Blog number 1775. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಲಾತ್ಮಕ ಮನೆಯ ಡಾಕ್ಟರ್ ಅರ್ಜುನ್ ಹೆಗ್ಗಡೆ ನನ್ನ ಸಾಮಾಜಿಕ ಜಾಲತಾಣದ ಗೆಳೆಯ ರವೀಶ್ ನಿಟ್ಟೂರು ಇವರ ಪುತ್ರರು ಮಣಿಪಾಲ್ ಆಸ್ಪತ್ರೆಯಲ್ಲಿ ಪೇಜಾವರ ಶ್ರೀಗಳಿಗೆ ಚಿಕಿತ್ಸೆ ನೀಡಿದವರು.
#ಶಿವಮೊಗ್ಗದ_ನಂಜಪ್ಪ_ಹೆಲ್ತ್_ಕೇರ್_ಡಾಕ್ಟರ್_ಅರ್ಜುನ_ಹೆಗಡೆ_ನಿಟ್ಟೂರು.
#ಇವರು_ಗೆಳೆಯರಾದ_ನಿಟ್ಟೂರು_ರವೀಶರ_ಪುತ್ರ.
#ಖ್ಯಾತ_ಚಲನಚಿತ್ರ_ನಿರ್ದೇಶಕ_ಗಿರೀಶ್_ಕಾಸರವಳ್ಳಿ_ನೀನಾಸಂ_ಕೆವಿ_ಸುಬ್ಬಣ್ಣರ_ಸಂಬಂದಿಗಳು.
#ರವೀಶರ_110_ಎಕರೆ_ಭೂಮಿ_ಹಿರೇಬಾಸ್ಕರ_ಡ್ಯಾಂನಲ್ಲಿ_ಮುಳುಗಡೆ_ಆಯಿತು.
#ಇವರ_ತಂದೆ_ನಿಟ್ಟೂರು_ಸುಬ್ಬರಾವ್_1947ರಲ್ಲಿ_ಈ_ಊರಲ್ಲಿ_ಕಟ್ಟಿಸಿದ_ಮನೆ_ಮಾಸ್ಟರ್_ಪೀಸ್_ಹೆರಿಟೇಜ್_ಹೋಮ್.
#ಇದನ್ನು_ಬೈಂದೂರಿನ_ಮಂಜುನಾಥ_ಆಚಾರ್_ನಿರ್ಮಿಸಿದ್ದಂತೆ
#ಈ_ಮನೆ_ಕನ್ನೇಶ್ವರರಾಮ_ಸೇರಿ_ಅನೇಕ_ಸಿನಿಮಾ_ಚಿತ್ರಿಕರಣ_ಆಗಿದೆ.
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ (1995-2000) ಇವರ ಕ್ಷೇತ್ರದ ಯಡೂರಿನ ಜಿಲ್ಲಾ ಪಂಚಾಯತ್ ಸದಸ್ಯರಾದ ಹಿರಿಯಣ್ಣ ಗೌಡರ ಜೊತೆ #ನಿಟ್ಟೂರಿನ_ರವೀಶ್ ಮತ್ತು ಗೆಳಯರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಛೇರಿಗೆ ಬರುತ್ತಿದ್ದಾಗ ನೋಡಿ ಪರಿಚಯ ಈಗ ಸಾಮಾಜಿಕ ಜಾಲ ತಾಣದಲ್ಲಿ ನನ್ನ ಸಮಾನ ಮನಸ್ಕ ಗೆಳೆಯರಾಗಿದ್ದಾರೆ.
ಇವರ ಪುತ್ರ ಡಾಕ್ಟರ್ ಅರ್ಜುನ್ ಹೆಗ್ಗಡೆ ಮಣಿಪಾಲಿನ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿದ್ದಾಗ ಪೇಜಾವರ ಸ್ವಾಮೀಜಿಯವರಿಗೆ ಕೊನೆಯ ದಿನಗಳಲ್ಲಿ ಚಿಕಿತ್ಸೆ ನೀಡಿದವರು.
ಈಗ ಅವರು ಶಿವಮೊಗ್ಗದ ಪ್ರಖ್ಯಾತ ನಂಜಪ್ಪ ಹೆಲ್ತ್ ಕೇರ್ ನಲ್ಲಿ ತಜ್ಞ ವೈದ್ಯರಾಗಿದ್ದಾರೆ ಇವರ ಪತ್ನಿ ಕೂಡ ವೈದ್ಯರು, ಕೆಲ ತಿಂಗಳ ಹಿಂದೆ ನಮ್ಮ ಮಲ್ಲಿಕಾ ವೆಜ್ ಗೆ ಬಂದು ಉಪಹಾರ ಸೇವಿಸಿದ್ದು ಅವರ ತಂದೆಗೆ ತಿಳಿಸಿದ್ದರಂತೆ.
ಆಗ ರವೀಶ್ ಈ ವಿಚಾರ ತಿಳಿಸಿದಾಗ ಇನ್ನೊಮ್ಮೆ ಡಾಕ್ಟರ್ ಅರ್ಜುನ್ ಈ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ತಪ್ಪದೇ ನನ್ನ ಬೇಟಿ ಮಾಡಿಸಲು ವಿನಂತಿಸಿದ್ದೆ.
