Skip to main content

ಆನಂದಪುರಂ ಇತಿಹಾಸ ಭಾಗ-71, ಆನಂದಪುರಂ ಸಮೀಪದ ಆಚಾಪುರದ ಸಮೀಪದ ತೀರ್ಥದ ದೇವಾಲಯದಲ್ಲಿರುವ ಶಿಲಾ ಶಾಸನದಲ್ಲಿ ಇರುವುದು ಮಾಚೇಶ್ವರ - ಆದಿತ್ಯ - ವಿಷ್ಣು ದೇವಾಲಯ ( 25- ಡಿಸೆಂಬರ್ -1079ರಲ್ಲಿ) ಪ್ರತಿಷ್ಠಾಪಿಸಿ ಭೂದಾನ ನೀಡಿದ ರಾಜ ಮಾಚಿದೇವರ ಶಾಸನ

#ಆನಂದಪುರಂ_ಇತಿಹಾಸ_ಭಾಗ_71

#ಆಚಾಪುರ_ತೀರ್ಥದಲ್ಲಿನ_ಹತ್ತನೇ_ಶತಮಾನದ_ಶಿಲಾಶಾಸನ.

#ಆಚಾಪುರ_ಅಂದಾಸುರದ_ಇತಿಹಾಸಕ್ಕೆ_ಅತ್ಯಂತ_ಪ್ರಮುಖ_ದಾಖಲೆ_ಇದು.

#ಕಲ್ಯಾಣಿ_ಚಾಲುಕ್ಯರಾಜ_ಇಮ್ಮುಡಿ_ಜಯಸಿಂಹನ_ಸಾಮಂತ_ಮಾಚಿರಾಜನ_ಶಾಸನ

#ಹತ್ತನೆ_ಶತಮಾನದಲ್ಲಿ_ಆಚಾಪುರದ_ಹೆಸರು_ಮಾಚರಾಜಪುರ 

#ಈಗಿನ_ಅಂದಾಸುರ_ಆ_ಕಾಲದಲ್ಲಿ_ಮಾಚಿರಾಜನ_ರಾಜದಾನಿ_ಆಗಿತ್ತು.

#ಆಚಾಪುರದ_ಜಮೀನ್ದಾರರಾಗಿದ್ದ_ದಿವಂಗತ_ಬಸಪ್ಪಗೌಡರು_ಶಿಲಾಶಾಸನ_ಸಂರಕ್ಷಿಸಿಟ್ಟಿದ್ದಾರೆ

#ಮಾಚಿರಾಜ_ಸ್ಥಾಪಿಸಿದ_ಮಾಚೇಶ್ವರ_ಆದಿತ್ಯ_ವಿಷ್ಣು

#ಈಗ_ಇರುವುದು_ಮಾಚೇಶ್ವರ_ಮಾತ್ರ_ಅದು_ಜನರ_ಬಾಯಲ್ಲಿ_ತೀರ್ಥದ_ಈಶ್ವರ.

#ಕಾಲಾಂತರದಲ್ಲಿ_ಇಲ್ಲಿದ್ದ_ಆದಿತ್ಯ_ಮತ್ತು_ವಿಷ್ಣು_ದೇವರು_ಇಲ್ಲವಾಗಿದೆ

3). ಎಪಿಗ್ರಾಪಿಯ ಕ್ರ.ಸ. 109.
ಕಾಲ ಮಾನ ಕ್ರಿ.ಶ. 1079AD.
ಆಚಾಪುರ ತೀರ್ಥದಲ್ಲಿರುವ ಶಿಲಾ ಶಾಸನ. (5 ಅಡಿ ಎತ್ತರ X 2.5 ಅಡಿ ಅಗಲ )

