Blog number 1798.ಆನಂದಪುರಂನ ಕಠಾರೆ ಕುಟುಂಬದ ಅವಳಿ ಸಹೋದರರಾದ ರಾಮ ಮತ್ತು ಲಕ್ಷ್ಮಣ ಕಠಾರೆ ಕುಟುಂಬ ಯಡೇಹಳ್ಳಿಯ ಶ್ರೀವರ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ನೂತನ ಪಲ್ಲಕ್ಕಿ ಸಮರ್ಪಿಸಿದ್ದಾರೆ.
https://youtu.be/ol2FB95YtSE?feature=shared
#ನಮ್ಮ_ಊರಿನ_ವರಸಿದ್ದಿವಿನಾಯಕ_ದೇವರಿಗೆ_ಪಲ್ಲಕ್ಕಿ_ಕೊಡುಗೆ.
#ಅವಳಿ_ಜವಳಿ_ಸಹೋದರರ_ಕುಟುಂಬದಿಂದ
#ಅವಳಿ_ಸಹೋದರರಾದ_ರಾಮ_ಲಕ್ಷ್ಮಣರು_ಟೈಲರ್_ಗೋವಿಂದಪ್ಪರ_ಮಕ್ಕಳು
#ಇವತ್ತು_ದಸರಾ_ಪಲ್ಲಕ್ಕಿ_ಉತ್ಸವ_ಈ_ಕುಟುಂಬದ_ಕೊಡುಗೆಯಾದ_ನೂತನ_ಪಲ್ಲಕ್ಕಿಯಲ್ಲಿ_ನೆರವೇರಿತು.
ನಮ್ಮ ಊರಿನ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನ ಪ್ರಾರಂಭದ ಪ್ರತಿಷ್ಟಾಪನೆಯಿಂದ ಇವತ್ತಿನವರೆಗೆ 17 ವರ್ಷಗಳಿಂದ ನಿರಂತರ ವರಸಿದ್ದಿ ವಿನಾಯಕ ದೇವರ ಸೇವೆ ಭಕ್ತಿ ಪೂರ್ವಕವಾಗಿ ಮಾಡುವವರಲ್ಲಿ ಟೈಲರ್ ರಾಮಣ್ಣ ಮತ್ತು ಅವರ ಪುತ್ರ ಪತ್ರಕರ್ತ ಪವನಾ ಯಾವುತ್ತೂ ಮುಂದಿರುತ್ತಾರೆ ಮತ್ತು ಯಾವತ್ತೂ ತಮ್ಮ ಹೆಸರು ಅಥವ ಪ್ರಚಾರ ಬಯಸದೇ ಎಲೆಮರೆಯ ಕಾಯಿಯಂತೆ ದೇವರ ಸೇವೆ ಮಾಡುತ್ತಾರೆ.
ಟೈಲರ್ ರಾಮಣ್ಣರ ಪೂರ್ತಿ ಹೆಸರು ರಾಮ ಕಠಾರೆ ಇವರ ಅವಳಿ ಸಹೋದರ ಲಕ್ಷ್ಮಣ ಕಠಾರೆ, ಆ ಕಾಲದ ಟೈಲರ್ ಗೋವಿಂದಪ್ಪನವರಿಗೆ ಈ ಅವಳಿ ಪುತ್ರರು ಸೇರಿ ಒಟ್ಟು ಆರು ಗಂಡು ಮಕ್ಕಳು.
