https://youtu.be/ZGP02mG3Pz0?feature=shared
#ಭೂಮಿ_ಹುಣ್ಣಿಮೆ_ಭಕ್ತಿಪೂರ್ವಕವಾಗಿ_ಆಚರಿಸಿದ_ನಮ್ಮ_ಸಿಬ್ಬಂದಿ
#ಕಣ್ಣೂರಿನ_ನಾಗರಾಜ್
#ಕಳೆದ_ಐದು_ವರ್ಷದಿಂದ_ನಮ್ಮ_ಸಂಸ್ಥೆಯ_ಮ್ಯಾನೆಜ್ಮೆಂಟ್_ಗ್ರೂಪಿನಲ್ಲಿದ್ದಾರೆ.
ನಾನು ಬಾಲ್ಯದಲ್ಲಿ ಬಿದನೂರು ನಗರದ ದೇವಗಂಗೆಯಲ್ಲಿ ನನ್ನ ತಾಯಿಯ ಅಕ್ಕ ನನ್ನ ದೊಡ್ಡಮ್ಮನ ಮನೆಯಲ್ಲಿ ಭೂಮಿ ಹುಣ್ಣಿಮೆ ಆಚರಣೆಯನ್ನು ನೋಡಿದ್ದೆ ನಂತರ ನಾನು ಭೂಮಿ ಹುಣ್ಣಿಮೆಯಲ್ಲಿ ಸ್ವತಃ ಭಾಗವಹಿಸಲಿಲ್ಲ ಮತ್ತು ನಮ್ಮ ಮನೆಯಲ್ಲಿ ಇದನ್ನು ಆಚರಿಸುವ ಪದ್ದತಿ ಇಲ್ಲ.
ಮಲೆನಾಡಿನ ದೀವರ ಭೂಮಿ ಹುಣ್ಣಿಮೆ ಆಚರಣೆ ಬಗ್ಗೆ ಸವಿಸ್ತಾರವಾಗಿ ಸಚಿತ್ರವಾಗಿ ಮೊದಲು ವರದಿ ಮಾಡಿದವರು ಸಾಗರದ ಪತ್ರಕರ್ತ ದೀಪಕ್ ಸಾಗರ್ ಈಗ ಪ್ರತಿ ವರ್ಷ ಮಲೆನಾಡಿನ ಭೂಮಿ ಹುಣ್ಣಿಮೆಯ ಆಚರಣೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚು ಹೆಚ್ಚು ಮಾಹಿತಿ ಲಭ್ಯವಿದೆ.
ನಮ್ಮ ಸಂಸ್ಥೆಯಲ್ಲಿ ಸಣ್ಣ ಕೆಲಸಕ್ಕೆ ಸೇರಿ ಈಗ ಇಡೀ ನಮ್ಮ ಸಂಸ್ಥೆಯ ಜವಾಬ್ದಾರಿಯುತ ಆಡಳಿತ ಮಂಡಳಿಯಲ್ಲಿ ಪ್ರಮುಖರಾಗಿ ಅತಿ ಹೆಚ್ಚು ಸಂಭಾವನೆ ಜೊತೆ ಜವಾಬ್ದಾರಿ ಕಾರ್ಯನಿರ್ವಹಿಸುತ್ತಿರುವ ಕಣ್ಣೂರಿನ ನಾಗರಾಜ್ ಅವರ ಮನೆಯ ಭೂಮಿ ಹುಣ್ಣಿಮೆ ಕಾರ್ಯಕ್ರಮದ ವಿಡಿಯೋ ಮತ್ತು ಪೋಟೋ ನೋಡಿದೆ.
ಪ್ರಾಮಾಣಿಕತೆ, ನಿಯತ್ತುಗಳಿಂದ ಕಣ್ಣೂರಿನ ನಾಗರಾಜ್ ನನ್ನ ಆತ್ಮೀಯ ವ್ಯಕ್ತಿ ಆಗಿದ್ದಾರೆ ಅಷ್ಟೇ ಅಲ್ಲ ಇಡೀ ಸಂಸ್ಥೆಯಲ್ಲಿ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ.
ಇವರ ದೀವರ ಸಮಾಜದಲ್ಲಿ ಗೌರಿ ಹಬ್ಬ ಮತ್ತು ಭೂಮಿ ಹ ಹುಣ್ಣಿಮೆಗೆ ವಿಶೇಷ ಪ್ರಾತಿನಿಧ್ಯವಿದೆ, ಅತ್ಯಂತ ಭಕ್ತಿ ಪೂರ್ವಕವಾಗಿ ಈ ಹಬ್ಬಗಳನ್ನು ಆಚರಿಸುತ್ತಾರೆ.
Comments
Post a Comment