#ಶ್ರೀ ಗಣಪತಿ ದೇವಾಲಯದ ಇತಿಹಾಸ ಪುಸ್ತಕ
#ಸಾಗರದ ಪುರಾತನ ಗಣಪತಿ ದೇವಸ್ಥಾನದ ಅಚ೯ಕರ 4 ತಲೆಮಾರುಗಳ ಇತಿಹಾಸ ಈಗ ಪುಸ್ತಕವಾಗಿದೆ.
#ಶ್ರೀಮತಿ ಸಹನಾದೀಪಕ್ ಸಾಗರ್ ಬರೆದು ಪ್ರಕಟಿಸಿದ್ದಾರೆ.
#ಇವರು ಈ ದೇವಾಲಯದ ಪ್ರದಾನ ಅರ್ಚಕರ ಪುತ್ರಿ
#ಸಾಗರದ ಪತ್ರಕರ್ತ ದೀಪಕ್ ಸಾಗರ್ ಪತ್ನಿ
#ಈ ಪುಸ್ತಕದಲ್ಲಿ ನಾನು ಬರೆದ ಬಾರಾಪಂತ್ ಲೇಖನ ಸೇರಿಸಿದ್ದಾರೆ
#ಪ್ರತಿ 12 ವರ್ಷಕ್ಕೆ ಬಾರಾಪಂತ್ ಯಾತ್ರೆ ಸಾಗರದ ಗಣಪತಿ ದೇವಸ್ಥಾನದಲ್ಲಿ ತಂಗುತ್ತದೆ.
ಎರೆಡು ವಷ೯ದ ಹಿಂದೆ ಸಾಗರದ ಪತ್ರಕತ೯ ಮಿತ್ರ ದೀಪಕ್ ಸಾಗರ್ ಪೋನಾಯಿಸಿ ಪ್ರತಿ 12 ವಷ೯ಕ್ಕೆ ಒಮ್ಮೆ ಪಶ್ಚಿಮ ಘಟ್ಟದಲ್ಲಿ ದೂರದ ನಾಸಿಕ್ ನಿಂದ ಕರಾವಳಿಯ ಮಂಗಳೂರಿನ ಕದ್ರಿಗೆ ತಲುಪುವ "ಬಾರ ಪಂಥ್ " ಯಾತ್ರೆಯ ಬಗ್ಗೆ ನಾನು ಬರೆದ ಲೇಖನ ಯಾವುದೋ ಒಂದು ಪುಸ್ತಕದಲ್ಲಿ ಬಳಸಿಕೊಳ್ಳಬಹುದಾ? ಎಂದು ಕೇಳಿದ್ದರು, ದಾರಾಳವಾಗಿ ಬಳಸಿಕೊಳ್ಳಿ ಎಂದಿದ್ದೆ ಕಾರಣ ಸುಮಾರು 34 ವಷ೯ ಸಿದ್ದಾಪುರದ ಕಮಲಶಿಲೆ ಹತ್ತಿರದ ಹಲವಾರಿ ಮಠದ ಪಟ್ಟದ ಸ್ವಾಮಿಗಳಾಗಿದ್ದ ಸೋಮನಾಥ ಬಾಬರವರು ಈ ಬಾರ ಪಂಥ ಯಾತ್ರೆ ಬಗ್ಗೆ ಹೆಚ್ಚು ಪ್ರಚಾರ ಮತ್ತು ಪ್ರಸಾರ ಮಾಡಲು ನನಗೆ ಆದೇಶಿಸಿದ್ದರು.
ನಿನ್ನೆ ಬೆಳಿಗ್ಗೆ ಪತ್ರಕತ೯ರ ದಿನಾಚಾರಣೆಯ೦ದು ದೀಪಕ್ ಸಾಗರ್ ಮತ್ತು ಅವರ ಪತ್ನಿ ಶ್ರೀಮತಿ ಸಹನಾ ಈ ಪುಸ್ತಕ ಗೌರವ ಪ್ರತಿಯಾಗಿ ನೀಡಿದರು.
*ಶ್ರೀಮಹಾಗಣಪತಿ ದೇವಾಲಯದ ಇತಿಹಾಸ* ಎಂಬ ಈ ಪ್ರಸ್ತಕ ಸಾಗರದ ಪುರಾತನ ಮಹಾಗಣಪತಿ ದೇವಸ್ಥಾನದ ಪ್ರದಾನ ಅಚ೯ಕ ವಿದ್ವಾನ್ ಪಿ.ಎಲ್.ಗಜಾನನ ಭಟ್ ರ ಪುತ್ರಿ ಶ್ರೀಮತಿ ಸಹನಾ ಸಂಪಾದಿಸಿ ಪ್ರಕಟಿಸಿದ್ದಾರೆ.
