Blog number 1746.ಪೆಟ್ ಪ್ರೆಂಡ್ಲಿ ಲಾಡ್ಜ್ ಆನಂದಪುರಂನ ಹೊಂಬುಜ ರೆಸಿಡೆನ್ಸಿ ಶಿವಮೊಗ್ಗ ಜಿಲ್ಲೆಯ ಮೊದಲ ಮತ್ತು ಏಕೈಕ ಲಾಡ್ಜ್.
https://youtu.be/0RbNZd8Z4o8?feature=shared
#ಸಾಕು_ಪ್ರಾಣಿ_ಜೊತೆ_ಪ್ರವಾಸ
#ಸಾಕು_ಪ್ರಾಣಿ_ಜೊತೆ_ತಂಗಲು_ವಸತಿ_ಗೃಹಗಳ_ಅನುಮತಿ_ಅವಶ್ಯ.
#ಇದಕ್ಕೆ_ಲಾಡ್ಜಲ್ಲಿ_ವಿಶೇಷ_ವ್ಯವಸ್ಥೆ_ಇರಬೇಕು.
#ನಮ್ಮ_ಹೊಂಬುಜ_ಲಾಡ್ಜ್_ಜಿಲ್ಲೆಯ_ಮೊದಲ_ಮತ್ತು_ಏಕೈಕ_ಪೆಟ್_ಫ್ರೆಂಡ್ಲಿ_ಲಾಡ್ಜ್
ಸಣ್ಣ ಮೈಕ್ರೋ ಪ್ಯಾಮಿಲಿಗಳಲ್ಲಿ ಸಾಕು ಪ್ರಾಣಿಗಳ ಜೊತೆ ಪ್ರವಾಸ ಹೋಗುವ ಅನಿವಾರ್ಯತೆ ಇರುತ್ತದೆ, ಸಾಕು ಪ್ರಾಣಿಗಳನ್ನು ಬೇರೆಯವರ ಹತ್ತಿರ ಬಿಟ್ಟು ಹೋಗಲು ಸಾಧ್ಯವಿರುವುದಿಲ್ಲ ಆದ್ದರಿಂದ ತಮ್ಮ ಕಾರಿನಲ್ಲಿ ಅವನ್ನು ಕೊಂಡಯ್ಯಲೇ ಬೇಕು.
ರಾತ್ರಿ ತಮ್ಮ ಜೊತೆಯೇ ಉಳಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಅಷ್ಟೇನು ಕಷ್ಟವಲ್ಲ ಆದರೆ ಸಾಕು ಪ್ರಾಣಿಗಳಿಗೆ ಅತಿಥಿಗಳ ಜೊತೆ ತಂಗಲು ವಸತಿ ಗೃಹಗಳು ಕೆಲ ತಯಾರಿ ಮಾಡಿ ಕೊಂಡಿರಲೇ ಬೇಕು.
ಪೆಟ್ ಡಾಗ್ ಅಥವ ಬೆಕ್ಕುಗಳಿಗೆ ಅವುಗಳಿಗೆ ಬೇಕಾದ ಆಹಾರ ತಯಾರಿಸಿ ಕೊಡಬೇಕು, ಯಾವುದೇ ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ನೀಡುವಂತ ವೆಟರ್ನರಿ ವೈದ್ಯರ ಸಂಪರ್ಕ ಇರಬೇಕು.
ಪೆಟ್ ಫ್ರೆಂಡ್ಲಿ ಲಾಡ್ಜ್ ಗಳಲ್ಲಿ ಫಾಗಿಂಗ್ ಇತ್ಯಾದಿ ಪರಿಕರಣ ಇರಬೇಕು, ಸಾಕು ಪ್ರಾಣಿಗಳ ಒಡನಾಟ ಸ್ವಚ್ಚತೆಯ ತರಬೇತಿಯ ಸಿಬ್ಬಂದಿಗಳು ಇರಬೇಕು.
ಸಾಕುಪ್ರಾಣಿಗಳಿಗೆ ಬೇಕಾದ ಶುದ್ಧವಾದ ಹೈಜೀನ್ ಆಹಾರ ತಯಾರಿಸುವ ಜವಾಬ್ದಾರಿ ಸಂಸ್ಥೆಗೆ ಇರಬೇಕು.
ಹವಾನಿಯಂತ್ರಿತ ಪ್ರತ್ಯೇಕ ರೂಂಗಳು ಇದಕ್ಕಾಗಿ ಇರಬೇಕು ಸಾಕು ಪ್ರಾಣಿ ಜೊತೆ ಬರುವ ಮಾಲಿಕರಿಗೆ 24 ಗಂಟೆ ಬಿಸಿ ನೀರು ಕಾಂಪ್ಲಿಮೆಂಟರಿ ಬ್ರೇಕ್ ಪಾಸ್ಟ್ ವ್ಯವಸ್ಥೆ ಮಾಡಬೇಕು.
ರೂಂ ಖಾಲಿ ಮಾಡಿದ ಮೇಲೆ ವಿಶೇಷ ರೀತಿಯಿಂದ ಸ್ವಚ್ಚತೆ ಮಾಡಬೇಕು ಆದ್ದರಿಂದ ಪೆಟ್ ಫ್ರೆಂಡ್ಲಿ ರೂಂಗೆ ಸ್ವಲ್ಪ ಜಾಸ್ತಿ ಹಣ ಲಾಡ್ಜ್ ಲ್ಲಿ ಕೇಳುತ್ತಾರೆ.
ಬಹುಶಃ ನಮ್ಮ ಹೊಂಬುಜ ಲಾಡ್ಜ್ ಪೆಟ್ ಫ್ರೆಂಡ್ಲಿ ಲಾಡ್ಜ್ ಆಗಿದೆ ಬಹುಶಃ ಶಿವಮೊಗ್ಗ ಜಿಲ್ಲೆಯ ಮೊದಲ ಮತ್ತು ಏಕೈಕ ಲಾಡ್ಜ್ ಆಗಿದೆ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ನಮ್ಮಲ್ಲಿದೆ.
https://arunprasadhombuja.blogspot.com/2022/10/blog-number-1013-hombuja.html
ಮೊನ್ನೆ ಮುಂಬೈನ ದಂಪತಿಗಳು ತಮ್ಮ ಪ್ರೀತಿಯ ಲ್ಯಾಬ್ರಾಡಾರ್ ಗಂಡು ನಾಯಿ ಆಲೀ ಜೊತೆ ನಮ್ಮ ಮಲ್ಲಿಕಾ ರೆಸ್ಟೋರಾಂಟ್ ಲ್ಲಿ ಊಟ ಮಾಡಿದರು ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನ ಸುತ್ತ ಮುತ್ತ ತಿರುಗಾಡಿದರು.
ನಮ್ಮ ಲಾಡ್ಜ್ ಪೆಟ್ ಫ್ರೆಂಡ್ಲಿ ಆಗಿದ್ದಕ್ಕೆ ಸಂತೋಷ ಪಟ್ಟರು ಮೂರು ವರ್ಷ ಪ್ರಾಯದ ಲ್ಯಾಬ್ರಾಡಾರ್ ಆಲೀ ನೋಡಿ
Comments
Post a Comment