Blog number 1794. ದೇವರ ಶಿಲಾ ವಿಗ್ರಹಗಳಿಗೆ ಸುಂದರವಾಗಿ ಕಲಾತ್ಮಕವಾಗಿ ಬೆಣ್ಣೆ ಅಲಂಕಾರ ಮಾಡಿಕೊಡುವ ಶಿವಮೊಗ್ಗದ ಭಾರ್ಗವ ಶಾಸ್ತ್ರೀಗಳು.
https://youtu.be/uuKTselN-O4?feature=shared
#ಆನಂದಪುರಂ_ಇತಿಹಾಸ_ಸಂಖ್ಯೆ_175
#ದೇವರ_ಬೆಣ್ಣೆ_ಅಲಂಕಾರ_ಪ್ರವೀಣರಾದ
#ರಾಜ್ಯ_ಪ್ರಶಸ್ತಿ_ವಿಜೇತ
#ದೇವರ_ಬೆಣ್ಣೆ_ಅಲಂಕಾರಕ್ಕಾಗಿ_ಪೋಲೆಂಡ್_ದೇಶಕ್ಕೆ_ಹೋಗಿ_ಬಂದ
#ಎಸ್_ಭಾರ್ಗವ_ಶಾಸ್ತ್ರೀ_ಅವರ_59ನೆ_ಹುಟ್ಟು_ಹಬ್ಬದಂದು_ನಮ್ಮ_ಊರಿನ_ಶ್ರೀವರಸಿದ್ಧಿ_ವಿನಾಯಕ_ದೇವರಿಗೆ
#ಇವತ್ತಿನ_ನಮ್ಮ_ಮನೆ_ಹರಕೆಯ_ಬೆಣ್ಣೆ_ಅಲಂಕಾರ.
#ಇವರು_ನಮ್ಮ_ಊರಿನ_ವೇದನಾರಾಯಣ_ಭಟ್ಟರ_ತಂಗಿ_ಮಗ.
ಇವರ ಹೆಸರು ಎಸ್. ಭಾರ್ಗವ ಶಾಸ್ತ್ರೀ ಇವರ ತಂದೆ ಶ್ಯಾಮ ಶಾಸ್ತ್ರೀ ಇವರ ತಾಯಿ ಶ್ರೀಮತಿ ರಮಾಮಣಿ ಇವರ ಅಣ್ಣ ನಮ್ಮ ಆನಂದಪುರಂನ ವೇದ ನಾರಾಯಣ ಭಟ್ಟರು ಇವರ ಬಾಡಿಗೆ ಮನೆಯಲ್ಲೇ ಜನ್ಮ ತಾಳಿದವರು ಸಮುದ್ರದಲ್ಲಿ ಮುಳುಗಿದ ಶ್ರೀ ಕೃಷ್ಣನ ದ್ವಾರಕಾ ನಗರ ಸಂಶೋದನೆ ಮಾಡಿದ ಶಿಕಾರಿಪುರ ರಂಗನಾಥ ರಾವ್.
ವೇದ ನಾರಾಯಣ ಭಟ್ಟರ ಸಹೋದರ ಸಾಗರದ ಕೋಳಿವಾಡ ಪಾಂಡುರಂಗ ಭಟ್ಟರು ಇವರು ಭಾಮಿನಿ ಷಟ್ಪದಿಯಲ್ಲಿ ರಾಮಾಯಣ ಬರೆದಿದ್ದಾರೆ ಇವರ ಮನೆ ಹಿಂದಿನ ಹಲಸಿನ ಮರದಿಂದಲೇ ಸಾಗರದ ಇತಿಹಾಸ ಪ್ರಸಿದ್ದ ಮಾರಿಕಾಂಭಾ ದೇವಿ ವಿಗ್ರಹ ಕೆತ್ತಲಾಗಿದೆ.
ಭಾಗ೯ವ ಶಾಸ್ತ್ರೀ ವಂಶಸ್ಥರು ಬಿದನೂರಿನ ಕೆಳದಿ ರಾಜರ ಆಸ್ತಾನ ವಿದ್ವಾನರಾಗಿದ್ದವರು ಮತ್ತು ಶೃಂಗೇರಿ ಮಠದಲ್ಲಿ ಪ್ರಮುಖ ಪೂಜಾ ಕಾರ್ಯಕ್ರಮದ ವ್ಯವಸ್ಥಾಪಕರಾಗಿದ್ದವರು.
ಇವರ ತಂದೆ ಶ್ಯಾಮಾ ಶಾಸ್ತ್ರೀಗಳು ಸಾಗರದ ಕಾನಲೆ ಛತ್ರದ ಎದರು ಮರ ಕೆತ್ತನೆಯ ವಿಶ್ವಕರ್ಮ ಇಂಡಸ್ಟ್ರೀಸ್ ನಡೆಸುತ್ತಿದ್ದರು ಅಲ್ಲಿ ದೇವರ ಪಲ್ಲಕ್ಕಿಗಳು ಹೆಚ್ಚಾಗಿ ತಯಾರಿಸುತ್ತಿದ್ದರಂತೆ.
