🍁ಬಾಳಿಗೊಂದು ಬಂಗಾರದಂಥ ಮಾತು🍁
🌷 ಸಾಕ್ರೆಟಿಸ್ ನ 3 ಪ್ರಶ್ನೆಗಳು 🌷
ಒಂದು ದಿನ ಸಾಕ್ರೆಟಿಸ್ ಏಕಾಂಗಿಯಾಗಿ ತಮ್ಮ ಮನೆಯ ಅಂಗಳದಲ್ಲಿ ನಡೆದಾಡುತ್ತಿದ್ದಾಗ, ಅವನಿಗೆ ಸ್ನೇಹಿತನೊಬ್ಬ : "ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ, ಆ ಸಂಗತಿ ನಿಮಗೆ ಗೊತ್ತಿದೆಯಾ ?’ ಎಂದು ಕೇಳಿದ.
ಅದಕ್ಕೆ ಸಾಕ್ರೆಟಿಸ್ : "ಒಂದು ನಿಮಿಷ ತಾಳು, ನೀನು ಆ ವಿಷಯ ಹೇಳುವ ಮೊದಲು, ನಿನಗೊಂದು ಮೂರು ಹಂತದ ಪರೀಕ್ಷೆಯನ್ನೊಡ್ಡುತ್ತೇನೆ. ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ’ ಎಂದ. ಅದಕ್ಕೆ ಆತ ಒಪ್ಪಿಕೊಂಡ.
1) ಮೊದಲ ಹಂತ ಅಂದ್ರೆ, "ಸತ್ಯ"
ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿದೆಯೆ ?’
ಅದಕ್ಕೆ ಸ್ನೇಹಿತ : "ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನನಗೆ ಯಾರೋ ಹೇಳಿದರು. ನಾನು ಅದನ್ನು ಕೇಳಿದೆ ಅಷ್ಟೆ"
ಅವನ ಮಾತಿಗೆ ಸಾಕ್ರಟಿಸ್ : "ಹೌದಾ ? ಅಂದರೆ ನೀನು ಹೇಳುವ ವಿಷಯ ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು.
2) ಹಾಗಾದರೆ ಈಗ ಎರಡನೆಯ ಹಂತದ
ಪರೀಕ್ಷೆ : ಇದು "Goodness" ಪರೀಕ್ಷೆ :
"ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ ?’
ಅದಕ್ಕೆ ಸ್ನೇಹಿತ : "ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ"
ಸಾಕ್ರೆಟಿಸ್ : "ಅಂದರೆ, ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿ ಕೆಟ್ಟದ್ದು ಅಂತಾಯಿತು. ಅಂದರೆ, ಅದು ಸತ್ಯ ಸಂಗತಿ ಹೌದೋ ಅಲ್ಲವೋ ಎಂಬುದು ನಿನಗೆ ಗೊತ್ತಿರದಿದ್ದರೂ ಪರವಾಗಿಲ್ಲ. ನೀನು ಅವನ ಬಗ್ಗೆ ಕೆಟ್ಟದನ್ನು ಹೇಳಬೇಕೆಂದು ಬಯಸಿದ್ದೀಯಾ ಅಂತಾಯಿತು"
ಈ ಮಾತನ್ನು ಕೇಳಿ ಸ್ನೇಹಿತನ ಮುಖ ಬಿಳುಚಿಕೊಂಡಿತು. ಒಂದು ಕ್ಷಣ ಆತ ತಬ್ಬಿಬ್ಬಾದ.
3) ಸಾಕ್ರಟಿಸ್ ಮುಂದುವರಿಸಿದ : "ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿನಗೆ ಇನ್ನೂ ಒಂದು ಅವಕಾಶವಿದೆ. ಮೂರನೆ ಹಂತದ ಪರೀಕ್ಷೆಯನ್ನು ಒಡ್ಡುತ್ತೇನೆ.
ಈ ಹಂತಕ್ಕೆ "ಉಪಯುಕ್ತತೆ" ಹಂತ ಎಂದು ಹೆಸರು.
ಅಂದರೆ, ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿಯಿಂದ, ನನಗಾಗಲಿ, ನಿನಗಾಗಲಿ ಸಮಾಜಕ್ಕಾಗಲಿ ಯಾವುದಾದರೂ ರೀತಿಯಿಂದ ಪ್ರಯೋಜನವಾಗುತ್ತದೆ ಎಂದು ನಿನಗೆ ಅನಿಸುತ್ತಿದೆಯಾ?’
ಅದಕ್ಕೆ ಸ್ನೇಹಿತ : "ಇಲ್ಲ, ಅದರಿಂದ ಯಾರಿಗೂ ಲಾಭವಾಗುತ್ತದೆಂದು ನನಗೆ ಅನಿಸುತ್ತಿಲ್ಲ’ ಎಂದ.
ಆ ಸ್ನೇಹಿತನನ್ನು ಹತ್ತಿರಕ್ಕೆ ಕರೆದು ಸಾಕ್ರಟಿಸ್ ನುಡಿದ : "ಅಯ್ಯಾ,
1.ನೀನು ಹೇಳಲಿರುವ ಸಂಗತಿ ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ !
2.ಅದರಿಂದ ಯಾವ ಪುರುಷಾರ್ಥ ಸಾಧನೆಯಾಗುತ್ತದೆಂಬುದೂ ನಿನಗೆ ಗೊತ್ತಿಲ್ಲ !
3.ಅದರಿಂದ ನನಗಾಗಲಿ, ನಿನಗಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ !
ಹೀಗಿರುವಾಗ, ಅಂಥ ವಿಷಯವನ್ನು ನನಗೇಕೆ ಹೇಳುತ್ತೀಯಾ ? ನಿನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬೇರೆಯವರ ಬಗ್ಗೆ ಇಲ್ಲಸಲ್ಲದ ಸಂಗತಿ ಹೇಳ್ತೀಯಲ್ಲ, ನಿನಗೆ ನಾಚಿಕೆ ಆಗೊಲ್ಲವಾ ? ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವಿದ್ದರೆ ಮಾಡು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು, ಎಂದು ಹೇಳಿದರು.
Comments
Post a Comment