#Blog number 1773. ನನ್ನ ಆಫೀಸು ಪ್ರವೇಶಿಸಿ "ನಾನ್ಯಾರು" ಅಂದಾಗ ನೀವು ಶಾಂತಮ್ಮರ ಮಗ ವಸಂತಣ್ಣ ನಿಮ್ಮ ತಂದೆ ಪಾರೆಸ್ಟರ್ ಸುಶೀಲಪ್ಪನವರು, ನಿಮ್ಮ ತಂಗಿ ವಿಮಲಕ್ಕ ಮತ್ತು ಪ್ರೇಮಕ್ಕ ಅಂದಾಗ ಅವರಿಗೇ ಆಶ್ಚರ್ಯ ಕಾರಣ 56 ವರ್ಷದ ಹಿಂದೆ ಉದ್ಯೋಗಕ್ಕಾಗಿ ಊರು ತೊರೆದವರನ್ನು ಇದೇ ಮೊದಲ ಬಾರಿಗೆ ನೋಡಿದ್ದು.
#ನಿನ್ನೆಯ_ಘಟನೆ_ಮರೆಯಲಾರದ್ದು.
#ಅವರು_ನಮ್ಮ_ಊರು_ಬಿಟ್ಟಿದ್ದು_1967 .
#ನಾನು_ಹುಟ್ಟಿದ್ದು_1965.
#ನಿನ್ನೆ_ನನ್ನ_ಆಫೀಸಿಗೆ_ಬಂದು_ನಾನ್ಯಾರು_ಗೊತ್ತಾ_ಅಂದಾಗ_ನೀವು_ವಸಂತಣ್ಣ_ಅಂದಾಗ
#ನನ್ನ_ಮೆದುಳಿನ_ನೆನಪಿನ_ಕೋಶಗಳ_ಸಾಮರ್ಥ್ಯ_ನನಗೆ_ಅಚ್ಚರಿ.
ನನಗೆ ನನ್ನ ನೆನಪಿನ ಶಕ್ತಿ ಬಗ್ಗೆ ಅಂತಹ ನಿರ್ಧಿಷ್ಟ ಸಾಮರ್ಥ್ಯ ಗೊತ್ತಿಲ್ಲ ಮತ್ತು ಕೆಲ ಸಂದರ್ಭದಲ್ಲಿ ಅದು ಬೆಳಕಿಗೆ ಬಂದಾಗ ನನಗೆ ಆಶ್ಚರ್ಯ.
ನಿನ್ನೆ ಬೆಳಿಗ್ಗೆ ನಮ್ಮ ಆನಂದಪುರ೦ನ ನಾಡ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ತಾವರೇಹಳ್ಳಿ ಗೋವಿಂದ ಮೂರ್ತಿ ಬಂದು ಈ ಹಿಂದೆ ಆನಂದಪುರಂನ ರೆವಿನ್ಯೂ ಇನ್ಸ್ಪೆಕ್ಟರ್ ಆಗಿದ್ದ ಈಗ ನಿವೃತ್ತರಾದ ಚೌಡಪ್ಪರ ಮಗ ಬಂದಿದ್ದಾರೆ ನಿಮ್ಮನ್ನು ಬೇಟಿ ಆಗಲು ಅಂದಾಗ 5-6 ಜನ ನನ್ನ ಅಪೀಸ್ ಒಳಗೆ ಬಂದರು.
ಅವರಲ್ಲಿ ಒಬ್ಬರು "ನಾನ್ಯಾರು ಗೊತ್ತಾಯಿತಾ?" ಅಂದರು ತಕ್ಷಣ ಬನ್ನಿ ಬನ್ನಿ ಅಂತ ಅನ್ನುತ್ತಾ ಅವರ ಪ್ರಶ್ನೆಗೆ ಉತ್ತರಿಸಲು ನನ್ನ ಮೆದುಳಿನ ನೆನಪಿನ ಕೋಶಗಳು ನೆನಪನ್ನು ಹೊರಹಾಕಿತು.. "ವಸಂತಣ್ಣ.. ಶಾಂತಮ್ಮರ ಮಗ... ನಿಮ್ಮ ತಂದೆ ಪಾರೆಸ್ಟರ್ ಸುಶೀಲಪ್ಪ ಅವರ ಹ್ಯಾಟ್ ಬ್ರಿಟಿಷ ಕಾಲದ್ದು ... ನಿಮ್ಮ ತಂಗಿಯಂದಿರು ವಿಮಲಕ್ಕ ಮತ್ತು ಪ್ರೇಮಕ್ಕ" ಅಂದಾಗ ಅವರಿಗೆ ಒಂದು ಕ್ಷಣ ಶಾಕ್ ಆಯಿತು.
ಅವರು ನಮ್ಮ ಯಡೇಹಳ್ಳಿಯ ಮೂಲ ನಿವಾಸಿಗಳು, ಇವರ ತಂದೆ ಬ್ರಿಟೀಶ್ ಕಾಲದಲ್ಲಿ ನಮ್ಮ ಊರಿನ ಫಾರೆಸ್ಟರ್ ಸ್ವಾತಂತ್ರ್ಯ ನಂತರವೂ ಇವರ ಉದ್ಯೋಗ ಮುಂದುವರೆಯಿತು.
