿದ್ದರು
  1996ರಲ್ಲಿ ಸುವರ್ಣ ಸ್ವಾತಂತ್ರ್ಯೋತ್ಸವ (50 ನೇ ಸ್ವಾತಂತ್ರ ದಿವಸ) ಆಚರಣೆ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸರ ಕ್ರಾಂತಿಕಾರಿ ಸೈನ್ಯ #ಇಂಡಿಯನ್_ನ್ಯಾಷನಲ್_ಆರ್ಮಿ INA ಕ್ಯಾಪ್ಟನ್ ಸೆಹಗಲ್ ಸಹಯೋಗಿ ಐಎನ್ಎ ರಾಮರಾವ್ ಅವರ ನೇತೃತ್ವದ ಸುವರ್ಣ ಸ್ಟಾತಂತ್ರ್ಯ ಜ್ಯೋತಿ ಆನಂದಪುರಂನಲ್ಲಿ ತಂಗಿತ್ತು.
 ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿ ನನಗೆ ಸುಭಾಷ್ ಚಂದ್ರರ ಅನುಯಾಯಿ ರಾಮರಾವ್ ಮತ್ತು ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಸಾಗಿದ ಸುವರ್ಣ ಸ್ವಾತಂತ್ರ್ಯ ಜ್ಯೋತಿ ಸ್ವಾಗತಿಸುವ ಅವಕಾಶ ದೊರೆತಿದ್ದು ನನ್ನ ಸೌಬಾಗ್ಯ ಆಗಿತ್ತು.
  ಆನಂದಪುರಂ ಗ್ರಾಮ ಪಂಚಾಯಿತಿಯ ಆಗಿನ ಅದ್ಯಕ್ಷೆ ಶ್ರೀಮತಿ ಪಾರ್ವತಮ್ಮ, ಉಪಾಧ್ಯಕ್ಷೆ ಯಶೋದಮ್ಮ ಮತ್ತು ಎಲ್ಲಾ ಸದಸ್ಯರು, ಆನಂದಪುರಂನ ಕನ್ನಡ ಸಂಘದ ಆಗಿನ ಅದ್ಯಕ್ಷ ಹಾ.ಮೋ. ಬಾಷಾ ಮತ್ತು ಎಲ್ಲಾ ಸದಸ್ಯರು ಹಾಗೂ ಆನಂದಪುರಂನ ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆಯ ಆಗಿನ ಉತ್ಸಾಹಿ ಮುಖ್ಯೋಪಾಧ್ಯಾಯ ಮಹೇಶ್ ಎಲಿಗಾರ್ ಮತ್ತು ಶಿಕ್ಷಕರು, ಆನಂದಪುರಂನ ಎಲ್ಲಾ ಶಾಲಾ ಕಾಲೇಜು ಮಕ್ಕಳು ಭಾಗವಹಿಸಿದ್ದರು.
  ಅವತ್ತು ಆನಂದಪುರಂನ ಸ್ಟಾತಂತ್ರ್ಯ ಹೋರಾಟಗಾರರಾದ ರಾಮರಾವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷ.
  ಈ ಸಂದರ್ಭದಲ್ಲಿ ಸುವರ್ಣ ಸ್ವಾತಂತ್ರ್ಯ ಜ್ಯೋತಿ ಮತ್ತು ಸುಭಾಷ್ ಚಂದ್ರ ಬೋಸ್ ರ ಅನುಯಾಯಿ #ಐಎನ್ಎ_ರಾಮರಾವ್ ರನ್ನು ಸ್ಟಾಗತಿಸಿ ಪ್ರಸ್ತಾವಿಕವಾಗಿ ಮಾತಾಡುವ ಜೊತೆಗೆ ನಾನು #ಆನಂದಪುರಂ ಉಲ್ಲೇಖ ಇರುವ #ಸೆಕ್ಷನ್_V_ಮೈಸೂರು_ಗೆಜೆಟಿಯರ್ ಓದಿದೆ.
