Skip to main content

Posts

Showing posts from January, 2022

ಊಟ ಮಾಡಿ ಕಳಿಸಲು ಶ್ರೀದರ ಸ್ವಾಮಿಗಳು ಚೀಟಿ ಕೊಡುತ್ತಾರೆ ಆದರೆ ಅಲ್ಲಿ ಊಟ ಮುಗಿದು ಖಾಲಿ ಪಾತ್ರೆ ತೊಳೆದಿಟ್ಟಿರುತ್ತಾರೆ ಆದರೆ ಆ ಪಾತ್ರೆಯಲ್ಲಿ ಅಣ್ಣಪ್ಪ ಆಚಾರರ ಊಟ ಇರುತ್ತದೆ!!

#ಯಡಜಿಗಳೆಮನೆ_ಅಣ್ಣಪ್ಪ_ಆಚಾರ್_ಎಂಬ_ಸಜ್ಜನರು. #ವರದಳ್ಳಿ_ಶ್ರೀಧರ_ಸ್ಟಾಮಿಗಳ_ಅನುಯಾಯಿ. #ತಪಸ್ಸಾಚರಿಸುತ್ತಿದ್ದಾಗ_ಚಾವಣಿ_ದುರಸ್ತಿಗೆ_ಇವರನ್ನು_ಕರೆಸಿಕೊಂಡಿದ್ದರು. #ತೊಳೆದು_ತಂದಿಟ್ಟ_ಮದ್ಯಾಹ್ನದ_ಖಾಲಿ_ಅಡುಗೆ_ಪಾತ್ರೆಯಲ್ಲಿತ್ತು_ಅಣ್ಣಪ್ಪಆಚಾರರ_ಊಟ    2007 ರಲ್ಲಿ ನನ್ನ ತಂದೆ ಎಸ್.ಕೃಷ್ಣಪ್ಪ ಮತ್ತು ನನ್ನ ತಾಯಿ ಸರಸಮ್ಮ (ಸರಸ್ವತಿ) ಇವರ ಸ್ಮರಣಾರ್ಥ ನಿಮಿ೯ಸುತ್ತಿದ್ದ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನ ಮುಖ್ಯದ್ವಾರದ ಹಲಸಿನ ಮರದ ಬಾಗಿಲು ಮತ್ತು ಶೌಚಾಲಯ - ಸ್ನಾನ ಗೃಹಕ್ಕೆ ಮಾತ್ರ ಮರ ಬಳಕೆ ಮಾಡಿದ್ದೆ.   ಈ ಮರದ ಕೆಲಸ ಯಡಜಿಗಳೆ ಮನೆಯ ನರಸಿಂಹ ವಹಿಸಿಕೊಂಡಿದ್ದರು ಅವರ ಜೊತೆ ಕೆಲಸಕ್ಕೆ ಬಂದವರೆ ವಯೋವೃದ್ದರಾದ ಅಣ್ಣಪ್ಪ ಆಚಾರರು.   ನರಸಿಂಹ ಅವರು ಈ ಹಿರಿಯರನ್ನು ತುಂಬಾ ಗೌರವದಿಂದ ನೋಡಿಕೊಳ್ಳುತ್ತಿದ್ದರು ತಮ್ಮ ಗುರು ಅಂತಲೇ ಕರೆಯುತ್ತಿದ್ದರು.  ಅಣ್ಣಪ್ಪ ಆಚಾರರು ಮಾಡಿದ ಹೆಂಚಿನ ಮಾಡು ನೋಡಿದ ಸ್ಥಳಿಯ ಆಚಾರರೆಲ್ಲ ತಮ್ಮ ಶಹಬಾಷ್ ವ್ಯಕ್ತಪಡಿಸಿದ್ದರು ಯಾಕೆಂದರೆ ಆ ಕೆಲಸದ ಪರ್ಪೆಕ್ಷನ್ ಹಾಗಿದೆ.   ಆಗ ನಿತ್ಯ ಒಡನಾಟದಲ್ಲಿ ಅಣ್ಣಪ್ಪಾಚಾರ್ ಅನೇಕ ಅವರ ಜೀವನದ ಅನುಭವ ಹೇಳುತ್ತಿದ್ದರು ನನಗೆ ಅದೆಲ್ಲ ಕೇಳುವ ಆಸಕ್ತಿ.   ಆಗ ವರದಳ್ಳಿಯ ಶ್ರೀದರ ಸ್ವಾಮಿಗಳ ಆಶ್ರಮ ಈಗಿನಂತೆ ಭವ್ಯ ಆಗಿರಲಿಲ್ಲ ಆದರೆ ಶ್ರೀಧರ ಸ್ವಾಮಿಗಳು ಜೀವಂತ ವಾಗಿದ್ದರಿಂದ ಅಲ್ಲಿನ ಪರಿಸರವೇ ಬೇರೆ ರೀತಿ ಕಾಣುತ್ತಿತ್ತಂತೆ ಅಷ್ಟು ಭಕ್ತಿಯ ಲಯ

ಜಾರ್ಜ್ ಪನಾ೯೦ಡೀಸ್ ನೆನಪುಗಳು ಭಾಗ-1, ಜಾರ್ಜ್ ಫರ್ನಾಂಡೀಸ್ ಮತ್ತು ಕೇರಳದ ಯುವಕನ ಗೃಹ ಕೈಗಾರಿಕೆಯ ಸೋಪಿನ ಪುಡಿ ಕಥೆ

