ಬೌದ್ದರಿಗೆ ಪವಿತ್ರ ಆದರೆ ಭಾರತೀಯ ವಾಸ್ತು ಶಾಸ್ತ್ರ ವಿರೋದಿಸುವ ಪಾಪಸ್ ಕಳ್ಳಿಯ ಜಾತಿಯ ಡ್ರಾಗನ್ ಪ್ರೂಟ್ ಗೆ ಸಕಾ೯ರದ ಸಹಾಯ ಧನದ ಪ್ರೋತ್ಸಾಹ ಇದೆ.
#ಅತಿಕಡಿಮೆ_ನೀರು_ದೀರ್ಘಬಾಳಿಕೆ.
#ವಾಸ್ತು_ಶಾಸ್ತ್ರ_ಪೆಂಗ್_ಶು_ಬೆಂಬಲವಿಲ್ಲ
#ಬೌದ್ಧರಿಗೆ_ಪವಿತ್ರ_ಸಸ್ಯ
#ಡ್ರಾಗನ್_ಪ್ರೂಟ್_ಬೆಳೆಗೆ_ಸರ್ಕಾರದ_ಸಹಾಯಧನ.
2008ರಲ್ಲಿ ನನ್ನ ತಂದೆ ಮತ್ತು ತಾಯಿ ಹೆಸರಲ್ಲಿ ಶ್ರೀ ಕೃಷ್ಣ - ಸರಸ ಕನ್ವೆನ್ಷನ್ ಹಾಲ್ ಎಂಬ ನನ್ನ ಕನಸಿನ ಕಲ್ಯಾಣ ಮಂಟಪ ಕಟ್ಟಿಸಿದಾಗ ಅದರ ಅವರಣದಲ್ಲಿ ಹೂತೋಟ ಮಾಡಲಿಕ್ಕಾಗಿ #ಹಕ್ರೆ_ಗಿರೀಶ್ (ಈಗ ಎಡಜಿಗಳೆ ಮನೆ ಗ್ರಾಮ ಪ೦ಚಾಯತನ ಉಪಾಧ್ಯಕ್ಷರು ) ಸಿರ್ಸಿಯ ವಿನಾಯಕ ಭಟ್ಟರನ್ನು ಪರಿಚಯಿಸಿದ್ದರು (ಈಗ ಅವರು ಯಡೂರಪ್ಪರ ಪೆಸಿಟ್ ಕಾಲೇಜಿನ ಅವರಣದ ಗಾರ್ಡ್ ನ್ ಮಾಡಿದ್ದಾರೆ) ಅವರು ಕೆಲ ಆಲಂಕಾರಿಕಾ ಕ್ಯಾಕ್ಟಸ್ ಹಾಕಿದ್ದರು.
ಈಗ 14 ವರ್ಷದಲ್ಲಿ ಅದು ವಿವಿಧ ಆಕಾರದಲ್ಲಿ ನಮ್ಮಲ್ಲಿ ಇದೆ ಅದರಿಂದ ನೂರಾರು ಮರಿ ಆಸಕ್ತರಿಗೆ ರವಾನೆಯೂ ಆಗಿದೆ.
ಅಲಂಕಾರಿಕ ಪಪಾಸುಕಳ್ಳಿ ಹತ್ತು ವರ್ಷ ಬಾಳಿಕೆ ಬರುತ್ತದೆ ಅದೇ ವೈಲ್ಡ್ ಜಾತಿಯದ್ದು ನೂರು ವರ್ಷ ಬದುಕತ್ತದೆ ಎನ್ನುತ್ತಾರೆ.
ಇದರ ಮೂಲ ಅಮೆರಿಕಾ ಇದು ಭಾರತಕ್ಕೆ ಪೋಚು೯ಗೀಸರಿಂದ ಬಂತು ಈಗ ಭಾರತದಲ್ಲಿ ಕಳೆ ಗಿಡವಾಗಿ ಹರಡಿದೆ.
ಭಾರತೀಯರ ವಾಸ್ತು ಶಾಸ್ತ್ರ ಮತ್ತು ಹಿಂದೂ ಧರ್ಮದಲ್ಲಿ ಇದು ಅನಿಷ್ಟ ಎಂಬ ನಂಬಿಕೆ ದಟ್ಟವಾಗಿದೆ ಇದಕ್ಕೆ ಕಾರಣ ಇದು ಇತ್ತೀಚೆಗೆ ಬೇರೆ ಖಂಡಾಂತರವಾಗಿ ಬಂದ ಅಪರಿಚಿತ ಮುಳ್ಳು ಸಸ್ಯವಾಗಿರಬಹುದು ಆದರೆ ಬೌದ್ದ ದಮಿ೯ಯರು ಇದನ್ನು ಪೂಜ್ಯ ಸಸ್ಯವಾಗಿ ಪರಿಗಣಿಸುತ್ತಾರೆ.