ಮೊನ್ನೆ ಭಾನುವಾರ ಡಾ.ಅರ್ಜುನ್ ಕುಟುಂಬ ವಾರಾಂತ್ಯದ ರಜೆಗೆ ಜೋಗ್ ಪಾಲ್ಸನ ಜಂಗಲ್ ಲಾಡ್ಜ್ ಗೆ ಹೋಗುವಾಗ ಕಾಫಿಗಾಗಿ ಮಲ್ಲಿಕಾ ವೆಜ್ ನಲ್ಲಿ ಬ್ರೇಕ್ ಜರ್ನಿ ಮಾಡಿದಾಗ ನನ್ನ ಆಫೀಸಿನಲ್ಲಿ ಪರಸ್ಪರ ಪರಿಚಯ, ಕುಶೋಲೋಪರಿ ಆಯಿತು.
ಯಾವುದೇ ಸಂದರ್ಭದಲ್ಲಿ ಯುವ ವೈದ್ಯರು ಸಲಹೆ ಸಹಕಾರ ನೀಡಲು ಒಪ್ಪಿದ್ದಾರೆ ಅವರಿಗೆ ನಮ್ಮ ಮಲ್ಲಿಕಾ ವೆಜ್ ನ ಪಿಲ್ಟರ್ ಕಾಫಿ ತುಂಬಾ ಇಷ್ಟ ಆಯಿತು ಅಂದದ್ದು ನನಗೆ ಖುಷಿ ತಂದಿದೆ.
ನಿಟ್ಟೂರಿನ ಈ ಪ್ರತಿಷ್ಟಿತ ಕುಟುಂಬ ಶರಾವತಿ ವಿದ್ಯುತ್ ಯೋಜನೆಗಾಗಿ ಮೊದಲ ಆಣೆಕಟ್ಟು ಹಿರೇ ಭಾಸ್ಕರದ ಡ್ಯಾಂ ನಲ್ಲಿ 110 ಎಕರೆ ಮುಳುಗಡೆ ಆಗಿ ಜಮೀನು ಕಳೆದುಕೊಂಡ ಶ್ರೀಮಂತ ಕುಟುಂಬ.
ನಂತರ ನಿಟ್ಟೂರಿನಲ್ಲಿ ಹೊಸದಾಗಿ ಕೃಷಿ ಭೂಮಿ ಮಾಡಿಕೊಂಡು ಅಲ್ಲಿ 1948 ರಲ್ಲಿ ಸುಸಜ್ಜಿತವಾದ ಸುಂದರವಾದ ಮನೆ ನಿಟ್ಟೂರು ರವೀಶರ ತಂದೆ ಹನ್ನಾರ ಬೇಳೂರು ಸುಬ್ಬರಾವ್ ನಿರ್ಮಿಸಿದ್ದಾರೆ ಈ ಮನೆಯ ಕಾಮಗಾರಿ ಆ ಕಾಲದಲ್ಲಿ ಬೈಂದೂರಿನ ಮಂಜುನಾಥ ಆಚಾರ್ ಎಂಬುವವರು ನಿರ್ಮಿಸಿದ್ದಂತೆ ಈ ಮನೆ ಕುಪ್ಪಳ್ಳಿಯ ಕುವೆಂಪು ಅವರ ಮನೆಯಂತೆ ಇದೆ ಮತ್ತು ಇವರ ಮನೆಗೆ ಹೆಚ್ಚು ಬೀಟೆ ಮರ ಬಳಸಿದ್ದಾರೆ ಮತ್ತು ಮರದ ಸುಂದರ ಕೆತ್ತನೆ ಈ ಮನೆಗೆ ಇನ್ನೂ ಹೆಚ್ಚಿನ ಆಕರ್ಷಣೆ ನೀಡಿದೆ ಇದೊಂದು ಮಲೆನಾಡಿನ ಹೆರಿಟೇಜ್ ಹೊಂ ಅಂತಲೇ ಹೇಳಬಹುದು ಆದ್ದರಿಂದ ಈ ಮನೆಯಲ್ಲಿ ಕನ್ನೇಶ್ವರ ರಾಮ, ಕಪ್ಪು ಕೇಳ, ಎದರು ಅಲೆಗಳು, ರಾಮನ ಸವಾರಿ ಮುಂತಾದ ಅನೇಕ ಕನ್ನಡ ಸಿನಿಮಾಗಳಲ್ಲದೆ ತೆಲುಗಿನ ಪಯಣಮ್ ಕೂಡ ಈ ಸುಂದರ ಮನೆಯಲ್ಲಿ ಚಿತ್ರಿಕರಣ ಆಗಿದೆ ಈಗ ರವೀಶ್ ಸಿನಿಮಾ ಚಿತ್ರೀಕರಣಕ್ಕೆ ಮನೆ ಕೊಡಲು ನಿರಾಕರಿಸುತ್ತಾರೆ.
ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಇವರ ಪತ್ನಿಗೆ ಚಿಕ್ಕಪ್ಪ, ಗಿರೀಶ್ ಕಾಸರವಳ್ಳಿಯವರಿಗೆ ಹೆಗ್ಗೋಡಿನ ನೀನಾಸಂ ಕೆ.ವಿ.ಸುಬ್ಬಣ್ಣ ಚಿಕ್ಕಪ್ಪ ಆಗಬೇಕು, ಕೆ.ವಿ.ಸುಬ್ಬಣ್ಣ ರವೀಶ್ ರ ಚಿಕ್ಕಮ್ಮನ ತಂಗಿಯ ಪತಿ ಹೀಗೆ ಇವರ ಕುಟುಂಬ ಪ್ರತಿಬಾವಂತರದ್ದು ಹಾಗೂ ವಿಚಾರವಂತರದ್ದಾಗಿದೆ.
Comments
Post a Comment