#ಹಿಂದೂ ದಮ೯ದವನು ಮುಸ್ಲಿ೦ ಗೆಳೆಯರಿಗೆ ಮೆಕ್ಕಾ ಯಾತ್ರೆ ಮಾಡಿಸಬಹುದೆ? ಮುಸ್ಲಿಂ ಗೆಳೆಯ ಈ ರೀತಿ ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಅಂತೆ ಅಂತ ಒಂದು ಸುದ್ದಿ ನಮ್ಮ ಊರಲ್ಲಿ ಪ್ರಾರಂಭವಾಗಿತ್ತು.#
ಬಹುಶಃ ಇದು ಅಪರೂಪದ ಪ್ರಕರಣ ಆದ್ದರಿಂದ ಸ್ಥಳೀಯರಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಇರಲಿಲ್ಲ, ಜೊತೆಗೆ ಮತ್ಸರ, ಹೊಟ್ಟೆಕಿಚ್ಚು ಬೇರೆ ಸೇರಿದ್ದರಿಂದ ಮೆಕ್ಕಾ ಯಾತ್ರೆಗೆ ತಯಾರಿ ನಡೆಸಿದವರಿಗೆ ಒಂದು ರೀತಿ ಕಿರಿಕಿರಿ ಆದರೆ, ಮೆಕ್ಕಾ ಯಾತ್ರೆ ಮಾಡಿಸಲು ಹೊರಟ ಹಿಂದೂ ದಮಿ೯ಯನಿಗೆ ಹಿಂದಿನಿಂದ ಹೋಗಿ ಹೋಗಿ ಸಾಬರಿಗೆ ಮೆಕ್ಕಾ ಕಳಿಸಲು ಅವನಿಗೆ ಬುದ್ಧಿ ಇಲ್ಲ ಅಂತ ಕುಹಕ ಬೇರೆ.
ಇದು ನಾನೂ ಮತ್ತು ನನ್ನ ಹಿರಿಯ ಮಿತ್ರರಾದ ಗನ್ನಿ ಸಾಹೇಬರು 2007 ರಲ್ಲಿ ಅನುಭವಿಸಿದ ಪ್ರಕರಣವಿದು, ಇದಕ್ಕೆ ಒಂದು ಸಕಾರಣ ಇತ್ತು ಮತ್ತು ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಾನು ಗನ್ನಿಸಾಬರಿಗೆ ಒಂದು ಮಾತು ಕೊಟ್ಟಿದ್ದೆ.
2006ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಎಂಬ ನಮ್ಮ ಊರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿ ಪ್ರತಿಷ್ಟಾಪನೆ ನಡೆಯಿತು, ಅಲ್ಲಿವರೆಗೆ ಇಡಿ ಹೋಬಳಿಯಲ್ಲಿ ಗಣಪತಿ ದೇವಸ್ಥಾನವೇ ಇರಲಿಲ್ಲ, ಯಡೇಹಳ್ಳಿಯಲ್ಲಿ ಎರಡು ಚಚ್೯ ಮತ್ತು ಒಂದು ಮಸೀದಿ ಇತ್ತು, ಗಣಪತಿ ದೇವಸ್ಥಾನದ ದೇವರ ವಿಗ್ರಹ ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಿಂದ ಕೃಷ್ಣ ಶಿಲೆಯಲ್ಲಿ ಕೆತ್ತಿಸಿ ತಂದಾಗ ವಿಗ್ರಹವನ್ನ ಯಡೇಹಳ್ಳಿ ವೃತ್ತದಿಂದ ಡಾ.ವಿಶ್ವಪತಿ ಶಾಸ್ತ್ರಿಗಳ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ದೇವಸ್ಥಾನದವರೆಗೆ ನಾನು ಗನ್ನಿಸಾಹೇಬರು ಒಟ್ಟಾಗಿ ಹೋದೆವು. ಅಲ್ಲಿ ಕ್ರಿಶ್ಚಿಯನ್ ಅಂದ ಕಲಾವಿದ ಒಲೆರಿಯನ್ ಡಿಸೋಜ ಮತ್ತು ದಲಿತ ಕಲಾವಿದ ಬೋರಯ್ಯ ಸಣ್ಣ ರಸ ಮಂಜರಿ ಕಾಯ೯ಕ್ರಮ ನಡೆಸಿಕೊಟ್ಟರು, ದೇವರ ವಿಗ್ರಹ ಗಭ೯ಗುಡಿಯ ಒಳಕ್ಕೆ ಹೋಗುವಾಗ ಅಚಾನಕ್ಕಾಗಿ ನನ್ನ ಬಾಯಿ೦ದ ಒಂದು ಮಾತು ಹೊರಬಿತ್ತು.
