Blog number 1677. ಈ ಎರೆಡು ಪುಸ್ತಕಕ್ಕೆ ಮುನ್ನುಡಿ ಬರೆಯುವ ಭಾಗ್ಯ ನನ್ನದು, ಇದೇ ಮೊದಲ ಮುನ್ನುಡಿ ಎ.ವಿ.ಕೃಷ್ಣ ಮೂರ್ತಿ ಅವರು ಬರೆದ ನನ್ನ ಬಾಲ್ಯ ಎಂಬ ಎರೆಡು ಪುಸ್ತಕ ಓದಿ ಅಭಿಪ್ರಾಯಿಸಿ.
#ಇವತ್ತು_ಅಂಚೆಯಲ್ಲಿ_ಬಂದ_ಎರಡು_ಪುಸ್ತಕ.
#ಎ_ವಿ_ಕೃಷ್ಣಮೂರ್ತಿಯವರ_ನನ್ನ_ಬಾಲ್ಯ_ಭಾಗ_1_ಭಾಗ_2.
#ಈ_ಎರಡೂ_ಪುಸ್ತಕದ_ಮುನ್ನುಡಿ_ಬರೆಯುವ_ಭಾಗ್ಯ_ನನ್ನದು.
#ಲೇಖಕರ_ಮಾತುಗಳಲ್ಲಿ_ನಾನು_ಪುಸ್ತಕ_ಪ್ರಕಟನೆಗೆ_ಕಾರಣ_ಎಂದು_ದಾಖಲಿಸಿದ್ದಾರೆ.
#ಒಂದು_ಪುಟ_ತೆರೆದು_ಓದಲು_ಪ್ರಾರಂಬಿಸಿದರೆ_ಎರಡೂ_ಪುಸ್ತಕ_ಮುಕ್ತಾಯ_ಮಾಡದೇ_ಇರಲಾರಿರಿ.
ನನ್ನ ಜೀವನದಲ್ಲಿ ಪುಸ್ತಕಕ್ಕೆ ಮುನ್ನುಡಿ ಬರೆದದ್ದು ಇದೇ ಮೊದಲು ಅದೂ ಎ.ವಿ.ಕೃಷ್ಣಮೂರ್ತಿ ಅವರ #ನನ್ನ_ಬಾಲ್ಯ (ಬಾಲ್ಯಕಾಲದ ನೆನಪುಗಳು) ಭಾಗ 1 ಮತ್ತು ಭಾಗ 2 ಎರೆಡೂ ಪುಸ್ತಕಕ್ಕೆ ಈ ಅವಕಾಶ ನೀಡಿದ ಎ.ವಿ.ಕೃಷ್ಣಮೂರ್ತಿ ಅವರಿಗೆ ಆಭಾರಿ.
ಅವರು ಪೇಸ್ ಬುಕ್ ನಲ್ಲಿ ಬರೆಯುತ್ತಿದ್ದ ಅವರ ಬಾಲ್ಯದ ನೆನಪುಗಳ ಪ್ರತಿ ಕಂತುಗಳನ್ನು ಓದಲು ಕಾಯುತ್ತಿದ್ದೆ ಅಷ್ಟು ಸುಂದರವಾಗಿ ತಮ್ಮ ಕಷ್ಟದ ಬಾಲ್ಯವನ್ನು ಪ್ರತಿಯೊಂದು ಊರಿನ ವಿವರದೊಂದಿಗೆ ಆ ಕಾಲದ ಎಲ್ಲಾ ಮಹನೀಯರನ್ನು ಪರಿಚಯಿಸುತ್ತಾ ಅವತ್ತಿನ ಕಾಲಮಾನದ ಕೃಷಿ, ಅಡಿಕೆಯ ತೋಟಗಳ ಗೇಣಿ ಪದ್ಧತಿ, ವಾರದ ಸಂತೆಗೆ ಮಾರಾಟಕ್ಕೆ ಒಯ್ಯುತ್ತಿದ್ದ ವೀಳ್ಯದ ಎಲೆ ಅದರ ವ್ಯಾಪಾರ ಅವತ್ತಿನ ರಸ್ತೆಗಳು, ಸಾರಿಗೆ ಸಂಪರ್ಕ ಮಾಡುವ ಬಸ್ಸುಗಳು ಹೋಟೆಲ್ ಗಳು ನೀವು ಈ ಪುಸ್ತಕ ಓದಿ ಸವಿಯ ಬೇಕು.
ಬಡತನ ಮೀರಿ ಬುದ್ದಿವಂತ ಮಕ್ಕಳು ಮುಂದೆ ಬರಲು ಸಾಧ್ಯವಿಲ್ಲದ ದಿನಗಳು ಆ ದಿನಗಳಲ್ಲೂ ಬಡ ವಿದ್ಯಾರ್ಥಿಗಳಿಗೆ ಮೋಸ ಮಾಡುವ ವ್ಯವಸ್ಥೆ ಆ ದಿನದಲ್ಲಿ ರಾಜ್ಯದಲ್ಲೇ ರ್ಯಾಂಕ್ ವಿಜೇತ ಬಡ ವಿದ್ಯಾರ್ಥಿಯ ಜೀವನ ಸಾಗಿ ಬಂದ ದಾರಿಯ ತಿರುಗಿ ನೋಡಿದ ಎ. ವಿ.ಕೃಷ್ಣಮೂರ್ತಿ ಇದನ್ನೆಲ್ಲ #ನನ್ನ_ಬಾಲ್ಯ ಎಂಬ ಶಿರೋನಾಮೆಯಲ್ಲಿ ಪುಸ್ತಕ ಮಾಡಿದ್ದಾರೆ ಇದನ್ನು ಸುಮಾರು 275 ಪುಟಗಳ ಎರೆಡು ಪುಸ್ತಕ ಭಾಗ -1 ಮತ್ತು ಭಾಗ - 2 ಗಳಾಗಿ ಮುದ್ರಿಸಿದ್ದಾರೆ.
ಇವರ ಬರವಣಿಗೆಯ ಶೈಲಿ ಅದನ್ನು ಓದಿಸಿ ಕೊಂಡು ಹೋಗುವ ಪರಿ ಹೇಗೆಂದರೆ ಮೊದಲ ಪುಟ ಓದಲು ತೆರೆದರೆ ನೀವು ಮುಕ್ತಾಯ ಮಾಡುವುದು ಪುಸ್ತಕದ ಕೊನೆಯ ಪುಟ ಮುಗಿದಾಗಲೆ.
ಪುಸ್ತಕ ಅಮೇಜಾನ್ ನಲ್ಲಿ ಖರೀದಿಸಲು https://www.amazon.in/dp/9357471952?ref=myi_title_dp.
ಪುಸ್ತಕ ಪ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು
https://www.flipkart.com/nanna-balya-balya-kalada-nenapugalu-part/p/itm3509c9b442fa2?pid=9789357471954 ಈ ಲಿಂಕ್ ಬಳಸಬಹುದು.
Comments
Post a Comment