#ತಮಿಳು_ಚಿತ್ರರಂಗದ_ಯಶಸ್ವಿ_ನಿರ್ಮಾಪಕ_ನಟ ಪಿರಮಿಡ್_ನಟರಾಜ್
#ಖ್ಯಾತ_ನಿಧೇ೯ಶಕ_ಕೆ_ಬಾಲಚಂದರ್_ಮತ್ತು_ಇವರ_ಜೋಡಿ_ನೀಡಿದ_ಸೂಪರ್_ಹಿಟ್_ಸಿನಿಮಾಗಳು.
#ಇವರ_ತಮಿಳು_ಚಿತ್ರ_ಅವಲ್_ಒರು_ಥೋಡರ್_ಕಧ್ಯೆ_ಕನ್ನಡದಲ್ಲಿ_ಬೆಂಕಿಯಲ್ಲಿ_ಅರಳಿದ_ಹೂವು_ಸಿನಿಮಾ.
#ನನ್ನ_ಚಂಪಕಾ_ಪ್ಯಾರಾಡೈಸ್_ನಾನ್_ವೆಜ್_ರೆಸ್ಟೋರಾಂಟ್_ಪ್ರಾರಂಬಿಸಲು_ಕಾರಣಕರ್ತರು.
#ನಮ್ಮ_ಹೊಂಬುಜ_ರೆಸಿಡೆನ್ಸಿ_ಲಾಡ್ಜನ_ವಿಕ್ಟೋರಿಯಾ_ಕಾಟೇಜಿನಲ್ಲಿ_ತಂಗಿದ್ದರು.
ಪಿರಮಿಡ್ ನಟರಾಜ್ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಇವರು 1997 ರಲ್ಲಿ ಸ್ಥಾಪಿಸಿದ ಪಿರಮಿಡ್ ಎಂಟರ್ ಟೈನ್ ಮೆಂಟ್ ಲಿ. ಸಂಸ್ಥೆಯ ಪ್ರಖ್ಯಾತಿ ನಟರಾಜ್ ಹೆಸರಿಗೆ ಪಿರಮಿಡ್ ಸೇರಲು ಕಾರಣ.
ಪಿರಮಿಡ್ ನಟರಾಜರು 60 ಕ್ಕೂ ಹೆಚ್ಚು ಚಲನ ಚಿತ್ರ ನಿರ್ಮಾಣ ಮಾಡಿದ್ದಾರೆ ಇವರ ನಿರ್ಮಾಣದಲ್ಲಿ ಕೆ.ಬಾಲಚಂದರ್ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿದ್ದ ಅವಲ್ ಒರು ಥೋಡರ್ ಕಧ್ಯೆ ಸಿನಿಮಾ ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಆಗಿ ಪ್ರಖ್ಯಾತಿ ಆಗಿದ್ದು ಇತಿಹಾಸ.
2015ರಲ್ಲಿ ಪಿರಮಿಡ್ ನಟರಾಜ್ ಇನ್ನೊಬ್ಬ ನಿರ್ಧೇಶಕ ವೆಂಕಟ್ ಜೊತೆ ಅನೇಕ ಭಾರಿ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನ ವಿಕ್ಟೋರಿಯಾ ಕಾಟೇಜಿನಲ್ಲಿ ತಂಗಿದ್ದರು ಅವಾಗ ಅವರು ತಮ್ಮ ಉಪಹಾರ ಊಟಕ್ಕೆ ನಮ್ಮ ಮಲ್ಲಿಕಾ ವೆಜ್ ಬಳಸುತ್ತಿದ್ದರು ಆಗ ಅವರು ನನಗೆ ನಮ್ಮ ಸಂಸ್ಥೆಗೆ ನಾನ್ ವೆಜ್ ರೆಸ್ಟೋರೆಂಟ್ ಅವಶ್ಯ ಅನ್ನುವುದು ವಿವರಿಸಿದ್ದರು.
ಯಶಸ್ವೀ ಉದ್ಧಿಮೆದಾರರಾದ ಇವರು ಇವರದ್ದೇ ಸ್ವಂತ ಹೋಟೆಲ್ ಹೊಂದಿದ್ದಾರೆ ಆದ್ದರಿಂದಲೇ ನಾನು ಪ್ರತ್ಯೇಕ ನಾನ್ ವೆಜ್ ಹೋಟೆಲ್ 2015 ರ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಬಿಸಿದೆ ಅದಕ್ಕೆ ಚಂಪಕಾ ಪ್ಯಾರಾಡೈಸ್ ಎಂದು ನಾಮಕರಣ ಮಾಡಿದೆ ಅಲ್ಲಿಗೆ ಸಿಗ್ನೇಚರ್ ಡಿಶ್ ಮಟಕಾ ದಮ್ ಬಿರಿಯಾನಿ ಪ್ರಸಿದ್ಧವಾಯಿತು ಕೊರಾನಾ ಕಾಲದಲ್ಲಿ ನಿಂತಿದ್ದ ಚಂಪಕಾ ಪ್ಯಾರಾಡೈಸ್ ಈಗ ಪುನಃ ಪ್ರಾರಂಭವಾಗಿದೆ.
ಇವತ್ತು ಫೇಸ್ ಬುಕ್ 2015ರ ಜುಲೈ 29ರಂದು ಪಿರಮಿಡ್ ನಟರಾಜ್ ಮತ್ತು ವೆಂಕಟ್ ಜೊತೆ ನಮ್ಮ ಕಾಟೇಜ್ ಎದರು ನಾನು ತೆಗೆಸಿಕೊಂಡ ಪೋಟೋ ಆ ದಿನದ ನೆನಪು ಮಾಡಿಸಿತು.
Comments
Post a Comment