  ಎಪಿಗ್ರಾಪಿಯಾ ಕನಾ೯ಟಕ ಸಂಪುಟದಲ್ಲಿ 1902 ರಲ್ಲಿ ಆಗಿನ ಮೈಸೂರು ರಾಜ್ಯದ ಆರ್ಕಾಲಾಜಿಕಲ್ ಡಿಪಾರ್ಟ್ಮೆ೦ಟ್  ನಿರ್ದೇಶಕರಾಗಿದ್ದ ಬೆ೦ಜಮಿನ್ ಲೇವಿಸ್ ರೈಸ್ ರವರು ಸ್ವತಃ ಬಂದು ಆನಂದಪುರಂನ ಈ ಶಿಲಾ ಶಾಸನಗಳ ದಾಖಲು ಮಾಡಿರುವುದು ವಿಶೇಷ.
  ಈ ಶಿಲಾ ಶಾಸನದ ಕಾಲ ಮಾನ ಕ್ರಿ.ಶ.1079 ಅಂದರೆ 943 ವರ್ಷಗಳ ಹಿಂದಿನ ಈ ಶಿಲಾ ಶಾಸನ ಆನಂದಪುರಂ ಇತಿಹಾಸಕ್ಕೆ ಅತ್ಯಂತ ಮಹತ್ವದಾಗಿದೆ.
  ಈ ಶಿಲಾ ಶಾಸನ ಆಚಾಪುರದ ತೀರ್ಥದ ಹಾಲಿ ಈಶ್ವರ ದೇವಸ್ಥಾನದಲ್ಲಿ ನವೀಕೃತ ದೇವಾಲಯದಲ್ಲಿ ಒಳ ಭಾಗದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿಟ್ಟಿರುವುದು ಸ೦ತೋಷದ ವಿಷಯ ಆಗಿದೆ.
   ಈ ಶಿಲಾ ಶಾಸನದಲ್ಲಿ 47 ಸಾಲುಗಳಿದೆ.
 ಇದು 25- ಡಿಸೆಂಬರ್ -1079ರಲ್ಲಿ ಕಲ್ಯಾಣಿ ಚಾಲುಕ್ಯ ರಾಜ ಇಮ್ಮುಡಿ ಜಯಸಿಂಹನ ಸಾಮಂತ ಮಾಚ ರಾಜನ ಶಾಸನ.
 ಈ ಶಾಸನದಲ್ಲಿ ಸಾಮಂತ ರಾಜ ಮಾಚ ರಾಜನು ಇಲ್ಲಿ ಮಾಚೇಶ್ವರ ಎಂಬ ಶಿವಲಿಂಗ, ಆದಿತ್ಯ ಮತ್ತು ವಿಷ್ಣು ದೇವರನ್ನು ಪ್ರತಿಷ್ಟಾಪಿಸಿ ಅದನ್ನು ಕಾಲಕಾಲದ ಪೂಜೆ ನೈವೇದ್ಯ ಇತ್ಯಾದಿ ದಾರ್ಮಿಕ ಕಾಯ೯ಕ್ಕಾಗಿ ಭೂದಾನ ಮಾಡಿದ ಶಿಲಾ ಶಾಸನ ಇದು.
  ಇದರಲ್ಲಿ ಎರೆಡು ವಿಶೇಷ ಮಾಹಿತಿ ಇದೆ ಒಂದು ಆ ಕಾಲಮಾನದಲ್ಲಿ ಈ ಪ್ರದೇಶದ ಹೆಸರು #ಮಾಚರಾಜಪುರ ಅದು 943 ವರ್ಷದ ದೀಘ೯ ಕಾಲದಲ್ಲಿ ಆಚಾಪುರ ಆಗಿರುವುದು.
  ಇನ್ನೊಂದು ಇಲ್ಲಿಗೆ ಸಮೀಪದ ಈಗಿನ ಅಂದಾಸುರ ಆ ಕಾಲದಲ್ಲಿ ಸಾಮಂತ ರಾಜರ ರಾಜಧಾನಿ ಆಗಿದ್ದ ಉಲ್ಲೇಖವೆರೆಡು ತುಂಬಾ ಮಹತ್ವದ್ದು.
   ಶಿಲಾ ಶಾಸನದ ಕೊನೆಯ ಸಾಲಿನಲ್ಲಿ ಭೂದಾನ ಮಾಡಿದ ಜಮೀನಿನ ವಿಸ್ತಿರ್ಣದ ವಿವರ ಮತ್ತು ಈ ದೇವಾಲಯದ ಶಿಲಾ ಶಾಸನ ಕೊರೆದವ ಕಲ್ಲುಕುಟಿಕ ಕ್ಷೇಮೋಜನ ಮಗ ಇವೊಜ ಅಂತಲು ದೇಗುಲ ನಿಮಿ೯ಸಿದವ ಕಾಮೋಜ ಅಂತ ಇದೆ.