# ವಿಶಿಷ್ಟ ವ್ಯಕ್ತಿತ್ವದ ಜಾಜ್೯(1) #     ಕೇರಳ ರಾಜ್ಯದ ಯುವಕ 200O ಇಸವಿಯಿಂದ ಸೋಪಿನ ಪುಡಿಯ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕಾಗಿ ಎಲ್ಲಾ ಬ್ಯಾಂಕ್‌ಗಳಿಗೆ ಅಲೆದಾಡಿ ಸುಸ್ತಾಗಿದ್ದ.   ಸಮತಾ ಪಾಟಿ೯ಯ ಕಾಯ೯ಕತ೯ನಾಗಿದ್ದ ಆತ ಒಮ್ಮೆ ದೆಹಲಿಯಲ್ಲಿ ಸಾಲ ಕೊಡಿಸಿ ಅಂತ ಜಾಜ್೯ರಿಗೆ ಮನವಿ ನೀಡಿದ್ದ.   ಜಾಜ್೯ ಯಾವುದೋ ಬ್ಯಾಂಕ್ ಒಂದರ ಚೇಮ೯ನರಿಗೆ ಶಿಪಾರಸ್ಸು ಮಾಡಿದ್ದರಿಂದ ಆ ಯುವಕ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿ ಆದನು, ಇದಕ್ಕೆ ಸಹಾಯ ಮಾಡಿದ ಜಾಜ್೯ರಿಗೆ ಒಂದು ಕೃಜ್ಞತೆ ಪತ್ರ ಅದರ ಜೊತೆ ಅವನು ತಯಾರಿಸುವ ಒಂದು ಸೋಪಿನ ಪುಡಿ ಪೊಟ್ಟಣ ಮಾದರಿ ತೋರಿಸಲು ಕಳಿಸಿದ್ದ.   ಕೆಲವು ದಿನದ ನಂತರ ಆ ಯುವಕನಿಗೆ ದೇಶದ ಪ್ರತಿಷ್ಠಿತ ಪಂಚತಾರ ಹೋಟೆಲ್ ಆದ ಲಲಿತಾ ಪ್ಯಾಲೇಸ್ ನಿಂದ ಪ್ರತಿ ತಿಂಗಳು 6 ಟನ್ ಸೋಪಿನ ಪುಡಿಯ ಆಡ೯ರ್ ಅಂಚೆಯಲ್ಲಿ ಬಂದಾಗ ಯುವ ಉದ್ಯಮಿ ತಬ್ಬಿಬ್ಬಾಗಿದ್ದ.    ವಾಸ್ತವ ಏನಾಗಿತ್ತೆ೦ದರೆ, ಆ ಯುವಕ ಕಳಿಸಿದ ಸೋಪಿನ ಪುಡಿಯನ್ನ ಸ್ವತಃ ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುವ ರಕ್ಷಣಾ ಸಚಿವರು ಬಳಸಿದಾಗ ಅವರಿಗೆ ಆ ಸೋಪಿನ ಪುಡಿಯ ಕಾಯ೯ಕ್ಷಮತೆ ಹಿಡಿಸಿತು ಹಾಗಾಗಿ ಅವರು ಲಲಿತಾ ಪ್ಯಾಲೇಸ್ ನ ಮಾಲಿಕರಾದ ನಿವೃತ್ತ ಕನ೯ಲ್ ರಿಗೆ ಪತ್ರ ಬರೆದು "ಈ ಸೋಪಿನ ಪುಡಿ ನಾನು ಸ್ವತಃ ಬಳಸಿ ನೋಡಿದ್ದೇನೆ ಉತ್ತಮವಾಗಿದೆ ಹಾಗಾಗಿ ಹೊಸದಾಗಿ ಉದ್ಯಮ ಸ್ಥಾಪನೆ ಮಾಡಿರುವ ಕೇರಳದ ಯುವಕನಿಗೆ ನಿಮ್ಮ ಸಂಸ್ಥೆಗೆ ಬೇಕಾದ ಸೋಪಿನ ಪುಡಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ಥಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಂದೂರಿನಲ್ಲಿ ಸುಮಾರು ಒಂದು ಶತಮಾನದ ಹಿಂದೆ ಕೆನತ್ ಆಂಡರ್ಸನ್ ನರಭಕ್ಷಕ ಸಂಹರಿಸಿದ ಕಾರಣಕ್ಕಾಗಿ ಬೆಳಂದೂರು ಗುಡ್ಡದಲ್ಲಿ ಒಂದು ಹುಲಿಯ ಶಿಲಾವಿಗ್ರಹವಿದೆ.

#ಶಿವಮೊಗ್ಗದ ಪತ್ರಕತ೯ರ ಗು೦ಪಿನಲ್ಲಿ ತೇಜಸ್ವಿ ಅವರ ಬೆಳOದೂರಿನ ನರಭಕ್ಷಕ ಪುಸ್ತಕದ ಜಾಡು ಹುಡುಕಿ ಹೋಗುವ ಪ್ರಸ್ತಾಪ ಆಗಿತ್ತು ಅವರಿಗಾಗಿ ನನ್ನ ಬ್ಲಾಗ್ ನಲ್ಲಿ ಬಹಳ ಹಿಂದೆ ಬರೆದ ಲೇಖನ ಇಲ್ಲಿದೆ.#    ತೇಜಸ್ವಿಯವರನ್ನ ಬೇಟಿ ಆಗಬೇಕೆಂಬ ನನ್ನ ಅಭಿಲಾಷೆ ಅಕಸ್ಮಿಕವಾಗಿ ಮತ್ತು ಅವಿಸ್ಮರಣಿಯವಾಗಿ ಆಗುತ್ತೆ ಅಂತ ಗೊತ್ತಿರಲಿಲ್ಲ, ಅದು ಹೇಗೆ ಆಯಿತು ಅಂದರೆ 2000ನೆ ಇಸವಿಯಲ್ಲಿ ಕುಪ್ಪಳ್ಳಿಯ ಕವಿಶೈಲ ರಾಷ್ಟ್ರಕ್ಕೆ ಅಪಿ೯ಸುವ ಕಾಯ೯ಕ್ರಮ ನಿಗದಿ ಆಗಿತ್ತು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಾವೆಲ್ಲ ವಿಶೇಷ ಆಮಂತ್ರಿತರು ಆದರೆ ಸಾಹಿತ್ಯ ಆಸಕ್ತಿ ಯಾವತ್ತೂ ಕಡಿಮೆ ಇರುವ ನನ್ನ ಜೊತೆಯ ರಾಜಕಾರಣಿ ಸದಸ್ಯರು ಈ ಕಾಯ೯ಕ್ರಮಕ್ಕೆ ಬರಲಿಲ್ಲ.      ಹಿಂದಿನ ದಿನ ಸಾಹಿತಿಗಳಾದ ಕೊಣ0 ದೂರು ವೆಂಕಪ್ಪ ಗೌಡರು ಬೆಂಗಳೂರಿಂದ ಬಂದವರು ಕುವೆ೦ಪು ಮನೆ ಲೋಕಾಪ೯ಣೆ ಕಾಯ೯ಕ್ರಮ ನೋಡಲು ಬಂದೆ, ಕರಕೊಂಡು ಹೋಗಯ್ಯ ಅಂದರು. ಸರಿ ಗೌಡರೆ ಗಣಪತ ಪನವರನ್ನು ಕರಕೊಂಡು ಹೋಗೋಣ ಅಂದೆ.      ಮರುದಿನ ಕಾಗೋಡು ಸತ್ಯಾಗ್ರಹದ ರೂವಾರಿ ಹೆಚ್.ಗಣಪತಿಯಪ್ಪಾ, ಕೋಣಂದೂರು ವೆಂಕಪ್ಪ ಗೌಡರೊಂದಿಗೆ ಕುಪ್ಪಳ್ಳಿಗೆ ಹೋಗಿ ಸಭಾಂಗಣ ಪ್ರದೇಶಕ್ಕೆ ಹೋದೆವು, ಮುಂದಿನ ಸಾಲಿನಲ್ಲಿ ಈ ಇಬ್ಬರು ಹಿರಿಯರನ್ನ ಕುಳ್ಳಿರಿಸಿ ಹಿಂದಿನ ಸಾಲಿನಲ್ಲಿ ಕುಳಿತು ಸಭೆ ನೋಡೋಣ ಅಂತ ಹೊರಟೆ.     ಹಿಂದಿನ ಸಾಲಿನ ಕುಚಿ೯ಯಲ್ಲಿ ಕುಳಿತು ವೇದಿಕೆ ಕಡೆ ನೋಡುತ್ತಾ ಪಕ್ಕದಲ್ಲಿ ಕುಳಿತವರ ಕಡೆ ನೋಡಿ

