https://youtu.be/IGkq6uUe4aI?feature=shared
#ವಿಶ್ವದ_ಅತಿದೊಡ್ಡ_ಅಂಚೆ_ಜಾಲ_ಬದಿಗೆ_ಸರಿಸಿದ_ಕೋರಿಯರ್_ಸಾಮ್ರಾಜ್ಯ
#ಭಾರತದಲ್ಲಿ_1980ರಿಂದ_ಪ್ರಾರಂಭಗೊಂಡ_ಕೋರಿಯರ್
#ಕೋರಿಯರ್_ಮೂಲ_ಯಾವುದು?
#ಅ೦ಚೆ_ಇಲಾಖೆ_ವೈಪಲ್ಯ_ಏಕೆ?
ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೇ ಬೃಹತ್ ಜಾಲ ಹೊಂದಿರುವ ಏಕೈಕ ಸಂಸ್ಥೆ ಇದರ ಒಂದು ಲಕ್ಷದ ಐವತ್ತು ಸಾವಿರ ಶಾಖೆಗಳು ಭಾರತದಲ್ಲಿ ಕಾರ್ಯ ನಿವ೯ಹಣೆ ಮಾಡುತ್ತಿದೆ.
ಆದರೆ ಖಾಸಾಗಿ ಕೋರಿಯರ್ ಸಂಸ್ಥೆಗಳು 1980ರಲ್ಲಿ ಭಾರತದಲ್ಲಿ ಪ್ರಾರಂಭಗೊಂಡಿದ್ದು ಇವತ್ತು ಭಾರತೀಯ ಅಂಚೆ ಇಲಾಖೆಗಿಂತ ಹೆಚ್ಚಿನ ವಹೀವಾಟು ಮಾಡುತ್ತಾ ಗ್ರಾಹಕ ಸ್ನೇಹಿ ಸಂಸ್ಥೆಗಳಾಗಿದೆ.
ಅಮೇಜಾನ್ - ಪ್ರೊಪೆಷನಲ್ - DHL- ಬ್ಲೂಡಾರ್ಟ್ - DTDC - FedEx-TNT -VRL - UPS - EMS - ಇಂಡಿಯಾ ಪೋಸ್ಟ್ - J & T Express- ಅರಾಮೆಕ್ಸ್ - OLS- Gati Ltd - EkART - ದೆಹಲಿವರಿ - ಆನ್ ಲೈನ್ ಟ್ರಕ್ ಮುಂತಾದ ಕಂಪನಿಗಳು ಭಾರತ ದೇಶದಲ್ಲಿ ದೊಡ್ಡ ಉದ್ಯಮವಾಗಿ ಲಕ್ಷಾಂತರ ಜನರಿಗೆ ಉದ್ಯೋಗದ ಜೊತೆ ಗ್ರಾಹಕ ಸ್ನೇಹಿಯಾಗಿ ಪಾರ್ಸೆಲ್ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.
ಕೋರಿಯರ್ ಮೂಲ ಯಾವುದೆಂದರೆ ಚೆಂಗಿಸ್ ಖಾನ್ ತನ್ನ ಅಶ್ವದಳದ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರವಾನಿಸುತ್ತಿದ್ದ ಪತ್ರ ಸಂಪರ್ಕ ಎನ್ನುತ್ತಾರೆ.
ನಾವು ಕಳಿಸುವ ಪಾರ್ಸೆಲ್ ಗೆ ಭದ್ರತೆ, ವೇಗವಾಗಿ ತಲುಪಿಸುವ ವ್ಯವಸ್ಥೆ, ಪಾರ್ಸೆಲ್ ಸಾಗಾಣಿಕೆ ಟ್ರಾಕಿಂಗ್, ಕ್ಯಾಷ್ ಆಪ್ಟರ್ ಡೆಲೆವರಿ ಸೇವೆಗಳು ಅಂಚೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದೆ.
ಸರ್ಕಾರಿ ಮಾಲಿಕತ್ವದ ಬೃಹತ್ ಸಂಪರ್ಕ ಜಾಲದ ಅಂಚೆ ಇಲಾಖೆ ಇಂತಹ ಕೋರಿಯರ್ ವ್ಯವಸ್ಥೆಯನ್ನು ತನ್ನ ಸ್ಟೀಡ್ ಪೋಸ್ಟ್ ಮುಖಾಂತರ ಪ್ರಾರಂಬಿಸಿದೆ ಆದರೆ ಸ್ಪೀಡ್ ಪೋಸ್ಟ್ ಕಳಿಸುವ ವಸ್ತುಗಳನ್ನು ಡ್ಯಾಮೇಜ್ ಮಾಡದೆ ತಲುಪಿಸುವ ಭರವಸೆ ಇಲ್ಲ... ಗಟ್ಟಿ ಮುಟ್ಟಾದ ಪ್ಯಾಕ್ ಗಳು ಶಿಥಿಲವಾಗಿ ಗ್ರಾಹಕರ ಮನೆಗೆ ತಲುಪುತ್ತದೆಂದು ದೂರುಗಳಿದೆ ಮತ್ತು ಅಂಚೆ ಇಲಾಖೆಯ ಸಿಬ್ಬಂದಿಗಳು ಗ್ರಾಹಕರ ಮೇಲೆ ತೋರುವ ಸಿಟ್ಟು ದರ್ಪಗಳು ಅಂಚೆ ಇಲಾಖೆಗೆ ಗ್ರಾಹಕ ಸ್ನೇಹಿ ಅಲ್ಲವೆನ್ನುವ ಅಪವಾದಗಳು ಮುಂದುವರಿದಿದೆ.
Comments
Post a Comment