#ಸತ್ಯ_ಮೇವ_ಜಯತೇ
#ಶಂಕರ_ಮಹಾದೇವ_ಬಿದಿರೆಯವರ_ಆತ್ಮ_ಚರಿತ್ರೆ.
#ಭಾರತದೇಶದ_ಇತಿಹಾಸದಲ್ಲಿ_ಅತಿ_ಹೆಚ್ಚು_ಮೊತ್ತದ_ನಗದು_ಬಹುಮಾನ_ಪಡೆದ_ಪೋಲಿಸ್_ಅಧಿಕಾರಿ
#ಕಾಡುಗಳ್ಳ_ವೀರಪ್ಪನ್_ಸಂಗಾತಿಗಳನ್ನು_200ರಿಂದ_5ಕ್ಕೆ_ಇಳಿಸಿದ_ಸಾಹಸಿ.
#ಬೆಂಗಳೂರಿನ_ಕೋಣನಕುಂಟೆಯ_ಮನೆಯಲ್ಲಿ_ಅಡಗಿದ್ದ_ರಾಜೀವ್_ಗಾಂಧಿ_ಹಂತಕ_ಶಿವರಾಸನ್_ಮನೆಗೆ_ಮೊದಲು_ಪ್ರವೇಶಿದ_ದೈರ್ಯವಂತ.
ವೀರಪ್ಪನ್ ಅಂದರೆ ನನಗೆ ಕಿವಿ ನೆಟ್ಟಗಾಗುತ್ತಿತ್ತು ವೀರಪ್ಪನ್ ಮೊದಲ ಸಂದರ್ಶನ ಇಂಗ್ಲೀಷ್ ಪತ್ರಿಕೆಯಲ್ಲಿ ಸಚಿತ್ರ ವರದಿ ನೋಡಿದ ನಂತರ ಅದು ಜಾಸ್ತಿ ಆಯಿತು,ಚೆನೈನಲ್ಲಿ ನಕ್ಕೀರನ್ ಪತ್ರಿಕೆ ತಪ್ಪದೇ ಖರೀದಿಸಿ ತಮಿಳು ಗೆಳೆಯರಿಂದ ಅನುವಾದಿಸಿ ತಿಳಿದು ಕೊಳ್ಳುತ್ತಿದ್ದೆ.
ನಂತರ ನಮ್ಮ ವನ್ಯ ಚಿತ್ರ ಗ್ರಾಹಕರಾದ ಕೃಪಕರ- ಸೇನಾನಿ ಅಪಹರಣ, ರಾಜ್ ಅಪಹರಣ, ಮಾಜಿ ಶಾಸಕ ನಾಗಪ್ಪ ಅಪಹರಣ ಹೀಗೆ ವೀರಪ್ಪನ್ ನಿತ್ಯ ಕಥೆಗಳಾಗಿದ್ದು ಇತಿಹಾಸ ಅವೆಲ್ಲವೂ ವೀರಪ್ಪನ್ ಬಗ್ಗೆ ಆಸಕ್ತಿಗೆ ಕಾರಣವಾಯಿತು.
ಆನೆ ದಂತ - ಶ್ರೀಗಂದ ಜೊತೆಗೆ ಮಾಹಿತಿದಾರರ ಹತ್ಯೆಯ ರಕ್ತಚರಿತೆ ಬಗ್ಗೆ ಅನೇಕರು ಬರೆದದ್ದು ಪುಸ್ತಕವಾಗಿದೆ ಅದೆಲ್ಲದರ ಅನುವಾದ ಓದಿದ್ದೇನೆ,
ಕೆ.ವಿಜಯಕುಮಾರ್ ಬರೆದ Chasing the Brigand ಪುಸ್ತಕದಲ್ಲಿ ವಿಜಯ ಕುಮಾರ್ ಶಂಕರ್ ಬಿದರಿ 200 ಜನರ ವೀರಪ್ಪನ್ ಸೇನೆ 5ಕ್ಕೆ ಮಿತಿಗೊಳಿಸಿದವರು ಶಂಕರ್ ಬಿದರಿ ಅಂತ ಬರೆದಿದ್ದಾರೆ.
