Blog number 1752. ಸಾಕಿದ ನಮ್ಮ ಮನೆಯ ಬೆಕ್ಕು ಕಥಾ ನಾಯಕಿ ಆದ ಕಥೆ ಮತ್ತು ಸಣ್ಣ ಕಥಾ ಸಂಕಲನ ಪುಸ್ತಕದ ಮುಖಪುಟದಲ್ಲಿ ಅದರ ಹೆಸರು ಚಿತ್ರ ಶಾಶ್ವತ ಸ್ಥಾನ ಪಡೆದ ಅಚ್ಚರಿಯ ಸಂಗತಿ.
#ಬೆಕ್ಕೊಂದು_ಕಥಾ_ನಾಯಕಿ_ಆದ_ಕಥೆ
#ಅದರ_ಹೆಸರಿನ_ಕಥಾ_ಸಂಕಲವಾಗಿ_ಮುದ್ರಣವೂ_ಆಯಿತು
#ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ
#ಏಳು_ವರ್ಷ_ಬದುಕಿತ್ತು.
ಇದು ಸಾಹಸಿ ಹೆಣ್ಣು ಬೆಕ್ಕು ಇದಕ್ಕೆ ಊರಿನ ನಾಯಿಗಳು ಕಾಗೆಗಳು ಎಲ್ಲಾ ಶತೃಗಳು ಅಂದರೆ ಇದು ಅವುಗಳಿಗೆ ಅಷ್ಟೆಲ್ಲಾ ತೊಂದರೆ ಕೊಟ್ಟ ಬಜಾರಿ ಆದ್ದರಿಂದಲೇ ಅದಕ್ಕೆ ಬಿಲಾಲಿ ಬಿಲ್ಲಿ ಎಂಬ ಉಪನಾಮ ಗೆಳೆಯರಿಂದ ಲಭಿಸಿತ್ತು.
ನಮ್ಮ ಊರಿನ (ತಾಕತ್ ಬೊಂಡಾದ) ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿದ್ದು ಬಂದಿದ್ದರಿಂದ ಆ ಸ್ವಾರಸ್ಯ ಘಟನೆ ಆದರಿಸಿ ಒಂದು ಕಥೆ ಬರೆದಿದ್ದೆ ಆದಕ್ಕೆ ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಶಿರೋನಾಮೆ ಕೊಟ್ಟಿದ್ದೆ.
ನನ್ನ ಸಣ್ಣ ಕಥಾ ಸಂಕಲನ ಮುದ್ರಣದ ಸಮಯದಲ್ಲಿ ಖ್ಯಾತ ಶಿಕ್ಷಣ ತಜ್ಞರು ಸಾಹಿತಿಗಳು ಆದ ಅರವಿಂದ ಚೊಕ್ಕಾಡಿ ಅವರು ಮುನ್ನುಡಿ ಬರೆಯಲು ನನ್ನ ಎಲ್ಲಾ ಸಣ್ಣ ಕಥೆ ಓದಿದವರು ಈ ಕಥೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದರಿಂದ ಇದೇ ಶಿರೋನಾಮೆಯನ್ನು ಕಥಾ ಸಂಕಲನಕ್ಕೆ ಇಟ್ಟು ಕಥಾ ಸಂಕಲನ ಬಿಡುಗಡೆ ಮಾಡಿದ್ದೆ.
2015 ರ ಆಗಸ್ಟ್ ನಲ್ಲಿ ಇನ್ನೊಂದು ಬೆಕ್ಕನ್ನು ಓಡಿಸಿಕೊಂಡು ಹೋದಾಗ ಹೃದಯ ಸ್ತಂಭನವಾಗಿ ಸುಮಾರು ಏಳು ವರ್ಷದ ಬದುಕು ಮಾಡಿ ಇಹ ಲೋಕ ತ್ಯಜಿಸಿತ್ತು.
Comments
Post a Comment