https://youtu.be/5eXkuL1CdMs
#ಸುದ್ದಿವಾಹಿನಿ_ಸುದ್ದಿಗಳು_ಮು೦ದಿನ_ಗಂಡಾಂತರ_ತೆರೆದಿಡುತ್ತಿದೆ.
#ಪಶ್ಚಿಮಘಟ್ಟಗಳ_ಜನವಸತಿ_ಪ್ರದೇಶದಲ್ಲಿ_ಅವರಿಸಿರುವ_ಗಾಂಜಾ_ಗಮಲು.
#ಪ್ರಾರಂಭದಲ್ಲಿ_ಗಾಂಜಾ_ಬೆಳೆಯುತ್ತಿದ್ದರು_ಆಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಇರಲಿಲ್ಲ
#ಈಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಹೆಚ್ಚಾಗಿದ್ದಾರೆ_ಗಾಂಜಾ_ಬೆಳೆಯುವವರು_ಕಡಿಮೆ_ಆಗಿದ್ದಾರೆ.
#ಬೇರೆ_ಕಡೆಯಿಂದ_ಗಾಂಜಾ_ಇಲ್ಲಿ_ಮಾರಾಟ_ಆಗುತ್ತದೆ.
#ಅಮಲು_ಪದಾರ್ಥದ_ಮೇಲಿನ_ಸದ್ಬಾವನೆ_ನಂತರದ_ಪಲಾನುಭವಿ_ಆ_ಕುಟುಂಬದವರೆ_ಆಗುವ_ವಿಪರ್ಯಾಸ.
#ಇದು_ಎಲ್ಲಾ_ನಮ್ಮ_ಪಶ್ಚಿಮಘಟ್ಟದ_ಹಳ್ಳಿ_ಕಥೆ
ಪಶ್ಚಿಮ ಘಟ್ಟಗಳ ಹಳ್ಳಿಗಳಲ್ಲಿ ವಾಡಿಕೆ ಮಳೆ ಕಡಿಮೆ ಆದಾಗ ಹತ್ತಿ ಮತ್ತು ಜೋಳದ ಕೃಷಿ ಪ್ರಾರಂಭವಾಯಿತು ಅದರ ಮಧ್ಯ ಗಾಂಜಾ ಬೆಳೆ ಸೇರಿಕೊಂಡಿತು, ಮೊದಲಿಗೆ ಮನೆಯ ಹೆಣ್ಣು ಮಕ್ಕಳು ವಾಷಿ೯ಕ ಒಂದು 50 ಸಾವಿರ ಆದಾಯ ಪಡೆಯಲು ಪ್ರಾರಂಬಿಸಿದರು ನಂತರ ಇದಕ್ಕೆ ದೊಡ್ಡ ಮಾರುಕಟ್ಟೆಯೇ ಸೃಷ್ಟಿ ಆಯಿತು.
ಉತ್ತರ ಭಾರತದಿಂದ ಹಳ್ಳಿಗಳಿಗೆ ದಲ್ಲಾಳರು ಬಂದರು ಬೀಜ, ಮುಂಗಡ ನೀಡಿದರು ಮತ್ತು ಅವರೇ ಖರೀದಿ ಮಾಡಲು ಶುರು ಮಾಡಿದರು. ಬೇರೆಯವರಿಗೆ ಅನುಮಾನ ಬರಬಾರೆದೆಂದು ಬೆಡ್ ಶೀಟ್, ಬಟ್ಟೆ ವ್ಯಾಪಾರಿಗಳಾಗಿ ಸಂವಹನ ಶುರು ಮಾಡಿದರು.
ಒಬ್ಬರ ನೋಡಿ ಎಲ್ಲರೂ ಗಾಂಜಾ ಕೃಷಿಕರಾದರು ವಾಷಿ೯ಕ ಆದಾಯ ಕೆಲ ಲಕ್ಷಗಳಾಯಿತು, ಮನೆ, ಬೈಕ್, ಕಾರುಗಳು ಬಂತು ಜನಪ್ರತಿನಿಧಿಗಳು ಇವರ ಮನೆಗೆ ಬರಲು ಪ್ರಾರಂಭಿಸಿದರು ಎಲ್ಲೋ ಒಂದು ಕಡೆ ಸಿಕ್ಕಿಬಿದ್ದರೆ ಊರವರೆಲ್ಲ ಸೇರಿ ರಾಜಿ ಮಾಡಿ ಬಿಡಿಸಲು ಪ್ರಾರಂಭಿಸಿದರು ಅದಿಕಾರದಲ್ಲಿನ ರಾಜಕಾರಣಿಗಳು ಸಹಕರಿಸಿದರು.
