Blog number 1683. ಶಾಸನ ರಹಿತ ಶಿಲ್ಪಗಳಾದ ಫಲವತ್ತತೆಯ ಸಂಕೇತವಾದ ಶಿವಮೊಗ್ಗ ಜಿಲ್ಲೆಯ ಸೊರಬ-ಸಾಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ 15 - 16 ನೇ ಶತಮಾನದಲ್ಲಿ ನಿಮಿ೯ಸಿದ ಕೆರೆ ದಂಡೆಯಲ್ಲಿ ಮಾತ್ರ ಇರುವ ನಗ್ನ ಸ್ತ್ರೀ-ಪುರುಶ ವಿಗ್ರಹ ಇದನ್ನು ರಾತ್ರಿ ವೇಳೆ ಗುಪ್ತವಾಗಿ ಅವಿವಾಹಿತರು ಪೂಜಿಸುವ ಪದ್ಧತಿ ಇದೆ ಅಂತೆ.
#ಶಾಸನರಹಿತ_ಶಿಲ್ಪಗಳು.
#ನಮ್ಮ_ಚೆನ್ನಶೆಟ್ಟಿಕೊಪ್ಪದ_ಕೆರೆದಂಡೆಯ_ನಗ್ನ_ಸ್ತ್ರೀ_ಪುರುಷ_ವಿಗ್ರಹದ_ಮಾಹಿತಿ_ನೀಡಿದ
#ನಿವೃತ್ತ_ಕೃಷಿ_ಅಧಿಕಾರಿ_ಹಿರೇನೆಲ್ಲೂರು_ಪಾಂಡುರಂಗ_ ಕಳಸ
#ಇವರು_ಹುಟ್ಟಿದ್ದು_ಸಾಗರ_ತಾಲ್ಲೂಕಿನಲ್ಲಿ
#ಇವರ_ತಂದೆ_ಮಡಸೂರುಲಿಂಗದಳ್ಳಿ_ಮಂಗಳಬೀಸು_ಶಾಲೆಯಲ್ಲಿ_ಶಿಕ್ಷಕರಾಗಿದ್ದ.
#ಹೆಚ್_ಜಿ_ರುದ್ರಪ್ಪನವರು.
ಮೊನ್ನೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪದ ಕೆರೆ ದಂಡೆಯ ಶಾಸನದ ಬಗ್ಗೆ ಬರೆದ ಲೇಖನ ಪೋಸ್ಟ್ ಮಾಡಿದ್ದೆ ಈ ಕ್ಷಣದವರೆಗೆ 14 ಸಾವಿರದ 554 ಜನರಿಗೆ ತಲುಪಿದೆ ಮತ್ತು ಆ ಕೆರೆ ದಂಡೆಯ ಮೇಲಿನ ನಗ್ನ ಸ್ತ್ರೀ ಪುರುಷ ವಿಗ್ರಹದ ಪೋಟೋದ ಬಗ್ಗೆ ಬಹು ಜನರು ಮಾಹಿತಿ ಕೇಳಿದ್ದರು.
ನನಗೆ ಅಷ್ಟು ಹೆಚ್ಚು ಮಾಹಿತಿ ಇಲ್ಲವಾದ್ದರಿಂದ ನಾನು ಕಳಸದ ನಿವೃತ್ತ ಕೃಷಿ ಅಧಿಕಾರಿಗಳಾದ ಹಿರೇನೆಲ್ಲೂರು ಪಾಂಡುರಂಗ ಕಳಸ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದ್ದೆ.
ಚಿಕ್ಕಮಗಳೂರು ಜಿಲ್ಲೆಯ ಹಿರೇನೆಲ್ಲೂರಿನ ಮೂಲದವರಾದ ಇವರ ತಂದೆ ಶಿಕ್ಷಕರಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಗಳಬೀಸು ಮತ್ತು ಮಡಸೂರು ಲಿಂಗದಳ್ಳಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರಂತೆ ಆದ್ದರಿಂದ ಸಾಗರ ಪಾಂಡುರಂಗ ಅವರು ಹುಟ್ಟಿದ ಸ್ಥಳ ಸಾಗರ.
