# ಇರುವಕ್ಕಿ ಕೃಷಿ ವಿದ್ಯಾಲಯದ ಮುಖ್ಯ ಕಾರಣ ಕತ೯ರು ಡಾಕ್ಟರ್ ವಿಗ್ನೇಶ್ ಮಂಚಾಲೆ (13 ಜುಲೈ 2017)
ಇವತ್ತು ಆಕಸ್ಮಿಕವಾಗಿ ಡಾಕ್ಟರ್ ವಿಘ್ನೇಶ್ ಮಂಚಾಲೆ ನನ್ನ ಕಚೇರಿಗೆ ಬಂದಿದ್ದರು, ಇವರು ನಮ್ಮ ಸಾಗರ ತಾಲ್ಲೂಕಿನ ಮಂಚಾಲೆಯವರು, ಇವರಿಗೆ ಕೃಷಿ ವಿದ್ಯಾಲಯದ ಉಪ ಕುಲಪತಿ ಆಗುವ ಎಲ್ಲಾ ಅಹ೯ತೆ ಇದ್ದರೂ ರಾಜಕೀಯ ಬೆಂಬಲ ಇಲ್ಲದ್ದರಿಂದ ಆಗಲಿಲ್ಲ.
ಇವತ್ತು ಸಾಗರ ತಾಲ್ಲೂಕಿನಲ್ಲಿ ಈ ಕೃಷಿ ವಿಶ್ವವಿದ್ಯಾಲಯ ಬರಲು ಕಾರಣ ಕತ೯ರು, ಇವರಿ೦ದಲೇ 777 ಎಕರೆ ಸದರಿ ವಿವಿಗೆ ಭೂಮಿ ಪಡಿಯಲು ಸಾಧ್ಯವಾಯಿತು.
ಮೊನ್ನೆ ನಡೆದ ವಿವಿ ಶಂಕು ಸ್ಥಾಪನೆಯಲ್ಲಿ ಇವರನ್ನ ಗೌರವಿಸಬೇಕಿತ್ತು ಆದರೆ ಸಕಾ೯ರಿ ವ್ಯವಸ್ಥೆಯಲ್ಲಿ ಇದು ನಡೆಯಲಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಭಟನೆ, ಲಾಠಿ ಚಾಜ್೯ ಇತ್ಯಾದಿ ನಡೆಯದೆ 777 ಎಕರೆ ವಿವಿಗೆ ನೀಡಲಾಯಿತೆಂದರೆ ಒಂದು ರೀತಿ ಪವಾಡವೇ ಅOದಿದ್ದು ಇವರಿಗೆ ದೊರೆತ ದೊಡ್ಡ ಗೌರವ.
ದೊಡ್ಡ ಗುಣದ, ಬುದ್ಧಿವಂತ ಅನುಭವಿ ಆದ ಎಲೆ ಮರಿ ಕಾಯಿಯಂತೆ ಇರುವ ಇವರನ್ನ ನಾವೆಲ್ಲ ಅಭಿನಂದಿಸಲೇ ಬೇಕು.
ಇವರೊಂದಿಗೆ ಒಂದು ಸಂದಶ೯ನ ಮಾಡಿದೆ ಆದರಲ್ಲಿ ವಿವಿ ಆದ ಬಗ್ಗೆ ವಿವರಿಸಿದ್ದಾರೆ, ಈ ಬಗ್ಗೆ ಮೊದಲಿಗೆ ನನ್ನ ಸಂಪಕಿ೯ಸಿ ಸಹಕಾರ ಪಡೆದದ್ದನ್ನ ನೆನಪಿಸಿದ್ದಾರೆ.
Comments
Post a Comment