Blog number 1680. ಡಾಕ್ಟರ್ ವಿಘ್ನೇಶರ ಮನದಾಳದ ಮಾತುಗಳು, ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಮುಖ್ಯ ಕಾರಣಕರ್ತರು.
#ಡಾಕ್ಟರ್_ವಿಘ್ನೇಶ್_ಮಂಚಾಲೆ_ಇವರ_ಮನದಾಳದ_ಮಾತುಗಳು .
#ಕ್ಯಾಂಪಸ್_ಭೂಮಿ_ಗುರುತಿಸಿದ_ವಿಶೇಷಾಧಿಕಾರಿ_ಅವರು
#ಈ_ಮಹತ್ಕಾರ್ಯದಲ್ಲಿ_ಅವರಿಗೆ_ಮುಕ್ತವಾಗಿ_ಮತ್ತು_ಬಹಿರಂಗವಾಗಿ_ಬೆಂಬಲಿಸಿದವರ_ನೆನೆಸಿದ್ದಾರೆ.
#ಇಬ್ಬರನ್ನು_ಹೆಸರಿಸಿದ್ದಾರೆ
#ಅದು_ಹಿರಿಯ_ಕಾಂಗ್ರೇಸ್_ಮುಖಂಡರಾದ_ಈಳಿ_ನಾರಾಯಣಪ್ಪನವರು.
#ಇನ್ನೋಬ್ಬರು?
#ನಾನಂತೆ !
#ನನ್ನ_ಕಥಾಸಂಕಲ_ಬಿಲಾಲಿ_ಬಿಲ್ಲಿಯಲ್ಲಿ_ಒಂದು_ಕಥಾ_ನಾಯಕ_ಇವರು.
ಡಾ.ವಿಷ್ನೇಶ್.
ಅರುಣ್ ಪ್ರಸಾದರಿಗೆ ಧನ್ಯವಾದಗಳು...
ನೀವು ಮಾತ್ರ ಪ್ರತಿ ವರ್ಷ ಕನ್ವೊಕೇಷನ್ ಹಬ್ಬದಲ್ಲಿ ನನ್ನ ನೆನಪು ಮಾಡಿಕೊಳ್ಳುತ್ತಲೇ ಇರುವಿರಿ. ನಾನು ವಿಶೇಷ ಅಧಿಕಾರಿಯಾಗಿ ಇರುವಕ್ಕಿ ಕ್ಯಾಂಪಸ್ ಮಾಡುವುದು ನನ್ನ ವೃತ್ತಿ ಜೀವನದ ಬಹು ದೊಡ್ಡ ಜವಾಬ್ದಾರಿ ಮತ್ತು ಚಾಲೆಂಜ್ ಆಗಿತ್ತು. ವರದ ಪುರದ ಮಹಾ ಯೋಗಿ ಶ್ರೀ ಶ್ರೀಧರ ಸ್ವಾಮಿಗಳ ಆಶೀರ್ವಾದದಿಂದ ಮಾತ್ರ ಇದು ಸಾಕಾರ ಆಯಿತು ಎಂದು ನಂಬಿದವನು. ನಿಮ್ಮ ಸಹಕಾರವೂ ಪ್ರಮುಖ ವಾಗಿತ್ತು. ಇದರ ಸಂಪೂರ್ಣ ದಾಖಲಾತಿಯ ವಿವರ ನಿಮಗೆ ಕೊಡುತ್ತೇನೆ. ಕಿಮ್ಮನೆ ರತ್ನಾಕರ್ ಕೂಡ ಬಹಳ ಸಹಕರಿಸಿದರು. ಮೊದಲಿಗೆ ನಾನು ಗುರುತಿಸಿದ್ದು 1300 ಎಕರೆ ಜಾಗ.ಆದರೆ ಸಿಕ್ಕಿದ್ದು 777 ಎಕರೆ ಮಾತ್ರ. ಈ ಮಹತ್ಕಾರ್ಯದಲ್ಲಿ ನನಗೆ ಮುಕ್ತವಾಗಿ ಮತ್ತು ಬಹಿರಂಗವಾಗಿ ಸಪೋರ್ಟ್ ಮಾಡಿದ್ದು ನೀವು ಮತ್ತು ಶ್ರೀ ದಿವಂಗತ ಇಳಿ ನಾರಣಪ್ಪನವರು. ಸಾಗರ ತಾಲೂಕಿನ ಪ್ರಬಲ ಸಮುದಾಯಕ್ಕೆ ಸೇರಿದವನು ಆದರೂ ಯಾರೂ ಸಪೋರ್ಟ್ ಮಾಡಲಿಲ್ಲ. ಹಾಗಂತ ಅದರ ಬಗ್ಗೆ ಬೇಸರವೂ ಇಲ್ಲ. ಈ ಕಾರ್ಯದಲ್ಲಿ ಯಾವೊಬ್ಬ ರೈತನನ್ನು ಒಕ್ಕಲು ಯೆಬ್ಬಿಸಿಲ್ಲ. "ಯಾಕೆ ಸಾಗರ ತಾಲೂಕಿನಲ್ಲಿ ಕೃಷಿ ವಿ ವಿ ಬೇಕೆಂದರೆ," ಅಂದಿನ ಕೃಷಿ ಮಂತ್ರಿಯವರಿಗೆ ನಾನು