  ಅವತ್ತು ರಾತ್ರಿ ಸುವರ್ಣ ಸ್ವಾತಂತ್ರ್ಯ ಜ್ಯೋತಿ ಯಡೇಹಳ್ಳಿಯ ಪ್ರವಾಸಿ ಮಂದಿರದಲ್ಲಿ ತಂಗಿತ್ತು, ಐಎನ್ಎ ರಾಮರಾವ್ ರವರ ಅತಿಥ್ಯ ನಮ್ಮದಾಗಿತ್ತು.
   ವಯೋವೃದ್ಧ ಐಎನ್ಎ ರಾಮರಾವ್ ರ ಕಾಲಿಗೆ ಎಣ್ಣೆಯ ಮಾಲಿಷ್ ಮಾಡಿದವರು ಮಧ್ಯಪ್ರದೇಶದ ಮೊರೆನಾಜಿಲ್ಲೆಯಲ್ಲಿನ ಗಾಂಧೀ ಸೇವಾಶ್ರಮದಲ್ಲಿ ಶರಣಾದ ಡಕಾಯಿತರ ಪುನರ್ವಸತಿ ಕಾರ್ಯಕ್ರಮದಲ್ಲಿ ಅನೇಕ ವಷ೯ ಸೇವೆ ಸಲ್ಲಿಸಿದ ಆನಂದಪುರಂ ಬಸ್ ನಿಲ್ದಾಣದ ಭಾರತ್ ಕೆಫೆ ಹೋಟೆಲ್ ನ ಜಗದೀಶ್.
   ಸುಭಾಷ್ ಚಂದ್ರ ಬೋಸರ ಅಜಾದ್ ಹಿಂದ್ ಪೌಜ್ ಎಂಬ ಹೆಸರಲ್ಲಿ ಖ್ಯಾತಿಗಳಿಸಿದ ಐಎನ್ಎ ಸೈನ್ಯ ಇಂಪಿರಿಯಲ್ ಜಪಾನ್‌ ಆರ್ಮಿಯೊಂದಿಗೆ ಎರಡನೆ ಮಹಾಯುದ್ದದಲ್ಲಿ ಮಿತ್ರ ಸೈನ್ಯದ ಮೇಲೆ ಹೋರಾಡಿತ್ತು ಆಗ ಇದರ ಒಂದು ವಿಭಾಗ ಕ್ಯಾಪ್ಟನ್ ಶಹಾನವಾಜ್ ಮತ್ತು ಇನ್ನೊಂದು ವಿಭಾಗ ಕ್ಯಾಪ್ಟನ್ ಸೆಹಗಲ್ ನೇತೃತ್ವ ವಹಿಸಿದ್ದರು ಐಎನ್ಎ ರಾಮ ರಾವ್ ಕ್ಯಾಪ್ಟನ್ ಸೆಹಗಲ್ ಸಹಯೋಗಿ ಆಗಿ ಯುದ್ದದಲ್ಲಿ ಭಾಗವಹಿಸಿದ ಹೋರಾಟದ ನೆನಪುಗಳನ್ನು ತಡರಾತ್ರಿಯವರೆಗೆ ಹೇಳುತ್ತಿದ್ದರೆ ನೆರೆದಿದ್ದ ನಾವೆಲ್ಲ ಕೇಳುವುದರಲ್ಲಿ ಮಗ್ನರಾಗಿದ್ದೆವು.
  ಅವತ್ತು ಮದ್ಯಾಹ್ನ ಆನಂದಪುರಂನ ಸಭೆಯಲ್ಲಿ ನಾನು ವಾಚಿಸಿದ "ಸೆಕ್ಷನ್ V ಮೈಸೂರು ಗೆಜೆಟಿಯರ್ " ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿದ್ದರು.