" ಗನ್ನಿ ಸಾಹೇಬರೆ ದೇವರ ಸತ್ಯವಿದ್ದರೆ ಈ ವಷ೯ ನಿಮ್ಮನ್ನ ಮೆಕ್ಕಾ ಯಾತ್ರೆಗೆ ಕಳಿಸುತ್ತೇನೆ, ಹಾಗಾದರೆ ಈ ದೇವಸ್ಥಾನ ಕಟ್ಟಿಸಿದ ಪುಣ್ಯ ಗ್ಯಾರಂಟಿ ನನಗೆ ತಲುಪಿದಂತೆ ಆಗುತ್ತೆ " ಅಂದೆ ಅದಕ್ಕೆ ಪ್ರತ್ಯುತ್ತರವಾಗಿ ಅವರು ಗ್ಯಾರಂಟಿ ಆಗೇ ಆಗುತ್ತೆ ಅಂತ ಕೈ ಮುಗಿದರು.
ಅದರಂತೆ ಗನ್ನಿ ಸಾಹೇಬರು ಮೆಕ್ಕಾ ಯಾತ್ರೆಗೆ ಅಜಿ೯ ಸಲ್ಲಿಸಿದಾಗ ಸಕಾ೯ರದಿಂದ ಆಯ್ಕೆ ಆದರು ಅದಕ್ಕೆ ನಿಗದಿ ಮಾಡಿದ ಹಣ ನಾನು ಡಿ.ಡಿ.ಮೂಲಕ ಪಾವತಿ ಮಾಡಿದೆ, ಅವರು ತಮ್ಮ ದಮ೯ದ ಪವಿತ್ರ ಯಾತ್ರೆಗೆ ತಯಾರಿ ನಡೆಸಿದರು ಅಷ್ಟರಲ್ಲೆ ಈ ಅನುಮಾನದ ಅಪವಾದ ಶುರುವಾಯಿತು.
ನಮ್ಮಿಬ್ಬರ ಉತ್ಸಾಹಕ್ಕೆ ಒಂದು ರೀತಿ ತಣ್ಣಿೀರು ಎರಚಿದ೦ತೆ ಆಯಿತು, ಗನ್ನಿ ಸಾಹೇಬರು ಯಾರು ಏನೇ ಹೇಳಿದರೂ ನಾನು ಮೆಕ್ಕಾ ಯಾತ್ರೆ ಮಾಡ್ತಿನಿ ಅಂದರಾದರೂ ನನಗೂ೦ದು ಅಳಕು ಇತ್ತು. ಅನ್ಯ ದಮ೯ದವರ ಹಣದಲ್ಲಿ ಮುಸ್ಲಿಂರು ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಆಗುವುದಾದರೆ ಸರಿ ಅಲ್ಲ ಅಂತ ಅನ್ನಿಸುತ್ತಿತ್ತು.
ಅವರ ಸಂಬಂದಿ ಕೆಲ ಯುವಕರು ಗನ್ನಿಸಾಹೇಬರನ್ನ ಹಿಂದಿನಿಂದ ಅವರ ಸಂಬಂದಿ ಮತ್ತು ಗೆಳೆಯರ ಎದುರು ಹಿಯಾಳಿಸುತ್ತಿದ್ದರು, ಇದೇ ಸಂದಭ೯ದಲ್ಲಿ ಉತ್ತರ ಪ್ರದೇಶದ ಮೌಲ್ವಿಗಳ ಒಂದು ದೊಡ್ಡ ತಂಡ ಆನಂದಪುರಂನ ಮಸೀದಿಗೆ ಬಂದರು ಆ ದಿನ ಶುಕ್ರವಾರದ ನಮಾಜು ಬೇರೆ, ನಮಾಜು ಮುಗಿದ ನಂತರ ಈ ಜಿಜ್ಞಾಸೆಗೆ ಉತ್ತರ ಅವರಿ೦ದ ಕೇಳಿದರು, ಅನೇಕ ಗನ್ನಿ ಸಾಹೇಬರ ಆಪ್ತರಿಗೆ ಮತ್ತು ಕೆಲ ಕುಹಕಿಗಳಿಗೆ ಏನು ಉತ್ತರ ಬರಬಹುದು ಅಂತ ಕುತೂಹಲವಿತ್ತು.
