Blog number 1787. ರಾಷ್ಟ್ರೀಕೃತ ಬ್ಯಾಂಕ್ ಗಳು RBI ಗೈಡ್ ಲೈನ್ ಪಾಲಿಸದೆ ರೈತರನ್ನು ನಿರ್ಲಕ್ಷಿಸುತ್ತಿದೆ ಇದನ್ನು ಜನ ಪ್ರತಿನಿದಿಗಳು ಮತ್ತು ರೈತ ಪರ ಸಂಘಟನೆಗಳು ಗಮನಿಸಬೇಕು.
#ಬ್ಯಾಂಕುಗಳೇಕೆ_ಹೀಗೆ ?
#ರೈತರ_ಮಕ್ಕಳೆ_ಬ್ಯಾಂಕ್_ಉದ್ಯೋಗಿ_ಆಗಿ_ರೈತರನ್ನು_ತಾತ್ಸರ_ಮಾಡುವುದೇಕೆ?
#ರಾಷ್ಟ್ರೀಕೃತ_ಬ್ಯಾಂಕ್_ಶಾಖೆಯಲ್ಲಿ_ರೈತ_ಗ್ರಾಹಕನಿಗೆ_ಮೂರನೆ_ದರ್ಜೆ_ಸ್ಥಾನಮಾನ_ಏಕೆ?
#ಶೇಕಡಾ_4_ರ_ಬಡ್ಡಿ_ಸಾಲ_ರೈತರಿಗೆ_ನೀಡಲು_ಬ್ಯಾಂಕ್_ಹಿಂದೇಟು_ಹಾಕುವುದೇಕೆ?
#ಪ್ರತಿ_ಬ್ಯಾಂಕಿನಲ್ಲಿ_ರೈತರಿಗೆ_ಸಿಗುವ_ಸಾಲ_ಸೌಲಭ್ಯದ_ಮಾಹಿತಿ_ಫಲಕ_ಯಾಕೆ_ಹಾಕುತ್ತಿಲ್ಲ?
#ಆರ್_ಬಿ_ಐ_ಸುತ್ತೋಲೆ_ಪ್ರತಿ_ಬ್ಯಾಂಕ್_ಪಾಲಿಸಿದರೆ_ರೈತರ_ಆತ್ಮಹತ್ಯೆ_ತಡೆಯಬಹುದು
ಕೃಷಿಕರು ಅತಿವೃಷ್ಟಿ ಅನಾವೃಷ್ಟಿಗಳಿಂದ ಅಥವ ಬೆಳೆದ ಬೆಳೆಗೆ ಬೆಲೆ ಬರದಾದಾಗ ಉಂಟಾಗುವ ನಷ್ಟದಿಂದ ನಲುಗುತ್ತಾನೆ ಖಾಸಾಗಿ ಹಣಕಾಸು ಲೇವಾದೇವಿಗಾರರಿಂದ ಪಡೆದ ಸಾಲ ಬಡ್ಡಿ ಸಕಾಲದಲ್ಲಿ ಪಾವತಿಸಲಾಗದೆ ಮತ್ತು ವಸೂಲಿಗಾರರ ಹಿಂಸೆಯಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಈಗ ಎಲ್ಲೆಡೆ ನೋಡುತ್ತಿದ್ದೇವೆ.
ಈ ಬಗ್ಗೆ ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ರೈತನಿಗೆ ಖಾಸಾಗಿ ಲೇವಾದೇವಿದಾರರ ಕಪಿ ಮುಷ್ಟಿಯಲ್ಲಿ ಸಿಗಬಾರದೆಂದು ಅನೇಕ ರೀತಿಯ ಅನುಕೂಲಕರವಾದ ಕಡಿಮೆ ಬಡ್ಡಿಯ ಬೆಳೆ ಸಾಲ, ಕೃಷಿ ಅಭಿವೃದ್ದಿ ಸಾಲ ನೀಡುವಂತ ಯೋಜನೆ ರಿಸರ್ವ ಬ್ಯಾಂಕ್ ಇಂಡಿಯಾ ಮೂಲಕ ದೇಶದಾದ್ಯಂತ ಬ್ಯಾಂಕುಗಳಿಗೆ ಗೈಡ್ ಲೈನ್ ನೀಡಿದೆ ಮತ್ತು ಬ್ಯಾಂಕಿನ ಶಾಖೆಯಲ್ಲಿ ರೈತರಿಗೆ ಸಾಲ ಸೌಲಭ್ಯ ವಿಳಂಬವಾಗಬಾರದೆಂದು ರೈತರ ಬೆಳೆ ಸಾಲ ಮಂಜೂರು ಮಾಡಲು ಪ್ರತಿ ಬ್ಯಾಂಕ್ ಶಾಖೆಯಲ್ಲಿ ಕೃಷಿ ಸಾಲಕ್ಕೆ ಪ್ರತ್ಯೇಕ ಮ್ಯಾನೇಜರ್ ಹುದ್ದೆ ಮಂಜೂರು ಮಾಡಿದೆ.