ಇವರ ದೊಡ್ಡ ಮಗ ನಾರಾಯಣಪ್ಪ, ರಾಮಣ್ಣ ಮತ್ತು ಚಿಕ್ಕ ಮಗ ಅಶೋಕ (ಸಿಮೆಂಟ್ ವ್ಯಾಪಾರಿ) ಆನಂದಪುರಂನಲ್ಲೇ ನೆಲೆಸಿದ್ದಾರೆ, ಅವಳಿ ಜವಳಿ ಪುತ್ರರಲ್ಲಿ ರಾಮಣ್ಣ ಇಲ್ಲಿ ಉಳಿದರೆ ಲಕ್ಷ್ಮಣ ಮುಂಬೈಯಲ್ಲಿ ನೆಲೆಸಿದ್ದರು, ಕೆಲ ವರ್ಷಗಳ ಹಿಂದೆ (17-ಡಿಸೆಂಬರ್ 2017) ಬಂದಾಗ ಇವರಿಬ್ಬರೂ ಒಟ್ಟಿಗೆ ನನ್ನ ಬೇಟಿಗೆ ಬಂದಾಗ ತೆಗೆದ ಪೋಟೋ ಇಲ್ಲಿದೆ.
ಕೆಲ ತಿಂಗಳ ಹಿಂದೆ ಮುಂಬೈನಲ್ಲಿ ಲಕ್ಷ್ಮಣ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದರಿಂದ ದಿವಂಗತ ಲಕ್ಷಣ ಕಠಾರೆ ಮತ್ತು ಶ್ರೀಮತಿ ರಾಜೇಶ್ವರಿ ದಂಪತಿಗಳ ಪುತ್ರರಾದ ಗಿರೀಶ್ ಮತ್ತು ವಿನಯ್ ಹಾಗೂ ಆನಂದಪುರಂನಲ್ಲಿ ನೆಲೆಸಿರುವ ಅವಳಿ ಸಹೋದರ ಶ್ರೀ ರಾಮ ಕಠಾರೆ ಮತ್ತು ಶ್ರೀಮತಿ ರೇಣುಕಾ ದಂಪತಿಗಳ ಮಗಳು ಶ್ರೀಮತಿ ಪವಿತ್ರಾ, ಪುತ್ರರಾದ ಪವನಾ ಹಾಗೂ ಕಾರ್ತಿಕ್ ಸೇರಿ ಎರೆಡೂ ಕುಟುಂಬದ ವತಿಯಿಂದ ಸ್ಟೈನ್ ಲೆಸ್ ಸ್ಟೀಲ್ ನಿಂದ ನಿರ್ಮಿಸಿದ ಪಲ್ಲಕ್ಕಿ ವರಸಿದ್ಧಿ ವಿನಾಯಕ ದೇವರಿಗೆ ಇಂದು (24- ಅಕ್ಟೋಬರ್ -2023ರ) ಮಂಗಳವಾರ ವಿಜಯ ದಶಮಿಯಂದು ಸಮರ್ಪಿಸಿದ್ದಾರೆ.
ವಿಜಯ ದಶಮಿಯ ಪಲ್ಲಕ್ಕಿ ಉತ್ಸವ ನೂತನ ಪಲ್ಲಕ್ಕಿಯಲ್ಲಿ ಈ ದಿನ ಭಕ್ತಿ ಪೂರ್ವಕವಾಗಿ ನೆರವೇರಲ್ಪಟ್ಟಿದೆ ಹಾಗೂ ಪಲ್ಲಕ್ಕಿ ನೀಡಿದ ಕುಟುಂಬಕ್ಕೆ ದೇವಾಲಯದ ಟ್ರಸ್ಟ್ ವತಿಯಿಂದ ಗೌರವ ಸಮರ್ಪಣೆ ಕೂಡ ನೀಡಲಾಯಿತು.
ಈ ಸುಂದರವಾದ ಪಲ್ಲಕ್ಕಿಯನ್ನು ಆಚಾಪುರದ ಜಬೀಯುಲ್ಲಾ ಪಲ್ಲಕ್ಕಿ ದಾನಿ ಕುಟುಂಬದ ನಿರೀಕ್ಷೆಗೆ ತಕ್ಕಂತೆ ತಮ್ಮ ವರ್ಕ್ ಶಾಪ್ ನಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.
Comments
Post a Comment