Blog number 1665. ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ ಪುರಸ್ಕಾರ ಸಾಹಿತ್ಯ ಪೋಷಕರಾಗಿದ್ದ ಶಿವಮೊಗ್ಗದ ಹಿರೇಹಾಳ ಇಬ್ರಾಹಿಂ ಸಾಹೇಬರಿಗೆ.
#ಶಿವಮೊಗ್ಗದ_ದಿವಂಗತ_ಹಿರೇಹಾಳ_ಇಬ್ರಾಹಿಂ_ಸಾಹೇಬರಿಗೆ_ಡಾಕ್ಟರೇಟ್.
#ವಿಜಯನಗರ_ಕೃಷ್ಣದೇವರಾಯ_ವಿಶ್ವವಿದ್ಯಾಲಯದಿಂದ_ಮರಣೋತ್ತರ_ಡಾಕ್ಟರೇಟ್
#ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು
#ಇಸ್ಲಾಂನ_ಪ್ರವಚನ_ಕನ್ನಡಕ್ಕೆ_ಅನುವಾದಿಸಿದವರು
#ಶಿವಮೊಗ್ಗದ_ಪ್ರತಿಷ್ಟಿತ_ಕರ್ನಾಟಕ_ಸಂಘದ_ಉಪಾಧ್ಯಕ್ಷರಾಗಿದ್ದರು.
#ಆ_ಕಾಲದಲ್ಲಿ_ಬಿವಿ_ಕಾರಂತರ_ಹಯವದನ_ನಾಟಕಕ್ಕೆ_ಪ್ರಾಯೋಜಕತ್ವ_ನೀಡಿದವರು.
ನಾಡಿನ ಪ್ರಖ್ಯಾತ ಕವಿಗಳಾದ "ಮುನಿಸು ತರವೇ ಮುಗುದೇ.. ಹಿತವಾಗಿ ನಗಲೂ ಬಾರದೇ " ಪ್ರಸಿದ್ಧ ಹಾಡು ಬರೆದ ಸುಬ್ರಾಯ ಚೊಕ್ಕಾಡಿ ಅವರು ಕೆಲ ದಿನದ ಹಿಂದೆ ಶಿವಮೊಗ್ಗದ ಹಿರೇಹಾಳ ಇಬ್ರಾಹಿಂ ಸಾಹೇಬರ ನೆನಪಿಸಿಕೊಂಡಿದ್ದರು, ಇಬ್ರಾಹಿಂ ಸಾಹೇಬರ ಆಹ್ವಾನದ ಮೇಲೆ ಶಿವಮೊಗ್ಗಕ್ಕೆ ಬಂದಿದ್ದಾಗಿ ಅವರ ಅತಿಥ್ಯ ಸ್ವೀಕರಿಸಿದ ಬಗ್ಗೆ ತಿಳಿಸಿದ್ದರು.
ಇವತ್ತು ಅವರೇ ಹಿರೇಹಾಳ ಇಬ್ರಾಹಿಂ ಸಾಹೇಬರಿಗೆ ಮರಣೋತ್ತರ ಡಾಕ್ಟರೇಟ್ ವಿಜಯನಗರದ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಇವತ್ತು (13 ಜುಲೈ 2023) ತನ್ನ 11ನೇ ಘಟಿಕೋತ್ಸವದಲ್ಲಿ ಹಿಂದೂಸ್ಥಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಮತ್ತು ರಾಯಚೂರಿನ ಪ್ರಗತಿ ಪರ ರೈತ ಮಹಿಳೆ ಕವಿತಾ ಮಿಶ್ರರಿಗೂ ನೀಡಿ ಗೌರವಿಸುವ ಪ್ರಕಟನೆ ಮಾಹಿತಿ ಅವರು ಇವತ್ತಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬಗ್ಗೆ ತಿಳಿಸಿದರು.