ಈ ವಷ೯ ನಡೆಯಲಿರುವ ಕೆಳದಿ ಉತ್ಸವದಲ್ಲಿ ಸಾಗರ ಪಟ್ಟಣ - ಗಣಪತಿ ಕೆರೆ ನಿರ್ಮಿಸಿದ್ದ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರ ಸ್ಮರಿಸುವುದು ಮರೆಯದಿರಲಿ, ಇವರ ಸದಾ ಸ್ಮರಣೆಗಾಗಿ ಸಾಗರದ ಪ್ರಮುಖ ಹೆದ್ದಾರಿಗೆ ಇವರ ನಾಮಕರಣವಾಗಲಿ

#ಕೆಳದಿ_ಉತ್ಸವದಲ್ಲಿ_ಸಾಗರ_ಪಟ್ಟಣ_ಕೆರೆ_ನಿರ್ಮಿಸಿದ_ರಾಜ_ವೆಂಕಟಪ್ಪನಾಯಕರ_ಪುನರ್_ಸ್ಮರಣೆ_ಆಗಲಿ #ಸಾಗರ_ಪಟ್ಟಣದ_ಹೆಸರು_ನಾಲ್ಕು_ಶತಮಾನದ_ಹಿಂದೆ_ಸದಾಶಿವಸಾಗರ #ಈಗಿನ_ಗಣಪತಿಕೆರೆಯೆ_ಸದಾಶಿವಸಾಗರ_ಎಂಬ_ಸರೋವರ. #ಸಾಗರ_ಪಟ್ಟಣ_ನಿರ್ಮಿಸಿದ_ರಾಜ_ಹಿರಿಯವೆಂಕಟಪ್ಪನಾಯಕರ_ಒಂದೂ_ಸ್ಮಾರಕ_ಸಾಗರದಲ್ಲಿ_ಇಲ್ಲ #ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ #ಬರೆದ_ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪ_ನಾಯಕ_ಐತಿಹಾಸಿಕ_ಕಾದಂಬರಿ_ಅತ್ಯಂತ_ಮಹತ್ವದ್ದು.   ಈ ವರ್ಷ ಸಾಗರ ತಾಲ್ಲೂಕಿನಲ್ಲಿ #ಕೆಳದಿ_ಉತ್ಸವ ವಿಜೃಂಬಣೆಯಲ್ಲಿ ನಡೆಯಲಿದೆ ಇದಕ್ಕಾಗಿ ರಾಜ್ಯ ಸರ್ಕಾರದಿಂದ 50 ಲಕ್ಷ ಅನುದಾನ ದೊರೆಯುವುದಾಗಿ ಶಾಸಕರಾದ #ಹರತಾಳು_ಹಾಲಪ್ಪನವರು_ ಘೋಷಿಸಿದ್ದಾರೆ, ಈ ಸಂದರ್ಭದಲ್ಲಿ ಇಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಸಂಬಂದ ಪಟ್ಟವರು ಗಣನೆಗೆ ತೆಗೆದುಕೊಂಡು ಕೆಳದಿ ಉತ್ಸವ ಅರ್ಥಪೂರ್ಣವಾಗಿ ಮಾಡಬಹುದಾಗಿದೆ.  ಈಗ ಸಾಗರ ಎಂಬ ನಮ್ಮ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಕೇಂದ್ರ ಸುಮಾರು ನಾಲ್ಕುನೂರು ವರ್ಷದ ಹಿಂದೆ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರು ತಮ್ಮ ಅಜ್ಜ ಸದಾಶಿವ ನಾಯಕರ (ಆಳಿದ ಕಾಲ ಮಾನ 1530 - 1566) ಸ್ಮರಣಾರ್ಥ ಅವರ ಹೆಸರಲ್ಲಿ ಅಂದರೆ #ಸದಾಶಿವಸಾಗರ ಎಂದು ನಾಮಕರಣ ಮಾಡಿ ನಿರ್ಮಿಸಿದ ಆ ಕಾಲದ ಸುಂದರ ಪಟ್ಟಣ ಆಗಿತ್ತು.   ಇದೇ ಹೆಸರಿನ ಸುಂದರ ಸರೋವರ ಗಣಪತಿ ದೇವಸ್ಥಾನದ ಕೆಳಗೆ ನಿಮಿ೯ಸಿದ್ದರು ಕಾಲಾಂತರದಲ

ಕೆಳದಿ ಕುಲ ತಿಲಕ ಹಿರಿಯ ವೆಂಕಟಪ್ಪ ನಾಯಕ ಅಂಬ್ರಯ್ಯ ಮಠರು ಬರೆದ ಐತಿಹಾಸಿಕ ಕಾದಂಬರಿ, ಈಗಿನ ಸಾಗರ ಪಟ್ಟಣ (ಸದಾಶಿವ ಸಾಗರ) ನಿರ್ಮಿಸಿದ ರಾಜ ವೆಂಕಟಪ್ಪ ನಾಯಕರನ್ನು ಸಾಗರ ಪಟ್ಟಣ ವಾಸಿಗಳು ಮರೆತಿದ್ದಾರೆ

#ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ #ಬರೆದ_ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪ_ನಾಯಕ_ಐತಿಹಾಸಿಕ_ಕಾದಂಬರಿ.    ಕೆಳದಿ ರಾಜರಲ್ಲಿ ದೀಘ೯ ಕಾಲದ ಆಡಳಿತ ಮಾಡಿದವರು, ಹೆಚ್ಚು ರಾಜ್ಯ ವಿಸ್ತಾರ ಮಾಡಿದವರು, ಇವತ್ತಿನ ಸಾಗರ ಪಟ್ಟಣ (ಸದಾಶಿವ ಸಾಗರ) ಕಟ್ಟಿದವರು, ಆನಂದಪುರ ಎಂದು ನಾಮಕರಣ, ಚಂಪಕ ಸರಸ್ಸು ನಿಮಿ೯ಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ಕೆಳದಿ ಇತಿಹಾಸದಲ್ಲಿ ಅಗ್ರಶ್ರೇಯಾಂಕದಲ್ಲಿ ಇದ್ದರೂ ರಾಜ ವೆಂಕಟಪ್ಪ ನಾಯಕರನ್ನ ಉದ್ದೇಶ ಪೂವ೯ಕವಾಗಿ ಕಾಣದ ಕೈಗಳು ಬದಿಗೆ ಸರಿಸಲು ಅನೇಕ ಕಾರಣ ಇದೆ.    ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚು ಮಾಹಿತಿ ಸಾವ೯ಜನಿಕರಿಗೆ ಬೇಕಾಗಿದೆ ಇಂತಹ ಒಂದು ಉಪಯುಕ್ತ ಕೆಲಸ ಮಾನ್ಯ ಅಂಬ್ರಯ್ಯ ಮಠ 2012 ರಲ್ಲಿ #ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪನಾಯಕ ಎಂಬ ಐತಿಹಾಸಿಕ ಕಾದಂಬರಿ ಪ್ರಕಟಿಸಿದ್ದಾರೆ, ಈ ಪುಸ್ತಕ ಮೂರು ತಿಂಗಳಿಂದ ಅನೇಕ ಬಾರಿ ಕೆಲ ಅಧ್ಯಾಯಗಳನ್ನು ಓದಿ ನನಗೆ ಬೇಕಾಗಿದ್ದ ಅನೇಕ ಮಾಹಿತಿ ಮನನ ಮಾಡಿಕೊಂಡೆ.    ಈ ಪುಸ್ತಕ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜನ ಮತ್ತು ಕೆಳದಿ ಇತಿಹಾಸದ ಬಗ್ಗೆ ತಿಳಿದು ಕೊಳ್ಳುವವರು ಓದಲೇ ಬೇಕು.     ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರು ಎಲ್ಲಿಯೂ ಸ್ಮಾರಕವಾಗಿ ಸಾಗರದಲ್ಲೇ ಇಲ್ಲ!! ಎಂದರೆ ಅಥ೯ವಾದೀತು ರಾಜ ಮನೆತನದ ಹುನ್ನಾರ, ಅಂತರ್ ಜಾತಿ ಪ್ರೇಮ ವಿವಾಹ ಇದಕ್ಕೆ ಕಾರಣವೇ? ದುರಂತ ನಾಯಕಿ

ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ Rowdy list ಪರಿಷ್ಕರಣೆ 1420 ಜನರನ್ನು ಪಟ್ಟಿಯಿಂದ ವಿಮುಕ್ತಿ ಮಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದರ ಅಭಿನಂದನೀಯ ಕಾಯ೯

#ಬಹು_ದಶಕದ_ಬೇಡಿಕೆ #ಜಿಲ್ಲೆಯ_ROWDY_ಲಿಸ್ಟ್_ಪರಿಷ್ಕರಣೆ. #ಅಭಿನಂದನೆಗಳು_ಜಿಲ್ಲಾ_ಕ್ಷಣಾಧಿಕಾರಿಗಳಿಗೆ_ಗೃಹ_ಸಚಿವರಾದ_ಆರಗಜ್ಞಾನೇಂದ್ರರಿಗೆ #ಪರಿಷ್ಕರಣೆಯಲ್ಲಿ_ಪಟ್ಟಿಯಿಂದ_ಒಂದು_ಸಾವಿರದ_ನಾಲ್ಕುನೂರ_ಇಪ್ಪತ್ತು_ಜನ_ಹೊರಗೆ.    ROWDY LIST ಅನ್ನೋದು ಸಮಾಜವನ್ನು ಕ್ರಿಮಿನಲ್ ಗಳ ಕಿರುಕುಳದಿಂದ ತಪ್ಪಿಸಲು ಮತ್ತು ಕ್ರಿಮಿನಲ್ ಗಳ ಮೇಲೆ ಕಣ್ಣಿಡಲು ಪೋಲಿಸ್ ಇಲಾಖೆಯ ಕಾನೂನು ಸುವ್ಯವಸ್ಥೆಯ ಆಚರಣೆಯ ಅಂಗವಾಗಿದೆ.   ಸಂವಿದಾನದಲ್ಲಿ ನ್ಯಾಯಾಂಗ ವ್ಯವಸ್ಥೆ ಇರುವಾಗ ಕಾರ್ಯಾಂಗದಲ್ಲಿ ಈ ವ್ಯವಸ್ಥೆ ಬೇಕಾ ಅಥವ ಬೇಡವೇ ಅನ್ನುವ ಚರ್ಚೆ ಇದೆ ಆದರೆ ಪೋಲಿಸರಿಗಿಂತ ಇದನ್ನು ದುರ್ಬಳಕೆ ಮಾಡುತ್ತಿರುವುದು ಮಾತ್ರ ಆಡಳಿತರೂಢ ರಾಜಕಾರಣಿಗಳು.   ನಿನ್ನೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಯ Rowdy list ಪರಿಷ್ಕರಣೆ ಮಾಡಿ 1420 ಜನರನ್ನು ಈ ಪಟ್ಟಿಯಿಂದ ಹೊರ ಹಾಕಲಾಗಿದೆ ಎಂದಿದ್ದಾರೆ ಬಹುಶಃ ರಾಜ್ಯದ ಪೋಲಿಸ್ ಇಲಾಖೆಯಲ್ಲಿಯೇ ಇಷ್ಟು ಪ್ರಮಾಣದ ಪಟ್ಟಿ ಪರಿಷ್ಕರಣೆ ಇದೆ ಮೊದಲಾಗಿರಬಹುದು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಾದ ಬಿ.ಎಂ.ಲಕ್ಷ್ಮೀ ಪ್ರಸಾದರ ಸರ್ವಿಸ್ ನಲ್ಲಿ ಸರ್ವಕಾಲಿಕ ದಾಖಲೆ ಆಗಿ ಉಳಿಯಲಿದೆ.   ಪೋಲಿಸ್ ಇಲಾಖೆಯಲ್ಲಿರುವವರಿಗೆ ಗೊತ್ತೇ ಇದೆ ನಿಜ ಕ್ರಿಮಿನಲ್ ಗಳು ಯಾವಾಗಲೂ ಈ ಪಟ್ಟಿಯಲ್ಲಿರುವುದಿಲ್ಲ ಮತ್ತು ರಾಜಕೀಯ ದ್ವೇಷಕ್ಕಾಗಿ ಸೇರಿಸಿದವರು, ಸಣ್ಣ ಕ್ರೈಂ ಗಳಾದ ಮಟಕ ಕಳ್ಳಬಟ್ಟಿಯವರು

ಗೃಹ ಮಂತ್ರಿ ಆರಗ ಜ್ಞಾನೇಂದ್ರರಿಗೆ ಅಭಿನಂದನೆ, ರಾಜ್ಯದ ಎಲ್ಲಾ ಪೋಲಿಸ್ ಠಾಣೆಗಳಲ್ಲಿ ROWDY ಲಿಸ್ಟ್ ಪುನರ್ ವಿಮಷಿ೯ಸಿ.