ಸಾಗರದ ಪಾಂಡುರಂಗ ದೇವರ ಹರಕೆ ಕಾರಣ ಇವರ ಹೆಸರು ಪಾಂಡುರಂಗ ಅಂತ ನಾಮಕರಣವಾಯಿತಂತೆ.
ಹಿಸ್ಟರಿ ಮೇಜರ್ ಬಿಎ ವ್ಯಾಸಂಗ ಮಾಡಿದ್ದ ಇವರಿಗೆ ಇತಿಹಾಸ ಮೆಚ್ಚಿನ ವಿಷಯ ಅದಕ್ಕೆ ಪೂರಕವಾಗಿ ಕೃಷಿ ಇಲಾಖಾ ಅಧಿಕಾರ ಇವರದ್ದು ಈಗ ನಿವೃತ್ತರಾಗಿದ್ದಾರೆ.
ಇತಿಹಾಸ ಸಂಶೋದನೆ, ಸಂರಕ್ಷಣೆ ಮತ್ತು ಅಧ್ಯಯನ ಇವರ ಪ್ರವೃತ್ತಿ ಆಗಿದೆ, ಮಾಸ್ತಿಕಲ್ಲು ಸ್ಥಳನಾಮಗಳ ಬಗ್ಗೆ ಅನೇಕ ಸಂಶೋಧನೆ ಮಾಡಿ ಪ್ರಕಟಿಸಿದ್ದಾರೆ.
ಇತಿಹಾಸ ಅಕಾಡೆಮಿ ಸದಸ್ಯರಾಗಿ ಈಗಾಗಲೇ 35 ಶಾಸನಗಳನ್ನು ಸಂಶೋದಿಸಿ ಪ್ರಕಟಿಸಿದ್ದಾರೆ, ಇನ್ನೂ 45 ಶಾಸನಗಳು ಪ್ರಕಟವಾಗಬೇಕಾಗಿದೆ ಈ ಬಗ್ಗೆ ನಾಲ್ಕು ಪುಸ್ತಕಗಳು ಪ್ರಕಟನೆಯ ಹಾದಿಯಲ್ಲಿದೆ ಈಗ ಕಳಸದಲ್ಲಿ ಹೊಸ ದಿಗಂತ ಮತ್ತು ಸ್ಥಳಿಯ ಜನ ಮಿತ್ರ ಪತ್ರಿಕಾ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ನನ್ನ ಚಂಪಕ ರಾಣಿ ಇಂಗ್ಲೇಷ್ ಆವೃತ್ತಿಯ ಮುಖಪುಟ ವಿನ್ಯಾಸಕ್ಕೆ ಮತ್ತು ಪುಸ್ತಕದ ಹೆಸರು Champaka the Forgotten Queen of Keladi Kingdom ಎಂಬ ನಾಮಕರಣ ಮಾಡಿದ್ದು ಇವರೆ.
ಅವರು ಕೆರೆ ದಂಡೆಯ ಮೇಲೆ ನಗ್ನ ಸ್ತ್ರೀ-ಪುರುಶರ ವಿಗ್ರಹ ಸ್ಥಾಪಿಸುವ ಬಗ್ಗೆ ಈ ಕೆಳಕಂಡಂತೆ ಮಾಹಿತಿ ನೀಡಿದ್ದಾರೆ...
ಈ ರೀತಿಯ ಶಿಲ್ಪಗಳು ಶಿವಮೊಗ್ಗ ಜಿಲ್ಲೆಯ ಸೊರಬ, ಶಿಕಾರಿಪುರ ಮತ್ತು ಸಾಗರ ತಾಲೂಕಿನಲ್ಲಿ 15-16 ನೇ ಶತಮಾನದಲ್ಲಿ ನಿರ್ಮಾಣವಾದ ನಿರಾವರಿ ಕೆರೆ ದಂಡೆಗಳಲ್ಲಿ ಮಾತ್ರ ಕಾಣಸಿಗುತ್ತದೆ ಬೇರೆ ಜಿಲ್ಲೆಗಳಲ್ಲಿ ಇಲ್ಲ.
