#ಈ_ವರ್ಷ_ಲಿಂಗನಮಕ್ಕಿ_ಜಲಾಶಯ_ಭರ್ತಿ_ಆದೀತಾ? (27 ಜುಲೈ 2023)
#ಜೋಗ_ಜಲಪಾತದ_ಸೆರಗಿನ_ಬರಹಗಾರ.
#ಮಾವಿನಗುಂಡಿ_ಅಶೋಕ_ಹೆಗ್ಗಡೆ
#ಅವರು_2021_ರ_ಈ_ದಿನ_ಬರೆದಿದ್ದ_ಲೇಖನ_ಇನ್ನೊಮ್ಮೆ
#ಅವತ್ತು_7_ದಿನದ_ಮಳೆಯಲ್ಲಿ_ಲಿಂಗನಮಕ್ಕಿ_ಡ್ಯಾಂ_ಶೇಕಡಾ_70_ಭಾಗ_ತಲುಪಿತ್ತು.
#ಇವತ್ತು_ಲಿಂಗನಮಕ್ಕಿ_ಶೇಕಡಾ_40_ಭಾಗದಲ್ಲಿದೆ.
#ಅವತ್ತು_12_ಜುಲೈ_2021ರಲ್ಲಿ_ಶೇಕಡಾ_40_ತಲುಪಿತ್ತು
ಮಾವಿನ ಗುಂಡಿಯ ಅಶೋಕ ಹೆಗ್ಗಡೆ ಹಿಂದಿನ 80 ರ ದಶಕದಲ್ಲಿ ಅನಾನಸ್ ಹಣ್ಣಿನ ಮೌಲ್ಯವರ್ಧನೆಗೆ ತುಂಬಾ ಪ್ರಯತ್ನಿಸಿದವರು ಇವರ ಐನಕೈ (ಇದರ ಅರ್ಥ ಗೊತ್ತಿಲ್ಲ) ಎಂಬ ಬ್ರಾಂಡಿನ ಅನಾನಸ್ ಹಣ್ಣಿನ ರಸ, ಜಾಮ್ ಇತ್ಯಾದಿ ತಯಾರಿಸಿ ಮಾರಾಟ ಮತ್ತು ಇದೇ ಹೆಸರಿನ ಔಟ್ ಲೆಟ್ ಒಂದು ಮಾವಿನಗುಂಡಿಯಲ್ಲಿ ತೆರೆದಿದ್ದರು.
ಆಗ ಇವರದ್ದೊಂದೆ ಅಂಗಡಿ ಮತ್ತು ಎದುರಿನಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮಾತ್ರ ಮಾವಿನ ಗುಂಡಿಯಲ್ಲಿತ್ತು ಅಲ್ಲಿನ ಇನ್ನೊಂದು ವಿಶೇಷ ಅಂದರೆ ಮಾವಿನಗುಂಡಿ ವೃತ್ತದಲ್ಲಿ ಸಿದ್ದಾಪುರ ರಸ್ತೆಗೆ ಹೊರಳಿದರೆ ಅಲ್ಲೊಂದು ವರ್ಷ ಪೂರ್ತಿ ನಿರಂತರವಾಗಿ ಬರುವ ಅಬ್ಬಿ ನೀರಿಗೊಂದು ಕೊಳವೆ ಅಳವಡಿಸಿದ್ದ ಸಾರ್ವಜನಿಕ ಕುಡಿಯುವ ನೀರು ಮಾತ್ರ.
ಈಗ ಅಶೋಕ ಹೆಗ್ಗಡೆ ವ್ಯವಹಾರಗಳಿಂದ ನಿವೃತ್ತರಾಗಿದ್ದಾರೆ, ಇಂಗ್ಲೀಷ್ ಭಾಷೆಯಲ್ಲಿ ಇವರ ಮಾತು ಬರವಣಿ ಆಕಷ೯ಕ, ಜೋಗ್ ಪಾಲ್ಸನ ಪ್ರವಾಸೋದ್ಯಮದಲ್ಲಿ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಬಳಸಿಕೊಳ್ಳಬಹುದು.
ಜೋಗ ಜಲಪಾತದ ಪ್ರದೇಶದ ಹಿರಿಯ ಬರಹಗಾರರು ಇವರು.
ಇವರ ಸೆಲ್ ನಂಬರ್ 7019402077.
