Blog number 1671. ಸಾಗರ ತಾಲ್ಲೂಕಿನ ಇರುವಕ್ಕಿ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ಘಟಿಕೊತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸ್ಥಳಿಯ ಶಾಸಕ ಮತ್ತು ಸಂಸದರನ್ನು ಆಹ್ವಾನಿಸದ ಪ್ರೋಟೋಕಾಲ್ ಬದಲಾಯಿಸದ ರಾಜ್ಯ ಸರ್ಕಾರ.
#ಸ್ಥಳಿಯ_ಗ್ರಾಮಪಂಚಾಯತಿ_ಅಧ್ಯಕ್ಷ_ಶಾಸಕರು_ಸಂಸದರನ್ನು_ಪ್ರೋಟೋಕಾಲ್_ಹೆಸರಲ್ಲಿ_ಆಹ್ವಾನಿಸದ.
#ನಮ್ಮ_ಊರಿನ_ಕೃಷಿ_ವಿಶ್ವವಿದ್ಯಾಲಯದ_ಘಟಿಕೋತ್ಸವದ_ಆಹ್ವಾನ_ಪತ್ರಿಕೆ_ಬಂದಿದೆ.
#ಇರುವಕ್ಕಿ_ಕೃಷಿವಿಶ್ವವಿದ್ಯಾಲಯದಲ್ಲಿ_21_ಜುಲೈ_2023_ಶುಕ್ರವಾರ_ನಡೆಯಲಿದೆ.
#ರಾಜ್ಯಪಾಲರ_ಅದ್ಯಕ್ಷತೆ_ಕೃಷಿಸಚಿವರ_ಗೌರವ_ಉಪಸ್ಥಿತಿ_ದರ್ಮಸ್ಥಳದ_ವೀರೇಂದ್ರಹೆಗ್ಗಡೆ_ಬಾಷಣ.
#ಸ್ಥಳಿಯ_ಜನಪ್ರತಿನಿಧಿಗಳು_ಘಟಿಕೋತ್ಸವದಲ್ಲಿ_ಭಾಗವಹಿಸುವ_ಆದೇಶ_ಸರ್ಕಾರ_ಮಾಡಲಿ.
ನಮ್ಮ ಊರಿನಲ್ಲಿ ಪ್ರಾರಂಭ ಆಗಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ನನ್ನ ಮನೆಯಿಂದ 2 ಕಿ.ಮಿ. ದೂರದಲ್ಲಿದೆ.
ಈ ವಿಶ್ವವಿದ್ಯಾಲಯಕ್ಕಾಗಿ 777 ಎಕರೆ ಕಂದಾಯ ಭೂಮಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನು ನೀಡಲಾಗಿದೆ.
ಹಿಂದಿನ 6 ಘಟಿಕೋತ್ಸವ ಶಿವಮೊಗ್ಗದಲ್ಲಿ ನಡೆದಿತು ಕಾರಣ ಈ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಮುಗಿದಿರಲಿಲ್ಲ ಕಳೆದ ವರ್ಷದ 7 ನೇ ಘಟಿಕೋತ್ಸವ ಇರುವಕ್ಕಿಯಲ್ಲೇ ಮೊದಲಬಾರಿ ನಡೆಯಿತು.
ಈ ವರ್ಷದ 8ನೇ ಘಟಿಕೋತ್ಸವ ಇದೇ ತಿಂಗಳ 21 ನೇ ತಾರೀಕು ನಡೆಯಲಿದೆ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ, ಕೃಷಿ ಮಂತ್ರಿ ಚೆಲುವರಾಯ ಸ್ವಾಮಿ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳ ಘಟಿಕೋತ್ಸವ ಭಾಷಣ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರದ್ದೆಂದು ಆಹ್ವಾನ ಪತ್ರಿಕೆಯಲ್ಲಿದೆ.
