https://www.facebook.com/share/p/18AzftsbvP/ *#ಕಾಡಾನೆಗಳು* *ಹೊಸ ಆನೆ ಕಾರಿಡಾರ್ ನಿರ್ಮಾಣವಾಯಿತಾ?* *ಈ ವರ್ಷವೂ ಈ ಪ್ರದೇಶದ ಸುತ್ತಮುತ್ತ ಕಾಡಾನೆ ಬರುವ ಸಾಧ್ಯತೆ ಇದೆಯೇ?* *ಕಳೆದ ವರ್ಷ ನಮ್ಮ ಆನಂದಪುರಂನ ಈ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು.* *ಅರಸಾಳು -ಕೆಂಚನಾಲ- ಕೆರೆಹಿತ್ತಲು - ಗಿಳಾಲಗುಂಡಿ - ಪತ್ರೆಹೊಂಡ- ಕೊಲ್ಲಿಬಚ್ಚಲು ಡ್ಯಾಮ್ - -ಉದನೂರು-ಕಣ್ಣೂರು- ಬೈರಾಪುರ-ಅಂಬ್ಲಿಗೋಳ ಡ್ಯಾಮ್* *ಕಳೆದ ವರ್ಷ 62 ದಿನ ಕಾಡಾನೆ ಸಂಚರಿಸುತ್ತಿದ್ದ ಪ್ರದೇಶವಾಗಿತ್ತು. *ಇವತ್ತು ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೆರೆ, ಶಾಂತಿಕೆರೆ ಭಾಗದಲ್ಲಿ ಮತ್ತು ಸೂಡೂರು ಗೇಟ್ ಬಳಿ ಮೂರು ಕಾಡಾನೆಗಳು ಸಂಚರಿಸುತ್ತಿರುವ ಸುದ್ದಿ ಇದೆ.* *ಆನೆ ಪ್ರವೇಶ ನಿರ್ಬಂಧಿಸಲು ಪಸಲು ರಕ್ಷಣೆ ಮಾಡಲು ಬೇಲಿಗಳಿಗೆ ವಿದ್ಯುತ್ ನೀಡುವ ತಪ್ಪು ಕೆಲಸ ಮಾತ್ರ ಈ ಭಾಗದಲ್ಲಿ ಯಾರೂ ರೈತರು ಮಾಡಬಾರದಾಗಿ ವಿನಂತಿ.* *ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳು ದೊಡ್ಡ ಶಿಕ್ಷೆಗೆ ಕಾರಣವಾಗಲಿದೆ ಇದನ್ನು ಈ ಪ್ರದೇಶದ ವಾಸಿಗಳಿಗೆ ರೈತರಿಗೆ ಹೆಚ್ಚು ಶೇರ್ ಮಾಡಲು ವಿನಂತಿ.* *ಕಳೆದ ವರ್ಷ ಅಕ್ಟೋಬರ್ 15 ರಲ್ಲಿ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೆಂಚನಾಲದಲ್ಲಿ ಕಾಡಾನೆಗಳು ಕಾಣಿಸಿಕೊಂಡಿತ್ತು.* ...