ಮುಸ್ಲಿ೦ ಪಂಡಿತರು ಈ ಬಗ್ಗೆ ಇರುವ ಪತ್ವಾ ಏನಂತ ತಿಳಿಸಿದರು ಅದೇನೆಂದರೆ ಯಾರೇ, ಯಾವ ದಮ೯, ಯಾವುದೇ ಜಾತಿ, ಯಾವ ದೇಶದವರೂ ಮುಸ್ಲಿಂ ದಮ೯ದವರನ್ನ ಮಾತ್ರ ಮೆಕ್ಕಾ ಯಾತ್ರೆಗೆ ಕಳಿಸಬಹುದು, ಇದು ಅವರ ನೆರವಿಂದ ಹೋದವರಿಗೆ ಹರಾಂ ಅಲ್ಲ ಮತ್ತು ಮೆಕ್ಕಾ ಯಾತ್ರೆ ಮಾಡಿದವರಿಗಿಂತ ಮೆಕ್ಕಾ ಯಾತ್ರೆ ಮಾಡಿಸಿದವರಿಗೆ ಡಬಲ್ ಪುಣ್ಯ ಅಂತ ಅಂದರು, ನಮ್ಮ ಗನ್ನಿ ಸಾಹೇಬರಿಗೆ ಇದರಿಂದ ತುಂಬಾ ನಿರಾಳವಾಯಿತು, ನನಗೂ ಸಂತೋಷವಾಯಿತು.
ನಮ್ಮ ಶ್ರೀವರ ಸಿದ್ಧಿವಿನಾಯಕ ದೇವಾಲಯದಲ್ಲಿ ಗನ್ನಿ ಸಾಹೇಬರಿಗೆ ಬೀಳ್ಕೊಡುಗೆಯ ಅಭಿನಂದನಾ ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದೆವು ಸಾಗರದಿಂದ ತೀನಾ.ಶ್ರೀನಿವಾಸ, ಕೋಯಾ ಸಾಹೇಬರು, ಪುತ್ತೂರಾಯರು, ನಾರಾಯಣ್ ರಾವ್, ಅಮೃತ್ ರಾಸ್ ಎಲ್ಲಾ ಬಂದಿದ್ದರು.
ಊರ ದೇವಸ್ಥಾನ ಕಟ್ಟಿಸಿದ್ದು ನಮ್ಮ ಹೆತ್ತವವರ ಪುಣ್ಯದಿಂದ ಅಂತ ಬಾವಿಸಿದ್ದೇನೆ ಅದೇ ರೀತಿ ಗನ್ನಿ ಸಾಹೇಬರಿಗೆ ಮೆಕ್ಕಾ ಯಾತ್ರೆ ಮಾಡಿಸಿದ್ದು ಕೂಡ.
ಈ ವಷ೯ ಜನವರಿ 28ಕ್ಕೆ ದೇವಾಲಯದಲ್ಲಿ 14 ನೇ ವಾಷಿ೯ಕೊತ್ಸವ ರಥ ಉತ್ಸವದ ಸಂದಭ೯ದಲ್ಲಿ ಇದೆಲ್ಲ ನೆನಪಾಯಿತು, ಗನ್ನಿಸಾಹೇಬರು ಇರುವವರೆಗೆ ಊರಲ್ಲಿ ಕೋಮು ಸೌಹಾದ೯ವೇ ಬೇರೆ ಆನಂದಪುರದ ಇತಿಹಾಸದಲ್ಲಿ ಯಾರೆಷ್ಟು ಪ್ರಯತ್ನಿಸಿದರು ಹಿಂದೂ ಮುಸ್ಲಿಂ ಗಲಾಟೆ ಆಗಿಲ್ಲ ಇವತ್ತೂ ಹಿಂದೂ ಮುಸ್ಲಿಂ ಬಾಯಿ ಬಾಯಿ ಇದಕ್ಕೆ ಉದಾಹರಣೆ ಎಂಬಂತೆ ನವೆಂಬರ್ ನಲ್ಲಿ ನಡೆದ ನನ್ನ ಮಗಳ ಮದುವೆ ಸಮಾರಂಭದಲ್ಲಿ ಮುಸ್ಲಿ೦ ಬಾಂದವರೆಲ್ಲ ಒಂದಾಗಿ ಬಂದು ನೂತನ ದಂಪತಿಗಳಿಗೆ ಶುಭ ಹಾರೈಸಿ ನಂತರ ನನಗೆ ಶಾಲು ಹೊದಿಸಿ ಹೂವಿನ ಹಾರ ತೊಡಿಸಿ ಗನ್ನಿ ಸಾಹೇಬರ ಹೆಸರಲ್ಲಿ ನೆನಪಿನ ಕಾಣಿಕೆ ನೀಡಿದ್ದು ಪುನಃ ನನಗೆ ಆನಂದಬಾಷ್ಪ ಉoಟು ಮಾಡಿತು.