   ಅವತ್ತು ನಾನು ಓದಿದ ಗೆಜಿಟಿಯರ್
#ಇನ್ನೊಮ್ಮೆ_ಸೆಕ್ಷನ್_V_ಮೈಸೂರು_ಗೆಜೆಟಿಯರ್_ಆನಂದಪುರಂ_ಉಲ್ಲೇಖಗಳು_ಈಗಿನ_ತಲೆಮಾರಿನ_ಆಸಕ್ತರಿಗೆ 

               #ಆನಂದಪುರಂ_ಬ್ರಿಟೀಷರು_ಕಂಡಂತೆ
(ಕೃಪೆ : ಸೆಕ್ಷನ್ V ಮೈಸೂರು ಗೆಜೆಟಿಯರ್ ನಲ್ಲಿ ಅಚ್ಚಾಗಿರುವ ಯಥಾ ನಕಲು )
 
  ಆನಂದಪುರಂ ಸಾಗರ ತಾಲ್ಲೂಕಿನ ಒಂದು ಗ್ರಾಮ, ಶಿವಮೊಗ್ಗದಿಂದ ಗೇರುಸೊಪ್ಪ ಮಾರ್ಗದಲ್ಲಿ ಸಾಗರದಿಂದ 15 ಮೈಲುಗಳ ದೂರದಲ್ಲಿದೆ. ಇದು 1838ನೇ ಇಸವಿಯಲ್ಲಿ ನಗರ ತಾಲ್ಲೂಕಿಗೆ ಸೇರಲ್ಪಟ್ಟಿತ್ತು ಆದರೆ ನಂತರ 1875ರ ವರೆಗೆ ಪುನಃ ಆನಂದಪುರಂ ಎಂಬ ಹೆಸರಿನಲ್ಲಿ ತಾಲ್ಲೂಕ್ ಕೇಂದ್ರ ಸ್ಥಾನವಾಗಿದೆ ಈಗ ಇಲ್ಲಿನ ಜನಸಂಖ್ಯೆ 333 ಆಗಿತ್ತು.
  ಈ ಸ್ಥಳಕ್ಕೆ ಆನಂದಪುರಂ ಎಂದು ಹೆಸರು ಬರಲು ಹಲವು ಹಿನ್ನೆಲೆ ಇದೆ ಅವುಗಳಲ್ಲಿ ಒಂದೆಂದರೆ ಕೆಳದಿ ವಂಶದ ರಾಜ ವೆಂಕಟಪ್ಪ ನಾಯಕ ತನ್ನ ಪ್ರೇಯಸಿ ಚಂಪಕಳಿಂದ ಪಡೆದ ಆನಂದದ ಸ್ಮರಣೆಗಾಗಿ ಈ ಸ್ಥಳವನ್ನು ಆನಂದಪುರಂ ಎಂದು ಕರೆದನೆಂದು ಪ್ರತೀತಿ ಇದೆ.
  ಇಲ್ಲಿ ದೊರೆತಿರುವ ಹಲವಾರು ದಾಖಲೆಗಳನ್ನು ಪರಿಶೀಲಿಸಿದಾಗ ದೂರಕಿರುವ ವಿವರಗಳಂತೆ 10 ನೇ ಶತಮಾನದಲ್ಲಿ ಚಾಲುಕ್ಯರಿಂದ ದಾಖಲಿಸಲ್ಪಟ್ಟಂತೆ ಆನಂದಪುರಂ ಕೆಳದಿ ವಂಶದವರಿಗಿಂತ ಮೊದಲೇ ಪ್ರಾಮುಖ್ಯತೆ ಪಡೆದಿತ್ತು.
   ದಾಖಲೆಯೊಂದು ತಿಳಿಸುವಂತೆ 8ನೇ ಶತಮಾನದಲ್ಲಿ ಅಂದಾಸುರನೆಂಬುವವನು ಹುಮಚ (ಹೊಂಬುಜ) ಎನ್ನುವ ಪ್ರದೇಶದ ವಿಚಾರದಲ್ಲಿ ಜಿನದತ್ತನನ್ನು ವಿರೋದಿಸಿ ಆ ಪ್ರಯತ್ನದಲ್ಲಿ ಸೋಲನ್ನು ಅನುಭವಿಸಿದನು, ಈ ಸ್ಥಳವು (ಆನಂದಪುರಂ) ಮುಂದೆಯೂ ಸಹ ಹಲವಾರು ಬಾರಿ ನವಾಬ್ ಹೈದರಾಲಿ ಮತ್ತು ಅವರ ಮಗ ಟಿಪ್ಪು ಸುಲ್ತಾನರ ಆಡಳಿತ ಕಾಲದಲ್ಲಿ ದಾಳಿಗೆ ಒಳಗಾದ ಪ್ರದೇಶವಾಗಿತ್ತು (1830 ರವರೆಗೆ) .