ಹೇಳಿದ್ದು" ಈ ತಾಲೂಕಿನ ಜನರು ತ್ಯಾಗ ಮಾಡಿದವರು. ನಾಡಿನ ಅಭಿವೃದ್ದಿಗಾಗಿ, ಬೆಳಕನ್ನು ಕೊಡಲು ಸಾವಿರಾರು ರೈತರು, ಕಾರ್ಮಿಕರು ಮನೆ ಆಸ್ತಿ ಕಳೆದುಕೊಂಡು ಬೀದಿ ಪಾಲಾದರು. ಅನೇಕ ಹೋರಾಟ ಚಳುವಳಿಗಳು ನಡೆದಿದೆ. ಆದರೆ ಉದ್ಯೋಗ ಕೊಡುವ ಯಾವ ಸರಕಾರೀ ಸಂಸ್ಥೆಗಳು ಇಲ್ಲಿ ಬರಲಿಲ್ಲ (I I T, medical cillege, ಇತ್ಯಾದಿ). ಈಗ ಕೃಷಿ ವಿ ವಿ ಬರುತ್ತಿದೆ, ದಯವಿಟ್ಟು ಅನುಮೋದಿಸಿ"ಎಂದು ನಿರ್ಣಾಯಕವಾಗಿ ಹೇಳಿದ್ದೆ. ಆಗ ಶ್ರೀ ಕಾಗೋಡು ತಿಮ್ಮಪ್ಪನವರು ಉಪಸ್ಥಿತರಿದ್ದರು. ಆಂತರಿಕವಾಗಿ ವಿರೋಧವಿದ್ದರೂ ನನ್ನ ಈ ಸೈದ್ಧಾಂತಿಕ ಬದ್ಧತೆ ನನಗೆ ಈ ಕಾರ್ಯ ಮಾಡಲು ಪ್ರೇರೇಪಿಸಿತು. ನಿಮ್ಮ ಸಹಕಾರಕ್ಕೆ ಹಾಗೂ ನಿಮ್ಮ ಚಿಂತನೆಯ ಸತ್ವಕ್ಕೆ ನಾನು ಅಭಾರಿ. ನಿಮ್ಮಂತ ವ್ಯಕ್ತಿಗಳು ವಿ ವಿ ಯ ಆಡಳಿತ ಮಂಡಳಿಯ ಸದಸ್ಯರಾದರೆ ವಿ ವಿ ಯ ಹಿತದೃಷ್ಟಿಯಿಂದ ಅನುಕೂಲ. ನಿಮ್ಮ ಅಭಿಮಾನಕ್ಕೆ ಮತೊಮ್ಮೆ ಧನ್ಯವಾದಗಳು.
ಡಾ.ವಿಷ್ನೇಶ್.
ಇವರಿಗೆ ನನ್ನ ಉತ್ತರ ...
ವಿಘ್ನೇಶರೆ ದೀಪದ ಕೆಳಗೆ ಕತ್ತಲು ಎಂಬಂತೆ ನಿಮ್ಮ ಜ್ಞಾನ ಪರಿಶ್ರಮಗಳು ಸ್ಥಳಿಯರಿಗೆ ನಿರ್ಲಕ್ಷ್ಯ ಮತ್ತು ನಿಮ್ಮ ಅಹ೯ತೆಯನ್ನೇ ಅನರ್ಹತೆ ಮಾಡುವ ಹೊಟ್ಟೆಕಿಚ್ಚಿನ ಮಲೆನಾಡಿನ ನಿಮ್ಮ ಸಮಕಾಲಿನವರು ಕಡಿಮೆ ಇಲ್ಲ ಏನೇ ಆಗಲಿ ನಿಮ್ಮ ಸಾದನೆ ಸದಾ ಸ್ಮರಣೀಯ ಮತ್ತು ಸ್ತುತ್ಯಾರ್ಹ ಇದರಿಂದ ನಾನು ಹಿಂದೆ ಸರಿಯಲಾರೆ.
ಈಗಲೂ ನೀವು ದೇಶಾದ್ಯಂತ ದೊಡ್ಡ ದೊಡ್ಡ ವಿಶ್ವ ವಿದ್ಯಾಲಯದ ಆಹ್ವಾನ ಪಡೆದು ಅಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವೃಂದಕ್ಕೆ ಕೌನ್ಸಿಲಿಂಗ್ ಮಾಡುವುದು ಹೆಮ್ಮೆಯ ವಿಚಾರ.
ನಾನು ಸಾವ೯ಜನಿಕ ಜೀವನದಿಂದ ರಾಜಕಾರಣದಿಂದ ನಿವೃತ್ತನಾಗಿದ್ದೇನೆ ಆದ್ದರಿಂದ ನನಗೆ ಯಾವುದೆ ಜವಾಬ್ದಾರಿ ಇಷ್ಟವಿಲ್ಲ ಅಂತಹ ಸ್ಥಾನಗಳು ನಿಮ್ಮಂತಹ ಯೋಗ್ಯರು ಅಲಂಕರಿಸಿದರೆ ಆ ಸ್ಥಾನಕ್ಕೆ ಗೌರವ ಕೂಡ.
ಇತಿ
ಅರುಣ್ ಪ್ರಸಾದ್.
Comments
Post a Comment