#ಈ_ಲೆಖ್ಖ_ಸರಿಯೇ_ತಮ್ಮ ?
#ಇದು_ರಾಜ್ಯ_ಪತ್ರಿಕೆ_ಹೆಡ್ಡಿಂಗು_ತಪ್ಪು_ಆಗಲು_ಸಾಧ್ಯನಾ?
ಇವತ್ತಿನ ಬೆಳಿಗಿನ ರಾಜ್ಯದ ಪ್ರತಿಷ್ಠಿತ ಅತಿ ಹೆಚ್ಚು ಪ್ರಸಾರದ ವಿಜಯವಾಣಿ ಪತ್ರಿಕೆಯಲ್ಲಿ "ಕಳ್ಳ ಮಾರ್ಗದಲ್ಲಿ ಭಾರತಕ್ಕೆ 334 ಟನ್ ಕಳಪೆ ಅಡಕೆ " ಎಂಬ ಶಿರೋನಾಮೆಯ ಕೆಳಗೆ ಉಪ ಶಿರೋನಾಮೆಯಲ್ಲಿ 'ಕಸ್ಟಮ್ ಅಧಿಕಾರಿಗಳಿಂದ 15000 ಕೋಟಿ ಮೌಲ್ಯದ ಮಾಲು ಜಪ್ತಿ' ಅಂತ ಚಾಪಿಸಿದ್ದಾರೆ.
ಇದರಿಂದ ಅಡಿಕೆಗೆ ಬೆಲೆ ಎಷ್ಟು ಎಂಬ ಜಿಜ್ಞಾಸೆ ಉಂಟಾಗಿದೆ, ಒಂದು ಟನ್ ಅಂದರೆ ಸಾವಿರ ಕೆಜಿ ಹಾಗಾದರೆ ಒಂದು ಕೆಜೆ ಅಡಿಕೆಗೆ 500 ಅಂದರೆ ಟನ್ ಗೆ 5 ಲಕ್ಷ ಆದೀತು ಹಾಗಾದಲ್ಲಿ 5 ಲಕ್ಷ ಗುಣಿಸು 334 ಅಂದರೆ 16 ಕೋಟಿ 70 ಲಕ್ಷ ಆದೀತು.
ಈ ಮುಖಪುಟ ವರದಿ 15 ಸಾವಿರ ಕೋಟಿ ಆಗಿದ್ದು ಹೇಗೆ? ಅಥವಾ ಅಡಿಕೆ ಪ್ರಮಾಣ ತಪ್ಪಾಗಿದೆಯಾ?
ರಾಜ್ಯ ಮಟ್ಟದ ಪತ್ರಿಕೆ ಮುಖ ಪುಟದಲ್ಲಿಯೇ ಈ ರೀತಿ ತಪ್ಪು ಸುದ್ದಿ ಪ್ರಕಟಿಸುವುದು ಸರಿಯಾ?
Comments
Post a Comment