ಹಿರೇಹಾಳ ಇಬ್ರಾಹಿಂ ಸಾಹೇಬರ ಬಗ್ಗೆ ಕನ್ನಡ ಸಾಹಿತ್ಯ ಲೋಕದಲ್ಲಿನ ಎಲ್ಲಾ ಹಿರಿಯ ಸಾಹಿತಿಗಳಲ್ಲಿ ಅತ್ಯಂತ ಗೌರವಾಭಿಮಾನ ಕಾರಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಪೋಷಕ ಸ್ಥಾನ.
ನಾಡಿನ ಸಾಹಿತಿಗಳಿಗೆ ಶಿವಮೊಗ್ಗಕ್ಕೇ ಆಹ್ವಾನಿಸಿ ಆಧರಿಸಿ ಗೌರವಿಸುತ್ತಿದ್ದ ರೀತಿ ಹಿರೇಹಾಳ ಇಬ್ರಾಹಿಂ ಸಾಹೇಬರ ಬಿಟ್ಟರೆ ಇನ್ನೊಬ್ಬರಿಲ್ಲ.
ಆ ಕಾಲದಲ್ಲಿ ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರ #ಹಯವದನ ನಾಟಕ ಪ್ರದರ್ಶನದ ಪ್ರಾಯೋಜಕತ್ವ ಮಾಡುವ ದೈರ್ಯ ಮಾಡಿದ್ದು ಹಿರೇಹಾಳ ಇಬ್ರಾಹಿಂ ಸಾಹೇಬರು, ನಂತರ ಹಯವದನ ನಾಟಕ ಯಶಸ್ವಿಯಾಗಿ ನಡೆಯಿತು.
ಇಬ್ರಾಹಿಂ ಸಾಹೇಬರು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದರು, ರಾಜ್ಯ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದರು, 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ನೇತೃತ್ವ ವಹಿಸಿದ್ದರು.
ಶಿವಮೊಗ್ಗದಲ್ಲಿ ಮುಸ್ಲಿಂ ಸಾಹಿತಿಗಳ ಸಮ್ಮೇಳನ ಲಂಕೇಶರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಇಬ್ರಾಹಿಂ ಸಾಹೇಬರು ನಡೆಸಿದ್ದರು ಇದು ಮುಸ್ಲಿಂ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಲೋಕದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಅವರದ್ದಾಗಿತ್ತು ಅದೇ ಮೊದಲ ಮತ್ತು ಕೊನೆಯ ಮುಸ್ಲಿಂ ಸಾಹಿತಿಗಳ ಸಮ್ಮೇಳನ ಆಯಿತು.
ಶಿವಮೊಗ್ಗದಲ್ಲಿ ಕೋಟೆ ಪೋಲಿಸ್ ಠಾಣೆ ದಾಟಿ ಮುಂದೆ ಹೋದರೆ ಬಲ ಭಾಗದ ವಿಶಾಲವಾದ ಬಂಗ್ಲೆ ಹಿರೇಹಾಳ ಇಬ್ರಾಹಿಂ ಸಾಹೇಬರದ್ದು ನಾನು ಅನೇಕ ಬಾರಿ ನಮ್ಮ ಊರಿನ ಸಮೀಪದ ಮುಂಬಾಳಿನ ಗೋಕುಲ್ ಪಾರಂನ ಡಾ. ಪಾದರ್ ಜೋಸೆಪ್ ಜೊತೆ ಅವರ ಬೇಟಿಗೆ ಹೋಗಿದ್ದೆ ಕಾರಣ ಪಾದರ್ ಜೋಸೆಪ್ ಮರಗೆಣಸು (ಟ್ಯಾಪಿಯೋಕ ) ಬೆಳೆವ ರೈತರ ಸಹಕಾರಿ ಸಂಘ ರಚಿಸಲು ಆ ದಿನಗಳಲ್ಲಿ ಯೋಚಿಸುತ್ತಿದ್ದರು ಆಗ ಮರಗೆಣಸಿನಿಂದ ಸ್ಪಿರಿಟ್ ಉತ್ಪಾದಿಸುವ ಲೈಸೆನ್ಸ್ ಹಿರೇಹಾಳು ಇಬ್ರಾಹಿಂ ಸಾಹೇಬರು ಹೊಂದಿದ್ದರು.
Comments
Post a Comment