#Can a Hindu organise a Mecca pilgrimage to his Muslim friend? A news was being circulated in our village that Mecca pilgrimage of such nature is forbidden#
This was a rare scenario hence the natives had little or no knowledge about this. This was coupled with jealousy. These all caused strain to the person who was preparing for the pilgrimage. The same was happening with the hindu who was arranging the means, people said he has lost his mind as he is sending a muslim for a pilgrimage.
This is what I and my respected senior friend Sri Ghanni Saab had gone through in the year of 2007. There is a valid reason for the Mecca pilgrimage, as I had promised in Sri Varasiddhi Vinayaka Temple of our village.
In the year of 2006, A Ganapati Temple was consecrated in our village Yadehalli, (Anandapuram Hobli, Sagara Taluk, Shivamogga District). Till then there was not a single Ganapati Temple in the entire Hobli. There were two churches and a Mosque in Yadehalli.
The idol of Ganapati was sculpted by the renowned national awardee Shivarapattana Sculptor.
When this sculpture was brought to Yadehalli, a procession took place from yadehalli circle to temple for taking the idol to temple. Sri Vishwapati Shastriji lead the procession, where I followed with Sri Ghani Saab. There was a small orchestra was organised by singers Valerian D'Souza and Boraiah.
When the sculpture was being placed in the sanctum of the temple, out of nowhere, suddenly I said "Gani Saheb ji, if the God's grace is there, i will send you for Mecca Pilgrimage this year. By that way I will earn the 'punya' of constructing this temple.." For which he responded, " yes it will be" and folded his hands in a namaskar..
As the god's will had it, when Ganni saab ji was selected for Mecca pilgrimage by the government when he filed an application. I paid the prescribed amount via Demand Draft, he started the preparations for his holy pilgrimage. Then started all these venomous news started to circulate that a hindu cannot fund a Muslim's pilgrimage.
It was a drawback for us. Nevertheless Ghani Saheb Ji said that he is going to go to Mecca no matter whatever the people speculate. But i was really nervous and in dilemma that if such funding for a pilgrimage is explicitly forbidden by the religion, then it's not right, what should be done? It was a 'dharma sankata' for me.
Some young relatives were criticising Ghani saab ji behind his back, infront of his family and friends.
At this time, a large group of Maulvis from Uttar Pradesh visited Anandapur Mosque. It was a Friday, after the Namaz, people raised this issue infront of the maulvis for further clarification and assistance. Both the well wishers and criticisers, were equally curious about the possible explanations from the Maulvis.
The Maulvis explained that anyone from any religion, caste, or of any nationality can send a muslim for a Mecca pilgrimage, whoever goes by such funding, it's not forbidden for them, nor its a sin. Also the person who is funding for the pilgrimage earns more punya than the one who is going. Ganni Saab was relieved to hear that and I was delighted.
We organised a function in temple to bid adieu to Ghani saab. Sri Ti.Na Srinivas, Khoya Saheb, Narayan Rao, Amrut Ras and many other came from Sagara to attend this event.
I feel that constructing the village temple was by the blessings of my parents, and also i feel that the Mecca Pilgrimage was also because of the blessings of my parents. Ghani Saab was a dear friend of my father.
It's been 14 year, on 28th of January. I remembered all this at thi occasion. Till Ghani Saab was alive, thr communal harmony was ensured. In the history of our village, no matter how many times anyone has tried to lit the fire of communal riots, it didn't work. Even today Hindus, Muslims, Christians live in harmony.
On the occasion of my daughter's wedding, muslims of village came together, they wished the newlyweds, later they congratulated me by giving a memento in the name of Late Sri Ghani Saab. This brought tears of joy in my eyes. This is an instance how harmoniously we all live in this village.
Comments
Post a Comment