  ಈ ಗ್ರಾಮವು ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಹೆದ್ದಾರಿಯ ಎರೆಡೂ ಬದಿಯಲ್ಲಿ ವಿಸ್ತರಿಸಿದ್ದು, ಉತ್ತರಕ್ಕೆ ಶಿಕಾರಿಪುರಕ್ಕೆ ಹೋಗುವ ಮುಖ್ಯ ರಸ್ತೆ, ದಕ್ಷಿಣಕ್ಕೆ ತೀರ್ಥಹಳ್ಳಿ ಮತ್ತು ಕಲ್ಲೂರ ಶೆಟ್ಟಿಗೆ (ಹೊಸನಗರಕ್ಕೆ ಆಗಿನ ಹೆಸರು) ಹೋಗುವ ಪ್ರಮುಖ ರಸ್ತೆ ಮಾರ್ಗವನ್ನು ಹೊಂದಿರುತ್ತದೆ.
    ಈ ಪ್ರದೇಶದ 18ನೇ ಶತಮಾನದ ಯುದ್ಧಗಳಲ್ಲೂ ಒಳಪಟ್ಟಿದ್ದು ಪ್ರಮುಖವಾಗಿ ಕಂಡುಬರುತ್ತದೆ.
   ಎರಡನೇ ಮೈಸೂರು ಯುದ್ಧದ ಅಂತ್ಯಕ್ಕೆ ಸ್ವಲ್ಪ ಮೊದಲೇ ಈ ಗ್ರಾಮವು ಬಿದನೂರು ಪ್ರಾಂತ್ಯದ ರಾಜ್ಯಪಾಲನಾಗಿದ್ದ ಅಯಾಜ್ ಸಾಹೇಬ್ (ಹಯಾತ್ ಸಾಹೇಬ್) ಎಂಬುವ ಟಿಪ್ಪು ಸುಲ್ತಾನರ ಅದೀನದಿಂದ  ಬ್ರಿಟೀಷರಿಗೆ ಹಸ್ತಾಂತರಿಸಲ್ಪಟ್ಟಿತ್ತು.
   ಆಗ ಈ ಪ್ರದೇಶವನ್ನು ಅಕ್ರಮಿಸುವ ಸಲುವಾಗಿ ಬ್ರಿಟೀಷ್ ಸೈನ್ಯದ ಭಾಗವೊಂದು ಆನಂದಪುರಂ ಕಡೆಗೆ ದಾವಿಸಿತ್ತು, ಈ ವಿಷಯ ತಿಳಿದ ಟಿಪ್ಪು ಸುಲ್ತಾನರು ತಕ್ಷಣವೇ ಲತೀಪ್ ಆಲೀ ಬೇಗ್ ಎಂಬ ಸೈನ್ಯಾಧಿಕಾರಿಯನ್ನು 300 ಜನ ಬಲಶಾಲಿ ಯೋದರೊಂದಿಗೆ ಈ ಸ್ಥಳ ಅಕ್ರಮಿಸಿಕೊಳ್ಳಲು ಕಳುಸಿ ಕೊಡುತ್ತಾರೆ.
     ಈ ನಡುವೆ ಬ್ರಿಟೀಷ್ ಸೈನ್ಯವೂ ಈ ಸ್ಥಳಕ್ಕೆ ದಾವಿಸುತ್ತಿರುವ ವಿಷಯ ತಿಳಿದ ಅಯಾಜ್ ಖಾನ್ ರಕ್ಷಣಾ ಪಡೆ ಮತ್ತು ಅಲ್ಲಿನ ನಿವಾಸಿಗಳು ಬ್ರಿಟೀಷರಿಗೆ ಆನಂದಪುರಂ ಪ್ರದೇಶ ಒಪ್ಪಿಸಿ ಕೊಡಲು ಸಿದ್ದವಾಗಿರುತ್ತಾರೆ.