#ಮಲೆನಾಡಿನ_ಸಜ್ಜನ_ರಾಜಕಾರಣಿ_ಆರಗ_ಜ್ಞಾನೇಂದ್ರ. #ರಾಜ್ಯದ_ಗೃಹ_ಮಂತ್ರಿ_ಆದದ್ದಕ್ಕೆ_ಅಭಿನಂದನೆಗಳು    1995ರಲ್ಲಿ ನಾನು ಜಿಲ್ಲಾ ಪಂಚಾಯತ ನ ಮೊದಲ ಸಭೆಗೆ  ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಭಾಗವಹಿಸಿದಾಗ ಅವತ್ತಿನ ಸಭಯಲ್ಲಿ ಆಗಿನ ಉಪ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು, ವಿರೋದ ಪಕ್ಷದ ನಾಯಕರಾಗಿದ್ದ ಯಡೂರಪ್ಪನವರು, ಮಂತ್ರಿಗಳಾಗಿದ್ದ ಬಸವಣ್ಯಪ್ಪರು, ಅಪ್ಪಾಜಿ ಗೌಡರು, ಅಯನೂರು ಮಂಜುನಾಥ,ಈಶ್ವರಪ್ಪನವರು, ಕುಮಾರ ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಮತ್ತು ಆರಗ ಜ್ಞಾನೇಂದ್ರರಿದ್ದರು.   ಆಗೆಲ್ಲ ಜಿಲ್ಲಾ ಪಂಚಾಯತ್ ಸಭೆ ಡಿಸಿಸಿ ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯುತ್ತಿತ್ತು, ಜಿಲ್ಲಾ ಪಂಚಾಯತ್ ಗೆ ಸಭೆ ನಡೆಸುವಂತ ಸಭಾಂಗಣ ಇರಲಿಲ್ಲ.    ಮೊದಲ ಸಭೆಯಲ್ಲಿ ನಾನು ಮಾತಾಡಿದ್ದಕ್ಕೆ ಪಟೇಲರು ಯಡೂರಪ್ಪನವರು ಬೆನ್ನುತಟ್ಟಿದ್ದರು ಮರುದಿನ ಪತ್ರಿಕೆಗಳಲ್ಲಿ ಜಿಲ್ಲಾ ಪಂಚಾಯತ್ ಮೊದಲ ಸಭೆಯಲ್ಲಿ ಮಿಂಚಿದವರೆಂಬ ಹೆಗ್ಗಳಿಕೆಯ ವರದಿಗಳು ನನಗೆ ರಾಜಕಾರಣದಲ್ಲಿ ಆತ್ಮವಿಶ್ವಾಸ ಹೆಚ್ಚಾಯಿಸಿತು.   1995 ರಿಂದ 2000 ಇಸವಿವರೆಗೆ ಇವರೆಲ್ಲರ ಒಡನಾಟದಲ್ಲಿ ಹೆಚ್ಚು ಹತ್ತಿರ ಆದವರು ಆಯನೂರು ಮಂಜುನಾಥ್ ಮತ್ತು ಆರಗ ಜ್ಞಾನೆಂದ್ರ ,ಇಬ್ಬರದ್ದು ಸತತ ಹೋರಾಟದ ಜೀವನವೆ.   ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಯಾವಾಗಲೂ ನನಗೆ ಇವರಿಬ್ಬರ ಆನೆ ಬಲದ ಬೆಂಬಲ ಇರುತ್ತಿತ್ತು.   ಅನೇಕ ಜನಪರ ಹೋರಾಟದ ವಿಷಯ ಆರಗರಿಗೆ ತಿಳಿಸಿದಾಗ ಅವರು ವಿಧಾನಸಭಾದಲ್ಲಿ ಅದನ್ನ

ಭಾಗ - 58, ಆನಂದಪುರಂ ಇತಿಹಾಸ, ಸುಮಾರು ಐದು ನೂರು ವರ್ಷ ಪುರಾತನವಾದ ಆನಂದಪುರಂ ಕೋಟೆ ಆಂಜನೇಯ ಗುಡಿ, ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗಕ್ಕಾಗಿ ಐತಿಹಾಸಿಕ ಆನಂದಪುರಂ ಕೋಟೆ ಇಬ್ಬಾಗ ಮಾಡಿದ ಬ್ರಿಟೀಷ್ ಸರಕಾರ

#ಭಾಗ_58. #ಆನ೦ದಪುರಂ_ಇತಿಹಾಸ. #ಸುಮಾರು_500_ವರ್ಷ_ಪುರಾತನ_ಅನಂದಪುರಂ_ಕೋಟೆ_ಆಂಜನೇಯ. #ಶಿವಮೊಗ್ಗ_ತಾಳಗುಪ್ಪ_ರೈಲು_ಮಾಗ೯_ಆನಂದಪುರಂ_ಕೋಟೆ_ಸೀಳಿ_ನಿರ್ಮಿಸಿದ_ಬ್ರಿಟಿಷರು . #ಕೋಟೆಯಲ್ಲಿ_ನಿದಿ_ಸಿಕ್ಕಿದ_ಜನಪದ_ಕಥೆಯೂ_ಇದೆ. #ಅಯ್ಯಂಗಾರರ_ಕುಟುಂಬ_ಪೂಜೆ_ನೈವೇದ್ಯ_ಸಾಮೂಹಿಕ_ಬೋಜನ_ಏರ್ಪಡಿಸುತ್ತಿದ್ದರು. #ಯಡೇಹಳ್ಳಿ_ಕೋಟೆ_ಹೆಸರಿನ_ಈ_ಪ್ರದೇಶ_ಕಿರಾತಕರ_ಆಳ್ವಿಕೆಯಲ್ಲಿದ್ದದ್ದನ್ನು_ರಾಜವೆಂಕಟಪ್ಪ_ನಾಯಕ_ವಶ_ಪಡೆಯುತ್ತಾರೆ. #ರಾಮಕ್ಷತ್ರಿಯ_ಕೋಟೆಗಾರರಿಂದ_ಪುನರ್_ನಿರ್ಮಾಣವಾದ_ಆನಂದಪುರ೦_ಕೋಟೆ. #ಉಗಾಂಡದಲ್ಲಿ_ಸಕ್ಕರೆ_ಕಾರ್ಖಾನೆ_ಉದ್ಯೋಗಿ_1950ರ_ದಶಕದಲ್ಲಿ_ಕೋಟೆ_ಆಂಜನೇಯ_ಗುಡಿ_ಮತ್ತು_ಪಗಾರ_ನಿರ್ಮಿಸಿದ್ದರು     ಆನಂದಪುರಂನ ಐತಿಹಾಸಿಕ ಕೆಳದಿ ಅರಸರ ಕೋಟೆಯ ಕೋಟೆ ಆಂಜನೇಯ ದೇವಸ್ಥಾನ ಸುಮಾರು 500 ವಷ೯ದಷ್ಟು ಪುರಾತನ ಇರಬಹುದು.   1938 ರಲ್ಲಿ ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುವಾಗ ಈ ಐತಿಹಾಸಿಕ ಕೋಟೆ ಸಂರಕ್ಷಿಸದೆ ಕೋಟೆ ಮದ್ಯ ಸೀಳಿಕೊಂಡು ರೈಲು ಮಾರ್ಗ ನಿರ್ಮಿಸಿದ ಉದ್ದೇಶ ದುರಂತವೇ.    ಕೆಳದಿ ರಾಜ ವೆಂಕಟಪ್ಪ ನಾಯಕರು ಈ ಕೋಟೆ (ಆಗ ಯಡೇಹಳ್ಳಿ ಕೋಟೆ ಅಂತ ಈ ಪ್ರದೇಶದ ಮೂಲ ಹೆಸರು) ಮತ್ತು ಹರತಾಳು ಪ್ರದೇಶ ಕಿರಾತಕರಿಂದ (ಚಿತ್ರದುರ್ಗದ ನಾಯಕರು ಇರಬಹುದು) ವಶಪಡಿಸಿಕೊಂಡು ಅಭಿವೃದ್ದಿ ಮಾಡಿದ ಇತಿಹಾಸದ ದಾಖಲೆಗಳು ಲಭ್ಯವಿದೆ.     ಕೆಳದಿ ರಾಜ ವೆಂಕಟಪ್ಪ ನಾಯಕರಲ್ಲ