ಅಲ್ಲಿ ವಿಶೇಷವಾಗಿ ಮಂದಾರ ಪುಷ್ಪದ ಗಿಡದ ಬುಡದ ಕಾಂಡದಿಂದ ಮೊಸರು ಕಡೆಯುವ ಕಡೆಗೋಲು ತಯಾರಿಸುತ್ತಿದ್ದರಂತೆ ಈ ಕಡೆಗೋಲು ನೈಸರ್ಗಿಕವಾಗಿ ಕೇಸರಿ ಬಣ್ಣದಾಗಿರುತ್ತಿತ್ತು ಮತ್ತು ವಿಶೇಷ ಸುವಾಸನೆ ಹೊಂದಿದ್ದು ಸಾವಿರ ವರ್ಷ ಬಾಳಿಕೆ ಬರುತ್ತದೆ ಎಂಬ ನಂಬಿಕೆ ಇತ್ತಂತೆ.
ಭಾಗ೯ವ ಶಾಸ್ತ್ರೀಗಳು ಶಿವಮೊಗ್ಗದ ರಾಮಣ್ಣ ಶ್ರೇಷ್ಟಿ ಪಾರ್ಕ ಗಣಪತಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇರಿದ್ದಾಗ ಅಲ್ಲಿ ಗಣಪತಿಗೆ ಇವರು ಮೊದಲ ಬೆಣ್ಣೆ ಅಲಂಕಾರ ಮಾಡಿ ಹೆಸರು ಗಳಿಸಿದ್ದರಂತೆ ನಂತರ ಅವರು ಹಿಂದೆ ತಿರುಗಿ ನೋಡಲೇ ಇಲ್ಲ ಕಳೆದ 35 ವರ್ಷದಿಂದ ನಿರಂತರವಾಗಿ ವರ್ಷಕ್ಕೆ 200 ರಿಂದ 350 ದೇವರ ಬೆಣ್ಣೆ ಅಲಂಕಾರ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಇವರ ಈ ವಿಶೇಷ ಕಲೆಗಾಗಿ ರಾಜ್ಯ ಪ್ರಶಸ್ತಿ ಬಂದಿದೆ ಅಷ್ಟೇ ಅಲ್ಲ ಗೌರವಾನ್ವಿತ ಶ್ರೀ ಉತ್ತಮ್ ಜೀ ಇವರನ್ನು ಪೋಲೆಂಡಿಗೆ ದೇವರ ಬೆಣ್ಣೆ ಅಲಂಕಾರಕ್ಕಾಗಿ ವಿದೇಶಕ್ಕೂ ಕರೆದೊಯ್ದಿದ್ದರು.
ದೇವರ ವಿಗ್ರಹಕ್ಕೆ ಬೆಣ್ಣೆ ಅಲಂಕಾರಕ್ಕೆ ಪ್ರೇರಣೆ ರಾಮಾಯಣದಲ್ಲಿ ರಾಮ ಭಕ್ತ ಆಂಜನೇಯ ಲಂಕಾ ಯುದ್ಧದಲ್ಲಿ ಬಾಣಗಳಿಂದ ಜರ್ಜರಿತನಾದಾಗ ಸ್ವತಃ ಶ್ರೀ ರಾಮ ಆಂಜನೇಯನ ದೇಹಕ್ಕೆ ಬೆಣ್ಣೆ ಲೇಪನ ಮಾಡಿ ಶತೃ ಸೇನೆಯ ಬಾಣದ ಗಾಯಗಳನ್ನು ಗುಣಪಡಿಸಿದ್ದು.
ಆದರಿಂದ ಆಂಜನೇಯ ವಿಗ್ರಹಕ್ಕೆ ಬೆಣ್ಣೆ ಲೇಪನದ ಪೂಜೆ ಪ್ರಾರಂಭವಾಯಿತಂತೆ ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಹೊಸ ಪಸಲಿನ ಅಕ್ಕಿ ಹಿಟ್ಟು ಮಾಡಿ ಮೊಸರಲ್ಲಿ ಕಲಿಸಿ ಈಶ್ವರ ದೇವರ ಶಿಲಾ ವಿಗ್ರಹಕ್ಕೆ ಬುತ್ತಿ ನೈವೇದ್ಯದ ಅಲಂಕಾರ ಮಾಡುತ್ತಾರೆ.