ಸುಮಾರು ನಾಲ್ಕು ಶತಮಾನದ ಹಿಂದೆ ಕೆಳದಿ ಅರಸರಾದ ವೆಂಕಟಪ್ಪ ನಾಯಕರು (ದೀಘ೯ ಕಾಲ ರಾಜ್ಯ ಬಾರ ಮಾಡಿದ ಅರಸರು) ಈಗಿನ ಸಾಗರ ಪಟ್ಟಣದ ನಿಮಾ೯ತರು (ಸದಾಶಿವ ಸಾಗರ ಆಗಿನ ಹೆಸರು, ಅವರ ಅಜ್ಜ ರಾಜ ಸದಾಶಿವರ ಸ್ಮರಣಾಥ೯) ಗಣಪತಿ ದೇವಾಲಯ ಕೂಡ ಅವರೇ ನಿಮಿ೯ಸಿದರೆಂಬ ಪ್ರತೀತಿ ಇದೆ ಆದರೆ ಬಾರಾ ಪಂಥದ ಮೂಲ ಉತ್ತರ ಪ್ರದೇಶದ ಗೋರಕ್ ಪುರದ ಗೋರಕ್ ನಾಥ ಮಠ (ಇದರ ಮಹಾಂತರು ಯೋಗಿ ಆದಿತ್ಯನಾಥರು ಈಗ ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳು, ಅವರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು ಎಂಬ ಸುದ್ದಿ ಇದೆ ಆದರೆ ಯಾವಾಗ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ) ಪ್ರತಿ 12 ವಷ೯ಕ್ಕೆ ನಾಸಿಕ್ ನಿಂದ ಹೊರಡುವ ಯಾತ್ರೆ ಸಾಗರದ ಗಣಪತಿ ದೇವಾಲಯದಲ್ಲಿ 2 ರಿಂದ 3 ದಿನ ತಂಗುತ್ತದೆ, ಈ ಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಸನ್ಯಾಸಿ ಆಗಿ 78 ಜನ್ಮ ತಾಳಿದವರಿಗೆ ಸಿಗುತ್ತದೆ ಎಂಬ ನಂಬಿಕೆ ಅವರದ್ದು, ಮಚ್ಚೇoದ್ರನಾಥರ ಕಾಲದಿಂದ ಈ ಯಾತ್ರೆ ನಡೆಯುತ್ತಿದೆ ಎನ್ನುತ್ತಾರೆ ಹಾಗಾದರೆ ಸಾಗರದ ಗಣಪತಿ ದೇವಸ್ಥಾನ ಅತ್ಯಂತ ಪುರಾತನವಾದದ್ದಾಗಿರ ಬೇಕು ಎನ್ನುವ ತಕ೯ ಕೂಡ.
ಈ ದೇವಾಲಯದಲ್ಲಿನ ಶತಮಾನದ ಹಿಂದಿನ ಪರಿಸ್ಥಿತಿ, ಪರಿಸರ ಮತ್ತು ಆ ದಿನದಲ್ಲಿನ ಸಾಗರದ ಜನ ಜೀವನದ ಬಗ್ಗೆಯೂ ಮಾಹಿತಿ ಮತ್ತು ಚಿತ್ರಗಳು ಈ ಪ್ರಸ್ತಕದಲ್ಲಿ ದಾಖಲಿಸಿದ್ದಾರೆ.
ಅಚ೯ಕ ಕುಟುಂಬಗಳ ಶ್ರದ್ದೆ, ಭಕ್ತಿ ಮತ್ತು ಬದ್ದತೆಗಳು ಅವರ ಕಷ್ಟ ಆಗಿನ ಕಾಲದ ರೀತಿ ರಿವಾಜು ಮತ್ತು ಕಟ್ಟಲೆಗಳು, ಆ ಕಾಲದಲ್ಲಿ ತಮ್ಮ ಕುಟುಂಬಕ್ಕೆ ತಲತಲಾಂತರದಿoದ ಬಂದ ಅಚ೯ಕ ವೃತ್ತಿ ಕೈ ತಪ್ಪುವ೦ತಾದಾಗ ತುಂಬಾ ಶ್ರಮ ಪಟ್ಟು ಕಾನೂನು ಹೋರಾಟವು ಮಾಡಿ ಗೆಲ್ಲುವ ಸಹನಾರ ಮುತ್ತಜ್ಜಿ ತುಂಗಮ್ಮ ರಾಮಚಂದ್ರ ಭಟ್ಟರು ಸ್ತುತ್ಯಾಹ೯ರು ಅವರ ಹೋರಾಟ ಇಲ್ಲದಿದ್ದರೆ ಈ ಪುಸ್ತಕ ಪ್ರಕಟನೆ ಕೂಡ ಆಗುತ್ತಿರಲಿಲ್ಲ.
ಗಣಪತಿ ದೇವಸ್ಥಾನ, ಅದರ ಕೆರೆ ದಂಡೆ ಪುರಾತನವಾದದ್ದು ಮತ್ತು ಇತಿಹಾಸದ ತಳಕು ಇರುವಂತದ್ದು ಅದನ್ನ ಅಚ೯ಕ ಕುಟುಂಬದ ಮಸೂರದಿಂದ ಇಣುಕು ಹಾಕುವ ಈ ಪ್ರಯತ್ನ ಪ್ರಶಂಸಾಹ೯.
ಈ ಪುಸ್ತಕದಲ್ಲಿ ನಾನು ಬಾರಾಪಂತ್ ಯಾತ್ರೆ ಬಗ್ಗೆ ಶಿವಮೊಗ್ಗದ ಶೃಂಗೇಶರ ಸಂಪಾದಕತ್ವದ ಜನ ಹೋರಾಟ ದಿನ ಪತ್ರಿಕೆಯಲ್ಲಿ ಬರೆದ ಲೇಖನ ಪ್ರಕಟಿಸಿದ್ದಾರೆ ಪ್ರತಿ 12 ವರ್ಷಕ್ಕೊಮ್ಮೆ ಬರುವ ಬಾರಾಪಂತ್ ಯಾತ್ರೆ ಸಾಗರದ ಪುರಾಣ ಪ್ರಸಿದ್ದ ಗಣಪತಿ ದೇವಸ್ಥಾನದಲ್ಲಿ ತಂಗುತ್ತದೆ.
Comments
Post a Comment