#ಮುಖ್ಯಮಂತ್ರಿ_ಯಡೂರಪ್ಪರು_ಬೆಂಗಳೂರುನಗರ_ಮತ್ತು_ಗ್ರಾಮಾಂತರ_ಜಿಲ್ಲೆ_ಲಾಕ್_ಡೌನ್_ಮಾಡಿದ್ದು_ಸರಿನಾ_ತಪ್ಪಾ_ಚಚೆ೯ .
ಈ ಬಗ್ಗೆ ಪರಿಣಿತರು ಬುದ್ದಿವಂತರು ಹಲವಾರು ರೀತಿ ಚಚಿ೯ಸುತ್ತಿದ್ದಾರೆ.
ಜನರ ದುಡಿಮೆಗೆ ಕತ್ತರಿ ಬೀಳುತ್ತೆ ಹಾಗಾಗಿ ಲಾಕ್ ಡೌನ್ ಬೇಡ, ಬೇರೆ ದೇಶದಲ್ಲಿ ಲಾಕ್ ಡೌನ್ ಮಾಡುತ್ತಿಲ್ಲ, ಹೀಗೆ ಬಿಟ್ಟರೆ ಇನ್ನೆರೆಡು ತಿಂಗಳಲ್ಲಿ ಜನರಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಿ ಕೊರಾನಾ ಕಡಿಮೆ ಆಗುತ್ತದೆ ಅಂತ.
ಆದರೆ ನನ್ನ ಅಭಿಪ್ರಾಯ ಇವರ ಸಲಹೆಗೆ ವಿರುದ್ಧ ಮತ್ತು ರಾಜ್ಯ ಸಕಾ೯ರ ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆ ಮಾತ್ರ ಅಲ್ಲ ರಾಜ್ಯದ ಜಿಲ್ಲೆಗಳಲ್ಲೂ ಲಾಕ್ ಡೌನ್ ಮಾಡಬೇಕು.
ಈಗಾಗಲೇ ದಿನದಿಂದ ದಿನಕ್ಕೆ ರೋಗ ಉಲ್ಬಣಿಸುತ್ತಿದೆ, ಬೆಂಗಳೂರಿನಂತ ರಾಜಧಾನಿ, ವೈದ್ಯಕೀಯ ಚಿಕಿತ್ಸೆಯ ಆಸ್ಪತ್ರೆಗಳ ಹಬ್ ನಲ್ಲಿ ರೋಗಿಗಳಿಗೆ ಬೆಡ್ ಇಲ್ಲಾ !? ಅಂದರೆ ಇನ್ನು ರಾಜ್ಯದ ಗ್ರಾಮೀಣ ಪ್ರದೇಶದ ಪಾಡೇನೂ?
ಇಲ್ಲಿ ಎರೆಡು ಹಂತವಿದೆ ರೋಗ ಬರದಂತೆ ಮುನ್ನೆಚ್ಚರಿಕೆ ಮತ್ತು ರೋಗ ಬಂದ ನಂತರ ಸಾವಾಗದಂತೆ ನಮಗೆ ನಾವೇ ರೋಗ ನಿರೋದಕ ಶಕ್ತಿ ವೃದ್ದಿ ಮಾಡಿಕೊಳ್ಳುವ ಆಯಾ ದೇಶದ ಪ್ರಾದೇಶಿಕ ಚಿಕಿತ್ಸೆ ಮಾತ್ರ ಯಾಕೆಂದರೆ ಕೊರಾನಾಕ್ಕೆ ಈ ವರೆಗೆ ಲಸಿಕೆ ಕಂಡು ಹಿಡಿದಿಲ್ಲ ಆದ್ದರಿಂದ ರೋಗ ಬರದಂತ ಮುನ್ನೆಚ್ಚರಿಕೆಯೆ ನಮಗೆ ಯೋಗ್ಯ ಮಾಗ೯ವಾಗಿದೆ.
ಇಷ್ಟೆಲ್ಲ ಅನಾಹುತ ಆದರೂ ಜನತೆಗೆ ಸರಿಯಾದ ಜ್ಞಾನವಿಲ್ಲ, ಸಾಮಾಜಿಕ ಅಂತರ, ಮಾಸ್ಕ್ ಇತ್ಯಾದಿ ಕಡ್ಡಾಯ ಪಾಲಿಸುತ್ತಿಲ್ಲ ದಿನದಿಂದ ದಿನಕ್ಕೆ ರೋಗ ಹರಡಲು ಇದು ದೊಡ್ಡ ಕಾರಣ.
ಈ ಕಾಯಿಲೆ ಬಂದು ಸತ್ತರೆ ಊರ ಸ್ಮಶಾನ ಕೂಡ ನೀಡದೆ ವಿರೋದಿಸುವ ಮೂಡರು ಹೆಚ್ಚು ಹಾಗಾಗಿ ಸಕಾ೯ರದ ಈ ಲಾಕ್ ಡೌನ್ ನಾನು ಸ್ವಾಗತಿಸುತ್ತೇನೆ.
"ಜೀವ ಉಳಿದರೆ ಬಿಕ್ಷೆ ಬೇಡಿ ಆದರೂ ಬದಕಬಹುದೆಂಬ" ಗಾದೆ ಇಲ್ಲಿ ಪ್ರಸ್ತುತ.
#ಕೊರಾನಾ_ಲಾಕ್_ಡೌನ್_ಡೈರಿ_ನಂಬರ್_51
Comments
Post a Comment