Blog number 946. ದೇಶಿ ಕುಂಬಾರಿಕೆಗೆ ಆದುನಿಕತೆಯ ಸ್ಪರ್ಷ, ಗುಜರಾತಿನ ಮೊರ್ಬಿಯ ಕೈಗಾರಿಕೆಗಳ ಮಣ್ಣಿನ ಪಾತ್ರೆಗಳು ಅದುನಿಕ ಅಡುಗೆ ಮನೆಗೆ ಹೊಸ ಶೋಭೆ ತರುತ್ತಿದೆ.
#ಗುಜರಾತಿನ_ಮೊರ್ಬಿಯಲ್ಲಿ_ತಯಾರಕ_ಘಟಕಗಳು.
#ದೇಶದಾದ್ಯಂತ_ಮಾರಾಟ_ಮಾಡುವ_ರಾಜಸ್ಥಾನಿ_ಬುಡಕಟ್ಟು_ಪಂಗಡಗಳು
#ಕಡಿಮೆ_ದರ_ಗರಿಷ್ಟ_ಆರೋಗ್ಯದ_ಮಣ್ಣಿನ_ತವಾ_ಟೀಕಪ್
#ಐವತ್ತು_ರೂಪಾಯಿಗೆ_ಒಂದು_ತವಾ.
ನಿನ್ನೆ ನಮ್ಮ ಲಾಡ್ಜ್ ಎದುರಿನಲ್ಲಿ ಒಂದು ಮಿನಿ ಟ್ರಕ್ ಬಂದು ನಿಂತಿತು, ಅದರ ತುಂಬಾ ಆಕರ್ಷಕವಾದ ಹ್ಯಾ೦ಡಲ್ ಜೋಡಿಸಿದ ಮಣ್ಣಿನ ತವಾ ಮತ್ತು ಮಣ್ಣಿನ ಟೀ ಕಪ್ ಗಳನ್ನು ಮಾರಾಟಕ್ಕೆ ತಂದಿದ್ದರು, ನಿನ್ನೆ ಬೆಳಿಗ್ಗೆ ಸಾಗರದಲ್ಲಿ ಸುಮಾರು 200 ತವಾ ಮಾರಾಟ ಮಾಡಿ ಸಂಜೆ ಆನಂದಪುರಂಗೆ ಬಂದು ಮಾರಾಟ ಮಾಡಿ ಶಿವಮೊಗ್ಗಕ್ಕೆ ಹೋದರು.
ಮಣ್ಣಿನ ತವಾ ಅದಕ್ಕೆ ಹಿಡಿ ಅಳವಡಿಸಿ ತಯಾರಿಸುವ ಅನೇಕ ಘಟಕಗಳು ಗುಜರಾತಿನ ಮೊರ್ಬಿಯಲ್ಲಿದೆ ಅಲ್ಲಿಂದ ಸಾವಿರಾರು ತವಾ ಮತ್ತು ಟೀ ಕಪ್ ಗಳನ್ನು ತಮ್ಮ ತಮ್ಮ ವಾಹನದಲ್ಲಿ ಖರೀದಿಸಿ ದೇಶದಾದ್ಯಂತ ಮಾರಾಟ ಮಾಡುವ ನೂರಾರು ರಾಜಸ್ಥಾನದ ಕುಟುಂಬಗಳು ಸ್ವಯ೦ ಉದ್ಯೋಗಿಗಳಾಗಿದ್ದಾರೆ.
ಒಂದು ತವಾಕ್ಕೆ ಕೇವಲ 50 ರೂಪಾಯಿ ಆದ್ದರಿಂದ ಇವರು ಹೋದಲ್ಲೆಲ್ಲ ಭರಪೂರ ವ್ಯಾಪಾರ, ಮಣ್ಣಿನ ಟೀ ಕಪ್ ಅರ್ದ ಡಜನ್ ಗೆ 250 ರೂಪಾಯಿ, ನಾನು 4 ತವಾ ಮತ್ತು ಅರ್ಧ ಡಜನ್ ಟೀ ಕಪ್ ಖರೀದಿಸಿದೆ, ಮಾರಾಟದ ತಂಡದ ಮುಖ್ಯಸ್ಥ ಕಿಷನ್ ಲಾಲ್ ಗೆ ಚಹಾ ನೀಡಿ ಮಾತಾಡಿಸಿದ ವಿಡಿಯೋ ಇಲ್ಲಿ ಪೋಸ್ಟ್ ಮಾಡಿದ್ದೇನೆ ನೋಡಿ.
