https://youtu.be/YkqnTuy3OE0
#ನಿನ್ನೆ_ನನ್ನ_ಆರೋಗ್ಯ_ಸುದಾರಿಸಿದ_ಮನೆ_ಮದ್ದು.
#ಆದರೆ_ನಾವೆಲ್ಲ_ದೇಶಿ_ಔಷದೋಪಚಾರದಿಂದ_ದೂರ.
#ಪುರಾವೆ_ಆಧಾರಿತ_ಅಲೋಪತಿ_ಔಷದಿಯ_ವ್ಯವಸ್ಥಿತ_ಮಾರುಕಟ್ಟೆ_ಪ್ರಭಾವ.
#ವಾಟೆಪುಡಿ_ಕಾಳುಮೆಣಸು_ಜೀರಿಗೆ_ಉಪ್ಪು_ಕೆಮ್ಮಿಗೆ_ರಾಮ_ಬಾಣ.
ಮುಂಗಾರು ಮಳೆ ಬಿಸಿಲಿನಿಂದ ಎಲ್ಲಾ ಕಡೆ ಎಲ್ಲರಿಗೂ ತಂಡಿ - ಶೀಥ - ಜ್ವರ ನನಗೂ ಪ್ರತಿ ವರ್ಷ ಹವಾಮಾನ ಬದಲಾದಾಗ ಇದು ಬರುತ್ತದೆ, ವರ್ಷಕ್ಕೊಮ್ಮೆ ಅಥವ ಎರೆಡು ಬಾರಿ ಈ ರೀತಿ ತಂಡಿ - ಶೀಥ - ಜ್ವರ ಬರುವುದು ಒಳ್ಳೆಯದು ಇದರಿಂದ ದೇಹದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ.
ಎರೆಡು ಮೂರು ದಿನಗಳಿಂದ ತಂಡಿ - ಶೀಥ ಪ್ರಾರಂಭ ಆಗಿತ್ತು ಜೊತೆಗೆ ಕೆಮ್ಮು ಬೇರೆ ಸೇರಿತ್ತು ಒಂದೆರೆಡು ಬಾರಿ ಜ್ವರ ಕೂಡ ಬಂದು ಹೋಗಿರಬೇಕು ಆದರೆ ನಾನು ಯಾವುದೇ ಮಾತ್ರೆ ಔಷಧಿ ಪಡೆಯಬಾರದೆಂದು ನಿರ್ದರಿಸಿದ್ದೆ .
ನಿನ್ನೆ ಬೆಳಗಿನಿಂದ ಇದೆಲ್ಲ ನಿಯಂತ್ರಣ ರೇಖೆಯನ್ನು ದಾಟಿ ನನ್ನ ಎಲ್ಲಾ ಕೆಲಸಗಳನ್ನು ಮಾಡಲಾಗದಂತೆ ಮಾಡಿತು, ಆಫೀಸಿಗೂ ಹೋಗಲಾಗಲಿಲ್ಲ, ಸಂಜೆಗೆ ಸರಿ ಆದೀತೆಂದು ವಿಶ್ರಾಂತಿ ಪಡೆದರೂ ಸುದಾರಿಸಲೇ ಇಲ್ಲ.
ಜೊತೆಗೆ ಕೆಮ್ಮು ಬಂದರೆ ಅದನ್ನು ಸುದಾರಿಸಲು ಸಾಧ್ಯವೇ ಇಲ್ಲ ಎಂಬಂತೆ ನರಕ ಯಾತನೆ ಹೀಗಾದರೆ ರಾತ್ರಿ ಕಳೆಯುವುದು ಹೇಗೆ ..... ಅಂತ ಯೋಚಿಸುತ್ತಲೇ ಮಾತ್ರೆ - ಕೆಮ್ಮಿನ ಸಿರಪ್ ಮಾತ್ರ ತರಿಸಲೇ ಇಲ್ಲ.
ಮನೆಯೊಡತಿ ತಯಾರಿಸಿ ಕೊಟ್ಟ ಮನೆ ಮದ್ದು ಎಷ್ಟು ಪರಿಣಾಮಕಾರಿ ಅಂದರೆ ನಿನ್ನೆಯ ರಾತ್ರಿ ಸರಾಗವಾಗಿ ಕಳೆಯಲು ಕಾರಣವಾಯಿತು ಮದ್ಯೆ ಮದ್ಯೆ ಪ್ಲಾಸ್ಕನಲ್ಲಿದ್ದ ಬಿಸಿ ನೀರು ನಂತರ ಕಾಲು ಚಮಚ ಈ ಮನೆ ಮದ್ದು ಜೊತೆಗೆ ಮೂಗು ಹಣೆಗೆ ಸವರಲು ವಿಕ್ಸ್ .
Comments
Post a Comment