#ಸಖರಾಯಪಟ್ಟಣದ_ಅವರ_ಸಮಾದಿ_ದರ್ಶನ_ಸಾಧ್ಯವಾಗಿಲ್ಲ
#ಆದರೆ_ಅವರ_ದಿವ್ಯ_ದರ್ಶನ_ಆಗುತ್ತಿರುವ_ಈ_ಪರಿಮರೆಯಲುಂಟೆ?
#ಇವತ್ತು_ಜ್ಯೋತಿ_ಮಣ್ಣೂರು_ಅವರ_ಪೋಸ್ಟಿನಿಂದ_ಈ_ನೆನಪು_ಇನ್ನೊಮ್ಮೆ
#ಇದನ್ನ_ಕಾಕತಾಳಿಯ_ಅಥವ_ಟೆಲಿಪತಿ_ಅನ್ನಬಹುದಾ?
#ಜಿಗಳೆಮನೆ_ಗಣಪತಿ_ಭಟ್ಟ_ದಂಪತಿಗಳು_17_ಮಾರ್ಚ್_2019_ರಂದು_ಬಂದಾಗ_ಅವದೂತರ_ಪುಸ್ತಕ_ನೀಡಿದಾಗ
#ಗಣಪತಿಭಟ್ಟರ_ಮನೆಗೆ_ಒಂದು_ದೀಪಾವಳಿ_ಹಬ್ಬದ_ದಿನ_ದಿಡೀರ್_ಆಗಿ_ಅವದೂತರು_ಬಂದ_ನೆನಪು
#ಇವತ್ತು_ಸಖರಾಯಪಟ್ಟಣದ_ಗುರುಕುಲದಿಂದ_ಡಾಕ್ಟರ್_ಸಂತೋಷ್_ಹೆಬ್ಬಾರ್_ಪೋನಾಯಿಸಿದಾಗ_ನೆನಪು_ಮಾಡಿದ_ಘಟನೆ.
ಇವತ್ತು ಬೆಳಿಗ್ಗೆ ಸಖರಾಯಪಟ್ಟಣದ ಗುರುಕುಲದ ಡಾಕ್ಟರ್ ಸಂತೋಷ್ ಹೆಬ್ಬಾರರು ಗುರುಕುಲದಲ್ಲಿ ವೆಂಕಟಾಚಲಪತಿ ಅವದೂತರ ಹೆಸರಲ್ಲಿ ಗೋಶಾಲೆ ನಿರ್ಮಿಸಲು ಆನಂದಪುರಂನಲ್ಲಿ ಉತ್ತಮ ಗುಣಮಟ್ಟದ ಜಂಬಿಟ್ಟಿಗೆ ಕಲ್ಲು ಸಿಗಬಹುದಾ ಎಂದು ವಿಚಾರಿಸಲು ಪೋನ್ ಮಾಡಿದ್ದರು ಅವರಿಗೆ ನನ್ನ ಸಂಪರ್ಕದ ನಂಬರ್ ನೀಡಿದವರು ಶಿವಮೊಗ್ಗದ ADC ನಾಗೇಂದ್ರ ಹೊನ್ನಾಳಿಯವರು ಇವರೂ ದತ್ತರ ಭಕ್ತರು.
ಬಹಳ ವರ್ಷದಿಂದ ಸಖರಾಯಪಟ್ಟಣದ ಅವದೂತರ ಸಮಾದಿ ಸಂದರ್ಶಿಸಲು ಸಾಧ್ಯವಾಗಿಲ್ಲ ಆದರೆ ಅವದೂತರು ಈ ರೀತಿ ದರ್ಶನ ನೀಡುತ್ತಿದ್ದಾರೆ, ನಮ್ಮ ಊರಿನ ಜಂಬಿಟ್ಟಿಗೆ ಕಲ್ಲು ಸರಬರಾಜುದಾರರಿಗೆ ವಿನಂತಿ ಮಾಡಿದರೆ ನಾಲ್ಕು ಸಾವಿರ ಕಲ್ಲು ಒಟ್ಟು ಮಾಡಿಕೊಡುವುದು ಕಷ್ಟವಿಲ್ಲ ಆದರೆ ಅವದೂತರಿಗೆ ಸೇವೆಗೆ ಅವರಿಗೆ ಮನಸ್ಸು ಬರಬೇಕಷ್ಟೆ.