ಆದ್ದರಿಂದಲೇ ಶಂಕರ್ ಬಿದರಿ ಆತ್ಮಚರಿತ್ರೆ ಅಮೇಜಾನ್ ನಿಂದ ತರಿಸಿದೆ ಸುಮಾರು 600 ಪುಟಗಳ ಅವರ ಆತ್ಮಚರಿತ್ರೆ ಅವರ ಬಾಲ್ಯದಿಂದ ಪ್ರಾರಂಭವಾಗಿ ಟೆಲಿಫೋನ್ ಆಪರೇಟರ್, ಅಸಿಸ್ಟೆಂಟ್ ಕಮಿಷನರ್ ನಂತರ ಐಪಿಎಸ್ ತನಕ ಅವರ ಸಾಹಸಮಯ ಜೀವನ ದಾಖಲಿಸಿದ್ದಾರೆ.
ಈ ಪುಸ್ತಕದಲ್ಲಿ ಎರಡು ಅಧ್ಯಾಯಗಳಲ್ಲಿ ವೀರಪ್ಪನ್ ಚರಿತ್ರೆ ದಾಖಲಿಸಿದ್ದಾರೆ ಅಧ್ಯಾಯ 28 ಪುಟ ಸಂಖ್ಯೆ 376 ರಿಂದ 441 ರಲ್ಲಿ 1972 ರಲ್ಲಿ ಜಾರಿಗೆ ಬಂದ ಅರಣ್ಯ ಕಾನೂನುಗಳು ವೀರಪ್ಪನ್ ಅಂತವರು ಸೃಷ್ಟಿಗೆ ಕಾರಣವಾದ ಘಟನೆಗಳು ನಂತರ ವೀರಪ್ಪನ್ ಈ ಮಟ್ಟಕ್ಕೆ ಬೆಳೆದದ್ದನ್ನು ಬುದ್ದಿವಂತ ಪೋಲಿಸ್ ಅಧಿಕಾರಿಗೆ ಸರ್ಕಾರದಲ್ಲಿ ದಾಖಲಾಗಿರುವ ದಾಖಲೆ ಮತ್ತು ಅವರದ್ದೇ ದೃಷ್ಟಿಕೋನದಲ್ಲಿ ವಾಸ್ತವ ವಿಚಾರ ದಾಖಲಾಗಿದೆ.
ಅದ್ಯಾಯ 40 ಪುಟ ಸಂಖ್ಯೆ 600 ರಿಂದ 610ರಲ್ಲೂ ಕೆಲ ವಿಚಾರ ದಾಖಲಾಗಿದೆ ಅಂತಿಮವಾಗಿ ವೀರಪ್ಪನ್ ಮುಗಿಸಿದ ವಿಜಯ ಕುಮಾರ್ ಪೋನ್ ಕಾಲ್ ನಿಂದ ತಮಿಳುನಾಡಿಗೆ ಹೋಗಿ ವೀರಪುನ್ ಮೃತ ದೇಹ ನೋಡಿ ಬರುವುದರ ಜೊತೆಗೆ ಈ ಆತ್ಮಚರಿತ್ರೆ ಮುಕ್ತಾಯವಾಗುತ್ತದೆ.
ವಿಶೇಷ ಅಂದರೆ ಈ ಆತ್ಮಚರಿತ್ರೆಯನ್ನು ಹೆಡ್ ಕಾನ್ಸ್ಟೇಬಲ್ ಮಾಲ್ವಿ ಹನುಮಂತಪ್ಪ (ಕುಖ್ಯಾತ ಅಪರಾಧಿ ಬೀಮ್ಲಾ ನಾಯಕ್ ಮುಖಾಮುಖಿಯಲ್ಲಿ ಹುತಾತ್ಮರಾದವರು) ಮತ್ತು ಎಂ.ಕೆ.ಪೊನ್ನಪ್ಪ (ಚೆಂಗಡಿ ಅರಣ್ಯದಲ್ಲಿ ವೀರಪ್ಪನ್ ನಿಂದ ಹುತಾತ್ಮರಾದವರು) ಇವರಿಗೆ ಅರ್ಪಿಸಿದ್ದಾರೆ.
Comments
Post a Comment