Blog number 1678. ಸಿದ್ದ ಸಮಾದಿ ಯೋಗ ಸಂಸ್ಥೆ 2008ರಲ್ಲಿ ನೀಡಿದ ತರಬೇತಿ, ಶ್ರಾವಣ ಮಾಸದ ಆಚರಣೆ ಮತ್ತು ಧ್ಯಾನದ ಉಪಯೋಗ
#ಶ್ರಾವಣ_ಮಾಸ_ಬಂದಾಗ.
#ಈ_ವರ್ಷ_ಅಧಿಕ_ಶ್ರಾವಣದ_ಬೋನಸ್
#ತೂಕ_ಇಳಿಸುವವರಿಗೆ_ದೇಹ_ಡಿಟಾಕ್ಸ್_ಮಾಡುವವರಿಗೆ_ವರದಾನ.
#ದ್ಯಾನ_ಸರಿಯಾಗಿ_ಗುರು_ಮೂಲಕ_ಕಲಿತು_ಅನುಭವಿಸಿದರೆ_ಮಾತ್ರ_ಅದರ_ಅನುಭವ_ಸಾಧ್ಯ.
ಪ್ರತಿ ವರ್ಷ ಶ್ರಾವಣ ಮಾಸ ಬಂದಾಗ ನಾನು ನನ್ನ ದೇಹ ಡಿಟಾಕ್ಸ್ ಮಾಡುವ ಕ್ರಮ ಪ್ರಾರಂಬಿಸುತ್ತೇನೆ ಅದಕ್ಕಾಗಿ ಶ್ರಾವಣ ಮಾಸ ಕಾಫಿ ಟೀ ಕೂಡ ಸೇವಿಸುವುದಿಲ್ಲ.
ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಾಂಸಹಾರಿ ಕುಟುಂಬಗಳು ಮಾಂಸಹಾರ ತ್ಯಜಿಸುವುದು ಆ ಕುಟುಂಬದವರಿಗೆ ಇಂತಹ ಪ್ರಯೋಗ ಮಾಡಲು ಸಹಕಾರಿ.
ಮಧ್ಯಪಾನ - ದೂಮಪಾನ - ತಂಬಾಕು - ಮಾಂಸಹಾರ ಸೇವನೆ ಶ್ರಾವಣ ಪ್ರಾರಂಭದ ಹಿಂದಿನ ದಿನದ ಭೀಮನ ಅಮಾವಾಸ್ಯೆ ದಿನಕ್ಕೆ ಕೊನೆಯಾಗುತ್ತದೆ ಇದನ್ನು ಮಹಾರಾಷ್ಟ್ರದಲ್ಲಿ ಗಟಾರ ಅಮವಾಸ್ಯೆ ಎಂದು ಹಾಸ್ಯದಿಂದ ಉಲ್ಲೇಖಿಸುತ್ತಾರೆ.
ಇಡೀ ಶ್ರಾವಣ ಮಾಸ ಮಧ್ಯಪಾನ,ದೂಮಪಾನ ಮತ್ತು ಗುಟ್ಕಾ ಇತ್ಯಾದಿ ರೀತಿಯ ಚಟ ಅಥವ ಅಡಿಕ್ಷನ್ ಸ್ವಯಂ ನಿಯಂತ್ರಣಕ್ಕೆ ಕಾರಣವಾಗಲಿದೆ.
ಮಹಾರಾಷ್ಟ್ರದಲ್ಲಿ ಶ್ರಾವಣ ಮುಗಿದು ಗಣಪತಿ ಹಬ್ಬದ ತನಕ ಈ ನಿಯಮ ಮುಂದುವರಿಸುತ್ತಾರೆ.
ನನ್ನ 140 ಕಿಲೋ ದೇಹ ತೂಕ ಇಳಿಸುವ ನಿಟ್ಟಿನಲ್ಲಿ ದಿನದ ಒಂದು ಗಂಟೆ ಬೆಳಗಿನ ನಡಿಗೆ ಜೊತೆ ಸಿದ್ದ ಸಮಾದಿಯೋಗದ ವ್ಯಾಯಾಮ, ಪ್ರಾಣಯಾಮ, ಕಪಾಲ ಬಾತಿ ಮತ್ತು ಧ್ಯಾನ, ರಾತ್ರಿ ಊಟ ತ್ಯಜಿಸಿದರ ಜೊತೆ ಶ್ರಾವಣ ಮಾಸಾಚಾರಣೆ ನನಗೆ ತುಂಬಾ ಉಪಯುಕ್ತವಾಗಿದೆ.
ಈ ವರ್ಷದ ಶ್ರಾವಣ ಅಧಿಕ ಮಾಸದ ಶ್ರಾವಣ ಆದ್ದರಿಂದ ಎರಡು ತಿಂಗಳ ಶ್ರಾವಣ ಆಚರಿಸುತ್ತೇನೆ, ಈ ವರ್ಷದ ಶ್ರಾವಣ ಆಚರಣೆಗೆ ಮುನ್ನ ನನ್ನ ತೂಕ 108 ಇದೆ, ಸೊಂಟ ಮತ್ತು ಹೊಟ್ಟೆಯ ಸುತ್ತಳತೆ ತುಂಬಾ ಇಳಿದಿದೆ ಇದು ಸಮಾದಾನಕರ.
