ಹಳ್ಳಿಯನ್ನ ಕೇಂದ್ರ ಮಾಡಿಕೊಂಡು ತಮ್ಮ ಸಂಸ್ಥೆಯ ವಾಹನದಲ್ಲಿ ಪ್ರಯಾಣ ಮಾಡುವ ಗ್ರಾಹಕರ ಸುರಕ್ಷಿತ ಮತ್ತು ಸುಖಕರ ಪ್ರಯಾಣಕ್ಕೆ ಹೆಸರುವಾಸಿಯಾದ ಶಿವಮೊಗ್ಗ ಜಿಲ್ಲೆ ಹೊಸನಗರದ ರಿಪ್ಪನ್ ಪೇಟೆ ಶಿವಕುಮಾರ್ ಯಶಸ್ವಿ ಟೂರ್ಸ್ & ಟ್ರಾವೆಲ್ಸ್ ನ ಕಥನ
ಕೊರಾನಾ ಸಮಯದಲ್ಲಿ ಇಂತಹ ಪ್ರವಾಸಿ ವಾಹನ ಮಾತ್ರ ಸೂಕ್ತ ಕೊರಾನಾ ವೈರಸ್ ಹರಡುವ ಈ ದಿನದಲ್ಲಿ ಟ್ಯಾಕ್ಸಿ ಮತ್ತು ಬಸ್ ಗಳ ಪ್ರಯಾಣ ತುಂಬಾ ಅಪಾಯಕಾರಿ ಯಾಕೆಂದರೆ ವಾಹನ ಮಾಲಿಕರು ಸೋಪಿನಿಂದ ಕಾರಿನ ಹೊರಭಾಗ ತೊಳೆಯುತ್ತಾರೆ ಆದರೆ ದೀಘ೯ ಪ್ರಯಾಣ ಮಾಡಿದ ಒಳಬಾಗದ ಸೀಟ್ ಗಳು, ಡೋರ್ ಮತ್ತು ಒಳ ಮೇಲ್ಚಾವಣೆಗಳು ತೊಳೆಯಲು ಸಾಧ್ಯವಿಲ್ಲ ಆದರೆ ಅದನ್ನು ಡಿಸ್ ಇನ್ಪೆಕ್ಟ್ (ಸೊಂಕು ರಹಿತ) ಮಾಡ ಬಹುದು. ಆದರೆ ಇದನ್ನ ಎಷ್ಟು ಜನ ಟ್ಯಾಕ್ಸಿ ಮಾಲಿಕರು ಮಾಡುತ್ತಾರೆ ಅಂತ ವಿಚಾರಿಸಿದರೆ ನಿಜಕ್ಕೂ ನಿರಾಶೆ ಆಗುತ್ತದೆ. ಬಹಳ ಜನ ಟ್ಯಾಕ್ಸಿ ಮಾಲಿಕರು ಪ್ರತಿ ಟ್ರಿಪ್ ಹೋಗಿ ಬಂದ ಮೇಲೆ ತೊಳೆಯುತ್ತೇವೆ ಎನ್ನುತ್ತಾರೆ, ಒಳ ಭಾಗ ಹೇಗೆ ಅಂದರೆ ಸ್ಯಾನಿಟೈಸರ್ ಇಟ್ಟಿರುತ್ತೇವೆ ಅನ್ನುತ್ತಾರೆ ಆದರೆ ಇದು ಅನಾಹುತಕಾರಿ, ಆರೋಗ್ಯವಂತ ಪ್ರಯಾಣಿಕ ಇಂತಹ ಟ್ಯಾಕ್ಸಿ ಅಥವ ಬಸ್ಸಿನಲ್ಲಿ ಪ್ರಯಾಣ ಮಾಡಿದರೆ (ಮೊದಲು ಯಾರಾದರ ರೋಗ ಪೀಡಿತರು ಪ್ರಯಾಣಿಸಿದ್ದರೆ) ಮಾತ್ರ ಕೊರಾನಾ ರೋಗ ಪೀಡಿತರಾಗುವುದರಲ್ಲಿ ಅನುಮಾನ ಇಲ್ಲ. ಆರೋಗ್ಯ ಇಲಾಖೆ ದೃಡೀಕರಿಸಿದ ಪ್ರಕಾರ ಸೋಡಿಯಂ ಹೈಪೋಕ್ಲೋರೈಡ್ 1ರಿಂದ 2 ಶೇ. ಮಿಶ್ರಣ ದ್ರವ ಸಿಂಪರಣೆ ಮಾಡಬೇಕು ಅದು ಅದುನಿಕ ಕೋಲ್ಡ್ ಪಾಗರ್ ನಿಂದ ಸಿಂಪರಣೆ ಮಾಡಿದರೆ ಡಿಸ್ ಇನ್ಪೆಕ್ಟ್ 100% ಗ್ಯಾರಂಟಿ. ಇದನ್ನು ಪ್ರತಿ ಬಸ್ ನವರೂ ಮಾಡಬೇಕು ಆದರೆ ಮಾಡುವವರು ತುಂಬ...