2017ರಲ್ಲಿ ಈ ವಿಶ್ವವಿದ್ಯಾಲಯ ಶಂಕುಸ್ಥಾಪನೆ ಮಾಡಿದವರು ಆಗಿನ ಕೃಷಿ ಮಂತ್ರಿ ಕೃಷ್ಣ ಬೈರೇಗೌಡರು ಆಗಿನ ಕುಲಪತಿಗಳು ಶಿಕಾರಿಪುರ ತಾಲ್ಲೂಕಿನ ಚಿಂಡಿ ವಾಸುದೇವಪ್ಪ ಅವತ್ತು ಅವರ ವಿನಂತಿ ಮೇರೆಗೆ ವೇದಿಕೆಯ ಅತಿಥಿಗಳಿಗೆ ಊಟೋಪಚಾರ ನನ್ನದು ಆಗಿತ್ತು.
ಈ ವಿಶ್ವವಿದ್ಯಾಲಯ ಇಲ್ಲಿಗೆ ಬರಲು ಯಡ್ಯೂರಪ್ಪ ಮತ್ತು ಕಾಗೋಡು ತಿಮ್ಮಪ್ಪ ಮುಖ್ಯ ಕಾರಣಕರ್ತರು ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳಾದ ಡಾಕ್ಟರ್ ವಿಘ್ನೇಶ್ ಮಂಚಾಲೆ ಮತ್ತು ಉಪ ತಹಸೀಲ್ದಾರ್ ಆದ ಕಲ್ಲಪ್ಪ ಮೆಣಸಿನಾಳರು ಮುಖ್ಯ ಕಾರಣ.
ಸ್ಥಳಿಯ ಶಾಸಕ ಗೋಪಾಲಕೃಷ್ಣ ಬೇಳೂರು, ಸ್ಥಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ, ಸಂಸದ ರಾಘವೇಂದ್ರರನ್ನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮದು ಬಂಗಾರಪ್ಪರನ್ನು ಆಹ್ವಾನಿಸಿಲ್ಲ ಅದಕ್ಕೆ ಕಾರಣ ವಿಶ್ವವಿದ್ಯಾಲಯದ ಪ್ರೋಟೋಕಾಲ್ !? ಇದು ಅವೈಜ್ಞಾನಿಕ... ಇಂತಹ ಓಬಿರಾಯನ ಕಾಲದ ಪ್ರೋಟೋ ಕಾಲ್ ಬದಲಾಗಬಾರದೇಕೆ?
ಸ್ಥಳಿಯ ಜನಪ್ರತಿನಿದಿಗಳ ಉಪಸ್ಥಿತಿ ನಿರಾಕರಿಸುವ ಪ್ರೋಟೋಕಾಲ್ ಸರಿ ಅಲ್ಲ ಅನ್ನುವ ಸಂದೇಶ ಸರಕಾರಕ್ಕೆ ಯಾರು ತಲುಪಿಸಬೇಕು?
ಕೇರಳದ ಕಾಸರಗೋಡು ಜಿಲ್ಲೆಯಲ್ಲಿನ ವಿಶ್ವ ವಿದ್ಯಾಲಯದ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಬರುವಾಗ ಕಮ್ಯೂನಿಸ್ಟ ಪಕ್ಷದಿಂದ ಆಯ್ಕೆ ಆಗಿದ್ದ ಸ್ಥಳಿಯ ಸಂಸದ ಮತ್ತು ಶಾಸಕರನ್ನು ಆಹ್ವಾನಿಸದ ಬಗ್ಗೆ ದೊಡ್ಡ ಪ್ರತಿರೋದ ವ್ಯಕ್ತವಾಗಿತ್ತು ಆಗ ವಿಶ್ವವಿದ್ಯಾಲಯದವರು ರಾಷ್ಟ್ರಪತಿಗಳ ಸುರಕ್ಷೆಯ ಜವಾಬ್ದಾರಿ ವಹಿಸಿದವರ ಸೂಚನೆ ಮೇರೆಗೆ ಸ್ಥಳೀಯ ಸಂಸದ ಮತ್ತು ಶಾಸಕರನ್ನು ಆಹ್ವಾನಿಸಿಲ್ಲ ಎಂಬ ಉತ್ತರ ನೀಡಿದ್ದರು.
https://www.udayavani.com/english-news/mla-kunhambu-and-mp-rajmohan-unnithan-allege-protocol-violation-in-prez-event-say-they-were-not-invited
Comments
Post a Comment