Skip to main content

Posts

Showing posts with the label Mens should fallow skin care tips

Blog number 1753. ಪುರುಷರು ತಮ್ಮ ದೇಹದ ಸೌಂದರ್ಯ ನಿರ್ಲಕ್ಷಿಸಬಾರದು.

#ಪುರುಷರಿಗೆ_ತಮ್ಮ_ದೇಹ_ಸೌಂದರ್ಯದ_ಬಗ್ಗೆ_ನಿರಾಸಕ್ತಿ_ಏಕೆ? #ಉಗುರುಗಳನ್ನು_ನಿಯಮಿತವಾಗಿ_ತೆಗೆಯುವುದಿಲ್ಲ. #ಕಾಲಿನ_ಪಾದಗಳ_ನಿರ್ವಹಣೆ_ನಿರ್ಲಕ್ಷ_ಜಾಸ್ತಿ #ಮೊಣಕೈ_ಮಣಿಕಟ್ಟಿನಲ್ಲಿ_ಪಾದದ_ಹಿಮ್ಮುಡಿಯಲ್ಲಿ_ಜಡ_ಚರ್ಮಗಳು_ಜಡ್ಡುಗಟ್ಟಿರುತ್ತದೆ #ಇದು_ಪುರುಷನ_ದೇಹ_ಸೌಂದಯ೯ಕ್ಕೆ_ಕಪ್ಪು_ಚುಕ್ಕೆ. #ಇದಕ್ಕಾಗಿ_ಸ್ಕೃಬ್ಬರುಗಳು_ಸ್ಕೃಚ್_ಸೋಪುಗಳು_ಅಭ್ಯವಿದೆ #ಒಮ್ಮೆ_ಕನ್ನಡಿಯಲ್ಲಿ_ನಿಮ್ಮ_ಮೊಣಕೈ_ಮಣಿಕಟ್ಟು_ಪರೀಕ್ಷಿಸಿಕೊಳ್ಳಿ.    ಪುರುಷರು ತಮ್ಮ ಮುಖ ಸೌಂದರ್ಯದ ಭಾಗವಾಗಿ ನಿತ್ಯ ಶೇವಿಂಗ್ ಮಾಡುತ್ತಾರೆ ಮತ್ತು ಬಿಳಿ ಕೂದಲು ಮರೆ ಮಾಚಲು ಹೇರ್ ಡೈ ಮಾಡಿಸುತ್ತಾರೆ ಆದರೆ ಕೈ ಕಾಲಿನ ಉಗರುಗಳು ನಿಯಮಿತವಾಗಿ ತೆಗೆಯಲು ಸೋಮಾರಿತನ.   ಅಷ್ಟೇ ಅಲ್ಲ ಮೊಣಕೈ ಮಣಿಕಟ್ಟಿನಲ್ಲಿ ಜಡ ಚರ್ಮಗಳು ಶೇಖರಗೊಂಡು ಪುರುಷ ದೇಹದ ಅವಲಕ್ಷಣವಾಗಿ ಗೋಚರಿಸುತ್ತಿರುತ್ತದೆ ಅದೇ ರೀತಿ ಪಾದದ ಮಣಿಕಟ್ಟುಗಳಲ್ಲಿ ಕೂಡ ಚರ್ಮ ಜಡ್ಡು ಕಟ್ಟಿರುತ್ತದೆ.   ಪುರುಷರ ಪಾದದ ಹಿಮ್ಮಡಿಗಳು ಬಿರಿ ಬಿಟ್ಟು ಕಾಲು ಒಡೆದು ಚರ್ಮದ ಸತ್ತ ಜೀವಕೋಶಗಳು ಅಲ್ಲೇ ಉಳಿದು ನೋಡುವವರಿಗೆ ಅಸಹ್ಯ ಅನ್ನಿಸುವುದು ಸುಳ್ಳಲ್ಲ.   ಯಾರ ಮಾತು ಕೇಳದ ಪುರುಷನ ಅಹಂನಿಂದ ಈ ರೀತಿ ಪುರುಷ ತನ್ನ ದೇಹ ಸೌಂದಯ೯ ಪಾಲಿಸುವುದಿಲ್ಲ ಆದರೆ ಮಹಿಳೆಯರು ಮಾತ್ರ ತಮ್ಮ ದೇಹ ಸೌಂದಯ೯ವರ್ದನೆಗಾಗಿ ಹೆಚ್ಚು ಕಾಳಜಿ ಮತ್ತು ಶ್ರಮವಹಿಸುತ್ತಾರೆ.   ...