Blog number 1666. ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರ ಆಗಿದೆ ಎಂಬ ಅಪಪ್ರಚಾರ ನಿವಾರಣೆ ಆಗಬೇಕಾಗಿದೆ ಹಾಗಾದರೆ ಅಕ್ಕಿ ರೂಪದ ಈ ಕೃತಕ ಅಕ್ಕಿ ಯಾವುದು?
#ಪಡಿತರ_ಅಕ್ಕಿಯಲ್ಲಿ_ಪ್ಲಾಸ್ಟಿಕ್_ಅಕ್ಕಿ_ಮಿಶ್ರಣ_ಎಂಬ_ತಪ್ಪು_ಮಾಹಿತಿ
#ಹಾಗಾದರೆ_ಪಡಿತರ_ಅಕ್ಕಿಯಲ್ಲಿ_ಅಕ್ಕಿ_ಆಕೃತಿಯ_ವಸ್ತು_ಯಾವುದು?
#ಇದು_ಬಡತನ_ರೇಖೆಗಿಂತ_ಕೆಳಗಿನ_ವರ್ಗದವರಿಗೆ_ರಕ್ತಹೀನತೆ_ನಿವಾರಿಸಲು_ಕೇಂದ್ರ_ಸರ್ಕಾರದ_ಬಲವರ್ದಿತ_ಅಕ್ಕಿ
#FRK_Fortified_Rice_Kernel.
ಎಲ್ಲಾ ದೇಶದ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಹೆಚ್ಚು ಶಕ್ತಿ ನೀಡುವ, ಹಸಿವು ನೀಗಿಸುವ ಸಲುವಾಗಿ ಅನೇಕ ಕಾರ್ಯಕಮ ಹಮ್ಮಿಕೊಳ್ಳುತ್ತದೆ ಅದರಂತೆ ನಮ್ಮ ದೇಶದಲ್ಲಿ 2023ರ ಮಾರ್ಚ್ ಅಂತ್ಯದಲ್ಲಿ 291 ಜಿಲ್ಲೆಗಳಲ್ಲಿ ಪಡಿತರ ಅಕ್ಕಿ ಮತ್ತು ಗೋದಿಯಲ್ಲಿ ನಿಗದಿತ ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ, ಪೋಲಿಕ್ ಆಮ್ಲ ಮತ್ತು ವಿಟಮಿನ್ ಬಿ- 12 ಬಲವರ್ದಿತ (ಇಂಗ್ಲಿಷ್ ನಲ್ಲಿ Fortified) ಮಿಶ್ರಣದ ಪುಡಿ ಮಿಶ್ರ ಮಾಡಿ ವಿತರಿಸುತ್ತಿದೆ ಈ ಮೂಲಕ ಬಡವರಲ್ಲಿ ರಕ್ತ ಹೀನತೆ ನಿವಾರಿಸುವ ಯೋಜನೆ ಭಾರತ ಸರ್ಕಾರದ್ದು.
ಸಾರ್ವಜನಿಕರಲ್ಲಿ ಇದು ಪಡಿತರ ಅಕ್ಕಿ ಮತ್ತು ಗೋದಿ ಹಾಳಾಗದಂತೆ ಮಿಶ್ರ ಮಾಡಿದ ಕೀಟನಾಶಕ ಪ್ರಡಿ ಎಂಬ ಅಪಪ್ರಚಾರವಾಗಿತ್ತು.
