Blog number 1677. ಈ ಎರೆಡು ಪುಸ್ತಕಕ್ಕೆ ಮುನ್ನುಡಿ ಬರೆಯುವ ಭಾಗ್ಯ ನನ್ನದು, ಇದೇ ಮೊದಲ ಮುನ್ನುಡಿ ಎ.ವಿ.ಕೃಷ್ಣ ಮೂರ್ತಿ ಅವರು ಬರೆದ ನನ್ನ ಬಾಲ್ಯ ಎಂಬ ಎರೆಡು ಪುಸ್ತಕ ಓದಿ ಅಭಿಪ್ರಾಯಿಸಿ.
#ಇವತ್ತು_ಅಂಚೆಯಲ್ಲಿ_ಬಂದ_ಎರಡು_ಪುಸ್ತಕ. #ಎ_ವಿ_ಕೃಷ್ಣಮೂರ್ತಿಯವರ_ನನ್ನ_ಬಾಲ್ಯ_ಭಾಗ_1_ಭಾಗ_2. #ಈ_ಎರಡೂ_ಪುಸ್ತಕದ_ಮುನ್ನುಡಿ_ಬರೆಯುವ_ಭಾಗ್ಯ_ನನ್ನದು. #ಲೇಖಕರ_ಮಾತುಗಳಲ್ಲಿ_ನಾನು_ಪುಸ್ತಕ_ಪ್ರಕಟನೆಗೆ_ಕಾರಣ_ಎಂದು_ದಾಖಲಿಸಿದ್ದಾರೆ. #ಒಂದು_ಪುಟ_ತೆರೆದು_ಓದಲು_ಪ್ರಾರಂಬಿಸಿದರೆ_ಎರಡೂ_ಪುಸ್ತಕ_ಮುಕ್ತಾಯ_ಮಾಡದೇ_ಇರಲಾರಿರಿ. ನನ್ನ ಜೀವನದಲ್ಲಿ ಪುಸ್ತಕಕ್ಕೆ ಮುನ್ನುಡಿ ಬರೆದದ್ದು ಇದೇ ಮೊದಲು ಅದೂ ಎ.ವಿ.ಕೃಷ್ಣಮೂರ್ತಿ ಅವರ #ನನ್ನ_ಬಾಲ್ಯ (ಬಾಲ್ಯಕಾಲದ ನೆನಪುಗಳು) ಭಾಗ 1 ಮತ್ತು ಭಾಗ 2 ಎರೆಡೂ ಪುಸ್ತಕಕ್ಕೆ ಈ ಅವಕಾಶ ನೀಡಿದ ಎ.ವಿ.ಕೃಷ್ಣಮೂರ್ತಿ ಅವರಿಗೆ ಆಭಾರಿ. ಅವರು ಪೇಸ್ ಬುಕ್ ನಲ್ಲಿ ಬರೆಯುತ್ತಿದ್ದ ಅವರ ಬಾಲ್ಯದ ನೆನಪುಗಳ ಪ್ರತಿ ಕಂತುಗಳನ್ನು ಓದಲು ಕಾಯುತ್ತಿದ್ದೆ ಅಷ್ಟು ಸುಂದರವಾಗಿ ತಮ್ಮ ಕಷ್ಟದ ಬಾಲ್ಯವನ್ನು ಪ್ರತಿಯೊಂದು ಊರಿನ ವಿವರದೊಂದಿಗೆ ಆ ಕಾಲದ ಎಲ್ಲಾ ಮಹನೀಯರನ್ನು ಪರಿಚಯಿಸುತ್ತಾ ಅವತ್ತಿನ ಕಾಲಮಾನದ ಕೃಷಿ, ಅಡಿಕೆಯ ತೋಟಗಳ ಗೇಣಿ ಪದ್ಧತಿ, ವಾರದ ಸಂತೆಗೆ ಮಾರಾಟಕ್ಕೆ ಒಯ್ಯುತ್ತಿದ್ದ ವೀಳ್ಯದ ಎಲೆ ಅದರ ವ್ಯಾಪಾರ ಅವತ್ತಿನ ರಸ್ತೆಗಳು, ಸಾರಿಗೆ ಸಂಪರ್ಕ ಮಾಡುವ ಬಸ್ಸುಗಳು ಹೋಟೆಲ್ ಗಳು ನೀವು ಈ ಪುಸ್ತಕ ಓದಿ ಸವಿಯ ಬೇಕು. ಬಡತನ ಮೀರಿ ಬುದ್ದಿವಂತ ಮಕ್ಕಳು ಮುಂದೆ ಬರಲು ಸಾಧ್ಯವಿಲ್ಲದ ದಿನಗಳು ಆ ದಿನಗಳಲ್ಲೂ ಬಡ ವಿದ್ಯಾರ್ಥಿಗಳಿಗ...