ಈ ಬಗ್ಗೆ ಈವರೆಗೆ ಯಾವುದೇ ಶಾಸನ ದೊರೆತಿಲ್ಲ, ಈ ವಿಗ್ರಹಗಳು ಶಾಸನ ರಹಿತ ಶಿಲ್ಪಗಳೆಂದು ಗುರುತಿಸುತ್ತಾರೆ.
ಸ್ತ್ರೀ ಭೂಮಿ ಸಂಕೇತವಾಗಿ ಪುರುಷ ಬೀಜದ ಸಂಕೇತವಾಗಿ ಕೃಷಿ ಭೂಮಿ ಫಲವತ್ತಾಗಲಿ ಎಂಬ ಉದ್ದೇಶದ ಶಿಲ್ಪಗಳು ಎಂದು ಭಾವಿಸಲಾಗಿದೆ.
ಅವಿವಾಹಿತರು ಶೀಘ್ರ ವಿವಾಹ ಪ್ರಾಪ್ತಿಗಾಗಿ ರಾತ್ರಿ ವೇಳೆ ಗುಪ್ತವಾಗಿ ಈ ವಿಗ್ರಹಗಳಿಗೆ ಪೂಜೆ ಮಾಡುವ ಪದ್ಧತಿ ನಂಬಿಕೆ ಕೂಡ ಇದೆಯಂತೆ.
ಇದೇ ರೀತಿ ನಗ್ನ ವಿಗ್ರಹದಲ್ಲಿ ತಲೆ ಇಲ್ಲದ ಮತ್ತು ತಲೆ ಜಾಗದಲ್ಲಿ ಕಮಲದ ಹೂವಿನ ಲಜ್ಜಾಗೌರಿ ಶಿಲ್ಪಗಳು ಸ್ತ್ರೀ ಪ್ರದಾನ ಕುಟುಂಬಗಳು ಇರುವಲ್ಲಿ ದೇವಸ್ಥಾನ ಅಥವ ಮರಗಳ ಪಕ್ಕದಲ್ಲಿರುತ್ತದೆ ಅನ್ನುವ ಮಾಹಿತಿ ಕೂಡ ನೀಡಿದ್ದಾರೆ.
ಆನಂದಪುರಂನ ಮುಖ್ಯ ಹೆದ್ದಾರಿಯ ದಾಸಕೊಪ್ಪದ ಕೆರೆ ಕಾಲುವೆ ಹೂಳು ತೆಗೆಯುವಾಗ ಇಂತಹ ಶಿಲ್ಪ ಸಿಕ್ಕಿತ್ತು ಬಹುಶಃ ಆನಂದಪುರಂನ ಕೆರೆದಂಡೆಯಲ್ಲಿ ಹೆದ್ದಾರಿ ನಿರ್ಮಿಸುವಾಗ ಈ ವಿಗ್ರಹ ತೆಗೆದು ಬದಿಗೆ ಇರಿಸಿದ್ದು ಕಾಲುವೆಯಲ್ಲಿ ಮಣ್ಣಿನಲ್ಲಿ ಹುಗಿದು ಹೋಗಿರ ಬಹುದು.
ಕೆರೆ ದಂಡೆಯಲ್ಲಿ ಆ ಕೆರೆ ನೀರಿಂದ ಕೃಷಿ ಮಾಡುವ ಭೂಮಿ ಫಲವತ್ತಾಗಲಿ ಎ೦ದು ಈ ರೀತಿ ನಗ್ನ ಸ್ತ್ರೀ ಪುರುಷ ವಿಗ್ರಹಗಳನ್ನು 15-16ನೇ ಶತಮಾನದಲ್ಲಿ ಸ್ಥಾಪಿಸುವ ಪದ್ಧತಿ ಇತ್ತು.
Comments
Post a Comment