https://youtu.be/dC79ok4V9mo
#ಗೆಳೆತನಕ್ಕೆ_ಇಂಗ್ಲೇಂಡ್ನಿಂದ_ಬಂದ_ಉಡುಗೊರೆ.
#ಯೂನಿಯನ್_ಜ್ಯಾಕ್_ಛತ್ರಿ
#ಲಂಡನ್_ಶೇಕ್ಸ್_ಪಿಯರ್_ಮನೆಯಲ್ಲಿ_ಉಪನ್ಯಾಸಕ್ಕೆ_ಹೋಗಿದ್ದ
#ಪತ್ರಕರ್ತ_ಡಿಪಿ_ಸತೀಶರಿಂದ.
ಗೆಳೆತನಕ್ಕೆ ಸಾಕ್ಷಿ ಆಗುವ ಇಂತಹ ಘಟನೆಗಳು ಯಾವಾಗಲೂ ಸ್ಮರಣೀಯವಾಗಿರುತ್ತದೆ ನಿನ್ನೆ ಬೆಳೆಗ್ಗೆ ವಾಟ್ಸಪ್ ನಲ್ಲಿ ದಕ್ಷಿಣ ಭಾರತದ CNN NEWS 18 ಗ್ರೂಪ್ ಎಡಿಟೋರಿಯಲ್ ಅಡ್ವೈಸರ್ ಆಗಿರುವ D.P. ಸತೀಶ್ "ನಿಮಗಾಗಿ ತಂದಿರುವ Umbrella ನೋಡಿದಿರಾ? ನಿಮಗೆ ಇಷ್ಟ ಆಯಿತಾ" ಅಂತ ಮೆಸ್ಸೇಜ್ ಮಾಡಿದ್ದರು.
ಆಫೀಸಿನ ಟೀಬಲ್ ಮೇಲೆ ಅವರ ಉಡುಗೊರೆಯಾದ ಇಂಗ್ಲೇಂಡ್ ನಿಂದ ತಂದ ಮಿನಿ ಅಂಬ್ರೆಲ್ಲಾ 3 ಪೋಲ್ಡ್ ಯುನಿಯನ್ ಜ್ಯಾಕ್ ಅಂಬ್ರೆಲ್ಲಾ ಅವರ ವಿಸಿಟಿಂಗ್ ಕಾರ್ಡ್ ಜೊತೆ ಇತ್ತು ನನ್ನ ಛತ್ರಿ ಹಾಳಾಗಿತ್ತು ಹೊಸ ಛತ್ರಿ ಖರೀದಿಸಬೇಕೆಂದಿದ್ದ ಸಂದರ್ಭದಲ್ಲೇ ಹೊಸ ಛತ್ರಿ ಉಡುಗೊರೆಯಾಗಿ ಅಲ್ಲಿತ್ತು.
ಅವರು ಅರ್ಜೆಂಟ್ ಆಗಿ ಬೆಂಗಳೂರಿಗೆ ತಲುಪಬೇಕಾದ್ದರಿಂದ ನನಗೆ ಕಾಯದೇ ನನ್ನ ಮ್ಯಾನೇಜರ್ ಗೆ ಹಸ್ತಾಂತರ ಮಾಡಿ ಕಾಫಿ ಕೂಡ ಸ್ವೀಕರಿಸದೆ ಓಡಿದ್ದಾರೆ.
UK ಯ ರಾಷ್ಟ್ರೀಯ ಧ್ವಜ ಯುನಿಯನ್ ಜಾಕ್ ಆಗಿದೆ ಅದು ಇಂಗ್ಲೇಂಡ್ ವೇಲ್ಸ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳು ಬಳಸುತ್ತಿದೆ. ಯುನಿಯನ್ ಜ್ಯಾಕ್ ದ್ವಜ ಅನ್ನು ಒಳಗೊಂಡ 23 ದೇಶಗಳಿದೆ ಇವು ಒಂದು ಕಾಲದ ಬ್ರಿಟೀಶ್ ವಸಾಹತುಗಳು,ಕಾಮನ್ ವೆಲ್ತ್ ದೇಶಗಳು ಮತ್ತು ಬ್ರಿಟೀಶ್ ಪ್ರಾಂತ್ಯಗಳು ಆಗಿದೆ.
ಜವಾಹರ ಲಾಲ್ ನೆಹರೂ ಅವರು ಸ್ವಾತಂತ್ರ್ಯ ಭಾರತದಲ್ಲಿ ಯೂನಿಯನ್ ಜ್ಯಾಕ್ ಬಳಸಲು ನಿರಾರಿಸುತ್ತಾರೆ.
ನಮ್ಮ ದೇಶದ ತ್ರಿವರ್ಣ ಧ್ವಜ ನೀತಿ ಸಂಹಿತೆ ವ್ಯಾಪ್ತಿಯಲ್ಲಿರುವುದರಿಂದ UK ಯ ಯೂನಿಯನ್ ಜ್ಯಾಕ್ ದ್ವಜದಂತೆ ಛತ್ರಿಗಳಲ್ಲೆಲ್ಲ ಬಳಸಲು ಸಾಧ್ಯವಿಲ್ಲ.
ಡಿ.ಪಿ.ಸತೀಶ್ ಮೈಸೂರು ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿಗೆ ಕುವೆಂಪು ಜನ್ಮ ಶತಾಬ್ದಿ ಸಂದರ್ಭದಲ್ಲಿ ಕುವೆಂಪು ಎಕ್ಸ್ ಪ್ರೆಸ್ ಎಂದು ಕೇಂದ್ರ ಸರ್ಕಾರದಿಂದ ನಾಮಕರಣ ಮಾಡಿಸಿದವರು ಇವರು ಇಂಗ್ಲೆಂಡ್ ನ ಶೇಕ್ಸ್ಪಿಯರ್ ಮನೆಗೆ ಕಳೆದ ತಿಂಗಳು ಬೇಟಿ ಮತ್ತು ಉಪನ್ಯಾಸಕ್ಕಾಗಿ ಹೋಗಿದ್ದಾಗ ನಾನು "ಕುವೆಂಪು ಮನೆಯಿಂದ ಶೇಕ್ಸಪಿಯರ್ ಮನೆಗೆ" ಎಂಬ ಬ್ಲಾಗ್ ಲೇಖನ ಬರೆದಿದ್ದೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ.
Comments
Post a Comment