# ANANAS FRUIT FESTIVEL AROUND JOGFALLS#
ಜೋಗ್ ಜಲಪಾತ ನೋಡಲು ಇದು ಸಕಾಲ ಜೊತೆ ಜೊತೆಗೆ ಈ ಮಾಗ೯ದ ಇಕ್ಕೆಲದಲ್ಲಿ ಸ್ಥಳಿಯರು ತಾಜಾ ಅನಾನಸ್ ಹಣ್ಣು ತಂದು ಮಾರುತ್ತಿದ್ದಾರೆ, ಇಂತಹ ನೂರಾರು ಅಂಗಡಿಗಳು ಜೋಗ ತಲುಪುವ ಎಲ್ಲಾ ಮಾಗ೯ಗಳಲ್ಲಿ ಇದೆ.
ಪ್ರವಾಸಿಗರು ವಾಹನ ನಿಲ್ಲಿಸಿ ಸಾಗರ, ಸೊರಬ ಮತ್ತು ಸಿದ್ದಾಪುರ ತಾಲ್ಲೂಕ್ಗಳ ರೈತರ ಜಮೀನಿನಿಂದ ತಂದ ತಾಜಾ ಸಿಹಿ ಅನಾನಸ್ ಹಣ್ಣು ಅಲ್ಲೆ ಕತ್ತರಿಸಿ ಅದಕ್ಕೆ ಉಪ್ಪು ಮತ್ತು ಕಾರದ ಪುಡಿ ಬೆರೆಸಿ ತಿಂದು ಮನೆಗೆ ನಾಕಾರು ಹಣ್ಣು ಖರೀದಿಸುತ್ತಾರೆ.
ಯಾವುದೇ ರಾಸಾಯನಿಕ ಬಣ್ಣ ಸೇರಿಸದ ತಾಜಾ ಅನಾನಸ್ ಪ್ರತಿ ದಿನ ಮಾರಾಟವಾಗುತ್ತಿದೆ ರಜಾದಿನದಲ್ಲಿ ಹೆಚ್ಚು ಮಾರಾಟವಾಗುತ್ತೆ.
ಈ ರೀತಿ ರೈತರು ಬೆಳೆದ ಹಣ್ಣಿಗೆ ಒಂದು ಮಾರು ಕಟ್ಟಿ ಸೃಷ್ಟಿ ಆಗಿದೆ.
ಆ ಮಾಗ೯ದಲ್ಲಿ ಹೋದಾಗ ಮರೆಯದೆ ಅನಾನಸ್ ಖರೀದಿಸಿ ಸವಿಯಿರಿ.
Comments
Post a Comment