Blog number 1787. ರಾಷ್ಟ್ರೀಕೃತ ಬ್ಯಾಂಕ್ ಗಳು RBI ಗೈಡ್ ಲೈನ್ ಪಾಲಿಸದೆ ರೈತರನ್ನು ನಿರ್ಲಕ್ಷಿಸುತ್ತಿದೆ ಇದನ್ನು ಜನ ಪ್ರತಿನಿದಿಗಳು ಮತ್ತು ರೈತ ಪರ ಸಂಘಟನೆಗಳು ಗಮನಿಸಬೇಕು.
#ಬ್ಯಾಂಕುಗಳೇಕೆ_ಹೀಗೆ ? #ರೈತರ_ಮಕ್ಕಳೆ_ಬ್ಯಾಂಕ್_ಉದ್ಯೋಗಿ_ಆಗಿ_ರೈತರನ್ನು_ತಾತ್ಸರ_ಮಾಡುವುದೇಕೆ? #ರಾಷ್ಟ್ರೀಕೃತ_ಬ್ಯಾಂಕ್_ಶಾಖೆಯಲ್ಲಿ_ರೈತ_ಗ್ರಾಹಕನಿಗೆ_ಮೂರನೆ_ದರ್ಜೆ_ಸ್ಥಾನಮಾನ_ಏಕೆ? #ಶೇಕಡಾ_4_ರ_ಬಡ್ಡಿ_ಸಾಲ_ರೈತರಿಗೆ_ನೀಡಲು_ಬ್ಯಾಂಕ್_ಹಿಂದೇಟು_ಹಾಕುವುದೇಕೆ? #ಪ್ರತಿ_ಬ್ಯಾಂಕಿನಲ್ಲಿ_ರೈತರಿಗೆ_ಸಿಗುವ_ಸಾಲ_ಸೌಲಭ್ಯದ_ಮಾಹಿತಿ_ಫಲಕ_ಯಾಕೆ_ಹಾಕುತ್ತಿಲ್ಲ? #ಆರ್_ಬಿ_ಐ_ಸುತ್ತೋಲೆ_ಪ್ರತಿ_ಬ್ಯಾಂಕ್_ಪಾಲಿಸಿದರೆ_ರೈತರ_ಆತ್ಮಹತ್ಯೆ_ತಡೆಯಬಹುದು #ಈ_ಬಗ್ಗೆ_ಸ್ಥಳಿಯ_ಜನಪ್ರತಿನಿದಿಗಳು_ರೈತ_ಸಂಘಟನೆಗಳು_ರೈತರ_ಜನ_ಜಾಗೃತಿಗೆ_ಮುಂದಾಗ_ಬೇಕು. ಕೃಷಿಕರು ಅತಿವೃಷ್ಟಿ ಅನಾವೃಷ್ಟಿಗಳಿಂದ ಅಥವ ಬೆಳೆದ ಬೆಳೆಗೆ ಬೆಲೆ ಬರದಾದಾಗ ಉಂಟಾಗುವ ನಷ್ಟದಿಂದ ನಲುಗುತ್ತಾನೆ ಖಾಸಾಗಿ ಹಣಕಾಸು ಲೇವಾದೇವಿಗಾರರಿಂದ ಪಡೆದ ಸಾಲ ಬಡ್ಡಿ ಸಕಾಲದಲ್ಲಿ ಪಾವತಿಸಲಾಗದೆ ಮತ್ತು ವಸೂಲಿಗಾರರ ಹಿಂಸೆಯಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಈಗ ಎಲ್ಲೆಡೆ ನೋಡುತ್ತಿದ್ದೇವೆ. ಈ ಬಗ್ಗೆ ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ರೈತನಿಗೆ ಖಾಸಾಗಿ ಲೇವಾದೇವಿದಾರರ ಕಪಿ ಮುಷ್ಟಿಯಲ್ಲಿ ಸಿಗಬಾರದೆಂದು ಅನೇಕ ರೀತಿಯ ಅನುಕೂಲಕರವಾದ ಕಡಿಮೆ ಬಡ್ಡಿಯ ಬೆಳೆ ಸಾಲ, ಕೃಷಿ ಅಭಿವೃದ್ದಿ ಸಾಲ ನೀಡುವಂತ ಯೋಜನೆ ರಿಸರ್ವ ಬ್ಯಾಂಕ್ ಇಂಡಿಯಾ ಮೂಲಕ ದೇಶದಾದ್ಯಂತ ಬ್ಯಾಂಕುಗಳಿಗೆ ಗೈಡ್ ಲೈನ್ ನೀಡಿದೆ ಮತ್ತು ಬ್ಯಾಂಕಿನ ಶಾಖೆಯಲ್ಲಿ ರೈತರಿಗೆ ಸಾಲ ಸೌಲಭ್ಯ ವಿಳಂಬವಾಗಬಾ...