ಆನಂದಪುರಂ ಇತಿಹಾಸ ಭಾಗ-71, ಆನಂದಪುರಂ ಸಮೀಪದ ಆಚಾಪುರದ ಸಮೀಪದ ತೀರ್ಥದ ದೇವಾಲಯದಲ್ಲಿರುವ ಶಿಲಾ ಶಾಸನದಲ್ಲಿ ಇರುವುದು ಮಾಚೇಶ್ವರ - ಆದಿತ್ಯ - ವಿಷ್ಣು ದೇವಾಲಯ ( 25- ಡಿಸೆಂಬರ್ -1079ರಲ್ಲಿ) ಪ್ರತಿಷ್ಠಾಪಿಸಿ ಭೂದಾನ ನೀಡಿದ ರಾಜ ಮಾಚಿದೇವರ ಶಾಸನ

#ಆನಂದಪುರಂ_ಇತಿಹಾಸ_ಭಾಗ_71 #ಆಚಾಪುರ_ತೀರ್ಥದಲ್ಲಿನ_ಹತ್ತನೇ_ಶತಮಾನದ_ಶಿಲಾಶಾಸನ. #ಆಚಾಪುರ_ಅಂದಾಸುರದ_ಇತಿಹಾಸಕ್ಕೆ_ಅತ್ಯಂತ_ಪ್ರಮುಖ_ದಾಖಲೆ_ಇದು. #ಕಲ್ಯಾಣಿ_ಚಾಲುಕ್ಯರಾಜ_ಇಮ್ಮುಡಿ_ಜಯಸಿಂಹನ_ಸಾಮಂತ_ಮಾಚಿರಾಜನ_ಶಾಸನ #ಹತ್ತನೆ_ಶತಮಾನದಲ್ಲಿ_ಆಚಾಪುರದ_ಹೆಸರು_ಮಾಚರಾಜಪುರ  #ಈಗಿನ_ಅಂದಾಸುರ_ಆ_ಕಾಲದಲ್ಲಿ_ಮಾಚಿರಾಜನ_ರಾಜದಾನಿ_ಆಗಿತ್ತು. #ಆಚಾಪುರದ_ಜಮೀನ್ದಾರರಾಗಿದ್ದ_ದಿವಂಗತ_ಬಸಪ್ಪಗೌಡರು_ಶಿಲಾಶಾಸನ_ಸಂರಕ್ಷಿಸಿಟ್ಟಿದ್ದಾರೆ #ಮಾಚಿರಾಜ_ಸ್ಥಾಪಿಸಿದ_ಮಾಚೇಶ್ವರ_ಆದಿತ್ಯ_ವಿಷ್ಣು #ಈಗ_ಇರುವುದು_ಮಾಚೇಶ್ವರ_ಮಾತ್ರ_ಅದು_ಜನರ_ಬಾಯಲ್ಲಿ_ತೀರ್ಥದ_ಈಶ್ವರ. #ಕಾಲಾಂತರದಲ್ಲಿ_ಇಲ್ಲಿದ್ದ_ಆದಿತ್ಯ_ಮತ್ತು_ವಿಷ್ಣು_ದೇವರು_ಇಲ್ಲವಾಗಿದೆ 3). ಎಪಿಗ್ರಾಪಿಯ ಕ್ರ.ಸ. 109. ಕಾಲ ಮಾನ ಕ್ರಿ.ಶ. 1079AD. ಆಚಾಪುರ ತೀರ್ಥದಲ್ಲಿರುವ ಶಿಲಾ ಶಾಸನ. (5 ಅಡಿ ಎತ್ತರ X 2.5 ಅಡಿ ಅಗಲ )   ಎಪಿಗ್ರಾಪಿಯಾ ಕನಾ೯ಟಕ ಸಂಪುಟದಲ್ಲಿ 1902 ರಲ್ಲಿ ಆಗಿನ ಮೈಸೂರು ರಾಜ್ಯದ ಆರ್ಕಾಲಾಜಿಕಲ್ ಡಿಪಾರ್ಟ್ಮೆ೦ಟ್  ನಿರ್ದೇಶಕರಾಗಿದ್ದ ಬೆ೦ಜಮಿನ್ ಲೇವಿಸ್ ರೈಸ್ ರವರು ಸ್ವತಃ ಬಂದು ಆನಂದಪುರಂನ ಈ ಶಿಲಾ ಶಾಸನಗಳ ದಾಖಲು ಮಾಡಿರುವುದು ವಿಶೇಷ.   ಈ ಶಿಲಾ ಶಾಸನದ ಕಾಲ ಮಾನ ಕ್ರಿ.ಶ.1079 ಅಂದರೆ 943 ವರ್ಷಗಳ ಹಿಂದಿನ ಈ ಶಿಲಾ ಶಾಸನ ಆನಂದಪುರಂ ಇತಿಹಾಸಕ್ಕೆ ಅತ್ಯಂತ ಮಹತ್ವದಾಗಿದೆ.   ಈ ಶಿಲಾ ಶಾಸನ ಆಚಾಪುರದ ತೀರ್ಥದ ಹಾಲಿ ಈಶ್ವರ ದೇವಸ್ಥಾನದಲ್ಲಿ ನವೀಕೃತ ದೇವಾಲಯದಲ್ಲ