ಇದರಿಂದ ಅಕ್ಕಿ ಗೋದಿ ಚೆನ್ನಾಗಿ ತೊಳೆದು ಬೇಯಿಸುವುದರಿಂದ ಬಲವರ್ದಿತ ಪುಡಿ ಜನರ ದೇಹ ಸೇರದೆ ಗಟಾರಕ್ಕೆ ಹರಿದು ಹೋಗಿರುವುದರಿಂದ (ಭಾರತೀಯರು ಅಕ್ಕಿ ತೊಳೆಯದೆ ಅನ್ನ ಮಾಡುವುದಿಲ್ಲ) ಸರ್ಕಾರ ಪಡಿತರ ಅಕ್ಕಿ ಉತ್ಪಾದನೆಯಲ್ಲಿ ಬರುವ ನುಚ್ಚು (Broken Rice) ಹಿಟ್ಟು ಮಾಡಿ ಅದಕ್ಕೆ ವಿಟಮಿನ್ ಮತ್ತು ಖನಿಜಗಳ ಪ್ರಿಮಿಕ್ಸ್ ಅನ್ನು ಸೇರಿಸಿ ಅಕ್ಕಿ ಧಾನ್ಯ ಹೋಲುವ ಬಲವರ್ದಿ ತ ಅಕ್ಕಿ ಕಾಳು (FRK) ಉತ್ಪಾದಿಸಲು ಎಕ್ಸ್ ಟ್ರೂಡರ್ ಯಂತ್ರ ಬಳಸಲಾಗುತ್ತಿದೆ.
ಕೃತಕ ಅಕ್ಕಿಯಂತೆ ಕಾಣುವ ಈ ಬಲವರ್ದಿತ ಒಂದು ಕಿಲೋ ಅಕ್ಕಿಯಲ್ಲಿ 28 mg ಯಿಂದ 42.5 mg ಕಬ್ಬಿಣಾಂಶ, 75 mg ಯಿಂದ 125 mg ಪೋಲಿಕ್ ಆಮ್ಲ, 0.75 mg ಯಿಂದ 1.25 mg ವಿಟಮಿನ್ B - 12 ಇರುತ್ತದೆ ಇಂತಹ ಒಂದು ಕಿಲೋ ಅಕ್ಕಿ ನೂರು ಕಿಲೋ ಅಕ್ಕಿಗೆ ಮಿಶ್ರ ಮಾಡಿ ಪಡಿತರ ವ್ಯವಸ್ಥೆಯಲ್ಲಿ ವಿತರಿಸುತ್ತಿದ್ದಾರೆ.
ಪಡಿತರ ಅಕ್ಕಿಯಲ್ಲಿ ಮಿಶ್ರಣ ಮಾಡುವ ಈ ಅಕ್ಕಿ ಬಗ್ಗೆ ಅಪನಂಬಿಕೆ ಉಂಟಾಗಿ ಇದು ಪ್ಲಾಸ್ಟಿಕ್ ಅಕ್ಕಿ ಎಂಬ ಅಪಪ್ರಚಾರವೂ ಪ್ರಾರಂಭ ಆಗಿದೆ.
ಪಡಿತರ ಅಕ್ಕಿ ವಿತರಣೆಯ ಸೆಣಬಿನ ಚೀಲದ ಮೇಲೆ ('+ F ' ) ಎಂಬ ಲೋಗೋ ಮತ್ತು fortified with Iron,Folic Acid and Vitamin B12 ಅಂತ ನಮೂದಿಸಿರುತ್ತಾರೆ.
ಸಾರ್ವಜನಿಕರಲ್ಲಿ ಈ ಮಾಹಿತಿ ಹೆಚ್ಚು ಪ್ರಚಾರ ನೀಡಬೇಕಾಗಿದೆ ಈ ಮೂಲಕ ಸರ್ಕಾರದ ಬಡ ಜನರ ರಕ್ತ ಹೀನತೆ ನಿವಾರಿಸುವ ಈ ಬಲವರ್ದಿತ ಅಕ್ಕಿ ರೂಪದ ಪಾರ್ಟಿಪೈಡ್ ರೈಸ್ ಕಾರ್ನಿಲ್ ಗಳನ್ನು ಪ್ಲಾಸ್ಟಿಕ್ ಅಕ್ಕಿ ಎಂದು ತಪ್ಪು ತಿಳಿಯ ಬಾರದೆಂದು ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ.
Comments
Post a Comment