  ಇದರ ಯಥಾ ನಕಲು
 "ಸ್ವಸ್ತಿ -ಸಂವತ್ಸರ- ಭುವನ -ಶ್ರಯಮ್ -ಶ್ರೀ -ಪ್ರಥ್ವಿ- ವಲ್ಲಭಮ್ - ಮಹರಾಜಾದಿರಾಜ - ಪರಮೇಶ್ವರ ಪರಮ ಭಟ್ಟಾರಕ೦ಸತ್ಯಾಶ್ರಯ - ಕುಲ - ತಿಲಕಂ ಚಾಲುಕ್ಯಾಭರಣಂ ಶ್ರೀಮತ್ - ತ್ರಿಭುವನಮಲ್ಲ - ದೇವರ ವಿಜಯ ರಾಜ್ಯಂ ಉತ್ತೋರೊತ್ತರಾಭಿವೃದ್ದಿ - ಪ್ರವರ್ಧಮಾನ೦ ಅಚಂದ್ರಿಕಾ - ತರಂ -ಬರಂ ಸಲ್ಲುತಂ ಇರೆ ಕಲ್ಯಾಣ ನೆಲೆವೀಡಿನೊಳ ಸುಕ - ಸಂಕತ- ವಿನೋದದಿಂ ರಾಜ್ಯಂ ಗೈಯುತಂ ಇರೆತದ್ - ಅನುಜಂ ಸ್ವಸ್ತಿ ಸಮಸ್ತ - ಭುವನ- ಸುಮಸ್ತುಯಮನಂ ಲೋಕ - ವಿಖ್ಯಾತಂ ಪಲ್ಲವನ್ಯಾಂ ಶ್ರೀ - ಮಹಿ- ವಲ್ಲಭಂ ಯುವರಾಜ ರಾಜ ಪರಮೇಶ್ವರಂ - ವೀರ - ಮಹೇಶ್ವರಂ ವಿಕ್ರಂಭಾರಣ೦ ಜಯ - ಲಕ್ಷ್ಮಿ - ರಾಮನಂ ಚಾಲುಕ್ಯ - ಚೂಡಾಮಣಿ ಕದನ - ತ್ರಿನೇತ್ರಂ ಕ್ಷತ್ರಿಯ-ಪವಿತ್ರಂ ಮಟ್ಟ-ಗಜನಗರ್ಜಂ ಸಹಜ - ಮನೋಜ೦ ರಿಪು - ರಾಯ - ಕಟಕ- ಸುರೆಕಾರಂ ಅನ್ನನ - ಅಂಕರಂ ಶ್ರೀಮತ್ - ತ್ರಿಲೋಕಮಲ್ಲ - ವೀರ - ನೋಲಂಬ - ಪಲ್ಲವ - ಪೆರಮ್ಮನಡಿ -ಜಯಸಿಂಹ - ದೇವರ ಬನವಾಸೆ - ಪನ್ನೀರ -ಚಹಾಸಿರಮುಮಂ ಸಾ೦ತಲಿಗೆ - ಸಾಸಿರಮುಮಂ - ಇರದಾರು-ನುರುಮ ಕಂಡುರ - ಸಾಸಿರಮುಮಂ ಐದು ಸುಕಸಂಕತ-ವಿನೋದಿಂ ರಾಜ್ಯ೦ ಗೈಯುತ೦ ಇರೆ ತತ್- ಪದ -ಪದ್ಮೊಪಜಿವಿ ಸಮಾದಿಗತ - ಪಂಚ - ಮಹಾ-ಸಬ್ದಮಹ - ಸಾಂಸ್ಥಾದಿಪತಿ ಮಹಾ-ಪ್ರಚಂಡ - ದ೦ಡನಾಯಕಂ ವಿಭುದ್ದ - ವರ - ದಯಕಂ ಗೋತ್ರ - ಪವಿತ್ರ೦ ಜಗದೇಕ - ಮಿತ್ರ0 ನಿಜ - ವಂಶ೦ಭುಜ -ದಿವಾಕರ0 - ಸತ್ಯ ರತ್ನಾಕರ0 ವಿವೇಕ -ಭ್ರಹಸ್ಪತಿ ಸ್ಟಚ್ಚ - ಮಹಾ-ವೃತಿಪರ - ನರಿ - ಸಹೋದರ ವಿದಗ್ದ- ವಿದ್ಯಾಧರ೦ ಸಕಲ - ಗುಣ-ನಿವಾಸಂ -ಉಭಯ-ರಾಯ -ಸಂತೋಷಂ ಶ್ರೀಮತ್ - ತ್ರಿಲೋಕಮಲ್ಲ - ವೀರ - ನೋಲಂಬ - ಪಲ್ಲವ - ಪೆಮಾ೯ನಡಿ -ಜಯಸಿಂಹ - ದೇವ - ಪಾದಾರಾದಕ0 ಪರ-ಬಜ - ಸಾದಕಂನಾಡಿ - ಸಮಸ್ತ-ಪ್ರಸಸ್ತಿ - ಸಹಿತಂ ಶ್ರೀಮನ್- ಮಹಾ- ಪ್ರದಾನ - . ಹಿರಿ-ಸಂದಿ-ವಿಗ್ರಹಿ ದಂಡನಾಯಕಂ ತಂಬಾರಸರ ಸಾ೦ತಲಿಗೆ - ಸಸಿರಮುಮಂ ಅಗ್ರಹರ೦ಗಲ್ಲಮ೦ ದುಷ್ಟ ನಿಗ್ರಹ - ಶಿಷ್ಟ-ಪ್ರತಿಪಲನದಿಂದ ಆಳುತಂ - ನಡ ರಾಜ್ಯಾದ್ಯಕ್ಷದ ಬೆಸನಂ ಮಾಚಿ - ರಾಜಂಗೆ ದಯೆಗೈಯಿದು ಕುಡೆ "
     ತಲೆದುದು ಸಿಂದವದಿ ಸಕಲಲೋವರ್ವಿಯೊ ಉನ್ನತಿಯಂ ತದ-ಉರ್ವರ - ತಿಲಕಡೊಲ ಅಗ್ರಹಾರ - ತಿಲಕಂ - ಸೊಗಯಿಪುಡು ಕಂಚಗರ - ಬೆಳಗಲಿ ಪರಿಸೊಬೆ - ವೆಟ್ಟನ ಅದರೋಲ್ ದ್ವಿಜ -ಭೂಷಣಂ ಅತ್ರಿ - ಗೊತ್ರಂ - ಉಜ್ವಲತರ - ಕೀರ್ತಿ ವಜಿ - ತಿಲಕಂ ಪ್ರಭು - ಮಾಚಿ - ಶುದ್ದ ಮಾರಿಚಿಯೊಳ್ ||
   "ಮಹಾ ಪುರುಷಂ ಸಾವ೦ತ್ಯಗ೦ ಅಬ್ಬಕಬ್ಬೆಗ೦ ಪುಟ್ಟಿ ಸಮಸ್ತ - ಗುಣ- ಸಂಪನ್ನಂ ಗೋತ್ರ ಪವಿತ್ರಂ ಭುಜ - ಜನ- ಮಿತ್ರ೦  ಶ್ರೀ - ಮಾಚಿ -ರಾಜಂ ರಾಜ್ಯಾದಕ್ಷದ ಬೆಸದೊಳ್ ನಡೆಯುತ್ತಮ ಇಲ್ದು ಶ್ರೀ - ರಾಜದಾನಿ - ಅಂದಾಸುರದ ಈಶಾನ್ಯ ತೀರ್ಥದ ಈಶಾನ್ಯ ದೆಸೆಯೆಲು ಶ್ರೀ - ಮಾಚಿದೇವರ - ದೇವರಮಂ ಆದಿತ್ಯ - ದೇವರಮಂ ವಿಷ್ಣು - ದೇವರಮಂ ಪ್ರತಿಷ್ಟೆ-ಗೈದು ಶ್ರೀಮಚ - ಚಾಲುಕ್ಯ - ವಿಕ್ರಮ - ವರ್ಷದ ರೆನೆಯ ಸಿದ್ದಾರ್ಥಿ - ಸಂವತ್ಸರದ ಉತ್ತರಾಯಣ - ಸಂಕ್ರಾಂತಿ - ನಿಮಿತ್ತದಂ...... ಯಮ-ನಿಯಮ - ಸ್ವಾದಾಯ - ದ್ಯಾನ- ಧಾರಣ- ಮೌನಾನುಷ್ಟಾನ - ಜಪ - ಸಮಾದಿ - ಸಂಪನಾರ ಅಪ್ಪಾ ಶ್ರೀಮತ್ - ಅನಂತಸಿವ - ಪಂಡಿತರ ಕಲಾಂ ಕರಿಚಿ  ಧಾರ-ಪು..... (ಭೂದಾನದ ಭೂಮಿಯ ಗಡಿ ವಿವರಣೆಗಳಿದೆ)"
 " ಕಲ್ಲು ಕುಟಿಕ ಕ್ಷೇಮೋಜನ ಮಗ ಇವೋಜ ಕಂಡರಿಸಿದ ದೇಗುಲಂ ಮಾಡಿದ ಕಮೋಜ ಶ್ರೀ" ಅಂತಿದೆ.
 