ರೈತರ ಪ್ರತಿ ಎಕರೆ ಅಡಿಕೆಗೆ 1.20 ಲಕ್ಷ, ರಬ್ಬರ್ ಬೆಳೆಗೆ ಎಕರೆಗೆ 80 ಸಾವಿರ, ಇತರ ಬೆಳೆಗೆ ಎಕರೆಗೆ 40 ಸಾವಿರದಂತೆ ಬೆಳೆ ಸಾಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೀಡು ಮಾಡದೆ ಬ್ಯಾಂಕ್ ಶಾಖೆಯಲ್ಲಿ ಶೇಕಡಾ 4% ಬಡ್ಡಿ ದರದಲ್ಲಿ ತಕ್ಷಣ ಸಾಲ ಮಂಜೂರು ಮಾಡುವ ಅಧಿಕಾರ ನೀಡಿದೆ.
4 ಲಕ್ಷದ ತನಕ 4% ಬಡ್ಡಿ ಮತ್ತು 4 ಲಕ್ಷ ಮೀರಿದರೆ 7.5% ಬಡ್ಡಿ ನಿಗದಿ ಮಾಡಿದೆ.
ಕೃಷಿ ಜಮೀನು ಅಭಿವೃಧ್ಧಿಗಾಗಿ ಜಮೀನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೀಡು ಮಾಡಿ ಅವಶ್ಯವಿರುವಷ್ಟು ಹಣ ಸಾಲದ ರೂಪದಲ್ಲಿ ಮಂಜೂರು ಮಾಡುತ್ತಾರೆ.
ರೈತರು ಸೊಸೈಟಿ, ಪಿ.ಎಲ್. ಡಿ. ಬ್ಯಾಂಕಿನಲ್ಲಿ ಸಾಲ ಇದ್ದರೂ ಬ್ಯಾಂಕ್ ಪರಿಗಣಿಸದೆ ಸಾಲ ನೀಡಬೇಕು ಮತ್ತು ಸಿಬಿಲ್ ಸ್ಕೋರ್ ಇತ್ಯಾದಿ ಪರಿಗಣಿಸದೆ ರೈತರಿಗೆ ಸಾಲ ನೀಡಬೇಕು, ರೈತರು ಬ್ಯಾಂಕಿಗೆ ಸಾಲ ಪಡೆಯಲು ಬಂದಾಗ ಅವರಿಗೆ ಸದರಿ ಬ್ಯಾಂಕಿನಲ್ಲಿ ಸ್ಪಷ್ಟವಾಗಿ ಕಾಣುವಂತೆ ರೈತರಿಗೆ ಸದರಿ ಬ್ಯಾಂಕ್ ನೀಡುವ ಸಾಲ ಸೌಲಭ್ಯದ ಫಲಕ ಹಾಕಿರಬೇಕು ಹಾಗೂ ಬ್ಯಾಂಕಿಗೆ ಬರುವ ರೈತ ಗ್ರಾಹಕರಿಗೆ ಗೌರವದಿಂದ ಕಾಣಬೇಕು ಅವರನ್ನು ಕುಳ್ಳಿರಿಸಿ ಮಾಹಿತಿ ನೀಡಬೇಕು, ಸತಾಯಿಸ ಬಾರದು, ತಪ್ಪು ಮಾಹಿತಿ ನೀಡಬಾರದು ಮತ್ತು ಅವರಿಗೆ ಚಹಾ ಪಾನಿ ನೀಡಿದರೆ ಅದನ್ನು ಬ್ಯಾಂಕ್ ಶಾಖೆಯ ಜನರಲ್ ಚಾರ್ಜಸ್ ಖಾತೆ (GC) ಮೂಲಕ ಖರ್ಚು ಮಾಡಲು ಅವಕಾಶ ನೀಡಿದೆ.
ರೈತರ ಅನುಕೂಲಕ್ಕಾಗಿ ಪ್ರತಿ ಬ್ಯಾಂಕ್ ಶಾಖೆಯಲ್ಲಿ ಪ್ರತ್ಯೇಕ ಮ್ಯಾನೇಜರ್ ಹುದ್ದೆ ಸೃಷ್ಟಿಸಿ ಅವರಿಗೆ 80 ರಿಂದ ಒಂದು ಲಕ್ಷ ವೇತನ, TA & DA ಮತ್ತು ಮನೆ ಬಾಡಿಗೆ ಇತ್ಯಾದಿ ಸವಲತ್ತು ನೀಡಿದೆ.
ಇವರು ರೈತರ ಜೊತೆ ಸರಿಯಾಗಿ ವರ್ತಿಸದಿದ್ದರೆ ಬೆಂಗಳೂರಿನ HRMS ಗೆ ದೂರು ನೀಡುವ ಮೂಲಕ ರೈತರಿಗೆ ನ್ಯಾಯ ಒದಗಿಸುವ ವ್ಯವಸ್ಥೆ ಇದೆ.
