Blog number 1729. ಪ್ರತಿ ಸಂಕಷ್ಟಹರ ಚತುರ್ಥಿಯಂದು ನಾನು ತಪ್ಪದೆ ತಯಾರಿಸಿ ಯಡೇಹಳ್ಳಿಯ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದ ಸಾಮೂಹಿಕ ಗಣಹೋಮದ ಕಡ್ಲೆಕಾಳು ಪ್ರಸಾದ.
#ಇವತ್ತು_ಸಂಕಷ್ಟಹರ_ಚತುರ್ಥಿ
#ಪ್ರತಿ_ಸಂಕಷ್ಟಹರ_ಚತುರ್ಥಿಯಲ್ಲಿ_ಕಡ್ಲೆ_ಕಾಳು_ಹುಸುಳಿ_ತಯಾರಿಸಿ
#ನಮ್ಮ_ಊರಿನ_ವರಸಿದ್ಧಿ_ವಿನಾಯಕ_ದೇವಸ್ಥಾನಕ್ಕೆ_ಕಳಿಸುತ್ತೇನೆ.
https://youtu.be/mDvlWZIBvUE?feature=shared
ಪ್ರತಿ ಸಂಕಷ್ಟಹರ ಚತುರ್ಥಿ ಹಿಂದಿನ ದಿನ ಸ್ವಚ್ಚಗೊಳಿಸಿದ 2 ಕಿಲೋ ಹಸಿ ಕಡಲೆಯನ್ನು ಚೆನ್ನಾಗಿ ತೊಳೆದು ನೆನಸಿಟ್ಟು ಸಂಕಷ್ಟಹರ ಚತುರ್ಥಿ ಬೆಳಿಗ್ಗೆ ಪುನಃ ನಾಲ್ಕು ಬಾರಿ ತೊಳೆದು ಕುಕ್ಕರ್ ನಲ್ಲಿ ನೀರು ಕುದಿಯಲು ಪ್ರಾರಂಭವಾದಾಗ ಅದರಲ್ಲಿ ಹಾಕಿ ಉಪ್ಪು ಸೇರಿಸಿ ಎರೆಡು ವಿಷಲ್ ನಂತರ ಸ್ಟವ್ ಆಫ್ ಮಾಡುತ್ತೇನೆ.
ದೊಡ್ಡ ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ - ಇಂಗು - ಹಸಿ ಮೆಣಸು - ಕರಿಬೇವಿನ ಎಲೆಗಳು - ಕೊತ್ತುಂಬರಿ ಸೊಪ್ಪು - ತೆಂಗಿನ ತುರಿ - ಸ್ವಲ್ಪ ಉಪ್ಪು - ಸಕ್ಕರೆ ಸೇರಿಸಿ ಹುರಿದು ಅದಕ್ಕೆ ಬೇಯಿಸಿ ನೀರು ಬಸಿದ ಕಡಲೆ ಸೇರಿಸಿ ಚೆನ್ನಾಗಿ ಕಲಸಿದರೆ ಕಡ್ಲೆಕಾಳು ಹುಸುಳಿ ರೆಡಿ ಇದು ನನ್ನ ಸ್ವಂತ ಕೈಯಲ್ಲಿ ನನ್ನ ಮನೆ ಪೂಜೆ ನಂತರ ತಯಾರಿಸುವ ಪ್ರಸಾದ.
ಇದನ್ನು ನಮ್ಮ ಊರಿನ ಶ್ರೀ ವರಸಿಧ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ಗಣಹೋಮದ ನಂತರ ಪ್ರಸಾದವಾಗಿ ನೆರೆದ ಭಕ್ತರಿಗೆ ಅರ್ಚಕರು ವಿತರಿಸುತ್ತಾರೆ.
Comments
Post a Comment