ಹಾಗಂತ ನನ್ನ ತೂಕ ಇನ್ನೂ 30 ಕಿಲೋ ಇಳಿಯ ಬೇಕು ಆದರೆ ಅವಸರ ಇಲ್ಲ ನಿದಾನವಾಗಿ ಜೀವನ ಕ್ರಮದಲ್ಲಿ ಇಳಿಯ ಬೇಕು, ದಿಡೀರ್ ತೂಕ ಇಳಿಸುವುದು ಅನಾರೋಗ್ಯಕ್ಕೆ ಆಹ್ವಾನ ಎಂಬ ಎಚ್ಚರಿಕೆ ವಹಿಸಲೇ ಬೇಕಾಗಿದೆ.
2008ರಲ್ಲಿ ಸಿದ್ದ ಸಮಾದಿ ಯೋಗ ಕಲಿಯಲು ಗೆಳೆಯ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್ ಕಾರಣರಾದರೆ, ಸಿದ್ಧ ಸಮಾದಿ ಯೋಗ ಗುರುಗಳಾದ ಕುಮಾರ್ ಗುರೂಜಿ ಮತ್ತು ಗಣೇಶ್ ಗುರೂಜಿ ತರಬೇತಿ 15 ವರ್ಷದಿಂದ ನಿರಂತರ ಯೋಗ, ಕಪಾಲ್ ಬಾತಿ, ಪ್ರಾಣಯಾಮ ಮತ್ತು ಧ್ಯಾನಕ್ಕೆ ಕಾರಣರಾಗಿದ್ದಾರೆ.
ನನಗೆ ಯೋಗಾಸನ 3 - 4 ನೇ ತರಗತಿಯಿಂದಲೇ ಕಲಿತಿದ್ದರೂ ಧ್ಯಾನ ಮಾತ್ರ ಸರಿಯಾಗಿ ಕಲಿತಿರಲಿಲ್ಲ. ಸಿದ್ದ ಸಮಾದಿ ಯೋಗ ತರಬೇತಿಯಲ್ಲಿ ಮಾತಾಜಿ ಓರ್ವರು ತುಂಬಾ ಸುಲಭವಾಗಿ 15 ನಿಮಿಷದ ದ್ಯಾನ ಕಲಿಸಿದ್ದಾರೆ ಅದಕ್ಕೆ ಮಂತ್ರಾಕ್ಷರ ಕೂಡ ದಯಪಾಲಿಸಿದ್ದಾರೆ.
ಸರಳ ಸಿದ್ಧಾಸನದಲ್ಲಿ ಕುಳಿತು ದೀರ್ಘ ಉಸಿರಾಟ ಮಾಡಿ ಮಂತ್ರಾಕ್ಷರ ಮನಸ್ಸಿನಲ್ಲೇ ಉಚ್ಚಾರಿಸಿ ದ್ಯಾನ ಪ್ರಾರಂಬಿಸಿದರೆ ಕೈ ಬೆರಳು, ಹಸ್ತ, ಅಂಗಾಲು ನಂತರ ಇಡೀ ದೇಹ ಸ್ಪರ್ಷ ಜ್ಞಾನ ಕ್ರಮೇಣ ಕಳೆದುಕೊಂಡು ಬೇರೆಯ ಲೋಕಕ್ಕೆ ಮನಸ್ಸು ತಲುಪಿ ಸರಿಯಾಗಿ 15 ನಿಮಿಷಕ್ಕೆ ಎಚ್ಚರವಾಗಿ ವಾಪಾಸು ಬರುವ ಈ ಧ್ಯಾನದಿಂದ ಏನೇನಲ್ಲ ಉಪಯೋಗ ಅನುಭವಿಸಿಯೇ ತಿಳಿಯಬೇಕು.
ಈ ಎರೆಡು ತಿಂಗಳು ಸ್ಥೂಲಕಾಯ ನಿವಾರಣೆಗೆ ಪ್ರಯತ್ನಿಸುವವರಿಗೆ ಮತ್ತು ದುಶ್ಚಟ ಸ್ವಯ೦ ನಿಯಂತ್ರಣಕ್ಕೆ ತರುವವರಿಗೆ ಅಧಿಕ ಶ್ರಾವಣ ಒಂದು ಬೋನಸ್ ಅವಧಿ ಆಗಿದೆ.
ಬೆಳಿಗ್ಗೆ ಮುಂಗಾರು ಮಳೆಯಲ್ಲೇ ಛತ್ರಿಯಲ್ಲಿ ಒಂದು ಗಂಟೆ ವಾಕಿಂಗ್ ನಲ್ಲಿ ನಮ್ಮ ಶಂಭೂರಾಮ ಜೊತೆ ಆಗುತ್ತಾನೆ ಅವನಿಗೆ ಮಳೆ ಅಂದರೆ ತುಂಬಾ ಇಷ್ಟ.
Comments
Post a Comment