ತಮಿಳುನಾಡಿನಲ್ಲಿ ಬೆಣ್ಣೆ ಅಲಂಕಾರಕ್ಕೆ ಪ್ರಸಿದ್ಧಿ ಪಡೆದಿದೆ ಆದರೆ ಅದನ್ನು ಹರಕೆ ರೂಪದಲ್ಲಿ ವಿಗ್ರಹದ ಮುಖಕ್ಕೆ ಬೆಣ್ಣೆ ಹಚ್ಚುವ ನೈವೇದ್ಯವಾಗಿದೆ ಈಗಲೂ ಅನೇಕ ದೇವಸ್ಥಾನಗಳಲ್ಲಿ ಇದನ್ನು ನೋಡ ಬಹುದು ಆದರೆ ಭಾಗ೯ವ ಶಾಸ್ತ್ರೀಗಳು ಈ ಬೆಣ್ಣೆ ನೈವೇದ್ಯವನ್ನು ಕಲಾತ್ಮಕವಾಗಿ ಬೆಣ್ಣೆ ಅಲಂಕಾರ ಮಾಡುವ ಮೂಲಕ ಇದಕ್ಕೊಂದು ಪೂಜಾ ಅಲಂಕಾರವಾದ ಬೆಣ್ಣೆ ಅಲಂಕಾರದ ರೂಪ ಮಾಡಿದ್ದಾರೆ ಆದ್ದರಿಂದ ಶಿವಮೊಗ್ಗದಲ್ಲಿ ನೆಲೆಸಿರುವ ಭಾರ್ಗವ ಶಾಸ್ತ್ರೀಗಳಿಗೆ ದೇವರ ಬೆಣ್ಣೆ ಅಲಂಕಾರಕ್ಕಾಗಿ ಅವರಿಗೆ ಭಾರೀ ಬೇಡಿಕೆ ಇದೆ.
ಅವರ ವಿಶೇಷ ದಾರ್ಮಿಕ ಆಚರಣೆಯ ಬೆಣ್ಣೆ ಅಲಂಕಾರದ ಕಲೆಯನ್ನು ನಮ್ಮ ಊರಿನ ಶ್ರೀವರ ಸಿದ್ಧಿ ವಿನಾಯಕ ದೇವರ ಇವತ್ತಿನ ಬೆಣ್ಣೆ ಅಲಂಕಾರದ ಚಿತ್ರದಲ್ಲಿ ಇಲ್ಲಿ ನೀವು ನೋಡಬಹುದು.
ಒಮ್ಮೆ ಇವರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಗೆ ಸೀರೆ ಉಡಿಸಿ ಮೈಸೂರು ಅರಸರು ಸಲ್ಲಿಸಿದ ಚಿನ್ನದ ಆಭರಣಗಳ ತೊಡಿಸುವ ಅವಕಾಶ ಸಿಕ್ಕಿದ್ದನ್ನು ಇವರು ಸದಾ ಸ್ಮರಿಸುತ್ತಾರೆ.
ನಾನು ನಮ್ಮ ಊರಿನ ಶ್ರೀವರ ಸಿದ್ದಿ ವಿನಾಯಕ ದೇವರಿಗೆ ಬೆಣ್ಣೆ ಅಲಂಕಾರ ಮಾಡಿಸುವ ಹರಕೆ ಹೊತ್ತಿದ್ದೆ ಆದರೆ ಭಾರ್ಗವ ಶಾಸ್ತ್ರೀಗಳು ಮೊನ್ನೆ 19- ಅಕ್ಟೋಬರ್ - 2023ರ ಗುರುವಾರ ಸಂಜೆ ನಮ್ಮ ಊರಿಗೆ ಬಂದು ನನ್ನ ಕಛೇರಿಯಲ್ಲಿ ಸ್ಟಾಂಗ್ ಫಿಲ್ಟರ್ ಕಾಫಿ ಕುಡಿದು ದೇವಸ್ಥಾನಕ್ಕೆ ಹೋಗಿ ಬೆಣ್ಣೆ ಅಲಂಕಾರ ಮಾಡಿ ಶಿವಮೊಗ್ಗ ತಲುಪುವಾಗ ಮಧ್ಯರಾತ್ರಿ ಆಗಿತ್ತು.
20- ಅಕ್ಟೋಬರ್ - 2023 ರ ಶುಕ್ರವಾರ ಅವರ 59ನೇ ಹುಟ್ಟುಹಬ್ಬ.
ಇವರನ್ನು 2008ರಲ್ಲಿ ನನಗೆ ಪರಿಚಯಿಸಿದವರು ಶಿವಮೊಗ್ಗದ MLA ಕರಿಯಣ್ಣ ಬಿಲ್ಡಿಂಗ್ ಸಮೀಪದ ವಿನೋಬನಗರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ಟರು.
59ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಭಾರ್ಗವ ಶಾಸ್ತ್ರಿಗಳಿಗೆ ಶುಭ ಹಾರೈಸಲು ಅಥವ ನಿಮ್ಮ ಊರಿನ ನಿಮ್ಮ ಇಷ್ಟ ದೇವರ ವಿಗ್ರಹಕ್ಕೆ ಬೆಣ್ಣೆ ಅಲಂಕಾರ ಮಾಡಿಸುವುದಿದ್ದರೆ ಅವರ ಸಂಪರ್ಕ ಸಂಖ್ಯೆ 9880396859 ಗೆ ಸಂಪರ್ಕಿಸಬಹುದು.
Comments
Post a Comment