ಅವದೂತರ ಹೆಸರಲ್ಲಿ ಗೋಶಾಲೆ ನಿರ್ಮಿಸಲು ಅಲ್ಲಿಯ ಗುರುಕುಲದಲ್ಲಿ ವ್ಯಾಸಂಗ ಮಾಡಿ ಉದ್ಯೋಗದಲ್ಲಿರುವ ವಿದ್ಯಾರ್ಥಿ ಎರೆಡು ಕೋಟಿ ಮೌಲ್ಯದ ಜಮೀನು ದಾನ ನೀಡಿದ್ದಾರೆ ವಿಶೇಷ ಅಂದರೆ ವಿದ್ಯಾರ್ಥಿ ಮುಸ್ಲಿಂ ದಮಿ೯ಯ ಅಂತೆ.
ಈ ಸಂದರ್ಭದಲ್ಲಿ ನಮ್ಮ ಮನೆಯಲಿದ್ದ ನನ್ನ ಪತ್ನಿಯ ಅಕ್ಕನ ಕುಟುಂಬ ಅವರು ಎರೆಡು ಬಾರಿ ಅವದೂತರ ಮನೇನಲ್ಲಿ ಅವದೂತರ ದರ್ಶನ ಮಾಡಿದ್ದನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ 2019 ರಲ್ಲಿ ನಮ್ಮ ಮನೆಗೆ ಬಂದಿದ್ದ ಶ್ರೀಧರ ಸ್ವಾಮಿಗಳ ಕಟ್ಟಾ ಭಕ್ತರು, ತಪಸ್ವಿಗಳಾದ ಸಜ್ಜನ ಜಿಗಳೇ ಮನೆ ಗಣಪತಿ ಭಟ್ಟರು ಬಂದಾಗ ನಡೆದ ಘಟನೆ ಗುರುಕುಲದ ಡಾಕ್ಟರ್ ಸಂತೋಷ್ ಹೆಬ್ಬಾರರಿಗೆ ಹೇಳಿದೆ
ಅದೇನೆಂದರೆ.....
ಅವತ್ತು (17- ಮಾರ್ಚ- 2019) ಜಿಗಳೆಮನೆ ಗಣಪತಿ ಭಟ್ಟ ದ೦ಪತಿಗಳು ಬಂದಿದ್ದರು, ಇವರಿಗೆ 69 ವಷ೯ ಇವರ ಪೇಸ್ ಬುಕ್ ನಲ್ಲಿ ಇವರ #ಸತ್ಯ_ಶೋದ_ಮಿತ್ರ_ಮಂಡಳಿ ಎಂದರೆ ಹವ್ಯಕರಲ್ಲಿ ಭಾರೀ ಪರ ಮತ್ತು ವಿರೋದಗಳು ಕಾರಣ ಈಗಿನ ಹಾಲಿ ರಾಮಚಂದ್ರಾಪುರ ಮಠದ ಸ್ವಾಮಿಗಳ ವಿರೋದಿಸುವವರಲ್ಲಿ ಇವರು ಮೊದಲಿಗರು.
ಇವರನ್ನ ಮತ್ತು ವ್ಯಂಗ್ಯ ಚಿತ್ರಕಾರ ಕುಗ್ವೆ ನಿರ೦ಜನರನ್ನು ಮಠದ ಕಡೆಯವರು ಸುಳ್ಳು ಕೇಸಿನಿಂದ ಜೈಲಿಗೆ ಕಳಿಸಿದ್ದರಿಂದ ಯಾವಾಗಲೂ ಶೋಷಣೆಗೆ ಒಳಗಾದವರ ಪರವಹಿಸುವ ನಾನು ಇವರನ್ನ ಬೆಂಬಲಿಸಿದೆ.