  ಆದರೆ ಬ್ರಿಟೀಷ್ ಪಡೆ ಈ ಪ್ರದೇಶಕ್ಕೆ ಬಂದ ಕೂಡಲೇ ಹಿಂದೆಗೆಯುವಂತೆ ಕೋಟೆಯಲ್ಲಿನ ಟಿಪ್ಪು ಸೈನಿಕರು ಪದೇ ಪದೇ ಎಚ್ಚರಿಸಿದರು ಬ್ರಿಟೀಷ್ ಪಡೆ ಈ ಪ್ರದೇಶದ ಮೇಲೆ ಹತೋಟಿ ಸಾದಿಸಲು ಹಟ ತೊಟ್ಟು ನಿಂತಾಗ, ಟಿಪ್ಪು ಸೈನಿಕರು ಟಿಪ್ಪು ರಾಜ್ಯದ ಬಾವುಟವನ್ನು ಅಲ್ಲಿ ನೆಡುತ್ತಾರಾದರೂ ಬ್ರಿಟೀಷರು ಅದನ್ನು ಲೆಕ್ಕಿಸದೆ ದಾಳಿ ಮಾಡಿ ಆನಂದಪುರಂ ವಶ ಮಾಡಿಕೊಳ್ಳುತ್ತಾರೆಂದು  ಬ್ರಿಟೀಷರೇ ಸಿದ್ಧಪಡಿಸಿದ ವಾರ್ಷಿಕ ವರದಿಯಲ್ಲಿ ಕಾಣಬಹುದಾಗಿದೆ (ಆನ್ಯೂಯಲ್ ರಿಜಿಸ್ಟರ್ ಎಂಬ ದಾಖಲೆಯಲ್ಲಿ).
  ಈ ಅಕ್ರಮಣ ಕಾಲದಲ್ಲಿ ಸುಮಾರು 400 ಸ್ತ್ರಿಯರ ಮೇಲೆ ಬ್ರಿಟೀಷ್ ಸೈನಿಕರು  ಎಸಗಿದ ದೌರ್ಜನ್ಯವನ್ನು ಮನಕರುಗುವಂತೆ ವಿಲ್ಕ್ ಎಂಬ ಇತಿಹಾಸಗಾರ ತನ್ನ ಹಿಸ್ಟಾರಿಕಲ್ ಸ್ಕೆಚಸ್ ಎನ್ನುವ ಗ್ರಂಥದಲ್ಲಿ ಹೀಗೆ ಬರೆಯುತ್ತಾನೆ "ಆನಂದಪುರಂ ಪ್ರದೇಶದ ಅಕ್ರಮಣ ಕಾಲದಲ್ಲಿ ಬ್ರಿಟೀಷರ ಮೇಲೆ ಇತಿಹಾಸಕಾರರು ಅತ್ಯಾಚಾರ ಮತ್ತು ದೌರ್ಜನ್ಯದ ಗಂಭೀರ ಆಪಾದನೆಯನ್ನು ಮಾಡಿದ್ದು ಅದರ ವಿವರ ಹೀಗಿದೆ, ಸುಮಾರು 400 ಜನ ಸುಂದರ ಸ್ತ್ರಿಯರು ಬ್ರಿಟೀಷರ ಬಂದೂಕಿನ ಬಯೋನೆಟ್ ನಿಂದ ತಿವಿಯಲ್ಪಟ್ಟು ಸಾಯುವ ಸ್ಥಿತಿಯಲ್ಲಿ ಅಥವ ಒಬ್ಬರಿಗೊಬ್ಬರು ಅಪ್ಪಿಕೊಂಡು ನರಳುತ್ತಾ ಚೀರುತ್ತಾ ವಿಲ ವಿಲನೆ ಒದ್ದಾಡುತ್ತಾ ಪ್ರಾಣ ಬಿಡುವ ಸಂಕಟದಲ್ಲಿ ಒದ್ದಾಡುತ್ತಿದ್ದರು, ಮೇಲಾಗಿ ಬ್ರಿಟೀಷ್ ಸೈನಿಕರು ಚಾಟಿಗಳಿಂದ ಬಹಳ ಕ್ರೂರವಾಗಿ ಜನರ ಮೇಲೆ ಹಲ್ಲೆ ನಡೆಸುತ್ತಲೇ ಇದ್ದರು."