ಇವರ ಮನೆ ಯಡೇಹಳ್ಳಿಯ ಸಂತ ಜೂದರ ಚರ್ಚ ಎದುರು ಇತ್ತು ಆಗ ನಮ್ಮ ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿ ಮೊದಲಿಗೆ ನಮ್ಮ ಮನೆ ನಂತರದ್ದು ಕುಲಿಮೆ ರಾಮಣ್ಣ ಆಚಾರದ್ದು ನಂತರದ್ದು ಪಾಂಡು ಪ್ರಭು ಅವರ ತಂದೆಯ ಮನೆ ನಂತರದ್ದು ಪಾರೆಸ್ಟರ್ ಸುಶೀಲಪ್ಪರ ಮನೆ ನಂತರ ರೈಲ್ವೇ ರಸ್ತೆ ನಂತರ ಬ್ರಿಟಿಷ್ ಬಂಗ್ಲೆ ನಂತರ ಬಟ್ಟಿಮಲ್ಲಪ್ಪದ ತನಕ ರಸ್ತೆಯ ಇಕ್ಕೆಲ 10 ಕಿ.ಮಿ.ದಟ್ಟಾರಣ್ಯ ಆಗಿತ್ತು.
ಅಲ್ಲಿ ಆಗಿನ ಕಾಲದಲ್ಲಿ ಇವರ ಮನೆ ಮಾಡರ್ನ್ ಅನ್ನಿಸಿತ್ತು ಯಾಕೆಂದರೆ ಅವರ ಆಗಿನ ಮನೆ ಆನಂದಪುರಂಗೆ ಸೂಪರ್ ಶೈಲಿ.
ಒಂದು ಭಾಗ ಪಾರೆಸ್ಟರ್ ಸುಶೀಲಪ್ಪರ ವಾಸಕ್ಕೆ ಇನ್ನೊಂದು ಭಾಗ ಬಾಡಿಗೆ ಮನೆ ಮದ್ಯದಲ್ಲಿ ಒಂದು ಅಂಗಡಿ ಮಳಿಗೆ ಅದರಲ್ಲಿ ಆ ಕಾಲದ ಪ್ರತಿಷ್ಟಿತ ಬ್ರಾಂಡ್ ನ ಚಾಕೋಲೆಟ್ ಬಿಸ್ಕಿಟ್ ಗಳು ಸ್ವಚ್ಚ ಗಾಜಿನ ಭರಣಿಗಳಲ್ಲಿ ಇರುತ್ತಿತ್ತು.
ಅಂಗಡಿ ಎದರಲ್ಲಿ ಚೆಸ್ ಮತ್ತು ಕೇರಂ ಬೋರ್ಡ್ ಇರುತ್ತಿತ್ತು.
ಸುಶೀಲಪ್ಪನವರು ಪ್ರೋಟೆಸ್ಟಂಟ್ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವರು ಅವರ ಪತ್ನಿ ಶಾಂತಮ್ಮ ನನ್ನ ತಾಯಿಯ ಆತ್ಮೀಯ ಗೆಳತಿ.
ವಸಂತ್ ಆರೋಗ್ಯ ಇಲಾಖೆ ಉದ್ಯೋಗಕ್ಕಾಗಿ 1967ರಲ್ಲಿ ಊರು ಬಿಟ್ಟರು, ಇವರ ತಂಗಿ ವಿಮಲಾ ಸ್ವಾಪ್ ನರ್ಸ ಆಗಿ ಉದ್ಯೋಗಕ್ಕೆ ಹೋದರು, ಇವರ ಸಣ್ಣ ತಂಗಿ ಪ್ರೇಮ ಶಿಕ್ಷಕಿ ಆಗಿ ಶಿಕಾರಿಪುರದಲ್ಲಿ ನೆಲೆಸಿದರು.
ವಸಂತರಿಗೆ ಈಗ 78ರ ವಯೋಮಾನ ನನಗೆ 58.
ಇವರು ನನ್ನ ಆತ್ಮೀಯರಾಗಿದ್ದ ರೆವಿನ್ಯೂ ಇನ್ಸ್ಪೆಕ್ಟರ್ ಚೌಡಪ್ಪರ ಸಂಬಂದಿಗಳೂ ಆಗಿದ್ದಾರೆ.
55 ವರ್ಷದ ಹಿಂದಿನ ನೆನಪಿನ ಸಂಬಂದ ಆ ಕ್ಷಣದಲ್ಲಿ ನೆನಪಾಗಿದ್ದು ಹೇಗೆ? ನನಗೆ ಆಶ್ವರ್ಯ, ನಾನು ನನ್ನ ಬ್ಲಾಗಿನಲ್ಲಿ ಈಗ ದಾಖಲಿಸಿರುವ 1770 ಲೇಖನಗಳು ಇದೇ ರೀತಿ ಇದ್ದಕ್ಕಿದ್ದಂತೆ ನೆನಪಾದ ನೆನಪುಗಳು, ನನ್ನ ಗುರಿಯಾದ 2000 ಲೇಖನಗಳಿಗೆ 230 ಲೇಖನ ಬಾಕಿ ಇದೆ.
ಮನುಷ್ಯನ ಮೆದುಳು ಏನೇನಲ್ಲ ನೆನಪನ್ನು ಶೇಖರಿಸಿಕೊಂಡಿರುತ್ತೋ ದೇವರೇ ಬಲ್ಲ.
Comments
Post a Comment