ಹಳ್ಳಿಯ ಮಕ್ಕಳಿಗೆ ಕಾನ್ವೆ೦ಟ್ ಶಾಲೆಗೆ ಸೇರಿಸುವ ಮತ್ತು ಅವರನ್ನ ನಿತ್ಯ ಬರುವ ಶಾಲಾ ವಾಹನದಲ್ಲಿ ಕಳಿಸುವ ಶೋಕಿ ಪ್ರಾರ೦ಭವಾಯಿತು ಮುಂದೆ ಹೆಚ್ಚಿನ ಶಿಕ್ಷಣಕ್ಕೆ ದೂರದ ದುಭಾರಿ ವಸತಿ ಶಾಲೆಗಳಿಗೆ ಸೇರಿಸಿದರು.
ಎಲ್ಲಾ ಸುಖಾಂತ್ಯದಲ್ಲಿ ಆಗಲಿಲ್ಲ ಮಗು ಈಗ ಡ್ರಗ್ ವ್ಯಸನಿ, ಅಲ್ಲಿ ಗಾಂಜಾದಿಂದ ಪ್ರಾರಂಭವಾಗಿ ಈಗ ಬಹಳ ಮುಂದುವರಿದಿದ್ದಾನೆ, ಇನ್ನು ಕೆಲವರ ಮಕ್ಕಳು ಗಾಂಜಾ ವ್ಯಾಪಾರವನ್ನೆ ಪ್ರಾರಂಭಿಸಿದ್ದಾರೆ.
ಆದರೆ ಯಾರಿಗೂ ಇನ್ನು ಗೊತ್ತಾಗುತ್ತಿಲ್ಲ ಇದರ ಸಮಸ್ಯೆ ಎಲ್ಲಿಂದ ಶುರುವಾಯಿತು ಅಂತ, ಪತ್ರಿಕೆಗಳು ಪೋಲಿಸರು ಕ್ರಮ ಕೈಗೊಳ್ಳಬೇಕು ಅಂತ ಬರೆಯುತ್ತೆ, ಸದನದಲ್ಲಿ ಮಂತ್ರಿ ಉಡ್ತಾ ಕನಾ೯ಟಕ ಆಗಲು ಬಿಡುವುದಿಲ್ಲ ಎನ್ನುವ ಹೇಳಿಕೆ TV ಗಳಲ್ಲಿ ಹಾರಿದೆ.
ನಮ್ಮ ಹಳ್ಳಿಯ ಗಾಂಜಾ ಮಾರುಕಟ್ಟೆಯ ಬೇರು ಉತ್ತರ ಬಾರತದಿಂದ, ನೇಪಾಳ, ಪಾಕಿಸ್ತಾನಕ್ಕೆ ಹರಡಿದ್ದು ಈ ಗಾಂಜಾ ಭಟ್ಟಿ ಇಳಿಸಿ ತೆಗೆಯುವ ಒಂದು ರಾಸಾಯನಿಕ ಇನ್ನಾವುದೊ ದೊಡ್ಡ ಅಮಲು ಪದಾಥ೯ಕ್ಕೆ ಕಚ್ಚಾ ವಸ್ತು ಎಂಬ ವದಂತಿಯ ಸತ್ಯಾಸತ್ಯತೆಗೊತ್ತಿಲ್ಲ.
10 ವಷ೯ದ ಹಿಂದೆಯೆ ಅಂತರಾಷ್ಟ್ರಿಯ ಮಟ್ಟದಲ್ಲಿ ನಮ್ಮ ಊರು ಗಾಂಜಾ ಮಾರುಕಟ್ಟೆಯಲ್ಲಿ ಹೆಸರಾಗಿದೆ ಅಂದಾಗ ಯಾರೂ ನಂಬಲಿಲ್ಲ.
ವಷ೯ ವರ್ಷ ಪಸಲು ಕೂಡ ನಿಸ್ತಾರವಾಗಿ ಬೆಳೆದು ನಿಲ್ಲಲಿದೆ ನಮ್ಮ ಲಾಭದ ಬೆಳೆ ಮುಂದಿನ ಜನಾಂಗವನ್ನ ಏನು ಮಾಡಲಿದೆ ಎಂಬ ಸತ್ಯ ಮರೆಮಾಚಿ ಮುಂದುವರಿದಿದೆ.
ಇದು ನಮ್ಮ ಹಳ್ಳಿಯ ದುರಂತದ ಕಥೆ ಮತ್ತು ವ್ಯಥೆ.
Comments
Post a Comment