  ಸ್ತ್ರಿಯರ ಮೈಮೇಲಿದ್ದ ಒಡವೆಗಳನ್ನು ಕಿತ್ತುಕೊಳ್ಳುತ್ತಿದ್ದರು ಅಲ್ಲದೆ ಕೈಗೆ ಸಿಕ್ಕವರನ್ನ ಬಡಿಯುತ್ತಾ, ಚುಚ್ಚುತ್ತಾ ಕೆರೆ ಕಂದಕಕ್ಕೆ ಬೀಸಿ ಒಗೆಯುತ್ತಿದ್ದ ದೃಶ್ಯವಂತೂ ಕರಳು ಹಿಂಡುತ್ತಿತ್ತು, ಕೆಲವೊಂದು ಸ್ತ್ರಿಯರನ್ನು ಮಕ್ಕಳನ್ನು ಅವರ ಸಂಬಂದಿಕರಿಂದ ಬಲವಂತವಾಗಿ ಕಿತ್ತುಕೊಂಡು ಹೊಡೆದು ಕೊಲ್ಲುತ್ತಿದ್ದ ದೃಶ್ಯವಂತೂ ಮಾನವೀಯತೆಯನ್ನೂ ಮರೆಸಿ ರಾಕ್ಷಸಿ ಕೃತ್ಯವನ್ನು ಮೆರೆಸಿದಂತಿತ್ತು.
  ಎಷ್ಟೋ ಜನ ಮುಗ್ದರು ಸೈನಿಕರ ಈ ಹಿಂಸೆಯಿಂದ ತಪ್ಪಿಸಿಕೊಳ್ಳಲು ತಾವೇ ಓಡಿ ಹೋಗಿ ಬಾವಿ, ಕೆರೆಗಳಿಗೆ ಹಾರಿ ಮುಳುಗಿ ಸತ್ತರು, ಇದನ್ನು ತಿಳಿದ ಟಿಪ್ಪು ಸುಲ್ತಾನರು ಈ ಹತ್ಯಾಕಾಂಡಕ್ಕೆ ಕಾರಣನಾದ ಜನರಲ್ ಮ್ಯಾಥ್ಯೂ ಎಂಬ ಸೈನ್ಯಾಧಿಕಾರಿಯನ್ನು ಅವನ ಸೈನ್ಯದ ಸಮೇತ ಸೆರೆ ಹಿಡಿದು ಅವರು ಆನಂದಪುರಂ ಜನರ ಮೇಲೆ ಮಾಡಿದ ಅನ್ಯಾಯ ಅತ್ಯಾಚಾರಕ್ಕೆ ಪ್ರತಿಯಾಗಿ ಅವರನ್ನು ಕ್ರೂರವಾಗಿ ದಂಡಿಸಿದನೆಂದು ಎಂ.ಮಿಚೌಡ್ ಎನ್ನುವವರು ಹಿಸ್ಟರಿ ಆಫ್ ಹೈದರಾಲಿ ಅಂಡ್ ಟಿಪ್ಪು ಸಾಹೇಬ್ (1899) ಎನ್ನುವ ಗ್ರಂಥದಲ್ಲಿ ತಿಳಿಸಿದ್ದಾರೆ.
  ಈಗ ಆನಂದಪುರಂ ಕೋಟೆ ಹಾಳು ಬಿದ್ದಿದೆ ಅದರ ಸುತ್ತ ಮುತ್ತ ಕಾಡು ಬೆಳೆದಿದ್ದು ಅಪ್ಪಟ ಮಲೆನಾಡು ಎಂದೇ ಕರೆಸಿಕೊಳ್ಳುತ್ತಿದೆ ಎನ್ನುವ ಲೇಖಕ ಲೆವಿನ್ ಬೆಂತೆಂ ಬೌರಿಂಗ್

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