#ಜಿಲ್ಲೆಯ_ಕೃಷಿ_ವಿಶ್ವವಿದ್ಯಾಲಯದಿಂದ_ಯಡ್ಯೂರಪ್ಪರಿಗೆ_ಗೌರವ_ಡಾಕ್ಟರೇಟ್_ಪ್ರದಾನ
#ಆಗಿನ_ಕೃಷಿ_ಮಂತ್ರಿ_ಕೃಷ್ಣಬೈರೇಗೌಡ_17_ಜೂನ್_2017ರಂದು_ಶಂಕುಸ್ಥಾಪನೆ_ಮಾಡಿದ್ದರು.
#ನಾಳೆ_21_ಜುಲೈ_2023_8ನೇ_ಘಟಿಕೋತ್ಸವ
#ಇರುವಕ್ಕಿಯ_ಕೃಷಿವಿಶ್ವವಿದ್ಯಾಲಯದ_ಘಟಿಕೋತ್ಸವದ_ಅಧ್ಯಕ್ಷತೆ_ರಾಜ್ಯಪಾಲರದ್ದು
#ಕೃಷಿಮಂತ್ರಿ_ಚಿಲುವರಾಯಸ್ವಾಮಿ_ಘನ_ಉಪಸ್ಥಿತಿ
#ಘಟಿಕೋತ್ಸವ_ಭಾಷಣ_ದರ್ಮಸ್ಥಳ_ವೀರೇಂದ್ರ_ಹೆಗ್ಗಡೆಯವರಿಂದ.
#ಕಾಗೋಡು_ತಿಮ್ಮಪ್ಪನವರಿಗೆ_ಗೌರವ_ಡಾಕ್ಟರೇಟ್_ಯಾವಾಗ?
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ನಮ್ಮ ಊರಿನ ಇರುವಕ್ಕಿಯಲ್ಲಿ ನಾಳೆ 21- ಜುಲೈ -2023 ಶುಕ್ರವಾರ ಸಂಜೆ 4 ಕ್ಕೆ 8 ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಿದ್ದಾರೆ.
ಘಟಿಕೋತ್ಸವದ ಅದ್ಯಕ್ಷತೆ ರಾಜ್ಯಪಾಲರು ವಹಿಸಲಿದ್ದಾರೆ, ಘಟಿಕೋತ್ಸವ ಭಾಷಣ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರದ್ದು.
ಕೃಷಿ ಮಂತ್ರಿ ಚೆಲುವರಾಯ ಸ್ವಾಮಿ ಘನ ಉಪಸ್ಥಿತಿ ವಹಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಡಾಕ್ಟರೇಟ್ ನೀಡುತ್ತಿರುವುದು ಸ್ಟಾಗತಾರ್ಹ ಇದು ರಾಜ್ಯದಾದ್ಯಂತ ಯಡೂರಪ್ಪರ ಅಭಿಮಾನಿಗಳಿಗೆ ಸಿಹಿ ಸುದ್ದಿ.
ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ಆದಷ್ಟು ಬೇಗನೆ ನೀಡುವಂತಾಗಲಿ ಎಂದು ಆಶಿಸುತ್ತೇನೆ ಇದು ಜಿಲ್ಲೆಯ ಜನರ ಅಪೇಕ್ಷೆ ಕೂಡ.
Comments
Post a Comment