Blog number 1675. ಪುತ್ತೂರಿನ ಶಂಕರ ಭಟ್ಟರು ಮತ್ತು ಉಪ್ಪಿನಂಗಡಿಯ ಕಿರಣ್ ಮನ್ನಾಜೆ ಅವರನ್ನು ನನಗೆ ಪರಿಚಯಿಸಿದ ಪೇಸ್ ಬುಕ್ ಅದಕ್ಕೆ ವೇದಿಕೆ ಆದ ನಮ್ಮ ಮಲ್ಲಿಕಾ ವೆಜ್.
#ಸೋಷಿಯಲ್_ಮೀಡಿಯಾದ_ನಂಟು.
#ಎಲ್ಲಿಂದ_ಎಲ್ಲಿಗೋ_ಸಂಪರ್ಕಿಸುವ_ಚಮತ್ಕಾರ
#ಇಬ್ಬರು_ಹೋರಾಟಗಾರರ_ಮುಖತಃ_ಬೇಟಿಗೆ_ಕಾರಣವಾಯಿತು.
#ನಮ್ಮ_ಮಲ್ಲಿಕಾವೆಜ್_ಒಂದು_ಪರಸ್ಪರ_ಬೇಟಿಗೆ_ಒಂದು_ಜಂಕ್ಷನ್_ಆಗಿದೆ.
ಮೊನ್ನೆ ಉಪ್ಪಿನಂಗಡಿಯ ಕಿರಣ್ ಮನ್ನಾಜೆ ಎಂಬ FB ಗೆಳೆಯರು ಪುತ್ತೂರಿನ ಶಂಕರ ಭಟ್ಟರ 2ವಷ೯ದ ಹಿಂದಿನ ಹುಟ್ಟುಹಬ್ಬದ೦ದು ರಿಪ್ಪನ್ ಪೇಟೆಯ ಮಲ್ಲಿಕಾ ವೆಜ್ ಲ್ಲಿ ಬೋಜನ ಮಾಡಿದ ನೆನಪಿನ ಪೋಟೋ ಅಂತ ಹಾಕಿದ್ದರು ಆದರೆ ಅದು ಆನಂದಪುರದ ನಮ್ಮ ಮಲ್ಲಿಕಾ ವೆಜ್ ಎಂದು ಉತ್ತರಿಸಿದ್ದೆ.
ಅದಕ್ಕೆ ಅವರು ಈ ಮಾಗ೯ದಲ್ಲಿ ಹೋಗುವಾಗ ಯಾವತ್ತೂ ಇದೇ ರೆಸ್ಟೋರೆಂಟನಲ್ಲಿ ಉಟೋಪಚಾರ ಮಾಡುತ್ತೇವೆ ಇದು ತಮ್ಮದೆಂದು ತಿಳಿದು ಸಂತೋಷ ಆಯಿತು ಅಂತ ಉತ್ತರ ನೀಡಿದ್ದರು.
ಇನ್ನೊಮ್ಮೆ ಈ ಕಡೆ ಬಂದಾಗ ಬೇಟಿ ಮಾಡಲು ವಿನಂತಿಸಿದ್ದೆ, ಇವತ್ತು ಅಕಸ್ಮಿಕವಾಗಿ ಮದ್ಯಾಹನ ಊಟಕ್ಕೆ ನಮ್ಮ ಮಲ್ಲಿಕಾ ವೆಜ್ ಗೆ ತಲುಪಿದ್ದರು , ಪರಸ್ಪರ ಪರಿಚಯಿಸಿಕೊಂಡೆವು ಮೊನ್ನೆಯ ಶಂಕರ ಭಟ್ಟರ ಹುಟ್ಟುಹಬ್ಬಕ್ಕೆ ತಡವಾಗಿ ಶುಭಾಷಯ ತಿಳಿಸಿದೆ ಈ ಎಲ್ಲಾ ನೆನಪಿಗಾಗಿ ನನ್ನ ಆತಿಥ್ಯ ಸ್ವೀಕರಿಸಲು ಒತ್ತಾಯಿಸಿ ಒಪ್ಪಿಸಿದೆ, ಈಗ ಸ್ವಣ೯ವಲ್ಲಿ ಮಠ ತಲುಪಿದವರು ಆತಿಥ್ಯಕ್ಕೆ ಪ್ರತಿ ವಂದನೆ ತಿಳಿಸಿದ್ದಾರೆ.
ಟೇಸ್ಟಿಂಗ್ ಪೌಡರ್, ಅಜಿನೋಮೊಟೊ, ಕೃತಕ ಬಣ್ಣ, ಬಳಸಿದ ಎಣ್ಣೆ, ನಕಲಿ ಚಹಾ ಪುಡಿಗಳನ್ನ ಕಟ್ಟುನಿಟ್ಟಾಗಿ ನಿಷೇದ ಮಾಡಿರುವ ನಮ್ಮ MALLIKA VEG ಗೆ ದೂರ ದೂರದಿಂದಲೂ ಹುಡುಕಿ ಬರುತ್ತಾರೆ.
ನಮ್ಮ ಮಲ್ಲಿಕಾ ವೆಜ್ ಇರುವುದು ಆನಂದಪುರಂ ಪ್ರಾರಂಭದ ಯಡೇಹಳ್ಳಿ ವೃತ್ತದಲ್ಲಿದೆ ಇಲ್ಲಿಗೆ ಶಿವಮೊಗ್ಗದಿಂದ, ಸಾಗರದಿಂದ, ಹೊಸನಗರದಿಂದ ಮತ್ತು ತೀಥ೯ಹಳ್ಳಿಯ ಮಾರ್ಗ ಸೇರುತ್ತದೆ ಆದ್ದರಿಂದ ವ್ಯವಹಾರಕ್ಕಾಗಿಯೋ ಇನ್ಯಾವುದೋ ಕಾರಣಕ್ಕೆ ಪರಸ್ಪರ ಸೇರಲು ಇಲ್ಲಿನ ಲ್ಯಾಂಡ್ ಮಾರ್ಕ್ ನೀಡಿ ಬರುತ್ತಾರೆ.
ನಮ್ಮಲ್ಲಿ ದಕ್ಷಿಣ ಭಾರತ - ಉತ್ತರಭಾರತದ ಊಟ, ಉಪಹಾರದಲ್ಲಿ ಹಲಸಿನ ಎಲೆ ಕೊಟ್ಟೆ ಕಡಬು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ,ತಟ್ಟೆ ಇಡ್ಲಿ, ಗಿರ್ಮಿಟ್ ಮತ್ತು ಕೋಥಾಸ್ ಪಿಲ್ಟರ್ ಕಾಪಿ ಎಲ್ಲಾ ಗ್ರಾಹಕರ ನಾಲಿಗೆ ರುಚಿ ಮತ್ತು ಹೊಟ್ಟೆ ತುಂಬಿಸುತ್ತದೆ.
Comments
Post a Comment