ಗಣಪತಿ ಮಾಸ್ತರ್ ಎಂಬ ಸಜ್ಜನರ ವಿಧಾಯ

#ಪಿತೃ_ವಾಕ್ಯ_ಪಾಲಿಸಿದ_ಪುತ್ರ #ಮಾತೃ_ದೇವೋಭವ_ಎಂಬಂತೆ_ಜೀವಿಸಿದವರು #ಶಿಕ್ಷಕ_ವೃತ್ತಿಯ_ಶಿಸ್ತು_ಕೊನೆಯ_ತನಕ_ಪಾಲನೆ  #ನಮ್ಮ_ಪ್ರೀತಿಯ_ಗಣಪತಿಮಾಸ್ತರಿಗೆ_ಶ್ರದ್ದಾಂಜಲಿ.   2015ರಲ್ಲಿ ನಮ್ಮ ಊರಿಗೆ ಬಂದು ಮನೆ ಕಟ್ಟಿ ತಮ್ಮ ತಾಯಿಯೊಂದಿಗೆ ತಮ್ಮ ಶಿಕ್ಷಕ ವೃತ್ತಿಯ ನಂತರದ ನಿವೃತ್ತ ಜೀವನ ಪ್ರಾರಂಬಿಸಿದ್ದ ಗಣಪತಿ ಮಾಸ್ತರ್ ನಿನ್ನೆ ತನಕ ಇಡೀ ಊರಿನ ಜನರ ಅತ್ಯಂತ ಆಪ್ತರಾಗಿದ್ದದ್ದು ಇನ್ನು ನೆನಪು ಮಾತ್ರ.   ಇವರು ನಮ್ಮ ಊರಲ್ಲಿ ನೆಲೆಸಲು ಕಾರಣ ನನ್ನ ಇನ್ನೊಬ್ಬ ಗೆಳೆಯ ಗೇರುಬೀಸಿನ ಕೃಷ್ಣಪ್ಪರ ಒತ್ತಾಯ ಮತ್ತು ಪ್ರೇರಣೆ.   ನಮ್ಮ ಊರಾದ ಯಡೇಹಳ್ಳಿಯ ಶ್ರೀ ವರಸಿದ್ದಿ ವಿನಾಯಕ ದೇವರ ದೇವಾಲಯದಲ್ಲಿ ವ್ಯವಸ್ಥಾಪಕರಾಗಿ ಇವರ ಕ್ರಿಯಾಶೀಲ ಕೆಲಸ ದೇವರಲ್ಲಿನ ಶ್ರದ್ದೆ ಭಕ್ತಿಗಳನ್ನು ನೋಡಿ ನಮ್ಮ ದೇವಾಲಯದ ಗೌರವಾನ್ವಿತ ಧರ್ಮದರ್ಶಿಗಳು ಮಾರ್ಗದರ್ಶಕರಾದ ಬೆಂಗಳೂರು ವಿಜಯನಗರದ ನಿವಾಸಿ ಪ್ರಖ್ಯಾತ ದೈವಜ್ಞ ಜೋತಿಷಿಗಳಾದ ಡಾ.ಎನ್-ಎಸ್.ವಿಶ್ವಪತಿ ಶಾಸ್ತ್ರೀಗಳು ಇವರನ್ನು ದೇವಾಲಯದ ಟ್ರಸ್ಟಿಯಾಗಿಯೂ ನೇಮಿಸಿದ್ದರು.  ಗಣಪತಿ ಮಾಸ್ತರ ತಂದೆ ಕಲ್ಲಪ್ಪನವರ ಸಾಗರವಾಸಿಗಳು ಅನೇಕ ಸರ್ಕಾರಿ ಸೇವೆಗೆ ಸೇರಿದರೂ ಅಲ್ಲಿ ಇನ್ನಾರಿಗೋ ಅವಶ್ಯಕತೆ ಇದ್ದವರಿಗೆ ತಮ್ಮ ಉದ್ಯೋಗ ತ್ಯಜಿಸುತ್ತಿದ್ದವರು, ನಂತರ ತ್ಯಾಗರ್ತಿಯ ಇನಾಂದಾರರ ಕುಟುಂಬದ ಗುರುಮೂರ್ತಿ ರಾಯರ ಆಪ್ತರಾಗಿ ತ್ಯಾಗರ್ತಿಯಲ್ಲಿ ಆಭಾಗದ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ಪ್ರಾರಂಬಿಸುವ ಪ್

ಬೌದ್ದರಿಗೆ ಪವಿತ್ರ ಆದರೆ ಭಾರತೀಯ ವಾಸ್ತು ಶಾಸ್ತ್ರ ವಿರೋದಿಸುವ ಪಾಪಸ್ ಕಳ್ಳಿಯ ಜಾತಿಯ ಡ್ರಾಗನ್ ಪ್ರೂಟ್ ಗೆ ಸಕಾ೯ರದ ಸಹಾಯ ಧನದ ಪ್ರೋತ್ಸಾಹ ಇದೆ.

