#ಪುರುಷರಿಗೆ_ತಮ್ಮ_ದೇಹ_ಸೌಂದರ್ಯದ_ಬಗ್ಗೆ_ನಿರಾಸಕ್ತಿ_ಏಕೆ?
#ಉಗುರುಗಳನ್ನು_ನಿಯಮಿತವಾಗಿ_ತೆಗೆಯುವುದಿಲ್ಲ.
#ಕಾಲಿನ_ಪಾದಗಳ_ನಿರ್ವಹಣೆ_ನಿರ್ಲಕ್ಷ_ಜಾಸ್ತಿ
#ಮೊಣಕೈ_ಮಣಿಕಟ್ಟಿನಲ್ಲಿ_ಪಾದದ_ಹಿಮ್ಮುಡಿಯಲ್ಲಿ_ಜಡ_ಚರ್ಮಗಳು_ಜಡ್ಡುಗಟ್ಟಿರುತ್ತದೆ
#ಇದು_ಪುರುಷನ_ದೇಹ_ಸೌಂದಯ೯ಕ್ಕೆ_ಕಪ್ಪು_ಚುಕ್ಕೆ.
#ಇದಕ್ಕಾಗಿ_ಸ್ಕೃಬ್ಬರುಗಳು_ಸ್ಕೃಚ್_ಸೋಪುಗಳು_ಅಭ್ಯವಿದೆ
#ಒಮ್ಮೆ_ಕನ್ನಡಿಯಲ್ಲಿ_ನಿಮ್ಮ_ಮೊಣಕೈ_ಮಣಿಕಟ್ಟು_ಪರೀಕ್ಷಿಸಿಕೊಳ್ಳಿ.
ಪುರುಷರು ತಮ್ಮ ಮುಖ ಸೌಂದರ್ಯದ ಭಾಗವಾಗಿ ನಿತ್ಯ ಶೇವಿಂಗ್ ಮಾಡುತ್ತಾರೆ ಮತ್ತು ಬಿಳಿ ಕೂದಲು ಮರೆ ಮಾಚಲು ಹೇರ್ ಡೈ ಮಾಡಿಸುತ್ತಾರೆ ಆದರೆ ಕೈ ಕಾಲಿನ ಉಗರುಗಳು ನಿಯಮಿತವಾಗಿ ತೆಗೆಯಲು ಸೋಮಾರಿತನ.
ಅಷ್ಟೇ ಅಲ್ಲ ಮೊಣಕೈ ಮಣಿಕಟ್ಟಿನಲ್ಲಿ ಜಡ ಚರ್ಮಗಳು ಶೇಖರಗೊಂಡು ಪುರುಷ ದೇಹದ ಅವಲಕ್ಷಣವಾಗಿ ಗೋಚರಿಸುತ್ತಿರುತ್ತದೆ ಅದೇ ರೀತಿ ಪಾದದ ಮಣಿಕಟ್ಟುಗಳಲ್ಲಿ ಕೂಡ ಚರ್ಮ ಜಡ್ಡು ಕಟ್ಟಿರುತ್ತದೆ.
ಪುರುಷರ ಪಾದದ ಹಿಮ್ಮಡಿಗಳು ಬಿರಿ ಬಿಟ್ಟು ಕಾಲು ಒಡೆದು ಚರ್ಮದ ಸತ್ತ ಜೀವಕೋಶಗಳು ಅಲ್ಲೇ ಉಳಿದು ನೋಡುವವರಿಗೆ ಅಸಹ್ಯ ಅನ್ನಿಸುವುದು ಸುಳ್ಳಲ್ಲ.
ಯಾರ ಮಾತು ಕೇಳದ ಪುರುಷನ ಅಹಂನಿಂದ ಈ ರೀತಿ ಪುರುಷ ತನ್ನ ದೇಹ ಸೌಂದಯ೯ ಪಾಲಿಸುವುದಿಲ್ಲ ಆದರೆ ಮಹಿಳೆಯರು ಮಾತ್ರ ತಮ್ಮ ದೇಹ ಸೌಂದಯ೯ವರ್ದನೆಗಾಗಿ ಹೆಚ್ಚು ಕಾಳಜಿ ಮತ್ತು ಶ್ರಮವಹಿಸುತ್ತಾರೆ.
ಮೊಣಕೈ ಮಣಿಕಟ್ಟು ನೇರವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ ಅದನ್ನು ನೋಡಬೇಕಾದರೆ ಕನ್ನಡಿಯಲ್ಲೇ ನೋಡ ಬೇಕು ಆದ್ದರಿಂದ ಅಲ್ಲಿ ಶೇಖರವಾಗುವ ಜಡ ಚರ್ಮ (ಸತ್ತ ಚರ್ಮದ ಜೀವಕೋಶಗಳು) ನಮ್ಮ ಗಮನಕ್ಕೆ ಬಾರದೇ ಎದುರಿನವರಿಗೆ ನಮ್ಮ ಅವಲಕ್ಷಣ ಸಲೀಸಾಗಿ ಗೋಚರಿಸುತ್ತದೆ.
ಇದನ್ನು ಸುಲಭವಾಗಿ ನಿವಾರಿಸಬಹುದು ಇದಕ್ಕೆ ಬೇಕಾದ ಸ್ಕ್ರಬ್ ಗಳು ಮತ್ತು ಸ್ಕೃಬ್ ಸೋಪುಗಳು ಮಾರುಕಟ್ಟೆಯಲ್ಲಿದೆ, ನಿರಂತರ ನಾಕಾರು ದಿನ ಇವುಗಳನ್ನು ಬಳಸಿದರೆ ಜಡ ಚರ್ಮ ನಿವಾರಣೆಯಾಗುತ್ತದೆ.
ವರ್ಷದಲ್ಲಿ ಒಂದೆರೆಡು ಬಾರಿ ಈ ರೀತಿ ಮೊಣಕೈ ಜಡ ಚರ್ಮ ನಿವಾರಣೆ ಮಾಡಿಕೊಂಡರೆ ಪುರುಷರ ಸೌಂದರ್ಯವರ್ಧನೆ ಸಾಧ್ಯವಿದೆ.
ಇದು ಮನೆಯಲ್ಲೇ ಪುರುಷರು ಸುಲಭವಾಗಿ ಮಾಡಿಕೊಳ್ಳಬಹುದು, ಅನೇಕ ಪುರುಷರು ಅರ್ದ ತೋಳಿನ ಶರ್ಟ್ ಮತ್ತು ಟೀ ಶರ್ಟು ದರಿಸುತ್ತಾರೆ ಅವರು ಒಮ್ಮೆ ಕನ್ನಡಿಯಲ್ಲಿ ತಮ್ಮ ಮೊಣಕೈ ಪರೀಕ್ಷಿಸಿಕೊಳ್ಳಿ ಅಲ್ಲಿ ಜಡ ಚರ್ಮ ಜಡ್ಡುಗಟ್ಟಿದ್ದರೆ ಮೇಲಿನ ಕ್ರಮ ಅನುಸರಿಸಿ.
Comments
Post a Comment