ಸಂಪ್ರದಾಯಿಕ ಕುಂಬಾರಿಕೆ ಈ ರೀತಿ ಅದುನಿಕರಣದಿಂದ ಹೊಸ ಮಾರುಕಟ್ಟೆ ಸೃಷ್ಠಿಸಿದ ಗುಜರಾತಿನ ಮೊರ್ಬಿ ಕೈಗಾರಿಕೆಗಳಿಗೆ ಸೆಲ್ಯೂಟ್ ಹೇಳಲೇ ಬೇಕು.
ಈಗಾಗಲೇ ಮಣ್ಣಿನ ಪ್ರಿಜ್, ನೀರಿನ ಬಾಟಲ್, ವೈವಿದ್ಯದ ಅಡುಗೆ ಪಾತ್ರೆಗಳು, ತಟ್ಟೆ-ಲೋಟಗಳು ಅವರು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಕೊಟ್ಯಾಂತರ ರೂಪಾಯಿ ವಹಿವಾಟು ಮಾಡುತ್ತಿದ್ದಾರೆ.
ನಮ್ಮ ಭಾಗದ ಕುಂಬಾರಿಕೆ ಉದ್ಯೋಗಸ್ಥರನ್ನು ಸರ್ಕಾರಗಳು ಇಂತಹ ಕಡೆ ಕರೆದೊಯ್ದು ತೋರಿಸಿ ಅವರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗದ ಅವಕಾಶ ಮಾಡಿಕೊಡಬಹುದಿತ್ತು ಆದರೆ ಅದು ಆಗಿಲ್ಲ.
ರಾಜ್ಯದ ಕುಂಬಾರಿಕೆ ಸಂಘಟನೆಗಳು ಈ ಕೆಲಸ ಮಾಡಿದರೆ ರಾಜ್ಯದ ಸಂಪ್ರದಾಯಿಕ ಕುಂಬಾರಿಕೆ ಕುಟುಂಬಗಳಿಗೆ ಅನುಕೂಲ ಆಗಲಿದೆ.
ಈ ಕುಂಬಾರಿಕೆ ಉತ್ಪನ್ನ ಮಾರಾಟವನ್ನೆ ಅವಲಂಬಿಸಿರುವ ಕಿಷನ್ ಲಾಲ್ ಕುಟುಂಬಗಳು ರಾಜಸ್ಥಾನದಲ್ಲಿ ಬೆತ್ತದ ತಳಿಯ ದಪ್ಪ ಹುಲ್ಲಿನ ದಂಟಿನಿಂದ ಸುಂದರವಾದ ಖುರ್ಚಿ ಹೆಣೆಯುವ ಬುಡಕಟ್ಟು ಜನಾಂಗದವರು, ಇವರೂ ತಮ್ಮ ಕುಲ ಕಸಬು ಬಿಟ್ಟು ವ್ಯಾಪಾರಿಗಳಾಗುತ್ತಿದ್ದಾರೆ! ಅದು ಇನ್ನೊಂದು ಕಥೆ.
ಈ ಕುಂಬಾರಿಕೆ ವಸ್ತುಗಳ ಮಾರಾಟಗಾರ ಕಿಷನ್ ಲಾಲ್ ಸಂಪರ್ಕ ಸಂಖ್ಯೆ 9896692644, ಜಾಸ್ತಿ ಸಂಖ್ಯೆಯಲ್ಲಿ ಖರೀದಿಸುವವರು ಸಂಪರ್ಕಿಸಬಹುದು.
Comments
Post a Comment