ಇದರಲ್ಲಿನ ಮುಳ್ಳು ತೆಗೆದು ಪಶು ಆಹಾರವಾಗಿ, ತರಕಾರಿಯಾಗಿ, ಔಷದಿ ಆಗಿ ಕೂಡ ಬಳಸುತ್ತಾರೆ.
ಭಾರತ ಸರ್ಕಾರ ಇದೆ ಜಾತಿಯ ಡ್ರಾಗನ್ ಪ್ರೂಟ್ ಗೆ (ಕ್ಯಾನ್ಸರ್ ಪ್ರತಿಬಂದಕ) ತುಂಬಾ ಬೇಡಿಕೆ ಇರುವುದರಿಂದ ಇದನ್ನು ಬೆಳೆಸಲು ಸಹಾಯ ಧನ ಕೂಡ ನೀಡುತ್ತಿದೆ.
ನಾನು ಇದನ್ನು ಪಾಟಿನಲ್ಲಿ ಕೂಡ ಬೆಳಿಸಿದ್ದೆ, ನಮ್ಮ ರೆಸ್ಟೋರೆಂಟ್ ನ ಪಬ್ಲಿಕ್ ಟಾಯಿಲೆಟ್ ಪಕ್ಕದಲ್ಲಿ ವಿದ್ಯುತ್ ಮೈನ್ ಸ್ವಿಚ್ ಇತ್ತು ಅದನ್ನು ಸಾರ್ವಜನಿಕರ ಸಂಪರ್ಕದಿಂದ ದೂರ ಮಾಡಲು ಮುಳ್ಳಿನ ಕ್ಯಾಕ್ಟಸ್ ನ ಎರೆಡು ಪಾಟ್ 2012 ರಿಂದ ಇಟ್ಟಿದ್ದೆ.
2014ರಲ್ಲಿ ಸ್ವಚ್ಚ ಮಾಡುವಾಗ ಕೆಲಸಗಾರರ ಅಜಾಗೃತೆಯಿಂದ ಒಂದು ಪಾಟ್ ಒಡೆದು ಹೋಗಿತ್ತು, ಪಾಟ್ ಒಡೆದದ್ದರಿಂದ ಗಿಡ ಬದುಕಲಾರದೇನೋ ಅಂತ ಮಾಡಿದ್ದೆ ಆದರೆ ಎಂಟು ವರ್ಷದಿಂದ ಪಾಟು ಇಲ್ಲದೆ ಈ ಅಲಂಕಾರಿಕ ಪಾಪಸು ಕಳ್ಳಿ ಜೀವಂತವಾಗಿದೆ ಮತ್ತು ಮರಿ ಹಾಕಿದೆ.
ಹಾಗಾಗಿ ಇನ್ನೊಂದು ಗಿಡದ ಪಾಟನ್ನು ತೆಗೆದು ಎರೆಡೂ ಒಂದೇ ರೀತಿ ಕಾಣುವಂತೆ ಮಾಡಿದ್ದೇನೆ.
ಎರೆಡು ವಾರಕ್ಕೆ ಅರ್ಧ ಲೋಟ ನೀರು ಸಾಕು, 8 ವಷ೯ದಿಂದ ಮಣ್ಣು ಬದಲಿಸಿಲ್ಲ, ಗೊಬ್ಬರ ಕೊಟ್ಟೇ ಇಲ್ಲ!
ಇದನ್ನು ಮನೆ ಒಳಗೂ ಇಡ ಬಹುದು ಗಾಳಿ ಶುದ್ಧಿಕರಿಸುತ್ತದೆ ಎಂಬ ವೈಜ್ಞಾನಿಕ ಸಂಶೋದನೆ ಇರುವುದರಿಂದ ವಿದೇಶಗಳಲ್ಲಿ ಹೆಚ್ಚು ಬಳಸುತ್ತಾರೆ.
ಬೆಂಗಳೂರಿನ ಲಾಲ್ ಬಾಗ್ ನಲ್ಲಿ ತೋಟಗಾರಿಕಾ ಇಲಾಖೆ ಮತ್ತು ಲಾಲ್ ಬಾಗ್ ಸುತ್ತಲಿರುವ ಖಾಸಾಗಿ ನರ್ಸರಿಗಳಲ್ಲಿ ತರಹೇವಾರಿ ಕಾಕ್ಟಸ್ ಮಾರಾಟಕ್ಕೆ ಇದೆ.
Comments
Post a Comment