#ಹೌದ್ದಾ_ಹುಲಿಯ
#ಫೀರಪ್ಪಕಟ್ಟಿಮನೆ_ನಶಾದಲ್ಲಿ_ಮಾಡಿದ_ಉದ್ಘೋಷ.
#ರಾಜಕಾರಣದಲ್ಲಿ_ಪಂಚಿಂಗ್_ಡೈಲಾಗ್.
#ಮೀಮ್_ಡಿಜೆ_ಟೀಶರ್ಟ್_ಈಗ_ನಾಟಕದಲ್ಲಿ
#ಸಿನಿಮಾ_ಟೈಟಲ್_ಕೂಡ_ರಿಜಿಸ್ಟರ್_ಆಗಿದೆ.
ಮೊನ್ನೆ ಮಂಗಳವಾರ ಬಸವನ ಬಾಗೇವಾಡಿ ಪೇಟೆ ಹಾದು ಹೋಗುವಾಗ ಅಲ್ಲಿ ಬಸವಣ್ಣ ದೇವರ ಜಾತ್ರೆ ಇಡೀ ಪೇಟೆ ಜನಜಂಗುಳಿಯಿಂದ ತುಂಬಿತ್ತು ಅಲ್ಲಿ ಮುಖ್ಯ ರಸ್ತೆಯಲ್ಲೇ ಶ್ರೀಮಲ್ಲಿಕಾರ್ಜುನ ನಾಟಕ ಮಂಡಳಿ ಕಲ್ಲೂರ ಅವರ ನಾಟಕದ ಟೆಂಟ್ ಜಾತ್ರೆ ಪ್ರಯುಕ್ತ ಪ್ರದರ್ಶನ ಏರ್ಪಡಿಸಿದ್ದರು.
ಜಾತ್ರಾ ಟೆಂಟ್ ಹೊರಗಿನ ಬೋರ್ಡಲ್ಲಿ ನಾಟಕದ ಹೆಸರು "ಹೌದ್ದಾ... ಹುಲಿಯಾ" !!... ಈ ಪ೦ಚಿ೦ಗ್ ಡೈಲಾಗ್ ರಾಜ್ಯದಾದ್ಯಂತ ವೈರಲ್ ಆಗಿದೆ.
ಈ ಪಂಚಿಂಗ್ ಡೈಲಾಗ್ ಬರೆದದ್ದು ಅಲ್ಲ, ಅದು ಹೊರಬಂದ ಸಂದರ್ಭ ಕೂಡ ಅಕಸ್ಮಿಕ. ಬೆಳಗಾವಿ ಜಿಲ್ಲೆಯ ಐನಾಪುರದಲ್ಲಿ ಉಪ ಚುನಾವಣೆಯ ಪ್ರಚಾರದ ಸಭೆಯಲ್ಲಿ ಸಿದ್ದರಾಮಯ್ಯನವರು ಸಭೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆ ಉಲ್ಲೇಖಿಸಿ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ... ಎಂದಾಗ ಸಭೆಯಲ್ಲಿ ಸಲ್ಪ ಜಾಸ್ತಿಯೇ ಕುಡಿದಿದ್ದ ಫೀರಪ್ಪ ಕಟ್ಟಿಮನಿ ಜೋಷ್ ನಲ್ಲಿ " ಹೌದ್ದಾ .. ಹುಲಿಯಾ " ಎಂದಾಗ ಇಡೀ ಸಭೆ ನಗೆಗಡಲಾದಾಗ ಸಿಟ್ಟಾದ ಸಿದ್ಧರಾಮಯ್ಯನವರು ಆ ಕುಡುಕನನ್ನು ಹೊರ ಹಾಕಿ ಎಂದು ಅಬ್ಬರಿಸಿದ್ದರು, ಪೋಲಿಸರು ಹೊರಹಾಕಲು ಹೋದಾಗ ಫೀರಪ್ಪ ಕಟ್ಟಿಮನಿ ಮತ್ತೆ ಕೂಗುವುದಿಲ್ಲ ಅಂತ ವಿನಂತಿ ಮಾಡಿದ್ದರಿಂದ ಬಿಟ್ಟಿದ್ದರು.
ಈ ಸಂದರ್ಭದ ವಿಡಿಯೊ ಈ ಲಿಂಕ್ ಕ್ಲಿಕ್ ಮಾಡಿ ನೋಡಿ
https://youtu.be/RCzsOQRO2KY?feature=shared
ಇದು ಸುದ್ದಿ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ನಂತರ ಕಾರ್ಯಕರ್ತರು ಸಿದ್ಧರಾಮಯ್ಯರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಬೆಂಗಳೂರಿನ ಅವರ ಮನೆಗೆ ಫೀರಪ್ಪ ಕಟ್ಟಿಮನೆ ಅವರನ್ನು ಕರೆದುಕೊಂಡು ಹೋಗಿ ಬೇಟಿ ಮಾಡಿಸಿದ್ದರು.
ಆಗ ಸಿದ್ಧರಾಮಯ್ಯನವರು "ನನ್ನ ಆರೋಗ್ಯ ವಿಚಾರಿಸಲು ಬಂದ ಫೀರಪ್ಪ ಕಟ್ಟಿಮನೆ ಅವತ್ತಿನ ಸಭೆಯಲ್ಲಿ ಅವನದ್ದೇ ಶೈಲಿಯಲ್ಲಿ ಹೌದಾ ಹುಲಿಯ ಅಂದಿದ್ದು ವೈರಲ್ ಆಗಿದೆ ಆತ ಮುಗ್ದಾ ಆತ ನಿಜವಾದ ಹುಲಿಯಾ" ಅಂತ ಟ್ವೀಟ್ ಮಾಡಿದ್ದರು.
ನಂತರ ಹೌದ್ಧಾ ಹುಲಿಯಾ ಪಂಚಿಂಗ್ ಡೈಲಾಗ್ ಎಷ್ಟು ಪ್ರಸಿದ್ದಿ ಆಯಿತೆಂದರೆ ಮೀಮ್, ಡಿಜೆ, ಟೀಶರ್ಟ್ ಅಲ್ಲದೆ ಹೌದ್ದಾ ಹುಲಿಯಾ ಸಿನಿಮಾ ಟೈಟಲ್ ಕೂಡ ರಿಜಿಸ್ಟರ್ ಆಗಿದೆ ಎಂದರೆ ಈ ಫೀರಪ್ಪ ಕಟ್ಟಿಮನೆ ನಶಾದಲ್ಲಿ ಉದ್ಘೋಷ ಮಾಡಿದ ಪಂಚಿಂಗ್ ಡೈಲಾಗ್ ಎಷ್ಟು ಪ್ರಸಿದ್ಧಿ ಪಡೆದಿದೆ.
ಹೌದಾ ಹುಲಿಯಾ ಅಂದರೆ ಫೀರಪ್ಪ ಕಟ್ಟಿಮನೆ ಅಥ೯ದಲ್ಲಿ yes boss ಅಂತ ಈಗ ಈ ಡೈಲಾಗ್ ನಾಟಕವೂ ಆಗಿ ಯಶಸ್ವಿ ಪ್ರದಶ೯ನ ಆಗುತ್ತಿದೆ.
ಈಗ ಹೌದ್ದಾ ಹುಲಿಯಾದ ಫೀರಪ್ಪ ಕಟ್ಟಿಮನೆ ಬಿಜೆಪಿ ಸೇರಿದ್ದಾರೆ.
Comments
Post a Comment