#ಪಾಪಸು_ಕಳ್ಳಿ_ಎಂಬ_ಕ್ಯಾಕ್ಟಸ್ #ಅತಿಕಡಿಮೆ_ನೀರು_ದೀರ್ಘಬಾಳಿಕೆ. #ವಾಸ್ತು_ಶಾಸ್ತ್ರ_ಪೆಂಗ್_ಶು_ಬೆಂಬಲವಿಲ್ಲ #ಬೌದ್ಧರಿಗೆ_ಪವಿತ್ರ_ಸಸ್ಯ #ಡ್ರಾಗನ್_ಪ್ರೂಟ್_ಬೆಳೆಗೆ_ಸರ್ಕಾರದ_ಸಹಾಯಧನ.    2008ರಲ್ಲಿ ನನ್ನ ತಂದೆ ಮತ್ತು ತಾಯಿ ಹೆಸರಲ್ಲಿ ಶ್ರೀ ಕೃಷ್ಣ - ಸರಸ ಕನ್ವೆನ್ಷನ್ ಹಾಲ್ ಎಂಬ ನನ್ನ ಕನಸಿನ ಕಲ್ಯಾಣ ಮಂಟಪ ಕಟ್ಟಿಸಿದಾಗ ಅದರ ಅವರಣದಲ್ಲಿ ಹೂತೋಟ ಮಾಡಲಿಕ್ಕಾಗಿ #ಹಕ್ರೆ_ಗಿರೀಶ್ (ಈಗ ಎಡಜಿಗಳೆ ಮನೆ ಗ್ರಾಮ ಪ೦ಚಾಯತನ ಉಪಾಧ್ಯಕ್ಷರು ) ಸಿರ್ಸಿಯ ವಿನಾಯಕ ಭಟ್ಟರನ್ನು ಪರಿಚಯಿಸಿದ್ದರು (ಈಗ ಅವರು ಯಡೂರಪ್ಪರ ಪೆಸಿಟ್ ಕಾಲೇಜಿನ ಅವರಣದ ಗಾರ್ಡ್ ನ್ ಮಾಡಿದ್ದಾರೆ) ಅವರು ಕೆಲ ಆಲಂಕಾರಿಕಾ ಕ್ಯಾಕ್ಟಸ್ ಹಾಕಿದ್ದರು.   ಈಗ 14 ವರ್ಷದಲ್ಲಿ ಅದು ವಿವಿಧ ಆಕಾರದಲ್ಲಿ ನಮ್ಮಲ್ಲಿ ಇದೆ ಅದರಿಂದ ನೂರಾರು ಮರಿ ಆಸಕ್ತರಿಗೆ ರವಾನೆಯೂ ಆಗಿದೆ.  ಅಲಂಕಾರಿಕ ಪಪಾಸುಕಳ್ಳಿ ಹತ್ತು ವರ್ಷ ಬಾಳಿಕೆ ಬರುತ್ತದೆ ಅದೇ ವೈಲ್ಡ್ ಜಾತಿಯದ್ದು ನೂರು ವರ್ಷ ಬದುಕತ್ತದೆ ಎನ್ನುತ್ತಾರೆ.   ಇದರ ಮೂಲ ಅಮೆರಿಕಾ ಇದು ಭಾರತಕ್ಕೆ ಪೋಚು೯ಗೀಸರಿಂದ ಬಂತು ಈಗ ಭಾರತದಲ್ಲಿ ಕಳೆ ಗಿಡವಾಗಿ ಹರಡಿದೆ.   ಭಾರತೀಯರ ವಾಸ್ತು ಶಾಸ್ತ್ರ ಮತ್ತು ಹಿಂದೂ ಧರ್ಮದಲ್ಲಿ ಇದು ಅನಿಷ್ಟ ಎಂಬ ನಂಬಿಕೆ ದಟ್ಟವಾಗಿದೆ ಇದಕ್ಕೆ ಕಾರಣ ಇದು ಇತ್ತೀಚೆಗೆ ಬೇರೆ ಖಂಡಾಂತರವಾಗಿ ಬಂದ ಅಪರಿಚಿತ ಮುಳ್ಳು ಸಸ್ಯವಾಗಿರಬಹುದು ಆದರೆ ಬೌದ್ದ ದಮಿ೯ಯರು ಇದನ್ನು ಪೂಜ್ಯ ಸಸ್ಯವಾಗಿ ಪರಿ

ಶಿವಮೊಗ್ಗ ಬ್ಲಾಸ್ಟ್ ದುರಂತ ನಡೆದು ಒಂದು ವರ್ಷ ಆಯಿತು

#ಬ್ಲಾಸ್ಟ್_ಬೂದಿಯಲ್ಲಿ_ಮೃತ_ದೇಹ_ಒಂದು_ವರ್ಷದ_ಹಿಂದಿನ_ಶಿವಮೊಗ್ಗದ_ದುರಂತ ಸುರಕ್ಷತೆಯ ಎಲ್ಲಾ ಮಾನದಂಡಗಳನ್ನು ಗಣಿ ಮತ್ತು ಕ್ರಷರ್ ಮಾಲಿಕರು ತಪ್ಪದೇ ಅನುಸರಿಸುವ ನೈತಿಕತೆ ಕೂಡ ಕಾನೂನಿಗಿಂತ ಅವಶ್ಯ ಎಂಬ ಸ್ವಯಂ ಜಾಗೃತಿ ಕೂಡ ಅನಿವಾಯ೯. #ಶಿವಮೊಗ್ಗ_ಹುಣಸೋಡು_ಬ್ಲಾಸ್ಟ್_ವಾಸ್ತವಗಳು  #ಅದಿಕೃತ_ಅನದಿಕೃತ_ಕಲ್ಲುಗಣಿ_ಸಕಾ೯ರ_ರಾಜಕೀಯ_ಪ್ರಭಾವ_ಅವಘಡ_ಪ್ರದಾನಿ_ಮೋದಿ_ಹೇಳಿಕೆ #ರಾಹುಲ್_ಗಾಂದಿ_ಸಂತಾಪ_ಮಾಜಿ_ಮುಖ್ಯಮಂತ್ರಿ_ಸಿದ್ದರಾಮಯ್ಯ_ಖಂಡನೆ_ಮುಖ್ಯಮಂತ್ರಿ_ಯಡೂರಪ್ಪ_ಸ್ಥಳಕ್ಕೆ     ಹೀಗೆ ಗುರುವಾರ ರಾತ್ರಿ 10 ರಿಂದ 10- 20 PM (ದಿನಾಂಕ 21- ಜನವರಿ 2021) ಕೇವಲ 20 ನಿಮಿಷ ಅವಧಿಯಲ್ಲಿ ಆಗಿರುವ ಘೋರ ದುರಂತದ ಸ್ಪೋಟದಿಂದ ಈ ಕ್ಷಣದವರೆಗೂ ಈ ಘಟನೆ ಬಗ್ಗೆ ಅನೇಕ ವರದಿ ವಿಶ್ಲೇಷಣೆಗಳು ಬರುತ್ತಲೇ ಇದೆ.    ಆಗಿರುವ ಅನಾಹುತ, ನಷ್ಟ,  ಜೀವಹಾನಿಗೆ ಪರಿಹಾರ ಏನು? ಕಾರಣರಾರು? ಶಿಕ್ಷೆ ಏನು? ಎನ್ನುವ ಚಚೆ೯ ಬದಿಗಿಟ್ಟು ಇಡೀ ಪ್ರಕರಣ ನೋಡುವ ಅನಿವಾಯ೯ತೆ ಇದೆ.    ಗ್ರೌಂಡ್ ರಿಯಾಲಿಟಿ ವರದಿ,ಘಟನೆ ಸಮೀಪದ ವಾಸಿ ಆಗಿರುವ ಬರಹಗಾರರಾದ ರಾಜೇಂದ್ರ ಬುರುಡಿಗಟ್ಟೆ ಅವರ ಲೇಖನದಿಂದ ಪೇಸ್ ಬುಕ್ ಓದುಗರಿಗೆ ಗೊತ್ತಾಯಿತು.   ಘಟನೆ ಸ್ಥಳದಿಂದ 3 ಕೀ ಮಿ ದೂರದ ಅಬ್ಬಲಗೆರೆ SR ಪೆಟ್ರೋಲ್ ಪಂಪ್ ಮಾಲಿಕರಾದ ನಿವೃತ್ತ ಕೃಷಿ ಬ್ಯಾಂಕ್ ನ  ಜಿಲ್ಲಾ ವ್ಯವಸ್ಥಾಪಕರಾದ ಹಂದಿಗೋಳ್ ಸಾಹೇಬರು " ಅವತ್ತು ರಾತ್ರಿ ಸಣ್ಣ ಬ್ಲಾಸ್ಟ್ ಶಬ್ದ ನಂತರ ಬೆಳ