ಇವರು ಸಜ್ಜನ ಗಡದಲ್ಲಿ, ದೀವಿಗೆಯಲ್ಲಿ ಕೆಲವು ವಷ೯ ಅನೂಷ್ಟಾನ ಸಾದನೆ ಮಾಡಿದವರು, ಸಾದು ಸಂತರ, ಸತ್ಸ೦ಗದಲ್ಲಿದ್ದವರು, ವರದಳ್ಳಿ ಶ್ರೀಧರ ಸ್ವಾಮಿಗಳ ಭಕ್ತರು.
ಹಾಗಾಗಿ ಕಾಫಿ ಜೊತೆಗೆ ಹಣ್ಣಿನ ಸತ್ಕಾರದ ನಂತರ ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವದೂತರ ಚರಿತ್ರೆಯ ಪುಸ್ತಕ ಜಿಗಳೆ ಮನೆ ಗಣಪತಿ ಭಟ್ಟ ದಂಪತಿಗಳು ನನ್ನ ಮನೆಗೆ ಬೇಟಿ ನೀಡಿದ ನೆನಪಿಗಾಗಿ ನೀಡಿದೆ.
ಆಗ ಗಣಪತಿ ಭಟ್ಟರು ಹೇಳಿದ ನೆನಪು "ಒಮ್ಮೆ ದೀಪಾವಳಿಯoದು ಇದ್ದಕ್ಕಿದ್ದ೦ತೆ ಸಖರಾಯ ಪಟ್ಟಣದ ಅವದೂತರು ವರದಳ್ಳಿಗೆ ಬಂದವರು, ಇವರ ಮನೆಯ ಮುಂಬಾಗಿಲಿಂದ ಪ್ರವೇಶಿಸಿ ಹಿಂಬಾಗಿಲಿಂದ ಹೊರ ಹೋದರಂತೆ, ನಂತರ ಇವರೆಲ್ಲ ಒಳಗೆ ಬರಲು ವಿನಂತಿಸಿದಾಗ ವಾಪಾಸು ಬರುವುದಿಲ್ಲ ಎಂದು ಹಿತ್ತಲಲ್ಲೇ ಕುಳಿತರಂತೆ.
ಇವರ ಪತ್ನಿ ಹಬ್ಬದ ಹೋಳಿಗೆ ಮಾಡುತ್ತಿದ್ದರಂತೆ, ಆ ಘಟನೆ ಭಟ್ಟರು ತಮ್ಮ ಆಗಿನ ಕಾಲದ ಕೈಯಲ್ಲೇ ರೀಲ್ ಸುತ್ತುವ ವಿಡಿಯೋ ಕ್ಯಾಮೆರಾದಲ್ಲಿ ಚಿತ್ರಿಕರಿಸಿದ್ದನ್ನು ನೆನಪು ಮಾಡಿದರು.
ಇದನ್ನ ಕಾಕತಾಳಿಯ, ಟೆಲಿಪತಿ ಅಂತಲೂ ಹೇಳಬಹುದು, ಅವದೂತರ ಚರಿತ್ರೆ ಅವದೂತರು ಪ್ರವೇಶ ಮಾಡಿದ ಮನೆಯ ದಂಪತಿಗೆ ಕೊಡುವಂತಾಗಿದ್ದು.
ಇವತ್ತೂ ಅವದೂತರು ಈ ಎಲ್ಲಾ ನೆನಪಿನ ಪುನರ್ ಮನನದ ಘಟನೆಗಳಿಂದ ದರ್ಶನ ನೀಡಿದ್ದಾರೆ ಎಂದು ಭಾವಿಸಿದ್ದೇನೆ, ಅವದೂತರ ಹೆಸರಿನ ಗೋಶಾಲೆಗೆ ನನ್ನ ಕಿರು ಕಾಣಿಕೆ ಅರ್ಪಿಸುವ ಸಂಕಲ್ಪವೂ ಮಾಡಿದೆ.
Comments
Post a Comment