Blog number 1659. ನಮ್ಮ ಊರಿನ ಯುವಕರಿಗೆ ರೋಲ್ ಮಾಡೆಲ್ ಆದ ಬೆಂಗಳೂರಿನ ಜೆಪಿ ನಗರದ ಮಲ್ನಾಡ್ ಎಂಟರ್ಪ್ರೈಸೆಸ್ ಎಂಬ ಯಶಸ್ವಿ ಇವೆಂಟ್ ಮ್ಯಾನೆಜ್ಮೆಂಟ್ ಸಂಸ್ಥೆ ಮಾಲಿಕ ಜಾಹೀರುಲ್ಲಾ.
https://youtu.be/7Tn_M0cUlKA
#ಪ್ರತಿಯೊಬ್ಬ_ಪುರುಷನಲ್ಲೂ_ಜೀವನದ_ಗುರಿ_ಇದೆ.
#ಕಲ್ಲು_ಮುಳ್ಳಿನ_ಹಾದಿ_ಸವೆಸಿ_ಗುರಿ_ತಲುಪಬೇಕು
#ಇದೊಂದು_ತಪಸ್ಸು_ಪ್ರಯತ್ನಿಸಿದರೆ_ಅಸಾಧ್ಯವಲ್ಲ
#ನಮ್ಮ_ಮುರುಘಾಮಠದ_ಜಾಹೀರ್_ನಮ್ಮ_ರೋಲ್_ಮಾಡೆಲ್.
#ಬೆಂಗಳೂರಿನ_ಜೆಪಿ_ನಗರದ_ಇವರ_ಮಲ್ನಾಡ್_ಎಂಟರ್ಪ್ರೈಸೆಸ್_ಈಗ_ಯಶಸ್ವಿ_ಇವೆ೦ಟ್_ಮ್ಯಾನೇಜ್ಮೆಂಟ್_ಸಂಸ್ಥೆ.
ನಮ್ಮ ಊರಿನ ಸಮೀಪದ ಮುರುಘಾಮಠದ ಶೇಖ್ ಇಮಾಮುದ್ದೀನ್ ಸಾಹೇಬರು ನನ್ನ ತಂದೆ ಗೆಳೆಯರು ಮತ್ತು ಕೃಷಿಕರು ಇವರಿಗೆ ಮೂವರು ಗಂಡು ಮಕ್ಕಳು ಅವರಲ್ಲಿ ದೊಡ್ಡ ಮಗ ಜಾಹೀರ್ ಆನಂದಪುರಂನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿ ನಂತರ ಉದ್ಯೋಗ ಹುಡುಕಿ ಬೆಂಗಳೂರು ತಲುಪಿದವರು.
ಈಗ ಬೆಂಗಳೂರಿನ ಜೆಪಿ ನಗರದಲ್ಲಿರುವ ಇವರ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಮಲ್ನಾಡ್ ಎಂಟರ್ಪ್ರೈಸೆಸ್ ತುಂಬಾ ಪ್ರಸಿದ್ದಿ ಪಡೆದಿದೆ ಅದು ಕಾರ್ಪೋರೆಟ್ ಕಂಪೆನಿಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದೆ.
ಬೆಂಗಳೂರಿನಂತ ರಾಜದಾನಿಯಲ್ಲಿ ಇವತ್ತಿನ ಡೆಕೋರೇಷನ್ ನಾಳೆಗೆ ಇರುವುದಿಲ್ಲ ಸ್ಪರ್ಧಾತ್ಮಕ ಜಗತ್ತಿನ ವೇಗದಲ್ಲಿ ಅದಕ್ಕೆ ಹೊಂದಿಕೊಂಡು ತಮ್ಮ ಸಂಸ್ಥೆ ಯಶಸ್ವಿಯಾಗಿ ನಡೆಸುತ್ತಿರುವ ಜಾಹೀರ್ ಬಗ್ಗೆ ಬೆಂಗಳೂರಿಗೆ ಹೋಗಿ ಬಂದವರೆಲ್ಲ ಅವರನ್ನು ಶ್ಲಾಘಿಸುತ್ತಾರೆ.
ಮೊನ್ನೆ ಭಾನುವಾರ (9- ಜುಲೈ -2023) ದಂದು ಅವರ ಸಹೋದರನ ಪುತ್ರಿಯ ನಿಖಾ ನಮ್ಮ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆಗೊಳಿಸಿದ್ದರು ವಿವಾಹಾ ನಂತರ ಅವರ ಜೊತೆ ಮಾತಾಡಿದ ವಿಡಿಯೋ ಇಲ್ಲಿದೆ.
Comments
Post a Comment