    ಇಲ್ಲಿ ಮಾಚೇಶ್ವರ ಶಿವಲಿಂಗ ಇದೆ ಅದು ಈಗ ಜನರ ಬಾಯಲ್ಲಿ ತೀರ್ಥದ ಈಶ್ವರ ಎಂದಾಗಿದೆ ಆದರೆ ಆದಿತ್ಯ ಮತ್ತು ವಿಷ್ಟು ವಿಗ್ರಹಗಳು ಬಹುಶಃ ಕಾಲಾಂತರದಲ್ಲಿ ಇಲ್ಲವಾಗಿದೆ.
   ಈಗಲೂ ಈ ದೇವಾಲಯ ಪೂಜೆ ಪುರಸ್ಕಾರ ನಡೆಸುಕೊಂಡು ಹೋಗುವ ಮನೆತನದವರಿಗೆ ಈ ದೇವಾಲಯದ ಜಮೀನು ಉಂಬಳೆಯಾಗಿ ಸಿಕ್ಕಿದೆ ಅದು ಅವರವರಲ್ಲಿ ಹಿಸ್ಸೆಗಳಾಗಿ ಒಂದೆರೆಡು ಎಕರೆ ಜಮೀನು ಮಾತ್ರ ಈಗ ಉಳಿದಿದೆ ಅಂತೆ.
   ಬೇರೆಲ್ಲ ಕಡೆ ಶಿಲಾಶಾಸನಗಳು ಬಿಸಿಲು ಮಳೆಗೆ ಸಿಲುಕಿ ಅವನತಿ ಆಗುತ್ತಿದ್ದರೆ ಇಲ್ಲಿ ಶಿಲಾ ಶಾಸನ ದೇವಾಲಯ ನವೀಕರಣ ಮಾಡಿದ ಜಮೀನ್ದಾರ್ ದಿವಂಗತ ಬಸಪ್ಪ ಗೌಡರು ಮಾತ್ರ ದೂರದೃಷ್ಟಿಯಿಂದ ನವೀಕೃತ ದೇವಾಲಯದ ಒಳಗೆ ಈ ಶಿಲಾ ಶಾಸನ ಸಂರಕ್ಷಣೆ ಮಾಡಿರುವುದು ಇತಿಹಾಸ ಸಂರಕ್ಷಣೆಗೆ ಅವರ ಕೊಡುಗೆ ಎನ್ನಬಹುದು.
  ಈ ಶಿಲಾ ಶಾಸನದ ವಿವರ ಶಿಲಾ ಶಾಸನದ ಪಕ್ಕದಲ್ಲಿ ದೇವಾಲಯದಲ್ಲಿ  ಪಲಕದಂತೆ ಹಾಕಿದರೆ ಈ ದೇವಾಲಯದ ಸಾವಿರ ವರ್ಷದ ಪ್ರಾಚೀನತೆ ಅವತ್ತಿನ ಆಚಾಪುರದ ಮೂಲ ಹೆಸರು ಮಾಚರಾಜಪುರ ಮತ್ತು ಆಗಿನ ಸಾಮಂತ ರಾಜರ ರಾಜಧಾನಿ ಅಂದಾಸುರ ಇವತ್ತಿನ ನಮ್ಮ ಸಣ್ಣ ಹಳ್ಳಿ ಅಂದಾಸುರವೇ ಆಗಿತ್ತು ಎನ್ನುವ ಮಾಹಿತಿ ಈಗಿನ ಜನರಿಗೆ ಮತ್ತು ಮುಂದಿನ ತಲೆಮಾರಿಗೆ ಅತ್ಯುತ್ತಮ ಮಾಹಿತಿ ಆಗಲಿದೆ.
  ಸುತ್ತಮುತ್ತಲಿನ ಶಾಲಾ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳಿಗೆ ಇಂತಹ ಶಿಲಾ ಶಾಸನ ತೋರಿಸಿ ಅದರಲ್ಲಿ ನಮೂದಿಸಿದ ಶಾಸನಗಳ ವಿವರಿಸಿದರೆ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಇತಿಹಾಸದ ಬಗ್ಗೆ ಆಸಕ್ತಿ ಉಂಟಾಗಿ ಮುಂದೆ ಅವರುಗಳು ಆನಂದಪುರಂ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆ ಮಾಡಬಹುದು.

(ಮುಂದಿನ ಭಾಗ -72ರಲ್ಲಿ ಆನಂದಪುರಂನಿಂದ ಶಿವಮೊಗ್ಗ ಮಾಗ೯ದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಚಾಪುರಕ್ಕಿಂತ ಒಂದು ಕಿಲೋ ಮೀಟರ್ ಹಿಂದೆ ಎಡಬಾಗದ ಬೃಹತ್ ಗಾತ್ರದ (8 ಅಡಿ ಎತ್ತರ X 4 ಅಡಿ ಅಗಲದ) ಶಿಲಾ ಶಾಸನದಲ್ಲಿ ಏನಿದೆ?)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...