ಆದರೆ ವಾಸ್ತವವಾಗಿ ಏನಾಗಿದೆ? ... ರೈತರನ್ನು ಯಾವುದೇ ಬ್ಯಾಂಕ್ ಶಾಖೆ ತನ್ನ RBI ಗೈಡ್ ಲೈನ್ ಪ್ರಕಾರ ಗೌರವಯುತವಾಗಿ ನಡೆಸುಕೊಳ್ಳುತ್ತಿಲ್ಲ, ರೈತರಿಗೆ ಅವಶ್ಯವಿಲ್ಲದ ದಾಖಲೆಗಾಗಿ ಅಲೆದಾಡಿಸುತ್ತಾರೆ, ಬ್ಯಾಂಕಿನ ಶಾಖೆಯಲ್ಲಿ ಅವರನ್ನು ಕನಿಷ್ಟ ಕುಳ್ಳಿರಿಸಿ ಮಾಹಿತಿ ಕೂಡ ನೀಡುವುದಿಲ್ಲ, ಅವರ ಹೆಸರಲ್ಲಿ ಸಿಬ್ಬಂದಿಗಳು ಕಾಫಿ /ಟಿ ಪಾರ್ಟಿ ಮಾಡಿ GC ಕ್ಲೈಮ್ ಮಾಡುತ್ತಿದ್ದಾರೆ, ಇರಬೇಕಾದ ನಾಮ ಫಲಕ ಬ್ರಾಂಚಿನ ಗೋದಾಮಿನಲ್ಲಿ ಒಗೆದಿರುತ್ತಾರೆ, ಮೇಲಾದಿಕಾರಿ ಬರುವಾಗ ಮಾತ್ರ ಪ್ರದಶಿ೯ಸುತ್ತಾರೆ.
ಕೃಷಿ ಸಾಲಕ್ಕೆ ನೇಮಕವಾಗಿರುವ ಮ್ಯಾನೇಜರ್ ರೈತರಿಗೆ ಸತಾಯಿಸಿ ಸಾಲ ನಿರಾಕರಿಸುವುದರಲ್ಲೆ ತನ್ನ ಸಮಯ ಕಳೆದು ತಿಂಗಳಾಂತ್ಯದಲ್ಲಿ ಲಕ್ಷಾಂತರ ಸಂಬಳ ಸಾರಿಗೆ ಪಡೆಯುವ ಮೋಸದಾಟ ನಡೆಸುತ್ತಾರೆ.
ಇದು ಒಂದು ಬ್ಯಾಂಕಿನ ಶಾಖೆ ಅಥವ ಒಂದು ಊರಿನ ಕಥೆ ಅಲ್ಲ ಇಡೀ ರಾಜ್ಯದ ಎಲ್ಲಾ ಬ್ಯಾಂಕಿನ ಶಾಖೆಗಳಲ್ಲಿ ನಿರಂತರವಾಗಿ ರೈತರನ್ನು ಶೋಷಣೆ ಮಾಡುವ ಕಥೆ ಆಗಿದೆ.
ಪಕ್ಕದ ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಶಾಸಕರುಗಳು ತಮ್ಮ ಕ್ಷೇತ್ರದ ಪ್ರತಿ ಬ್ಯಾಂಕಿನ ಶಾಖೆಯಲ್ಲಿ ಈ ರೀತಿ ಅಪರಾತಪರ ನಡೆಯಲು ಬಿಡುವುದಿಲ್ಲ ಮತ್ತು ಅಲ್ಲಿನ ರೈತ ಸಂಘಟನೆಗಳು ಪ್ರತಿ ಬ್ಯಾಂಕಿನಲ್ಲಿ ರೈತರಿಗೆ ನೀಡುವ ಸಾಲ ಸೌಲಭ್ಯವನ್ನು ಮಾನಿಟರಿಂಗ್ ಮಾಡುತ್ತದೆ ಮತ್ತು ರೈತರಲ್ಲಿ RBI ಗೈಡ ಲೈನ್ ಮಾಹಿತಿ ನೀಡುವ ಜನ ಜಾಗೃತಿ ಕಾರ್ಯಕ್ರಮ ನಿರಂತರವಾಗಿ ನಡೆಸುವುದರಿಂದ ಬ್ಯಾಂಕ್ ಸಿಬ್ಬಂದಿ ನಮ್ಮ ರಾಜ್ಯದಂತೆ ರೈತರನ್ನು ಸತಾಯಿಸುವುದಿಲ್ಲ.
ನಮ್ಮ ರಾಜ್ಯದ ಬ್ಯಾಂಕ್ ಸಿಬ್ಬಂದಿಗಳು ರೈತರ ಮಕ್ಕಳೇ ಆದರೂ ರೈತರನ್ನೇ ಶೋಷಿಸುವ ಹಿಂಸಾ ವಿನೋದಿಗಳಾಗಿರುವುದು ( Sadist) ವಿಪಯಾ೯ಸವಾಗಿದೆ.
Comments
Post a Comment