#ಇವತ್ತು_ಇವರು_ಪೋಸ್ಟ್_ಮಾಡಿದ_ಲೇಖನ_ಓದಿ
ಲಿಂಗನಮಕ್ಕಿ ಆಣೆಕಟ್ಟಿನಲ್ಲಿ 12/7/21 ರಂದು ಒಟ್ಟು ಧಾರಣ ಸಾಮರ್ಥ್ಯದ 40% ಸಂಗ್ರಹವಾಗಿದ್ದಿದ್ದು 26/7/21ಕ್ಕೆ 70% ದಾಟಿದೆ.
ಈ ಎರಡು ವಾರಗಳಲ್ಲಿ ಒಂದು ವಾರಕಾಲ ಮಲೆನಾಡಿನ ವಾಡಿಕೆಯ ವಿಪರೀತ ಮಳೆ ಸುರಿದಿದೆ.
ಈಗ ಹಲವರ ಕುತೂಹಲ ಲಿಂಗನಮಕ್ಕಿ ಯಾವಾಗ ತುಂಬಬಹುದು, ಆಣೆಕಟ್ಟಿನ ಗೇಟ್ ತೆರೆದು ಜೋಗ್ ಜಲಪಾತ ಅದ್ಭುತವಾಗಿ ಕಾಣುವಂತೆ ನೀರು ಹರಿಸಬಹುದು ಇತ್ಯಾದಿ... ಅದೇ ಶರಾವತಿನದಿಯ ಕೆಳಭಾಗ ಅಂದರೆ ಗೇರಸೊಪ್ಪಾ ದಿಂದ ಹೊನ್ನಾವರ ವರೆಗಿನ ನದಿ ಪಾತ್ರದವರಿಗೆ ಡ್ಯಾಮ್ ತುಂಬಿ ಲಕ್ಷಾಂತರ ಕ್ಯೂಸೆಕ್ಸ್ ನೀರು ಹೊರಬಿಟ್ಟು ತಾವೂ ಪ್ರವಾಹಪೀಡಿತರಾಗಬಹುದಾ ಎಂಬ ಚಿಂತೆ.
ಇಲ್ಲಿ ಗಮನಿಸಬಹುದಾದ ಅಂಶಗಳು. -
1.ಮಳೆಗಾಲ ಇನ್ನೂ ಆರೆಂಟು ವಾರ ಇದೆ ಎಂದಿಟ್ಟುಕೊಳ್ಳಬಹುದು.
2.. ಬರುವ ದಿನಗಳಲ್ಲಿ ಡ್ಯಾಮ್ ನೀರಿನ ಮಟ್ಟ ನಿಧಾನವಾಗಿ ಏರುವಂಥ ಸಾಮಾನ್ಯ ಮಳೆಯಾದರೆ ಡ್ಯಾಮ್ ತುಂಬಲು ಸಪ್ಟೆಂಬರ್ ಆಗಬಹುದು.
3. ಆಗ 90% ತುಂಬುವವರೆಗೆ ಗೇಟ್ ಓಪನ್ ಮಾಡದೇ ಇರಬಹುದು.
4. ಕಳೆದ ವಾರದಂಥ ಭೀಕರ ಮಳೆ ಆಗತೊಡಗಿದರೆ ಇನ್ನೊಂದೇ ವಾರದಲ್ಲಿ ನೀರು ಬಿಡುಗಡೆ ಸಾಧ್ಯತೆ..
5. ಏಕಾಏಕಿ ಮಳೆ ಕ್ಷೀಣಿಸಿ ಮುಂದಿನ ಮಳೆಗಾಲದ ದಿನಗಳೇ ಬರಗಾಲದ ದಿನಗಳಾಗಲೂ ಬಹುದು.. (ಆಗ ನಮ್ಮ ಪರಿಸರ ಮಿತ್ರರು.. ನೋಡಿ ಈ ಅಭಿವೃದ್ಧಿ ಯೋಜನೆಗಳು, ಮಾನವನ ಹಪಾಹಪಿಯಿಂದಲೇ ಈ ದುರಂತ... ಎಂಬ ಸವಕಲು ರೀಲ್ ಹೊರತೆಗೆಯುತ್ತಾರೆ)
6. ಒಟ್ಟಾರೆ ಎಲ್ಲಾ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು Keeping fingers crossed, ಎಚ್ಚರಿಕೆಯಿಂದ ಇರಬೇಕಾದ ಕಾಲ.
Comments
Post a Comment