https://youtube.com/shorts/GM9x-qJ98gw?feature=shared
ನಿನ್ನೆ ನಮ್ಮ ಮಲ್ಲಿಕಾ ವೆಜ್ ಗೆ ಆಪ್ತ ಮುಂಬಾಳು ಕುಟ್ಟೀಚನ್ ತಂದದದ್ದು.
ಎರೆಡೂ ಕಾಲು ಅಡಿ ಉದ್ದದ ಹದಿನಾರು ಕೆಜಿ ತೂಕದ ಬೂದುಗುಂಬಳ
ಸಾಮಾನ್ಯವಾಗಿ ದುಂಡಾಗಿರುತ್ತದೆ ಬೂದುಗುಂಬಳ
ಈ ಬೂದು ಕುಂಬಳ ಮಾತ್ರ ಸೋರೆಕಾಯಿ ರೀತಿ ಉದ್ದವಾಗಿದೆ.
ನನ್ನ ಅತ್ಯಾಪ್ತ ಮಲೆಯಾಳಿ ಮಿತ್ರ ಮುಂಬಾಳಿನ ಕುಟ್ಟಿಚನ್ ಗೆ ನಮ್ಮ ಸಂಸ್ಥೆಯಿಂದ ಪಾವತಿಸ ಬೇಕಾದ ಬಾಕಿ 2800 ರೂಪಾಯಿ ಕಳೆದ ಐದು ತಿಂಗಳಿಂದ ಸ್ವೀಕರಿಸಲು ಬಂದಿಲ್ಲ ಅಂದಿದ್ದರಿಂದ ನಾನೇ ಪೋನು ಮಾಡಿದೆ.
"ಹಣ ನಿಮ್ಮ ಹತ್ತಿರ ಇದ್ದರೆ ಬ್ಯಾಂಕಿಗಿಂತ ಗ್ಯಾರ೦ಟಿ, ಮರಗೆಣಸು,ಸುವರ್ಣ ಗೆಡ್ಡೆ ಎಲ್ಲಾ ಬೆಲೆ ಜಾಸ್ತಿ ಅದಕ್ಕೆ ಬರಲಿಲ್ಲ" ಅಂದಾಗ, ಇವತ್ತೇ ಬಂದು ಬಾಕಿ ತೆಗೆದು ಕೊಂಡು ಹೋಗಲು ವಿನಂತಿಸಿದ್ದೆ.
ಹಣ ಪಡೆಯಲು ಬಂದ ಕುಟ್ಟೀಚನ್ 150 ಕೇಜಿ ಬೂದು ಗುಂಬಳ, 15 ಕೇಜಿ ಚಿಕ್ಕು ಹಣ್ಣು, 2 ಕೇಜಿ ನೇಂದ್ರ ಬಾಳೆಹಣ್ಣು ತಂದಿದ್ದರು.
ಒ0ದು ವಿಶೇಷ ಅಂದರೆ ಬೂದ ಗುಂಬಳದ ಆಕಾರ, ಸಾಮಾನ್ಯವಾಗಿ ಬೂದ ಗುಂಬಳ ಗುಂಡಾಗಿ ಇರುತ್ತದೆ ಆದರೆ ಕುಟ್ಟೀಚನ್ ತಂದ ಬೂದ ಗುಂಬಳದಲ್ಲಿ ಎರೆಡು ಬೂದ ಗುಂಬಳ ಮಾತ್ರ 28 ಇಂಚು ಉದ್ದ ಮತ್ತು 16 ಕೇಜಿ ತೂಗಿದೆ!.
ಈ ಅಪರೂಪದ ಆಕಾರದ ಬೂದಗುಂಬಳ ಮುಂಬಾಳಿನ ಶುಂಠಿ ವ್ಯಾಪಾರಿಗಳು ಮತ್ತು ಪ್ರಗತಿ ಪರ ರೈತರಾದ ಬಸಪ್ಪನವರು ಬೆಳೆದ ಬೂದಗುಂಬಳ ಖರೀದಿಸಿ ತಂದಿದ್ದಾಗಿ ಕುಟ್ಟೀಚನ್ ತಿಳಿಸಿದ್ದಾರೆ.
ಬೆಂಗಳೂರಿಂದ ಬಂದಿದ್ದ ಚಲನ ಚಿತ್ರ ನಿರ್ದೇಶಕರಾಗ ಟಿ.ಎನ್.ನಾಗೇಶ್ ಮತ್ತು ಕೆ.ಕೆ.ಗಿರೀಶ್ ಕೂಡ ಆಶ್ಚರ್ಯ ಪಟ್ಟರು.
Comments
Post a Comment